Viral Video: ಆಟೋದೊಳಗಿನ ಆಫೀಸ್ ಚೇರ್ ನೋಡಿ ಥ್ರಿಲ್ ಆದ ನೆಟ್ಟಿಗರು; ಏನಿದು ಕುರ್ಚಿ ಪುರಾಣ?
ಆಟೋ ಚಾಲಕನೊಬ್ಬ ತನ್ನ ಸ್ಟ್ಯಾಂಡರ್ಡ್ ಸೀಟ್ ಅನ್ನು ಆಫೀಸ್‍ನಲ್ಲಿ ಬಳಸುವ ಆರಾಮದಾಯಕ ಕುರ್ಚಿಯಾಗಿ ಬದಲಾಯಿಸಿದ್ದಾನೆ. ಚಾಲಕ ಮಾಡಿದ ಈ ವಿಶಿಷ್ಟ ಮಾರ್ಪಾಡು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದೆ. ಈ ವಿಡಿಯೊ ವೈರಲ್(Viral Video) ಆಗಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.


ನವದೆಹಲಿ: ಆಟೋದಲ್ಲಿ ಲೈಬ್ರೆರಿ, ಆಟೋದಲ್ಲಿ ಆಕ್ವೇರಿಯಂ ಸುದ್ದಿಗಳು ಇತ್ತೀಚೆಗೆ ವೈರಲ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಆಟೋವೊಂದು ಮತ್ತೆ ಸುದ್ದಿಯಲ್ಲಿದೆ. "ಪೀಕ್ ಬೆಂಗಳೂರು ಮೊಮೆಂಟ್" ಟ್ರೆಂಡ್ ಬಗ್ಗೆ ಹೆಚ್ಚಿನ ಬೆಂಗಳೂರು ನಿವಾಸಿಗಳಿಗೆ ಮತ್ತು ಸೋಶಿಯಲ್ ಮೀಡಿಯಾ ನೆಟ್ಟಿಗರಿಗೆ ತಿಳಿದೆಯಿದೆ. ಇದರಲ್ಲಿ ಕೆಲಸ-ಜೀವನ ತಂತ್ರಜ್ಞಾನ ಮತ್ತು ಸಂಚಾರಕ್ಕೆ ಸಂಬಂಧಪಟ್ಟ ಆಸಕ್ತಿದಾಯಕ ಅಥವಾ ಅಸಾಮಾನ್ಯ ಘಟನೆಗಳ ಬಗ್ಗೆ ಹಂಚಿಕೊಳ್ಳಲಾಗುತ್ತದೆ. ಇದೀಗ ಆಟೋ ರಿಕ್ಷಾವೊಂದರಲ್ಲಿ ಚಾಲಕ ಮಾಡಿದ ವಿಶಿಷ್ಟ ಮಾರ್ಪಾಡಿನ ಬಗ್ಗೆ ತಿಳಿಸಲಾಗಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿ ನೆಟ್ಟಿಗರನ್ನು ಬೆರಗುಗೊಳಿಸಿದೆ.
ವೈರಲ್ ವಿಡಿಯೊದಲ್ಲಿ ಆಟೋ ಚಾಲಕನೊಬ್ಬ ತನ್ನ ಸ್ಟ್ಯಾಂಡರ್ಡ್ ಸೀಟ್ ಅನ್ನು ಆಫೀಸ್‍ನಲ್ಲಿ ಬಳಸುವ ಆರಾಮದಾಯಕ ಕುರ್ಚಿಯಾಗಿ ಬದಲಾಯಿಸಿದ್ದಾನೆ. ಕೆಲವು ಚಾಲಕರಿಗೆ ದಿನವಿಡೀ ಕುಳಿತು ಚಾಲನೆ ಮಾಡುವುದರಿಂದ ಬೆನ್ನು ನೋವಿನ ಸಮಸ್ಯೆ ಕಾಡುತ್ತದೆ. ಹೀಗಾಗಿ ಅಂತವರು ತಮಗೆ ಆರಾಮದಾಯಕವಾಗಿ ಸಂಚಾರ ಮಾಡಲು ಈ ರೀತಿಯಲ್ಲಿ ತಮಗೆ ಆರಾಮ ಎನಿಸುವ ಸೀಟನ್ನು ಆಟೋಗೆ ಫಿಕ್ಸ್ ಮಾಡಿಸಿಕೊಳ್ಳುತ್ತಾರಂತೆ.
ಆಟೋದೊಳಗೆ ಆಫೀಸ್ ಚೇರ್; ಇಲ್ಲಿದೆ ವಿಡಿಯೊ
auto driver’s seat had an office chair fixed for extra comfort, man i love bangalore @peakbengaluru 🤌🏼 pic.twitter.com/D1LjGZOuZl
— Shivani Matlapudi (@shivaniiiiiii_) September 23, 2024
ಈ ರೀತಿ ಮಾರ್ಪಡಿಸಿದ ಆಟೋ ರಿಕ್ಷಾದ ಪೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದ್ದು, ಇದು ಎಲ್ಲರ ಗಮನ ಸೆಳೆದಿದೆ. ಈ ಪೋಟೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ ಇದಕ್ಕೆ ಪ್ರತಿಕ್ರಿಯೆಗಳ ಸುರಿಮಳೆ ಬಂದಿದೆ. ಈ ಪೋಸ್ಟ್‌ಗೆ ಹಲವರು ಕಾಮೆಂಟ್ ಮಾಡಿ ನಿಮಗೆ ಇಂತಹ ಐಡಿಯಾ ಎಲ್ಲಿಂದ ಬರುತ್ತದೆ. ಅಣ್ಣಾ ಬಹುಶಃ ಆಟೋ ಫೆರಾರಿ ಎಂದು ಯೋಚಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಇನ್ನೊಬ್ಬರು "ಪ್ರಾಮಾಣಿಕವಾಗಿ, ಇದು ನನ್ನ ಆಫೀಸ್ ಚೇರ್‌ಗಿಂತ ಹೆಚ್ಚು ಆರಾಮದಾಯಕವಾಗಿ ಕಾಣುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಆಟೋ ಚಾಲಕರು ಈ ರೀತಿ ಬದಲಾವಣೆಗಳಿಗೆ ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಇದೇ ರೀತಿಯ ಘಟನೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದಿದ್ದು, ಚಾಲಕನೊಬ್ಬ ತನ್ನ ಸೀಟನ್ನು ಬದಲಾಯಿಸಿದ ಫೋಟೊವೊಂದನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದ. ಚಾಲಕ ಎರ್ಗೊನಾಮಿಕ್ ಸ್ವಿವೆಲ್ ಕಚೇರಿ ಕುರ್ಚಿಯ ಮೇಲೆ ಆರಾಮವಾಗಿ ಕುಳಿತ ಪೋಟೊ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral News: ಆಟೋದೊಳಗೊಂದು ಲೈವ್ ಅಕ್ವೇರಿಯಂ! ಈ ಪ್ರಯಾಣ ನಿಜಕ್ಕೂ ಸುಖಕರ
ಇತ್ತೀಚೆಗೆ ಪುಣೆಯಲ್ಲಿ ಆಟೋ ಹತ್ತಿದ ಮಹಿಳೆ ಸಿಕ್ಕಾಪಟ್ಟೆ ಶಾಕ್ ಆಗಿ ಅದರ ವಿಡಿಯೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಳು. ಇದಕ್ಕೆ ಮುಖ್ಯ ಕಾರಣ ಈ ಆಟೋದಲ್ಲಿನ ಲೈವ್ ಅಕ್ವೇರಿಯಂ! ಆಟೋ ಚಾಲಕನ ಸೀಟಿನ ಹಿಂದೆ ಮೀನುಗಳಿಂದ ತುಂಬಿದ ಅಕ್ವೇರಿಯಂ ಅನ್ನು ಇರಿಸಲಾಗಿತ್ತು. ಮತ್ತು ಆಟೋದ ಒಳಗೆ ಬಣ್ಣ ಬಣ್ಣದ ಲೈಟ್ ಸೆಟ್ಟಿಂಗ್ ಮಾಡಲಾಗಿತ್ತು. ಈ ಆಟೋದಲ್ಲಿ ಕುಳಿತರೆ ಪ್ರಯಾಣಿಕರ ಮನಸ್ಸಿಗೆ ಸಿಕ್ಕಾಪಟ್ಟೆ ಖುಷಿಯಾಗುತ್ತದೆಯಂತೆ. ಆಟೋರಿಕ್ಷಾದ ಒಳಗೆ ಲೈವ್ ಅಕ್ವೇರಿಯಂ ನೋಡಿ ಜನ ಕೂಡ ಫುಲ್ ಥ್ರಿಲ್ ಆಗಿದ್ದಾರೆ.