ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Viral Video: ಮಹಾ ಕುಂಭಮೇಳದಲ್ಲಿ ಫ್ಲೈಓವರ್ ಬಾಬಾ ವೈರಲ್; ಯಾರಿವರು? ಏನಿವರ ಪವಾಡ? ವಿಡಿಯೊ ನೋಡಿ

ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಆಗಮಿಸಿದ ಜನರು ಅಲ್ಲಿದ್ದ ಫ್ಲೈಓವರ್‌ ಅನ್ನು ಮುಟ್ಟಿ ಅದರ ಆಶೀರ್ವಾದ ಪಡೆದಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾಗಿ ನೆಟ್ಟಿಗರು ಇದನ್ನು 'ಫ್ಲೈಓವರ್ ಬಾಬಾ' ಎಂದು ತಮಾಷೆಯಿಂದ ಕರೆದಿದ್ದಾರೆ.

ಪ್ರಯಾಗ್‌ರಾಜ್‌ನ ಫ್ಲೈಓವರ್ ಮುಟ್ಟಿ ಮುಟ್ಟಿ ನಮಸ್ಕರಿಸಿದ ಭಕ್ತರು!

flyover baba

Profile pavithra Feb 18, 2025 4:54 PM

ಲಖನೌ: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಇಲ್ಲಿಗೆ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಜತೆಗೆ ಇಲ್ಲಿನ ವಿಡಿಯೊಗಳು ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಈ ನಡುವೆ ಪ್ರಯಾಗ್‍ರಾಜ್‍ನ ಬೀದಿಯಲ್ಲಿರುವ ಫ್ಲೈಓವರ್‌ನ ವಿಡಿಯೊ ಸಿಕ್ಕಾಪಟ್ಟೆ ವೈರಲ್‌ (Viral Video) ಆಗಿದೆ. ಜನ ಕೂಡ ಆ ಫ್ಲೈಓವರ್‌ ಅನ್ನು ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದಾರೆ. ಮಹಾ ಕುಂಭಮೇಳದ ಸ್ಥಳದ ಸುತ್ತಲೂ ಇರುವ ಫ್ಲೈಓವರ್ ಅನ್ನು ನೆಟ್ಟಿಗರು 'ಫ್ಲೈಓವರ್ ಬಾಬಾ' ಎಂದು ತಮಾಷೆಯಿಂದ ಕರೆದಿದ್ದಾರೆ. ಅಷ್ಟಕ್ಕೂ ಆ ಫ್ಲೈಓವರ್‌ನಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊಂದರಲ್ಲಿ ಭಕ್ತರು ಫ್ಲೈಓವರ್ ಮೇಲೆ ನಡೆಯುವಾಗ ಅದರ ಗೋಡೆಗಳನ್ನು ಸ್ಪರ್ಶಿಸುತ್ತಾ ಅದನ್ನು ದೇವರೆಂದು ಭಾವಿಸಿ ಆಶೀರ್ವಾದ ಪಡೆಯುವುದು ಸೆರೆಯಾಗಿದೆ. ಈ ಫ್ಲೈಓವರ್ ಬಾಬಾನ ಆಶೀರ್ವಾದ ಪಡೆಯಲು ಜನರು ಮೇಲೆ ಜಿಗಿಯುತ್ತಾ ಕೈಗಳನ್ನು ಚಾಚಿ ಅದನ್ನು ಸ್ಪರ್ಶಿಸಿದ್ದಾರೆ. ಇನ್ನು ಕೆಲವರು ಫ್ಲೈಓವರ್‌ನ ಬದಿಯ ಗೋಡೆಗಳ ಕಡೆಗೆ ನಡೆದು, ಅದನ್ನು ಮುಟ್ಟಿ ಆಶೀರ್ವಾದವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಕೆಲವರು ಫ್ಲೈಓವರ್‌ ಅನ್ನು ಮುಟ್ಟಲು ಜಿಗಿಯುವುದು ಕೂಡ ವಿಡಿಯೊದಲ್ಲಿ ಸೆರೆಯಾಗಿದೆ.



ಯಾರೋ ಆಕಸ್ಮಿಕವಾಗಿ ಗೋಡೆಗಳನ್ನು ಸ್ಪರ್ಶಿಸಿದ್ದಾರೆ. ಹಾಗಾಗಿ ಅವರನ್ನು ನೋಡಿ ಎಲ್ಲರೂ ಅದನ್ನು ಫಾಲೋ ಮಾಡಿದ್ದಾರೆ ಎಂದು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಫ್ಲೈಓವರ್‌ನಲ್ಲಿ ಯಾವುದೇ ಸಂತ ಅಥವಾ ಬಾಬಾ ಇಲ್ಲ, ಆದರೂ ಜನರು ಮುಟ್ಟಿ ನಮಸ್ಕಾರ ಮಾಡಿದ್ದರಿಂದ ಈ ಹೆಸರು ಬಂದಿದೆ. ಹೀಗಾಗಿ ನೆಟ್ಟಿಗರು ಇದನ್ನು ಕುರುಡು ನಂಬಿಕೆಗೆ ಒಂದು ಉತ್ತಮ ಉದಾಹರಣೆ ಎಂದು ಕರೆದಿದ್ದಾರೆ.

ಈ ಹಿಂದೆ ಇದೇ ರೀತಿಯ ಘಟನೆಯೊಂದು ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮಥುರಾದ ಬಂಕೆ ಬಿಹಾರಿ ಮಂದಿರಕ್ಕೆ ಭೇಟಿ ನೀಡಿದ ಭಕ್ತರು ಎಸಿಯಿಂದ ಬಿದ್ದ ನೀರನ್ನು 'ಚರಣ್ ಅಮೃತ್' ಎಂದು ಹೇಳಿ ಕುಡಿದಿದ್ದರು. ಇದನ್ನೂ ನೆಟ್ಟಿಗರು ಕೂಡ ಅಂಧಭಕ್ತಿಗೆ ಉದಾಹರಣೆ ಎಂದೇ ಕರೆದಿದ್ದರು.

ಈ ಸುದ್ದಿಯನ್ನೂ ಓದಿ:Actress Death Case: ಮೂಢ ನಂಬಿಕೆಗೆ ಪ್ರಾಣವನ್ನೇ ಕಳೆದುಕೊಂಡ್ರಾ ಖ್ಯಾತ ನಟಿ? ಅಮೆಜೋನಿಯನ್ ಕಪ್ಪೆ ವಿಷ ಸೇವಿಸಿದ್ದೇಕೆ?

ಅಮೆಜೋನಿಯನ್ ಕಪ್ಪೆ ವಿಷವನ್ನು ಸೇವಿಸಿದ ನಂತರ ಮೆಕ್ಸಿಕೊದ ನಟಿಯೊಬ್ಬರು(Actress Death Case) ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ತೀವ್ರ ಅತಿಸಾರದ ಸಮಸ್ಯೆಯನ್ನು ಅನುಭವಿಸಿದ್ದಾರೆ. ಹಾಗಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರಿಗೆ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.

33 ವರ್ಷದ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ ಸಾಂಪ್ರದಾಯಿಕ ದಕ್ಷಿಣ ಅಮೆರಿಕಾದ ಕಾಂಬೋ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಆಚರಣೆಯಲ್ಲಿ  ನೀರು ಕುಡಿಯುವುದು, ದೇಹದ ಮೇಲೆ ಸುಟ್ಟಗಾಯಗಳು ಮತ್ತು ದೇಹವನ್ನು ವಿಷದಿಂದ ಶುದ್ಧೀಕರಿಸಲು ಕಪ್ಪೆ ವಿಷವನ್ನು ಬಳಸುವುದು ಮುಂತಾದ ಆಚರಣೆಗಳು ಸೇರಿವೆ. ಆದರೆ ಈ ಆಚರಣೆಯು ಮಾರಣಾಂತಿಕವಾಗಿದೆ ಎಂಬುದಾಗಿ  ತಿಳಿದುಬಂದಿದೆ.