ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ

Viral Video: ವಿಚ್ಛೇದನ ನೀಡಿ ಡ್ಯಾನ್ಸ್ ಮೂಲಕ ಆಕ್ರೋಶ ಹೊರ ಹಾಕಿದ ಮಹಿಳೆ! ವಿಡಿಯೊ ವೈರಲ್

ಮಹಿಳೆಯರ ವಿಚ್ಛೇದನ ಮತ್ತು ಸಬಲೀಕರಣ ಬಗ್ಗೆ ಸಂದೇಶವನ್ನು ನೀಡಲು ಪಾಕ್ ಮಹಿಳೆ ಸಾಂಪ್ರದಾಯಿಕ ಉಡುಗೆ ತೊಟ್ಟು ಡಾನ್ಸ್ ಮಾಡಿದ್ದಾರೆ. ಈ ವಿಡಿಯೊ ವಿಚ್ಛೇದನ ಮತ್ತು ಮಹಿಳೆಯರ ಸ್ವಾವಲಂಬನೆಯ ಬಗ್ಗೆ ಸಂದೇಶವನ್ನು ಸಾರಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ವಿಚ್ಛೇದನ ನೀಡಿ ಡ್ಯಾನ್ಸ್ ವಿಡಿಯೊ ಹಂಚಿಕೊಂಡ ಪಾಕ್ ಮಹಿಳೆ

Viral Video

Profile Pushpa Kumari Mar 4, 2025 7:50 PM

ಇಸ್ಲಮಾಬಾದ್: ಪಾಕಿಸ್ತಾನದ ಮಹಿಳೆಯೊಬ್ಬರು ವಿಚ್ಛೇದಿತ ಮಹಿಳೆಯರಿಗೆ ಅರಿವು ಮೂಡಿಸಿದ ಡ್ಯಾನ್ಸ್ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯರ ವಿಚ್ಛೇದನ ಮತ್ತು ಸಬಲೀಕರಣ ಬಗ್ಗೆ ಸಂದೇಶವನ್ನು ನೀಡಲು ಪಾಕ್​ ಮಹಿಳೆ ಸಾಂಪ್ರದಾಯಿಕ ಉಡುಗೆ ತೊಟ್ಟು ಡ್ಯಾನ್ಸ್​​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ (Viral Video). ಈ ವಿಡಿಯೊ ವಿಚ್ಛೇದನ ಮತ್ತು ಮಹಿಳೆಯರ ಸ್ವಾವಲಂಬನೆಯ ಬಗ್ಗೆ ಸಂದೇಶವನ್ನು ಸಾರಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಅಜೀಮಾ ಇಹ್ಸಾನ್ ಎನ್ನುವ ಮಹಿಳೆ ಡಿವೋರ್ಸ್ ಆದ ಮೂರು ಮಕ್ಕಳ ತಾಯಿಯಾಗಿದ್ದು, ಪಾಕಿಸ್ತಾನದ ಕೋಕ್ ಸ್ಟುಡಿಯೋದಲ್ಲಿ ಅದ್ಬುತ ವಾಗಿ ಡ್ಯಾನ್ಸ್ ಮಾಡಿ ಅಕ್ರೋಶ ಹೊರ ಹಾಕಿದ್ದಾರೆ.

ಅಜೀಮಾ ಇಹ್ಸಾನ್ ಈಗ ಡಿವೊರ್ಸ್ ಪಡೆದುಕೊಂಡಿದ್ದಾರೆ. ವಿಡಿಯೊದಲ್ಲಿ ಈ ಮಹಿಳೆಯು ಪಾಕಿಸ್ತಾನದ ಕೋಕ್ ಸ್ಟುಡಿಯೋದಲ್ಲಿ ಮ್ಯಾಘ್ರೋನ್ ಮಘ್ರೋನ್ ಲಾ ಎಂಬ ಹಾಡಿಗೆ ಬಹಳ ಅದ್ಬುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಅಜೀಮಾ ನೃತ್ಯಕ್ಕೆ ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೊವನ್ನು ತನ್ನ ಇನ್​ಸ್ಟಾದಲ್ಲಿ ಅಜೀಮಾ ಪೋಸ್ಟ್ ಮಾಡಿದ್ದು ವಿಚ್ಛೇದಿತ ಮಹಿಳೆಯರ ನೋವಿನ ಬಗ್ಗೆ ಬರೆದುಕೊಂಡಿದ್ದಾರೆ. ಪಾಕಿಸ್ತಾನಿ ಸಮುದಾಯದಲ್ಲಿ, ವಿಶೇಷವಾಗಿ ಮಹಿಳೆಯರಿಗೆ, ವಿಚ್ಛೇದನವನ್ನು ಮರಣ ದಂಡನೆ ಎಂದು ಪರಿಗಣಿಸಲಾಗುತ್ತದೆ. ನನಗೆ ನಿಜಕ್ಕೂ ಡಿವೋರ್ಸ್ ಇಷ್ಟವಿರಲಿಲ್ಲ. ಇದರ ಬಗ್ಗೆ ನನಗೆ ಪಶ್ಚಾತಾಪವಿದೆ. ಆದರೆ ನನ್ನ ಹಾಗೂ ನನ್ನ ಮಕ್ಕಳ ಸಲುವಾಗಿ ಸ್ವಾತಂತ್ರ್ಯ ಬೇಕಿತ್ತು. ಇಷ್ಟವಿಲ್ಲದವರ ಜತೆ ಇರೋದು ವಿಚ್ಛೇದನಕ್ಕಿಂತ ಕೀಳುಮಟ್ಟದ್ದು ಎಂದು ಬರೆದುಕೊಂಡಿದ್ದಾರೆ.

ಈ ಬಗ್ಗೆ ಬೇಸರವಿದೆ‌. ಆದರೆ ನಾನು ಅದನ್ನು ಮರೆತು ಮುಂದುವರಿದಿದ್ದೇನೆ. ಕಷ್ಟಗಳು ಇನ್ನೂ ಬರಬಹುದು. ಆದರೆ ನಾನು ಚಿಂತಿಸುವುದಿಲ್ಲ. ನಾನು ನೃತ್ಯ ಮಾಡುತ್ತೇನೆ, ನಗುತ್ತೇನೆ. ನನಗಾಗಿಯೇ ಬದುಕುತ್ತೇನೆ. ನಾನಂದುಕೊಂಡಷ್ಟು ಬದುಕು ಕೆಟ್ಟದಾಗಿ ಏನು ಇಲ್ಲ. ನಿಜಕ್ಕೂ ಅದಕ್ಕೆ ವಿರುದ್ಧವಾಗಿದೆ ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ಜಗತ್ತು ನಮ್ಮನ್ನು ನೋಡುತ್ತಲೇ ಇಲ್ಲ ಎಂಬ ಭಾವನೆಯಿಂದ ನರ್ತಿಸಿ ಎಂದು ಡಿವೋರ್ಸ್​ ಪಡೆದ ಮಹಿಳೆಯರಿಗೆ ಸಂದೇಶ ನೀಡಿದ್ದಾರೆ. ಒಂಟಿತನ ನಮಗೆ ಕಾಡಬಹುದು. ಆದರೆ ಇಷ್ಟವಿಲ್ಲದ ಸಂಬಂಧದಲ್ಲಿ ಬದುಕುವುದಕ್ಕಿಂತ ಇದು ಉತ್ತಮ ಎಂದು ಇಹ್ಸಾನ್ ಬರೆದುಕೊಂಡಿದ್ದಾರೆ. ಅವರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಆಕೆಯ ನಿಲುವಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಇದನ್ನು ಓದಿ: Viral Video: ಸ್ಟೇಷನ್‌ನಲ್ಲಿ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು! ಶಾಕಿಂಗ್‌ ವಿಡಿಯೊ ಫುಲ್‌ ವೈರಲ್‌

ಈ ವಿಡಿಯೊ ನೋಡಿದ ನೆಟ್ಟಿಗರೊಬ್ಬರು ವಿಚ್ಛೇದನವನ್ನು ನಿಷೇಧವಾಗಿ ನೋಡಬಾರದು ಬದಲಿಗೆ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದ ಹೆಜ್ಜೆಯಾಗಿ ಬದುಕಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮಹಿಳೆಯರು ತಮ್ಮ ವಿವಾಹಕ್ಕಿಂತ ಹೆಚ್ಚಾಗಿ ವಿಚ್ಛೇದನವನ್ನು ಆಚರಿಸಿದರೆ ಬದುಕಿನ ಸುರಕ್ಷತೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇಷ್ಟವಿಲ್ಲದ ಸಂಬಂಧದ ಜತೆ ಬದುಕುವುದಕ್ಕಿಂತ ದೂರವಿರಲು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.