Viral Video: ಪತ್ನಿ ಜೊತೆ ಕಲಹ; ನಡುರಸ್ತೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ಪತಿ- ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಮಹಾರಾಜ್ ಗಂಜ್‍ನ ಚಹಾ ಮಾರಾಟಗಾರ ಸಬೀರ್ ಎಂಬಾತ ಪತ್ನಿಯೊಂದಿಗೆ ಜಗಳವಾಡಿ ಮನನೊಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral Video) ಆಗಿದೆ. ಸ್ಥಳೀಯರು ಬೆಂಕಿ ನಂದಿಸಿ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾನೆ.


ಭೋಪಾಲ್: ಸಂಸಾರವೆಂದ ಮೇಲೆ ಪತಿ-ಪತ್ನಿಯರ ನಡುವೆ ಜಗಳ ಮನಸ್ತಾಪಗಳು ನಡೆಯುವುದು ಸಹಜ. ಈ ಜಗಳ, ವೈಮನಸ್ಸನ್ನು ಪರಿಹರಿಸಿಕೊಂಡರೆ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಆದರೆ ಈ ಜಗಳವನ್ನು ದೊಡ್ಡದು ಮಾಡಿದರೆ ಅದರಿಂದ ಅನಾಹುತಗಳೇ ಸಂಭವಿಸುತ್ತದೆ. ಇದಕ್ಕೆ ಪ್ರಮುಖ ಉದಾಹರಣೆ ಎಂದರೆ ಮಹಾರಾಜ್ ಗಂಜ್‍ನಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇಲ್ಲಿನ ಚಹಾ ಮಾರಾಟಗಾರನೊಬ್ಬ ಪತ್ನಿಯೊಂದಿಗೆ ಜಗಳವಾಡಿ ಮನನೊಂದು ಕಲೆಕ್ಟರೇಟ್ ಚೌಕಿ ಬಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ತಕ್ಷಣ ಅಲ್ಲಿದ್ದ ಜನರು ಬೆಂಕಿ ನಂದಿಸಿ ಅವನನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿದ್ದಾರೆ. ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ವೈರಲ್ ವಿಡಿಯೊದಲ್ಲಿ ನಡುರಸ್ತೆಯಲ್ಲಿ ವ್ಯಕ್ತಿಯ ಮೈಮೇಲೆ ಬೆಂಕಿ ಧಗಧಗನೇ ಉರಿಯುತ್ತಿದ್ದು ಕಂಡ ಸ್ಥಳೀಯರು ಗಾಬರಿಯಿಂದ ಕಂಬಳಿ ತೆಗೆದುಕೊಂಡು ಬಂದು ಬೆಂಕಿಯನ್ನು ನಂದಿಸಲು ಹೆಣಗಾಡಿದ್ದಾರೆ. ಕೊನೆಗೆ ಹರಸಾಹಸ ಮಾಡಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಕಿ ಹಚ್ಚಿಕೊಂಡು ಒದ್ದಾಡುತ್ತಿರುವ ವಿಡಿಯೊ ಇಲ್ಲಿದೆ ನೋಡಿ.
महराजगंज में पति-पत्नी से विवाद चल रहा था घरेलू विवाद में युवक ने लगाई आग ।
— Anirudh vishwakarma Journalist Political critic (@anirudhvish65) March 11, 2025
पेट्रोल डालकर युवक ने आत्मदाह का किया प्रयास
आस-पास के लोगों ने बुझाई आग, इलाज जारी, कलेक्ट्रेट चौकी क्षेत्र का मामला#Breaking #Maharajganj #DomesticDisput pic.twitter.com/UCoLsGT9iC
ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಸಬೀರ್ ಎಂದು ಗುರುತಿಸಲಾಗಿದ್ದು, ಈತ ಗ್ವಾಲಿಯರ್ ನಿವಾಸಿಯಾಗಿದ್ದು, ಕಲೆಕ್ಟರೇಟ್ ಚೌಕಿ ಬಳಿ ಚಹಾ ಅಂಗಡಿ ನಡೆಸುತ್ತಿದ್ದಾನಂತೆ. ಈತನಿಗೆ ಮದುವೆಯಾಗಿ ಏಳು ವರ್ಷಗಳಾಗಿವೆ. ಈ ದಂಪತಿಗೆ ಐದು ಮತ್ತು ಒಂದು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದು, ಇವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರಂತೆ. ವರದಿಗಳ ಪ್ರಕಾರ, ಸಬೀರ್ ಕೆಲವು ದಿನಗಳಿಂದ ಹೆಂಡತಿಯ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದನಂತೆ.ಆದರೆ ಇತ್ತೀಚೆಗೆ ಆಕೆಯೊಂದಿಗೆ ಜಗಳ ಮಾಡಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಪತ್ನಿಯೊಂದಿಗೆ ಜಗಳವಾಡುತ್ತ ಸಬೀರ್ ಪೆಟ್ರೋಲ್ ಬಾಟಲಿಯನ್ನು ತೆಗೆದುಕೊಂಡು ಅದನ್ನು ತನ್ನ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಘಟನೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಹಾರಾಜ್‍ಗಂಜ್ ಪೊಲೀಸರು ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. "ಈ ಘಟನೆಯು ಕುಟುಂಬ ವಿವಾದಕ್ಕೆ ಸಂಬಂಧಿಸಿದೆ. ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಸ್ಥಳದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ:Murder Case: ಪ್ರೀತಿಸಿ ಮದುವೆಯಾದವರ ಜಗಳ ಕೊಲೆಯಲ್ಲಿ ಅಂತ್ಯ; ಕೈ, ಕಾಲು ಕಟ್ಟಿ ಪತಿಯನ್ನೇ ಹತ್ಯೆಗೈದ ಪತ್ನಿ!
ಇತ್ತೀಚೆಗೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಪತ್ನಿಯೇ ಪತಿಯ ಕೊಲೆ ಮಾಡಿದ್ದಾಳೆ ಎನ್ನಲಾಗಿದೆ. ಶ್ರೀಧರ ಕೊಲೆಯಾದ ವ್ಯಕ್ತಿ. ಪತ್ನಿ ಸವಿತಾ ಜೋಜನೆ ಕೊಲೆ ಆರೋಪಿ. ಈತ ಐದು ವರ್ಷದ ಹಿಂದೆ ಲಾಧಾ ಗ್ರಾಮದ ಸವಿತಾ ಜತೆಗೆ ಪ್ರೀತಿಸಿ ಮದುವೆಯಾಗಿದ್ದ. ಈ ನಡುವೆ ಅನೇಕ ಬಾರಿ ಸವಿತಾ ಮತ್ತು ಶ್ರೀಧರ ಮಧ್ಯೆ ಜಗಳವಾಗಿವೆ. ಕೊಲೆ ಮಾಡುವ ಉದ್ದೇಶದಿಂದ ಕೈ ಕಾಲು ಕಟ್ಟಿಹಾಕಿ ತಲೆಗೆ ಹೊಡೆದಿದ್ದರಿಂದ ಪತಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.