ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Actress Death Case: ಮೂಢ ನಂಬಿಕೆಗೆ ಪ್ರಾಣವನ್ನೇ ಕಳೆದುಕೊಂಡ್ರಾ ಖ್ಯಾತ ನಟಿ? ಅಮೆಜೋನಿಯನ್ ಕಪ್ಪೆ ವಿಷ ಸೇವಿಸಿದ್ದೇಕೆ?

33 ವರ್ಷದ ಮೆಕ್ಸಿಕೊದ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ ಸಾಂಪ್ರದಾಯಿಕ ದಕ್ಷಿಣ ಅಮೆರಿಕಾದ ಕಾಂಬೋ ಆಚರಣೆಯಲ್ಲಿ ಭಾಗವಹಿಸಿದ್ದರು. ಆಧ್ಯಾತ್ಮಿಕ ಶುದ್ಧೀಕರಣ ಆಚರಣೆಯ ಭಾಗವಾಗಿ ಅಮೆಜೋನಿಯನ್ ಕಪ್ಪೆ ವಿಷವನ್ನು ಸೇವಿಸಿದ ನಂತರ ನಟಿ(Actress Death Case) ದುರಂತವಾಗಿ ಸಾವನ್ನಪ್ಪಿದ್ದಾರೆ.

Profile Vishwavani News Dec 5, 2024 2:53 PM
ಮೆಕ್ಸಿಕೊ: ಪ್ರಚಲಿತದಲ್ಲಿರುವ ಶುದ್ಧೀಕರಣ ಆಚರಣೆಯ ಭಾಗವಾಗಿ ಅಮೆಜೋನಿಯನ್ ಕಪ್ಪೆ ವಿಷವನ್ನು ಸೇವಿಸಿದ ನಂತರ ಮೆಕ್ಸಿಕೊದ ನಟಿಯೊಬ್ಬರು(Actress Death Case) ದುರಂತವಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ ನಂತರ ಅವರು ತೀವ್ರ ಅತಿಸಾರದ ಸಮಸ್ಯೆಯನ್ನು ಅನುಭವಿಸಿದ್ದಾರೆ. ಹಾಗಾಗಿ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ವೈದ್ಯರಿಗೆ ಅವರ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬುದಾಗಿ ತಿಳಿದುಬಂದಿದೆ.
33 ವರ್ಷದ ನಟಿ ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್ ಸಾಂಪ್ರದಾಯಿಕ ದಕ್ಷಿಣ ಅಮೆರಿಕಾದ ಕಾಂಬೋ ಆಚರಣೆಯಲ್ಲಿ ಭಾಗವಹಿಸಿದ್ದರು. ಈ ಆಚರಣೆಯಲ್ಲಿ  ನೀರು ಕುಡಿಯುವುದು, ದೇಹದ ಮೇಲೆ ಸುಟ್ಟಗಾಯಗಳು ಮತ್ತು ದೇಹವನ್ನು ವಿಷದಿಂದ ಶುದ್ಧೀಕರಿಸಲು ಕಪ್ಪೆ ವಿಷವನ್ನು ಬಳಸುವುದು ಮುಂತಾದ ಆಚರಣೆಗಳು ಸೇರಿವೆ. ಆದರೆ ಈ ಆಚರಣೆಯು ಮಾರಣಾಂತಿಕವಾಗಿದೆ ಎಂಬುದಾಗಿ  ತಿಳಿದುಬಂದಿದೆ.
ಕಾಂಬೋ ಆಚರಣೆಯನ್ನು ಹೇಗೆ ನಡೆಸಲಾಗುತ್ತದೆ?ಆಚರಣೆಯಲ್ಲಿ ಭಾಗವಹಿಸುವವರನ್ನು ಒಂದು ಲೀಟರ್‌ಗಿಂತ ಹೆಚ್ಚು ನೀರನ್ನು ಕುಡಿಯುವಂತೆ ಮಾಡಲಾಗುತ್ತದೆ. ನಂತರ ಅವರ ಚರ್ಮದ ಮೇಲೆ ಸಣ್ಣ ಸುಟ್ಟಗಾಯಗಳು ಸೃಷ್ಟಿಯಾಗುತ್ತವೆ.  ನಂತರ ಕಪ್ಪೆ ಲೋಳೆಯನ್ನು ಗಾಯಗಳ ಮೇಲೆ ಲೇಪನ ಮಾಡಲಾಗುತ್ತದೆ.
ವಿಷವನ್ನು ಒಳಗೊಂಡಿರುವ ಈ ಲೋಳೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ವಾಂತಿಯನ್ನು ಪ್ರಚೋದಿಸುತ್ತದೆ ಎಂದು ವರದಿಯಾಗಿದೆ. ಇದು ಕೆಲವು ಸಂದರ್ಭಗಳಲ್ಲಿ ಅತಿಸಾರಕ್ಕೂ ಕಾರಣವಾಗುತ್ತದೆ. ಇತರ ರೋಗಲಕ್ಷಣಗಳಲ್ಲಿ ಮೂರ್ಛೆ, ತಲೆತಿರುಗುವಿಕೆ, ಊದಿಕೊಂಡ ತುಟಿಗಳು ಮತ್ತು ಮುಖಗಳಂತಹ ಸಮಸ್ಯೆಗಳು  ಸೇರಿವೆ. ಸಾಮಾನ್ಯವಾಗಿ, ರೋಗಲಕ್ಷಣಗಳು ಸುಮಾರು ಅರ್ಧ ಘಂಟೆಯವರೆಗೆ ಇರುತ್ತವೆ. ಆದರೆ ಈ ವಿಷ ರಕ್ತಕ್ಕೆ ಸೇರಿದರೆ ಸೆಳೆತ ಮತ್ತು ಸಾವಿಗೆ ಕಾರಣವಾಗಬಹುದು ಎನ್ನಲಾಗಿದೆ.
ಮಾರ್ಸೆಲಾ ಅಲ್ಕಾಜರ್ ರೊಡ್ರಿಗಸ್‍ಗೆ ಆಗಿದ್ದೇನು?ಆಚರಣೆಯನ್ನು ಶುರು ಮಾಡಿದ ಕೂಡಲೇ, ರೊಡ್ರಿಗಸ್ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ.  ಮತ್ತು ಕೊನೆಗೆ ಅವರಿಗೆ  ತೀವ್ರವಾದ ಅತಿಸಾರದ ಸಮಸ್ಯೆ ಕಾಡಿದೆ ಎಂದು ವರದಿಯಾಗಿದೆ. ಆದರೆ ಈ ರೋಗಲಕ್ಷಣಗಳನ್ನು ಶುದ್ಧೀಕರಣ ಪ್ರಕ್ರಿಯೆಯಲ್ಲಿ ದೇಹದ ಗುಣಪಡಿಸುವ ಪ್ರತಿಕ್ರಿಯೆಗಳು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಆರಂಭದಲ್ಲಿ, ಅವರು  ಆಸ್ಪತ್ರೆಗೆ ಹೋಗಲು ನಿರಾಕರಿಸಿದ್ದಾರೆ.  ಆದರೆ ಅವರ ಸ್ನೇಹಿತ ಅವರನ್ನು ಭೇಟಿ ಮಾಡಿದಾಗ ಆಕೆ ಆಸ್ಪತ್ರೆಗೆ ಹೋಗಲು  ಒಪ್ಪಿಕೊಂಡಿದ್ದಾರೆ.
ವರದಿ  ಪ್ರಕಾರ, ಡುರಾಂಗೊದ ಮಯೋಕೊಯಾನಿಯಲ್ಲಿರುವ ರಿಟ್ರೀಟ್‍ನಲ್ಲಿ ಶಾಮನ್ ಈ ಆಚರಣೆಗಳನ್ನು ಮಾಡಿದ್ದಾನೆ.  ಆದರೆ, ನಟಿಯ ಸ್ಥಿತಿ ಹದಗೆಟ್ಟ ನಂತರ, ಆ ವ್ಯಕ್ತಿ ಪರಾರಿಯಾಗಿದ್ದಾನೆ. ವರದಿಗಳ ಪ್ರಕಾರ, ಪೊಲೀಸರು ಈಗ ಶಾಮನ್‍ಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:ಹಾಸಿಗೆಯಲ್ಲಿ ಮೂತ್ರ ಮಾಡಿದ ಮಗುವಿನ ಖಾಸಗಿ ಭಾಗಕ್ಕೆ ಥಳಿಸಿದ ಶಿಶು ಪಾಲನಾ ಕೇಂದ್ರದ ಸಿಬ್ಬಂದಿ
ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ, ಡುರಾಂಗೊ ಫಿಲ್ಮ್ ಗಿಲ್ಡ್ ನಟಿಯ ಅಕಾಲಿಕ ನಿಧನದ ನಂತರ ಗೌರವ ಸಲ್ಲಿಸಿದೆ. ಅವರು ಡುರಾಂಗೊದಲ್ಲಿ ಚಿತ್ರೀಕರಿಸಿದ ವಿವಿಧ ಕಿರುಚಿತ್ರಗಳು, ಸೀರಿಸ್  ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ ಎನ್ನಲಾಗಿದೆ.