ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Viral Video: ಮಕ್ಕಳಂತೆ ಮ್ಯಾಗಿ ನೂಡಲ್ಸ್ ಸವಿದ ಶತಾಯುಷಿ ಅಜ್ಜಿ; ಹೃದಯಸ್ಪರ್ಶಿ ವಿಡಿಯೊ ವೈರಲ್

ಶತಾಯುಷಿ ಅಜ್ಜಿಯೊಬ್ಬರು ಮಕ್ಕಳಂತೆ ಮ್ಯಾಗಿ ಮಾಡಿಸಿಕೊಂಡು ತಿಂದಿದ್ದು, ಅದನ್ನು ಸವಿದ ಬಳಿಕ ಆಕೆ ಕ್ಯೂಟ್‌ ರಿಯಾಕ್ಷನ್‌ ವಿಡಿಯೊ ಇದೀಗ ಎಲ್ಲೆಡೆ ವೈರಲ್‌(Viral Video) ಆಗುತ್ತಿದೆ. ಮಕ್ಕಳಂತೆ ಹಠ ಮಾಡಿ ಮ್ಯಾಗಿ ತಿಂದಿರುವ ಈ ಹಿರಿಯಜ್ಜಿಯ ವಿಡಿಯೊಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಮ್ಯಾಗಿ ತಿಂದು ಖುಷಿಪಟ್ಟ ಶತಾಯುಷಿ- ಈ ಹಿರಿಯಜ್ಜಿಯ ಕ್ಯೂಟ್ ವಿಡಿಯೊ ವೈರಲ್‌

Profile pavithra Feb 17, 2025 12:10 PM

ನವದೆಹಲಿ: ಮುಪ್ಪಿನಲ್ಲಿ ಮನುಷ್ಯ ಮಗುವಿನಂತಾಗುತ್ತಾನೆ. ಇಳಿವಯಸ್ಸಿನಲ್ಲಿ ಮಕ್ಕಳಂತೆ ಬಾಯಿ ಚಪಲಗಳ ಹೆಚ್ಚಾಗುತ್ತವುದು ಸಹಜ. ಮಕ್ಕಳು ಇಷ್ಟ ಪಟ್ಟು ತಿನ್ನುವ ಮ್ಯಾಗಿ, ಚಾಕ್ಲೆಟ್‌, ಸ್ನ್ಯಾಕ್ಸ್‌ ಮನೆಯಲ್ಲಿ ಅಜ್ಜ-ಅಜ್ಜಿಗೂ ಇಷ್ಟವಾಗುತ್ತದೆ. ಮಕ್ಕಳಿಗೆ ಮ್ಯಾಗಿ ನೂಡಲ್ಸ್ ಎಂದರೆ ತುಂಬಾ ಇಷ್ಟ. ಹಾಗಾಗಿ ಅಮ್ಮನ ಬಳಿ ಹಠ ಮಾಡಿಯಾದರೂ ಮ್ಯಾಗಿ ಮಾಡಿಸಿಕೊಂಡು ತಿನ್ನುತ್ತಾರೆ. ಅದೇ ರೀತಿ ಇಲ್ಲೊಬ್ಬ ಶತಾಯುಷಿ ಅಜ್ಜಿ ಮ್ಯಾಗಿ ನೂಡಲ್ಸ್‌ಗಾಗಿ ಆಸೆ ಪಟ್ಟು, ನಂತರ ಕೊನೆಗೆ ಮಕ್ಕಳಂತೆ ರಚ್ಚೆ ಹಿಡಿದು ಮನೆಯವರು ಬಳಿ ಹೇಳಿ ಮಾಡಿಸಿಕೊಂಡು ಸವಿದಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್(Viral Video) ಆಗಿದೆ. ಕುಟುಂಬದ ಸದಸ್ಯರೊಬ್ಬರು ಅಜ್ಜಿಯು ಮ್ಯಾಗಿ ತಿನ್ನುವ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ಗೆ ಶನಿವಾರ ಮಧ್ಯಾಹ್ನದ ಕಡುಬಯಕೆಗಳು ಎಂದು ಶೀರ್ಷಿಕೆ ಬರೆಯಲಾಗಿದೆ.

ಇನ್‌ಸ್ಟಾಗ್ರಾಂ ಪುಟ 'Jassi_Baaa' ಈ ವಿಡಿಯೊವನ್ನು ಶನಿವಾರ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ. ಈ ವಿಡಿಯೊ ಈಗಾಗಲೇ ವೈರಲ್ ಆಗಿದ್ದು, 1.2 ಲಕ್ಷ ವ್ಯೂವ್ಸ್ ಗಳಿಸಿದೆ. ಹಾಗೇ ಇದು ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‍ಗಳನ್ನು ಗಳಿಸಿದೆ. ಅನೇಕ ನೆಟ್ಟಿಗರು ಈ ವಿಡಿಯೊಗೆ ಕಾಮೆಂಟ್‌ ಮಾಡಿದ್ದಾರೆ. "ನನಗೆ ವಯಸ್ಸಾದಾಗ ನಾನು ಹೀಗೆ ಮಾಡಬಹುದು" ಎಂದು ಒಬ್ಬ ನೆಟ್ಟಿಗರು ಬರೆದರೆ, ಇನ್ನೊಬ್ಬರು "ನನ್ನ ಅಜ್ಜಿ ಕೂಡ ಇದೇ ರೀತಿ ಮಾಡುತ್ತಾರೆ" ಎಂದು ಕಾಮೆಂಟ್ ಮಾಡಿದ್ದಾರೆ.

ಅಜ್ಜಿ ನೂಡಲ್ಸ್ ಅನ್ನು ಎಂಜಾಯ್‌ ಮಾಡುತ್ತಿರುವ ಈ ವಿಡಿಯೊವನ್ನು ನೆಟ್ಟಿಗರು ಎಫ್ಎಂಸಿಜಿ ಬ್ರಾಂಡ್‌ಗೆ ಟ್ಯಾಗ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಬೇಕು ಮತ್ತು ಇದು ನೆಸ್ಲೆ ಕಂಪೆನಿಗೆ ತಲುಪಿ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ನೋಡಬೇಕು ಎಂದು ಹೇಳಿದ್ದಾರೆ

ಈ ಸುದ್ದಿಯನ್ನೂ ಓದಿ: Viral Video: ಎಳನೀರು ಸಿಪ್ಪೆ ಸುಲಿಯುವಲ್ಲಿ ಅಜ್ಜಿ ಮೊಮ್ಮಗನ ಚಾಲೆಂಜ್‌-ಗೆಲುವು ಯಾರದ್ದು? ಕ್ಯೂಟ್ ವಿಡಿಯೊ ನೋಡಿ!

ಈ ಹಿಂದೆ ವಧು ಒಬ್ಬಳು ತನ್ನ ಮದುವೆಯ ದಿನ ಒಡವೆ , ವಸ್ತ್ರಗಳನ್ನು ಧರಿಸಿಕೊಂಡು ಚೆನ್ನಾಗಿ ರೆಡಿಯಾದ ಬಳಿಕ ಮದುವೆ ಮಂಟಪಕ್ಕೆ ಹೋಗುವ ಬದಲು ಖಾಲಿ ಹೊಟ್ಟೆಯಲ್ಲಿ ಮದುವೆಯ ಆಚರಣೆಗಳನ್ನು ಮಾಡಲು ನಿರಾಕರಿಸಿ ಮ್ಯಾಗಿ ತರಿಸಿಕೊಂಡು ತಿಂದಿದ್ದಾಳೆ. ವಧು ಮ್ಯಾಗಿ ತಿನ್ನುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.