Viral Video: ಮದುವೆ ದಿನ ಕೇಕ್ ಕಟ್ ಮಾಡೋವಾಗ ವರ ಮಾಡಿದ ಆ ತಪ್ಪಿಗೆ ವಧು ಫುಲ್ ಅಪ್‌ಸೆಟ್! ಈ ವಿಡಿಯೊ ನೋಡಿ
ಮದುವೆ ಸಮಾರಂಭದಲ್ಲಿ ವರನೊಬ್ಬ ಕೇಕ್ ಕತ್ತರಿಸಿದ ನಂತರ ಕೇಕ್ ಮೇಲೆ ವಧುವಿನ ಮುಖವನ್ನು ಒತ್ತಿದ್ದಾನೆ.ವರ ತಮಾಷೆಗಾಗಿ ಮಾಡಿದ ಈ ಕೃತ್ಯದಿಂದ ವಧು ಬೇಸರಗೊಂಡಿದ್ದಾಳಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಇತ್ತೀಚಿನ ದಿನಗಳಲ್ಲಿ ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬಕ್ಕೆ ಕೇಕ್ ಕತ್ತರಿಸುವುದು ಮಾತ್ರವಲ್ಲ ನಿಶ್ಚಿತಾರ್ಥ, ಮದುವೆ ಸಮಾರಂಭದಲ್ಲಿ ಕೂಡ ದಂಪತಿ ಕೇಕ್ ಕತ್ತರಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುವ ಕ್ಷಣವನ್ನು ಆನಂದಿಸುತ್ತಾರೆ. ಹೀಗಿರುವಾಗ ಮದುವೆ ಸಮಾರಂಭವೊಂದರಲ್ಲಿ ವರನೊಬ್ಬ ಮಾಡಿದ ತಮಾಷೆಯ ಕೃತ್ಯವು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಅದರಲ್ಲಿ ದಂಪತಿ ಕೇಕ್ ಕತ್ತರಿಸಿದ ನಂತರ ವರನು ಕೇಕ್ ಮೇಲೆ ವಧುವಿನ ಮುಖವನ್ನು ಒತ್ತಿದ್ದಾನೆ. ಇದರಿಂದ ವಧು ಕೂಡ ತುಸು ಬೇಸರಗೊಂಡಿದ್ದಾಳಂತೆ.ಇದನ್ನು ನೋಡಿ ನೆಟ್ಟಿಗರು ಕೂಡ ವಧುವಿನ ಪರವಾಗಿ ಕಾಮೆಂಟ್ ಮಾಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ ದಂಪತಿ ಟೇಬಲ್ ಮೇಲಿದ್ದ ಕೇಕ್ ಅನ್ನು ಕತ್ತರಿಸುತ್ತಿದ್ದಂತೆ, ವರನು ವಧುವಿನ ಮುಖವನ್ನು ಅದರ ಮೇಲೆ ಬಲವಂತವಾಗಿ ಒತ್ತಿದ್ದಾನೆ. ಇದನ್ನು ನೋಡಿ ಎಲ್ಲರೂ ಶಾಕ್ ಆಗಿದ್ದಾರೆ. ವಧು ಕೂಡ ಭಾವಿ ಪತಿ ಈ ರೀತಿಯ ತಮಾಷೆ ಮಾಡುತ್ತಾನೆ ಎಂದುಕೊಂಡಿರಲಿಲ್ಲ. ಹೀಗಾಗಿ ವರನ ಈ ತಮಾಷೆ ಅವಳಿಗೆ ಶಾಕ್ ನೀಡಿದೆಯಂತೆ.
ಈ ವಿಡಿಯೊ ವೈರಲ್ ಆದ ಕೂಡಲೇ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ. ಪತಿಯ ವರ್ತನೆಯನ್ನು ಟೀಕಿಸಿದ್ದಾರೆ. ವಿಡಿಯೊದಲ್ಲಿ ವಧುವಿನ ತಂದೆ ಇಲ್ಲದಿರುವುದಕ್ಕೆ ವರನು ಅಷ್ಟೊಂದು ಕಠೋರವಾಗಿ ವರ್ತಿಸಿದ್ದಾನೆ ಎಂದು ಒಬ್ಬ ನೆಟ್ಟಿಗರು ಹೇಳಿದ್ದಾರೆ. ಮತ್ತೊಬ್ಬರು, "ನನ್ನ ಪತಿ ನನಗೆ ಹಾಗೆ ಮಾಡಿದ್ದರೆ ಮದುವೆಯಾಗಿದ್ದರೂ ತಕ್ಷಣವೇ ವಿಚ್ಛೇದನ ನೀಡುತ್ತಿದ್ದೆ " ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ನಿಮ್ಮ ಈ ವರ್ತನೆ ಮದುವೆಯ ದಿನ ನಿಮ್ಮ ಮಡದಿಗೆ ನೀವು ತೋರಿದ ಕೆಟ್ಟ ನಡೆಯಾಗಿದೆ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಪ್‌ಕೇಕ್ ಹೀಗೂ ಮಾಡಬಹುದಾ? ಸಿಕ್ಕಾಪಟ್ಟೆ ವೈರಲ್ ಆಯ್ತು ಈ ವಿಡಿಯೊ
ಆದರೆ ಕೆಲವರು ವರನ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ವರನ ವಿರುದ್ಧ ಪೋಸ್ಟ್ ಮಾಡಿದವರು ಜೀವನದಲ್ಲಿ ಹಾಸ್ಯದ ಭಾವನೆ ಇಲ್ಲದವರು ಎಂದು ಆರೋಪಿಸಿದ್ದಾರೆ. ಇನ್ನೊಬ್ಬರು, “ನಮ್ಮವರು ಎಂದು ನಮ್ಮ ಮನಸ್ಸಿನಲ್ಲಿ ಬಂದ ಮೇಲೆ ಅವರ ಮೇಲೆ ತಮಾಷೆ ಮಾಡಲು ನಮಗೆ ಧೈರ್ಯ ಬೇಕಾಗಿಲ್ಲ” ಎಂದು ಹೇಳಿದ್ದಾರೆ.