Viral Video: ಸೀರೆ ಉಟ್ಟು 'ಬುಖಾರ್' ಹಾಡಿಗೆ ಸಖತ್ ಆಗಿ ಸ್ಟೆಪ್ಸ್ ಹಾಕಿದ ಜಪಾನಿ ಮಹಿಳೆಯರು; ನೆಟ್ಟಿಗರು ಫಿದಾ
ಭಾರತದಲ್ಲಿ ವಾಸಿಸುವ ಜಪಾನಿನ ಕಟೆಂಟ್ ಕ್ರಿಯೆಟರ್ ಮಾಯೋ ತನ್ನ ಸ್ನೇಹಿತೆ ಕಹೋ ಜತೆ ಸೀರೆಯುಟ್ಟು 'ಬುಖಾರ್' ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಇವರ ನೃತ್ಯ ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ.


ಹೊಸದಿಲ್ಲಿ: ಸೀರೆ ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಪು. ಆದರೆ ಈಗ ವಿದೇಶಿಯರು ಕೂಡ ಸೀರೆಯತ್ತ ಆಕರ್ಷಿತರಾಗಿದ್ದಾರೆ. ಭಾರತದಲ್ಲಿ ವಾಸಿಸುವ ಜಪಾನಿನ ಕಟೆಂಟ್ ಕ್ರಿಯೆಟರ್ ಮಾಯೋ ಸೀರೆಯುಟ್ಟು ಹಿಂದಿ ಹಾಡಿಗೆ ನೃತ್ಯ ಮಾಡಿದ್ದಾಳೆ. ಆಗಾಗ್ಗೆ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕುವ ಈಕೆ ಇದೀಗ 'ಬುಖಾರ್' ಸಾಂಗ್‌ಗೆ ಸಖತ್ ಆಗಿ ಸೊಂಟ ಬಳುಕಿಸಿದ್ದಾಳೆ. ಬಯಾನಿ ಮತ್ತು ಅರೂಬ್ ಖಾನ್ ನಟಿಸಿದ ಅದ್ಭುತವಾದ ಈ ಹಿಂದಿ ಬೀಟ್‍ಗೆ ಆಕೆ ತನ್ನ ಸ್ನೇಹಿತೆ ಕಹೋ ಜತೆ ಹೆಜ್ಜೆ ಹಾಕಿದ್ದಾಳೆ. ಇನ್ನು ಒಂದು ವಿಶೇಷವೆಂದರೆ ಇವರಿಬ್ಬರು ಸೀರೆ ಉಟ್ಟು ಡ್ಯಾನ್ಸ್ ಮಾಡಿದ್ದು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ನೆಟ್ಟಿಗರು ಇವರ ನೃತ್ಯ ನೋಡಿ ಫುಲ್ ಖುಷ್ ಆಗಿದ್ದಾರೆ.
ಮಾಯೋ ಮತ್ತು ಕಹೋ ಸೀರೆ ಉಟ್ಟು ಹೈ ಹೀಲ್ಸ್ ಹಾಕಿಕೊಂಡು 'ಬುಖಾರ್' ಆಲ್ಬಂಗೆ ಹೆಜ್ಜೆ ಹಾಕಿದ್ದಾರೆ. ಇವರ ನೃತ್ಯ ಕಂಡು ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಮಾಯೋ ಮತ್ತು ಕಹೋ ಡ್ಯಾನ್ಸ್ ವಿಡಿಯೊ ಇಲ್ಲಿದೆ ನೋಡಿ:
"ಟ್ರೆಂಡಿಂಗ್ ಬುಖಾರ್ ಫ್ರಮ್ ಜಪಾನ್" ಎಂಬ ಶೀರ್ಷಿಕೆಯೊಂದಿಗೆ ಮಾಯೋ ಈ ವಿಡಿಯೊವನ್ನು ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ವೈರಲ್ ಆಗಿದ್ದು, ಇದಕ್ಕೆ ಅನೇಕರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಸೀರೆ ಉಟ್ಟು ಅದ್ಭುತವಾಗಿ ಡ್ಯಾನ್ಸ್ ಮಾಡಿದ ಇವರ ವಿಡಿಯೊಗೆ ಸಾಕಷ್ಟು ಜನ 'ಹಾರ್ಟ್' ಎಮೋಜಿಗಳನ್ನು ಹರಿಬಿಟ್ಟಿದ್ದಾರೆ. ಕೆಲವರು ಇವರಿಬ್ಬರ ಸ್ಟೆಪ್ಸ್ ಹೊಗಳಿದರೆ, ಇತರರು ಅವರ ಸೌಂದರ್ಯವನ್ನು ಹೊಗಳಿದ್ದಾರೆ. "ವಾವ್ ಅದ್ಭುತ" ಎಂದು ಒಬ್ಬರು ಬರೆದಿದ್ದಾರೆ. "ನೀವಿಬ್ಬರೂ ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತೀರಿ" ಎಂದು ಇನ್ನೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಿಚ್ಛೇದನ ನೀಡಿ ಡ್ಯಾನ್ಸ್ ಮೂಲಕ ಆಕ್ರೋಶ ಹೊರ ಹಾಕಿದ ಮಹಿಳೆ! ವಿಡಿಯೊ ವೈರಲ್
'ಆಕ್ಷನ್ ರಿಪ್ಲೇ' ಚಿತ್ರದ ಹಾಡಿಗೆ ಸಖತ್ ಆಗಿ ಕುಣಿದ ಜರ್ಮನ್ ಲೇಡಿ
ಇತ್ತೀಚೆಗೆ ಜರ್ಮನ್ ಮಹಿಳೆಯೊಬ್ಬಳು ಐಶ್ವರ್ಯಾ ರೈ ಬಚ್ಚನ್ ಮತ್ತು ಅಕ್ಷಯ್ ಕುಮಾರ್ ಅಭಿನಯದ 'ಆಕ್ಷನ್ ರಿಪ್ಲೇ' ಚಿತ್ರದ ಜನಪ್ರಿಯ ಹಾಡಿಗೆ ಸಖತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾಳೆ. ಆಕೆಯ ಡ್ಯಾನ್ಸ್ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಟ್ರೆಂಡಿಂಗ್ ಹಾಡಿಗೆ ಜರ್ಮನ್ ಲೇಡಿ ಸ್ಟೆಪ್ಸ್ ಹಾಕುವುದನ್ನು ಕಂಡು ನೆಟ್ಟಿಗರು ಕೂಡ ಫಿದಾ ಆಗಿದ್ದಾರೆ. ಹಾಗಾಗಿ ಸೋಶಿಯಲ್ ಮೀಡಿಯಾ ನೆಟ್ಟಿಗರಲ್ಲಿ ಕೆಲವರು ಅವಳ ಅಭಿನಯವನ್ನು ಹೊಗಳಿದರೆ ಅನೇಕರು ಅವಳ ನೃತ್ಯದ ಸ್ಟೈಲ್ ಮತ್ತು ಬಾಲಿವುಡ್ ಮೇಲಿನ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಈ ಜರ್ಮನ್ ನರ್ತಕಿ ಭಾರತೀಯ ಹಾಡಿಗೆ ಟ್ಯೂನ್ ಮಾಡುತ್ತಿರುವುದು ಇದೇ ಮೊದಲಲ್ಲ. ಹೋಳಿ ಸಂದರ್ಭದಲ್ಲಿ ಆಕೆ ಬಾಲಿವುಡ್ ಸಂಗೀತದ ಮೇಲಿನ ಪ್ರೀತಿಯನ್ನು ತೋರಿಸುವ ಸಲುವಾಗಿ ಒಂದೆರಡು ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಳು.