ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sperm Race: ವಿಶ್ವದ ಮೊದಲ 'ವೀರ್ಯಾಣು ರೇಸ್'- ಅರೇ... ಇದೇನಿದು ಯಾರು ಕಂಡು ಕೇಳರಿಯದ ಸ್ಪರ್ಧೆ?

Worlds First Sperm Race: ಕಾರು, ಬೈಕ್, ಕುದುರೆ.. ರೇಸ್ ಬಗ್ಗೆ ಎಲ್ಲರೂ ಕೇಳಿದ್ದೇವೆ. ಆದರೆ ಈಗ ಜಗತ್ತು ಒಂದು ವಿಚಿತ್ರ ರೇಸ್ ಗೆ ಸಾಕ್ಷಿಯಾಗಲಿದೆ. ಅದುವೇ ವೀರ್ಯಾಣು ರೇಸ್. ಕೇಳಿದರೆ ಅಚ್ಚರಿಯಾಗುವ ಈ ಸ್ಪರ್ಧೆಯನ್ನು ಲಾಸ್ ಏಂಜಲೀಸ್ ನಲ್ಲಿ ಆಯೋಜಿಸಲಾಗಿದೆ. ವಿಶ್ವದ ಮೊದಲ ವೀರ್ಯ ರೇಸ್ ಸ್ಪರ್ಧೆಯನ್ನು 1,000 ಪ್ರೇಕ್ಷಕರು ನೇರವಾಗಿ ವೀಕ್ಷಿಸಲಿದ್ದಾರೆ. ಇದರಲ್ಲಿ ಯಾರು ಗೆಲ್ಲುವರೋ, ಸೋಲುವರೋ ಆದರೆ ಈ ಸ್ಪರ್ಧೆ ಈಗ ವಿಶ್ವದ ಗಮನವನ್ನು ಸೆಳೆದಿದೆ. ಈ ಸ್ಪರ್ಧೆಯನ್ನು ಇದೇ ತಿಂಗಳ 25 ರಂದು ಆಯೋಜಿಸಲಾಗಿದೆ.

ವಿಶ್ವದಲ್ಲೇ ಮೊದಲ ಬಾರಿಗೆ ನಡೆಯಲಿದೆ  'ವೀರ್ಯಾಣು ರೇಸ್'

ಲಾಸ್ ಏಂಜಲೀಸ್: ಕಾರು, ಬೈಕ್, ಕುದುರೆ.. ರೇಸ್ ಬಗ್ಗೆ ಎಲ್ಲರೂ ಕೇಳಿದ್ದೇವೆ. ಆದರೆ ಈಗ ಜಗತ್ತು ಒಂದು ವಿಚಿತ್ರ ರೇಸ್ ಗೆ ಸಾಕ್ಷಿಯಾಗಲಿದೆ. ಅದುವೇ ವೀರ್ಯ ರೇಸ್ (Sperm Race). ಕೇಳಿದರೆ ಅಚ್ಚರಿಯಾಗುವ ಈ ಸ್ಪರ್ಧೆಯನ್ನು ಲಾಸ್ ಏಂಜಲೀಸ್ ನಲ್ಲಿ (Los Angeles) ಆಯೋಜಿಸಲಾಗಿದೆ. ವಿಶ್ವದ ಮೊದಲ ವೀರ್ಯಾಣು ರೇಸ್ (Worlds First Sperm Race) ಸ್ಪರ್ಧೆಯನ್ನು 1,000 ಪ್ರೇಕ್ಷಕರು ನೇರವಾಗಿ ವೀಕ್ಷಿಸಲಿದ್ದಾರೆ. ಇದರಲ್ಲಿ ಯಾರು ಗೆಲ್ಲುವರೋ, ಸೋಲುವರೋ ಆದರೆ ಈ ಸ್ಪರ್ಧೆ ಈಗ ವಿಶ್ವದ ಗಮನವನ್ನು ಸೆಳೆದಿದೆ. ಈ ಸ್ಪರ್ಧೆಯನ್ನು ಇದೇ ತಿಂಗಳ 25 ರಂದು ಆಯೋಜಿಸಲಾಗಿದೆ.

ಲಾಸ್ ಏಂಜಲೀಸ್ ಈಗ ಅತ್ಯಂತ ಅಸಾಮಾನ್ಯ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಈಗಾಗಲೇ ಇದಕ್ಕೆ ಸಿದ್ಧತೆಯನ್ನೂ ಮಾಡಿಕೊಂಡಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. ಇದು ಯಾವುದೇ ಹಾಸ್ಯ ಕಾರ್ಯಕ್ರಮವಲ್ಲ ಎಂದು ಕಾರ್ಯಕ್ರಮ ಆಯೋಜಕರು ಹೇಳಿಕೊಂಡಿದ್ದಾರೆ. ಲಾಸ್ ಏಂಜಲೀಸ್‌ನ ಐಕಾನಿಕ್ ಹಾಲಿವುಡ್ ಪಲ್ಲಾಡಿಯಂ (Hollywood Palladium) ನಲ್ಲಿ ಏಪ್ರಿಲ್ 25 ರಂದು ಆಯೋಜಿಸಿರುವ 'ವೀರ್ಯ ರೇಸಿಂಗ್' ನೋಡಲು 1,000 ಕ್ಕೂ ಹೆಚ್ಚು ಪ್ರೇಕ್ಷಕರು ಹಾಜರಾಗುವ ನಿರೀಕ್ಷೆಯಿದೆ ಎಂದು ಆಯೋಜಕರು ತಿಳಿಸಿದ್ದಾರೆ.



ಬರಿಗಣ್ಣಿಗೆ ಕಾಣದೇ ಇರುವ ವೀರ್ಯದ ಓಟವನ್ನು ವೀಕ್ಷಿಸಲು ಸಾವಿರಾರು ಸೂಕ್ಷ್ಮ ದರ್ಶಕಗಳನ್ನುಆಯೋಜನೆ ಮಾಡಲಾಗಿದೆ. ಈ ಕ್ರೀಡಾ ಪ್ರದರ್ಶನದ ಅನುಭವವನ್ನು ನೀಡಲು ಆಯೋಜಕರು ಎಲ್ಲಾ ಪ್ರಯತ್ನಗಳನ್ನು ಮಾಡಿದ್ದಾರೆ. ವೀರ್ಯದ ಪ್ರತಿಯೊಂದು ಮಾದರಿಯು ಮಾನವ ಸಂತಾನೋತ್ಪತ್ತಿ ವ್ಯವಸ್ಥೆಯನ್ನು ಅನುಕರಿಸುತ್ತದೆ. ಇದಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ರ್ಯಾಕ್ ಮೂಲಕ ಚಲಿಸುತ್ತದೆ. ಇದನ್ನು ಹೈ-ಪವರ್ ಕ್ಯಾಮರಾಗಳ ಮೂಲಕ ಸೆರೆ ಹಿಡಿದು ನೇರಪ್ರಸಾರ ಮಾಡಲಾಗುತ್ತದೆ.

ವೀರ್ಯಾಣು ರೇಸ್ ಕೇವಲ ವಿಜ್ಞಾನಿಗಳ ಸಾಧನೆಗಳನ್ನು ಮಾತ್ರ ತೋರಿಸುವುದಿಲ್ಲ. ಇದರೊಂದಿಗೆ ಲೈವ್ ಕಾಮೆಂಟರಿ ಕೂಡ ಇರುತ್ತದೆ. ಬೆಟ್ಟಿಂಗ್ ಕೂಡ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತದೆ. ಪುಟ್ಟದಾದ ಆಟದ ಮೈದಾನದಲ್ಲಿ ನಡೆಯುವ ಈ ಸ್ಪರ್ಧೆಯ ಬಗ್ಗೆ ಈಗಾಗಲೇ ಪ್ರಮುಖ ಕ್ರೀಡಾ ಲೀಗ್‌ನಂತೆ ಪ್ರಚಾರ ಮಾಡಲಾಗುತ್ತಿದೆ.



ಇದನ್ನೂ ಓದಿ: Fashion News: ಜಪಾನ್‌ನ ಡಿಯೊರ್‌ ಫ್ಯಾಷನ್‌ ಶೋನಲ್ಲಿ ನಟಿ ಸೋನಂ ಕಪೂರ್

ಇದು ತಮಾಷೆಗಾಗಿ ಅಲ್ಲ

ಕೇಳಲು ತಮಾಷೆಯಾಗಿ ಕಂಡರೂ ಇದೊಂದು ಗಂಭೀರವಾದ ವಿಚಾರ. ವಿಶ್ವದಲ್ಲೇ ಗಂಡು ಮಗುವಿನ ಜನನ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಇದು ಯಾಕೆ ಎಂಬುದನ್ನು ಈ ಸ್ಪರ್ಧೆ ಯೋಚಿಸುವಂತೆ ಮಾಡುತ್ತದೆ.



ಈ ಸ್ಪರ್ಧೆಗಾಗಿ ಕ್ಯಾರಟೇಜ್ ಮತ್ತು ಫಿಗ್ಮೆಂಟ್ ಕ್ಯಾಪಿಟಲ್ ಸೇರಿದಂತೆ ಸಾಹಸೋದ್ಯಮ ಬಂಡವಾಳ ಸಂಸ್ಥೆಗಳು ಈಗಾಗಲೇ 1 ಮಿಲಿಯನ್ ಡಾಲರ್ ಹಣವನ್ನು ನೀಡಿದೆ. ಯಾಕೆಂದರೆ ಇದು ಗಂಭೀರ ಆರೋಗ್ಯ ಸಮಸ್ಯೆಯಾದ ಪುರುಷ ಫಲವತ್ತತೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ. ಕಳೆದ 50 ವರ್ಷಗಳಲ್ಲಿ ಪ್ರಪಂಚದಾದ್ಯಂತ ಪುರುಷ ವೀರ್ಯಾಣುಗಳ ಸಂಖ್ಯೆ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ. ಫಲವತ್ತತೆ ದರಗಳು ಕಡಿಮೆಯಾಗಲು ಒತ್ತಡ, ಕಳಪೆ ಆಹಾರ, ಧೂಮಪಾನ, ಮದ್ಯಪಾನ, ಜೀವನಶೈಲಿ ಕಾರಣವಾಗಿದೆ ಎನ್ನುತ್ತಾರೆ ತಜ್ಞರು. ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಓಟವನ್ನು ಆಯೋಜಿಸಲಾಗಿದೆ.

ಇದು ಪುರುಷರು ತಮ್ಮ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸುವಂತೆ ಮಾಡುತ್ತದೆ. ಈ ಸ್ಪರ್ಧೆಯು ಜನರ ಜೀವನಶೈಲಿಯಲ್ಲಿ ಗಂಭೀರ ಬದಲಾವಣೆಗೆ ಕಾರಣವಾಗಬಹುದು.