Viral Video: ಸ್ಟೇಷನ್‌ನಲ್ಲಿ ವಿದ್ಯಾರ್ಥಿಗಳನ್ನು ಹಿಗ್ಗಾಮುಗ್ಗಾ ಥಳಿಸಿದ ಪೊಲೀಸರು! ಶಾಕಿಂಗ್ ವಿಡಿಯೊ ಫುಲ್ ವೈರಲ್
ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ವಾರಣಾಸಿಯ ಸಂಕತ್ ಮೋಚನ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸುವಾಗ ಆರೋಪಿಗಳು ಮತ್ತು ಸಂತ್ರಸ್ತರ ನಡುವೆ ವಾಗ್ವಾದ ನಡೆದ ಹಿನ್ನೆಲೆಯಲ್ಲಿ ಹೊರಠಾಣೆಯ ಉಸ್ತುವಾರಿ ನವೀನ್ ಚತುರ್ವೇದಿ ಆರೋಪಿ ವಿದ್ಯಾರ್ಥಿಯೊಬ್ಬನ ಕೂದಲನ್ನು ಹಿಡಿದು ಎಳೆದಾಡಿ ಹೊಡೆದ ದೃಶ್ಯ ವೈರಲ್(Viral Video) ಆಗಿದ್ದು, ಆತನನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.


ಲಖನೌ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಶನಿವಾರ (ಮಾರ್ಚ್ 1) ಪೊಲೀಸ್ ಠಾಣೆಯೊಳಗೆ ಪೊಲೀಸ್ ಅಧಿಕಾರಿಯೊಬ್ಬ ವಿದ್ಯಾರ್ಥಿಗಳನ್ನು ಕ್ರೂರವಾಗಿ ಥಳಿಸಿದ ಆಘಾತಕಾರಿ ಘಟನೆ ನಡೆದಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ವಿದ್ಯಾರ್ಥಿಗಳ ಜೊತೆಗೆ ಪೊಲೀಸ್ ಅಧಿಕಾರಿಯು ಗೂಂಡಾಗಳಂತೆ ವರ್ತಿಸಿದ ಕಾರಣ ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ವೈರಲ್ ವಿಡಿಯೊದಲ್ಲಿ ಪೊಲೀಸ್ ಅಧಿಕಾರಿ ವಿದ್ಯಾರ್ಥಿಯೊಬ್ಬನ ಕೂದಲನ್ನು ಹಿಡಿದು ವೃತ್ತಾಕಾರವಾಗಿ ಎಳೆದಾಡುವುದು ಸೆರೆಯಾಗಿದೆ. ಹೆದರಿಕೊಂಡ ವಿದ್ಯಾರ್ಥಿ ಸಹಾಯಕ್ಕಾಗಿ "ಭಜರಂಗಬಲಿ" ಎಂದು ಕೂಗಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ. ಹಲ್ಲೆಯಿಂದಾದ ನೋವನ್ನು ಸಹಿಸಿಕೊಳ್ಳಲಾಗದೆ ಅವನು ಭಜರಂಗಬಲಿಯ ಹೆಸರನ್ನು ಜಪಿಸಿದ್ದಾನೆ, ಆದರೆ ಪೊಲೀಸ್ ಅಧಿಕಾರಿ ಮಾತ್ರ ಎಳೆದಾಡುವುದನ್ನು ನಿಲ್ಲಿಸಲಿಲ್ಲ. ಆ ವಿದ್ಯಾರ್ಥಿ "ಅಣ್ಣಾ, ನಾನು ಅಲ್ಲಿ ಇರಲಿಲ್ಲ” ಎಂದು ಹೇಳಿದ್ದಾನೆ. ಆದರೆ ವಿದ್ಯಾರ್ಥಿಯ ಮಾತನ್ನು ಪೊಲೀಸ್ ಅಧಿಕಾರಿ ಕೇಳಿಸಿಕೊಳ್ಳದೆ ಅವನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾನೆ.
डंडे में ताकत,अधमरा छात्र है
— Tushar Rai (@tusharcrai) March 1, 2025
यूपी जिला वाराणसी लंका थाने क्षेत्र के सिंघम है. छात्रों से बात करना कम लट्ठ बजाना और बाल खिचनें पर भरोसा शायद ज्यादा रखते है?pic.twitter.com/r2tDriGtGa
ಸಂಕತ್ ಮೋಚನ್ ಪೊಲೀಸ್ ಠಾಣೆಯೊಳಗೆ ಈ ಘಟನೆ ನಡೆದಿದ್ದು, ಹೊರಠಾಣೆಯ ಉಸ್ತುವಾರಿ ನವೀನ್ ಚತುರ್ವೇದಿ ವಿದ್ಯಾರ್ಥಿಯ ಕೂದಲನ್ನು ಹಿಡಿದು ಎಳೆದಾಡಿದ ಪೊಲೀಸ್ ಅಧಿಕಾರಿ ಎಂಬುದಾಗಿ ತಿಳಿದುಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಪಿ ತನಿಖೆಗೆ ಆದೇಶಿಸಿದ ನಂತರ ಹೊರಠಾಣೆ ಉಸ್ತುವಾರಿಯನ್ನು ಅಮಾನತುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.
ವರದಿಗಳ ಪ್ರಕಾರ, ಫೆಬ್ರವರಿ 2 ರಂದು ಇಬ್ಬರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಕ್ಸಾರ್‌ನ ನಿಮೇಶ್ ರಾಯ್ ಮತ್ತು ಭಬುವಾದ ಆಶಿಶ್ ಚೌಬೆ ಎಂದು ಗುರುತಿಸಲಾದ ಇಬ್ಬರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರೂ ತಮ್ಮ ಅಧ್ಯಯನಕ್ಕಾಗಿ ಸಾಕೇತ್ ನಗರದ ಹಾಸ್ಟೆಲ್‍ನಲ್ಲಿ ವಾಸವಾಗಿದ್ದಾರೆ. ಹಲ್ಲೆಯಲ್ಲಿ ಸೋನು ಮತ್ತು ದೀಪಕ್ ಎಂದು ಗುರುತಿಸಲಾದ ಇಬ್ಬರು ವಿದ್ಯಾರ್ಥಿಗಳಿಗೆ ತೀವ್ರ ಗಾಯಗಳಾಗಿವೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಳಿಕೋರರು ನಿಮೇಶ್ ಮತ್ತು ಆಶಿಶ್ ಎಂದು ತಿಳಿದುಬಂದಿದೆ. ಪೊಲೀಸರು ಇಬ್ಬರನ್ನೂ ಸಂಕತ್ ಮೋಚನ್ ಪೊಲೀಸ್ ಹೊರಠಾಣೆಯಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲಿ ಇಬ್ಬರೂ ಸಂತ್ರಸ್ತ ವಿದ್ಯಾರ್ಥಿಗಳು ಕೂಡ ಹಾಜರಿದ್ದರು.ಈ ನಡುವೆ ಪೊಲೀಸ್ ಹೊರಠಾಣೆಯಲ್ಲಿ ಅವರ ನಡುವೆ ವಾಗ್ವಾದ ನಡೆಯಿತು. ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿ ಇಬ್ಬರೂ ಆರೋಪಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತನಿಖೆಯ ನಂತರ, ಕಾಶಿ ವಲಯದ ಡಿಸಿಪಿ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Crime News: ಪಾಸ್‌ಪೋರ್ಟ್ ಚೆಕ್ಕಿಂಗ್ ವೇಳೆ ಯುವತಿಗೆ ಅಪ್ಪಿಕೋ ಎಂದ ಕಾನ್‌ಸ್ಟೇಬಲ್! ಕೆಲಸದಿಂದ ಅಮಾನತು
ಇತ್ತೀಚೆಗೆ ಪಾಸ್‌ಪೋರ್ಟ್ ವೆರಿಫಿಕೇಷನ್ ನೆಪದಲ್ಲಿ ಮನೆಗೆ ಬಂದ ಪೊಲೀಸ್ ಕಾನ್‌ಸ್ಟೇಬಲ್, ಮಹಿಳಾ ಟೆಕ್ಕಿಗೆ ಅಸಭ್ಯ ವರ್ತನೆ ತೋರಿ ಕಿರುಕುಳ ನೀಡಿದ್ದಾನೆ. ಈ ಆರೋಪದಲ್ಲಿ ಬೆಂಗಳೂರಿನ ಬ್ಯಾಟರಾಯನಪುರ ಠಾಣೆಯ ಕಾನ್‌ಸ್ಟೇಬಲ್ ಕಿರಣ್ ಎಂಬಾತನನ್ನು ಅಮಾನತುಗೊಳಿಸಲಾಗಿದೆ.