Viral Video: ಎಳನೀರು ಸಿಪ್ಪೆ ಸುಲಿಯುವಲ್ಲಿ ಅಜ್ಜಿ ಮೊಮ್ಮಗನ ಚಾಲೆಂಜ್-ಗೆಲುವು ಯಾರದ್ದು? ಕ್ಯೂಟ್ ವಿಡಿಯೊ ನೋಡಿ!
ಅಜ್ಜಿ ಮತ್ತು ಮೊಮ್ಮಗ ಎಳನೀರಿನ ಸಿಪ್ಪೆ ಸುಲಿಯುವ ಸ್ಪರ್ಧೆ ಏರ್ಪಡಿಸುತ್ತಾರೆ. ಇಬ್ಬರು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಿಪ್ಪೆ ತೆಗೆಯುತ್ತಾರೆ. ಆದರೆ ಅಜ್ಜಿಯು ಎಳನೀರಿನ ನೀರು ಹೊರಬೀಳದಂತೆ ಅತ್ಯಂತ ನಾಜೂಕಾಗಿ ಎಳನೀರಿನ ಸಿಪ್ಪೆ ತೆಗೆದಿದ್ದು ಕೊನೆಗೆ ಅಜ್ಜಿ ಈ ಸ್ಪರ್ಧೆಯಲ್ಲಿ ಗೆಲ್ಲುತ್ತಾರೆ. ಅಜ್ಜಿಯ ಈ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಅಜ್ಜಿಯ ಗೆಲುವನ್ನು ಕಂಡು ಮೊಮ್ಮಗ ಫುಲ್ ಶಾಕ್ ಆಗಿದ್ದಾರೆ.
ನವದೆಹಲಿ: ಅಜ್ಜಿ, ಮೊಮ್ಮಗನ ನಡುವಿನ ಬಾಂಧವ್ಯ ಎಲ್ಲ ಸಂಬಂಧವನ್ನೂ ಮೀರಿದ್ದು ಅದರಲ್ಲೂ ಮೊಮ್ಮಗನ ಕುರಿತಾಗಿ ಹಗಲಿರುಳು ಚಿಂತಿಸುವ ಅಜ್ಜಿಯ ಜೊತೆಗೆ ಕಾಲ ಕಳೆಯುವುದೇ ಒಂದು ರೀತಿಯ ಖುಷಿ, ಸದ್ಯ ಇಂತಹುದೇ ವಿಡಿಯೊವೊಂದು ಸಹಜವಾಗಿಯೇ ಎಲ್ಲರ ಹೃದಯ ದಲ್ಲೊಂದು ಸಂತಸದ ಅಲೆ ಮೂಡಿಸಿದೆ. ಇದೀಗ ಅಜ್ಜಿ ಮತ್ತು ಮೊಮ್ಮಗ ಎಳನೀರು ಕೆತ್ತುವ ಸ್ಪರ್ಧೆಯ ವಿಡಿಯೊವೊಂದು ಎಲ್ಲೆಡೆ ಸಖತ್ ವೈರಲ್ ಆಗುತ್ತಿದ್ದು ಅಜ್ಜಿ ಮೊಮ್ಮಗ ನೆಟ್ಟಿಗರ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್(Viral Video) ಆಗಿದೆ.
ಅಜ್ಜಿ ಮತ್ತು ಮೊಮ್ಮಗ ಎಳನೀರಿನ ಸಿಪ್ಪೆ ತೆಗೆಯುವ ಸ್ಪರ್ಧೆ ಏರ್ಪಡಿ ಸುತ್ತಾರೆ. ಇಬ್ಬರು ಕೂಡ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಿಪ್ಪೆ ತೆಗೆಯುತ್ತಾರೆ. ಆದರೆ ಅಜ್ಜಿಯು ಎಳನೀರಿನ ನೀರು ಹೊರಬೀಳದಂತೆ ಅತ್ಯಂತ ನಾಜೂ ಕಾಗಿ ಎಳನೀರಿನ ಸಿಪ್ಪೆ ತೆಗೆದಿದ್ದು ಕೊನೆಗೆ ಅಜ್ಜಿ ಈ ಸ್ಪರ್ಧೆಯಲ್ಲಿ ಗೆಲ್ಲು ತ್ತಾರೆ. ಅಜ್ಜಿಯ ಈ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಅಜ್ಜಿಯ ಗೆಲುವನ್ನು ಕಂಡು ಮೊಮ್ಮಗ ಫುಲ್ ಶಾಕ್ ಆಗಿದ್ದಾರೆ.
ಈ ವಿಡಿಯೊವನ್ನು lifeofjion ಎಂಬ ಖಾತೆಯಿಂದ ಹಂಚಿಕೊಂಡಿದ್ದು ಅಜ್ಜಿ ತನಗಿಂತಲೂ ಚೆನ್ನಾಗಿ ಎಳನೀರಿನ ಸಿಪ್ಪೆ ತೆಗೆದಿದ್ದಾರೆ ಎಂದು ಕ್ಯಾಪ್ಶನ್ ನೀಡಲಾಗಿದೆ. ಸದ್ಯ ಈ ವಿಡಿಯೊ ಅನೇಕ ಬಳಕೆದಾರರಿಂದ ಮೆಚ್ಚುಗೆ ಪಡೆಯುತ್ತಿದೆ. ಅಜ್ಜಿಗೆ ಈ ಮೊದಲೇ ಎಳನೀರಿನ ಸಿಪ್ಪೆ ಹೇಗೆ ತೆಗೆಯ ಬೇಕೆಂಬ ವಿಧಾನ ತಿಳಿದಿದ್ದು ಸ್ಪರ್ಧೆಯಲ್ಲಿ ಇದೇ ಟ್ರಿಕ್ಸ್ ಅಳವಡಿಸಿದ್ದಾರೆ. ಒಂದು ಹನಿ ನೀರು ಕೂಡ ಹೊರ ಬೀಳದಂತೆ ಅತ್ಯಂತ ನಾಜೂಕಾಗಿ ಎಳನೀರು ಕೆತ್ತಿದ್ದು ಸ್ಪರ್ಧೆಯಲ್ಲಿ ಅಜ್ಜಿ ಗೆಲುವು ಸಾಧಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಜನನ; ಬೆಚ್ಚಿ ಬಿದ್ದ ಗ್ರಾಮಸ್ಥರು
ಈ ವಿಡಿಯೊ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಬಳಕೆದಾರರೊಬ್ಬರು ಇದರಲ್ಲಿ ಅಜ್ಜಿಯ ಚಾಣಾಕ್ಷತನ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬ ಬಳಕೆದಾರರು ಶಕ್ತಿಗಿಂತ ಯುಕ್ತಿ ಮೇಲು ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಬಳಕೆದಾರರು ಮೊಮ್ಮಗ ಗೆಲುವಿನ ಆತುರದಿಂದ ಸೋತರು ಅಜ್ಜಿ ಸಮಾಧಾನದಿಂದ ಗೆಲುವು ಸಾಧಿಸಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.