ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jagdeep Dhankhar: "ಶಿರಸಿಯ ಪರಿಸರ ಕಂಡು ಇಲ್ಲೇ ನೆಲೆಸಬೇಕು ಅನ್ನಿಸುತ್ತಿದೆ " ; ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

ಉಪರಾಷ್ಟ್ರಪತಿ ಜಗದೀಪ ಧನಕರ್‌ ಅವರು ಸೋಮವಾರ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನಕ್ಕೆ ಬಂದಿಳಿದ್ದಾರೆ. ನಂತರ ಅವರು ಪತ್ನಿಯೊಂದಿಗೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ದರ್ಶನ ಪಡೆದಿದ್ದಾರೆ.

ಶಿರಸಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌

Profile Vishakha Bhat May 5, 2025 3:15 PM

ಶಿರಸಿ: ಉಪರಾಷ್ಟ್ರಪತಿ ಜಗದೀಪ ಧನಕರ್‌ ( Jagdeep Dhankar) ಅವರು ಸೋಮವಾರ ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ನಗರದ ಎಂ.ಎಂ.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಮೈದಾನಕ್ಕೆ ಬಂದಿಳಿದ್ದಾರೆ. ನಂತರ ಅವರು ಪತ್ನಿಯೊಂದಿಗೆ ಶಿರಸಿಯ ಪ್ರಸಿದ್ಧ ಮಾರಿಕಾಂಬಾ ದೇವಿಯ ದರ್ಶನ ಪಡೆದಿದ್ದಾರೆ. ಅಲ್ಲಿಂದ ಅರಣ್ಯ ಮಹಾವಿದ್ಯಾಲಯದ ನಡೆದ ಸಂವಾದದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಶಿರಸಿಗೆ ಹೊಂದಿಕೊಂಡಿರುವ ಪಶ್ಚಿಮ ಘಟ್ಟಗಳು ವಿಶ್ವದಲ್ಲಿ ಅತಿ ಹೆಚ್ಚು ಸಮೃದ್ಧವಾದ ಪರಿಸರ ವೈವಿಧ್ಯತೆಯನ್ನು ಹೊಂದಿವೆ ಎಂದು ಹೇಳಿದ್ದಾರೆ.

ಒಂದು ಗಿಡ ನಿಮ್ಮ ತಾಯಿಯ ಹೆಸರಲ್ಲಿ ಎಂಬ ಯೋಜನೆಗೆ ಚಾಲನೆ ನೀಡಿದ ಉಪರಾಷ್ಟ್ರಪತಿ, ಸಾಂಕೇತಿಕವಾಗಿ ಗಿಡ ನೆಟ್ಟಿದ್ದಾರೆ. ನಂತರ ಮಾತನಾಡಿ ಶಿರಸಿಯ ಮಣ್ಣು ಸುಹಾಸನೆ ಬೀರುತ್ತದೆ. ನನಗೆ ಇಲ್ಲಿನ ಪರಿಸರ ಕಂಡು ಇಲ್ಲೆ ನೆಲಸಬೇಕು ಅನಿಸುತ್ತದೆ. ಇಂತಹ ಪರಿಸರದಲ್ಲಿ ಓದುತ್ತಿರುವ ನೀವುಗಳು ಪುಣ್ಯವಂತರು ಎಂದು ವಿದ್ಯಾರ್ಥಿಗಳಿಗೆ ಹೇಳಿದರು. ನೀವು ಉತ್ತಮವಾದುದನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ಅರಣ್ಯವನ್ನು ರಕ್ಷಿಸಬೇಕಾದ ಜವಾಬ್ದಾರಿ ನಮ್ಮಲ್ಲೆರ ಮೇಲಿದೆ. ಕಾಡು ನೈಸರ್ಗಿಕ ವಿಪತ್ತನ್ನಿಂದ ರಕ್ಷಿಸುತ್ತದೆ. ಭೂ ಮಾತೆ ನಮಗೆ ಕೊಟ್ಟಿರುವ ಪರಿಸರವನ್ನ ಗೌರವಿಸಿ ಉಳಿಸಿ ಬೆಳೆಸಬೇಕು. ಭೂಮಿ ಕೇಲವ ಮಾನವರಿಗೆ ಅಷ್ಟೇ ಅಲ್ಲ. ಇಲ್ಲಿರುವ ಪ್ರತಿಯೊಂದು ಜೀವಿಗೂ ಭೂಮಿಯ ಮೇಲೆ ಹಕ್ಕಿದೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯದ ಕುರಿತು ಮಾತನಾಡಿದ ಉಪರಾಷ್ಟ್ರಪತಿ, ಯುವ ಶಕ್ತಿಯೇ ಭಾರತದ ಶಕ್ತಿಯಾಗಿ ರೂಪಗೊಂಡಿದೆ. ನಿಮ್ಮ ಸಾಧನೆ ಕೇವಲ ನಿಮ್ಮನ್ನು ಅಷ್ಟೆ ಅಲ್ಲ ಈ ದೇಶವನ್ನ ಅಭಿವೃದ್ದಿಯ ದಾರಿಯಲ್ಲಿ ಒಯ್ಯುತ್ತದೆ. ನಿಮ್ಮಲ್ಲಿನ ಕೌಶಲ್ಯ, ಬುದ್ಧಿ ಶಕ್ತಿಯನ್ನ ಬಳಸಿಕೊಂಡು ಬೇಕಾದಷ್ಟು ಸಾಧನೆ ಮಾಡಬಹುದು. ಅರಣ್ಯ ವಿಜ್ಞಾನದ ಬಗ್ಗೆ ಸಂಶೋಧನೆ ಮಾಡಲು ಬಹಳ ಅವಕಾಶ ಗಳು ಇವೆ. ನೀವು ಎಷ್ಟು ಸಂಶೋಧನೆ ಮಾಡುತ್ತೀರಾ ಅಷ್ಟು ಈ ಭೂಮಿಗೆ ಕೊಡುವ ದೊಡ್ಡ ಕೊಡುಗೆ ಆಗಿದೆ ಎಂದು ಹೇಳಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಉಸ್ತುವರಿ ಸಚಿವ ಮಂಕಾಳು ವೈದ್ಯ, ಶಾಸಕ ಭಿಮಣ್ಣ ನಾಯ್ಕ್ ಸೇರಿದಂತೆ ಹಲವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಈ ಸುದ್ದಿಯನ್ನೂ ಓದಿ: Jagdeep Dhankhar: "ಸಂಸತ್ತೇ ಸರ್ವೋಚ್ಛ"; ಸುಪ್ರೀಂ ಕೋರ್ಟ್‌ಗೆ ಟಾಂಗ್‌ ಕೊಟ್ಟ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌

ಉಪರಾಷ್ಟ್ರತಿ ಆಗಮನದಿಂದಾಗಿ ನಗರದಲ್ಲಿ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು. ಒಂದು ಎಸ್.ಪಿ, ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು,5 ಡಿ.ಎಸ್.ಪಿ, 12 ಸಿಪಿಐ, 30 ಪಿ.ಎಸ್.ಐ, 67 ಎ.ಎಸ್.ಐ, 517 ಪೊಲೀಸ್ ಸಿಬ್ಬಂದಿಗಳು, 41 ಮಹಿಳಾ ಪೊಲೀಸ್ ಸಿಬ್ಬಂದಿಗಳು, 6 ಜಿಲ್ಲಾ ಮೀಸಲು ಶಸಸ್ತ್ರಪಡೆ, 2 ರಾಜ್ಯ ಶಸಸ್ತ್ರ ಮೀಸಲು ಪಡೆ, 2 ಶ್ವಾನದಳ, 2 ಅಂಬ್ಯುಲೆನ್ಸ್, ಅಗ್ನಿಶಾಮಕದಳ, 1 ಮೊಬೈಲ್ ಜಾಮರ್, 2 ಬಾಂಬ್ ನಿಷ್ಕ್ರಿಯದಳ ಹಾಗೂ ಎಸ್.ಪಿ.ಜಿ ಕಮಾಂಡೋಗಳು ಭದ್ರತೆಯನ್ನು ನೀಡಿದ್ದಾರೆ.