ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಂಡಿಗೋ ವಿಮಾನದಲ್ಲಿ ಸೊಳ್ಳೆ ಕಾಟ- ಪ್ರಯಾಣಿಕರು ಮಾಡಿದ್ದೇನು ನೋಡಿ; ವಿಡಿಯೊ ವೈರಲ್

ಲಖನೌದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಸೊಳ್ಳೆಗಳ ಹಿಂಡು ಕ್ಯಾಬಿನ್‍ಗೆ ನುಗ್ಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಸೊಳ್ಳೆಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ವಿಮಾನ ಪ್ರಯಾಣದುದ್ದಕ್ಕೂ ಪ್ರಯಾಣಿಕರು ಸೊಳ್ಳೆಗಳನ್ನು ಹೊಡೆಯುವುದರಲ್ಲೇ ತಲ್ಲೀನರಾಗಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಮಾನದಲ್ಲಿ ಸೊಳ್ಳೆ‌ ಕಾಟ; ಬೇಸತ್ತ ಪ್ರಯಾಣಿಕರು ಮಾಡಿದ್ದೇನು?

Profile pavithra Apr 23, 2025 7:10 PM

ಲಖನೌ: ಇಂಡಿಗೋ ವಿಮಾನ ಪ್ರತಿಬಾರಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಈ ಹಿಂದೆ ಹಲವು ಬಾರಿ ಇಂಡಿಗೋ ವಿಮಾನದ ಬಗೆಗಿನ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿ ವೈರಲ್ ಆಗಿತ್ತು. ಇದೀಗ ಇಂಡಿಗೋ ವಿಮಾನ ಸೊಳ್ಳೆ ಕಾಟಕ್ಕಾಗಿ ಮತ್ತೆ ಸುದ್ದಿಯಲ್ಲಿದೆ. ಲಖನೌದಿಂದ ದೆಹಲಿಗೆ ತೆರಳುತ್ತಿದ್ದ ಇಂಡಿಗೊ ವಿಮಾನದಲ್ಲಿ ಸೊಳ್ಳೆಗಳ ಹಿಂಡು ಕ್ಯಾಬಿನ್‍ಗೆ ನುಗ್ಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಸೊಳ್ಳೆಗಳ ಹಾವಳಿಯಿಂದ ತಪ್ಪಿಸಿಕೊಳ್ಳಲು ವಿಮಾನ ಪ್ರಯಾಣದುದ್ದಕ್ಕೂ ಪ್ರಯಾಣಿಕರು ಸೊಳ್ಳೆಗಳನ್ನು ಹೊಡೆಯುವುದರಲ್ಲೇ ತಲ್ಲೀನರಾಗಿದ್ದರು ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.

ಪತ್ರಕರ್ತೆ ಮನೀಷಾ ಪಾಂಡೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಿದ್ದು, ಆ ವೇಳೆ ತನಗಾದ ನಿರಾಶಾದಾಯಕ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ. ಈ ಬಗ್ಗೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಅವರು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ತಾತ್ಕಾಲಿಕ ಪರಿಹಾರವಾಗಿ, ಸಿಬ್ಬಂದಿ ಲೆಮನ್ ಗ್ರಾಸ್ ಪ್ಯಾಚ್‍ಗಳನ್ನು ನೀಡಿದ್ದಾರೆ ಎಂದು ವರದಿಯಾಗಿದೆ.

ವಿಡಿಯೊ ಇಲ್ಲಿದೆ ನೋಡಿ...



ಈ ಪೋಸ್ಟ್‌ನಲ್ಲಿ ಆಕೆ ವಿಮಾನಯಾನ ಸಂಸ್ಥೆಯನ್ನು ಖಂಡಿಸಿದ್ದಾಳೆ. ಹೆಚ್ಚಿನ ಬೆಲೆಯ ಟಿಕೆಟ್‍ಗಳಿಗೆ ಯೋಗ್ಯ ಗುಣಮಟ್ಟದ ಸೇವೆಯನ್ನು ಒದಗಿಸಬೇಕು ಎಂದು ಹೇಳಿದ್ದಾಳೆ. ಹಾಗೆಯೇ ಆಕೆ ಈ ಪೋಸ್ಟ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವನ್ನು (ಡಿಜಿಸಿಎ) ಟ್ಯಾಗ್ ಮಾಡಿ, ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾಳೆ. ಆದರೆ ಇದುವರೆಗೂ ಸೊಳ್ಳೆಯ ಬಗ್ಗೆ ವಾಯುಯಾನ ಅಧಿಕಾರಿಗಳಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಎನ್ನಲಾಗಿದೆ.

ಈ ಹಿಂದೆ ಇಂಡಿಗೋ ಏರ್‌ಲೈನ್ಸ್ ಪ್ರಯಾಣಿಕರೊಬ್ಬರಿಗೆ ಅಸುರಕ್ಷಿತ ಆಹಾರವನ್ನು ನೀಡಿದ್ದಕ್ಕಾಗಿ ಇಂಡಿಗೋಗೆ ಭಾರತೀಯ ಆಹಾರ ಸುರಕ್ಷತೆಯ ಗುಣಮಟ್ಟ ಪ್ರಾಧಿಕಾರ ನೋಟಿಸ್ ನೀಡಿತ್ತು. ಇಂಡಿಗೋ ಏರ್‌ಲೈನ್ಸ್‌ಗೆ ಪೂರೈಕೆ ಮಾಡುವ ಹೈದರಾಬಾದ್‌ನ ಐಡಿಎ ಇನ್‌ಸ್ಟಾ ಹಟ್ ಆಹಾರ ಪೂರೈಕೆ ನಿಗಮಕ್ಕೆ ತೆಲಂಗಾಣದ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದು, ಅನೇಕ ನೈರ್ಮಲ್ಯ ಉಲ್ಲಂಘನೆಗಳನ್ನು ಬಹಿರಂಗಪಡಿಸಿದ್ದರು‌.

ಈ ಸುದ್ದಿಯನ್ನೂ ಓದಿ:Viral Video: ಬಸ್‌, ಕಾರ್‌, ಬೈಕ್‌ ಅಲ್ಲ... ಕಾಲೇಜಿಗೆ ಓಡಾಡೋಕೆ ದಿನಾ ಫ್ಲೈಟ್‌ ಬೇಕು; ಈಕೆಯ ದಿನ ಖರ್ಚು ಕೇಳಿದ್ರೆ ಶಾಕ್‌ ಆಗುತ್ತೆ!

ಅಡುಗೆ ಮಾಡುವ ಸ್ಥಳದಲ್ಲಿ ಜಿರಳೆ ಹಾವಳಿ ಉಂಟಾಗಿರುವ ಜೊತೆಗೆ ಅಡುಗೆ ಆವರಣದಲ್ಲಿ 1.25 ಕಿಲೋ ಕಸ್ತೂರಿ ಮೇಥಿ, ಅರ್ಧ ಕಿಲೋ ಸಾಸಿವೆ ಮತ್ತು 1 ಕಿಲೋ ರಾಯ್ ಮೋಟಾ ಸೇರಿದಂತೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಆಹಾರ ಸುರಕ್ಷತಾ ಅಧಿಕಾರಿಗಳು ಇತರ ಹಲವು ನೈರ್ಮಲ್ಯ ಸಮಸ್ಯೆಗಳನ್ನು ಬಹಿರಂಗಪಡಿಸಿದ್ದರು. ಕೆಲವು ತರಕಾರಿಗಳು ಹಾಳಾಗಿ ಕೊಳೆತು ಹೋಗಿದ್ದು ಅಸಮರ್ಪಕವಾಗಿ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ತುಕ್ಕು ಹಿಡಿದ ಚರಣಿ ಬಳಕೆ, ಡಸ್ಟ್‌ಬಿನ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು, ಪ್ಯಾಕಿಂಗ್ ಸಾಮಗ್ರಿಗಳ ಪರೀಕ್ಷಾ ದಾಖಲೆಗಳು ಇಲ್ಲದಿರುವುದನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.