ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Narendra Modi: ಭಾರತೀಯ ಇತಿಹಾಸದ ಮೈಲುಗಲ್ಲು; ಬಾಹ್ಯಾಕಾಶದಿಂದ ಹಿಂದಿರುಗಿದ ಗಗನಯಾತ್ರಿಗಳನ್ನು ಸ್ವಾಗತಿಸಿದ ಮೋದಿ

ಆಕ್ಸಿಯಮ್ -4 ಮಿಷನ್ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಸೇರಿ ಉಳಿದ ಮೂವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಗಗನಯಾತ್ರಿಗಳು ನಿನ್ನೆ ಸಂಜೆ 4:50ರ ಸುಮಾರಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು.

ಬಾಹ್ಯಾಕಾಶದಿಂದ ಹಿಂದಿರುಗಿದ ಗಗನಯಾತ್ರಿಗಳನ್ನು ಸ್ವಾಗತಿಸಿದ ಮೋದಿ

Profile Vishakha Bhat Jul 15, 2025 4:44 PM

ನವದೆಹಲಿ: ಆಕ್ಸಿಯಮ್ -4 ಮಿಷನ್ ಭಾಗವಾಗಿ ಬಾಹ್ಯಾಕಾಶಕ್ಕೆ ಹಾರಿದ್ದ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಸೇರಿ ಉಳಿದ ಮೂವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಗಗನಯಾತ್ರಿಗಳು ನಿನ್ನೆ ಸಂಜೆ 4:50ರ ಸುಮಾರಿಗೆ ಭೂಮಿಯತ್ತ ಪ್ರಯಾಣ ಆರಂಭಿಸಿದ್ದರು. ಸುಮಾರು 22 ಗಂಟೆಗಳ ಸುದೀರ್ಘ ಪ್ರಯಾಣದ ನಂತರ ನಾಲ್ವರೂ ಗಗನಯಾತ್ರಿಗಳು ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ಲ್ಯಾಂಡ್‌ ಆಗಿದ್ದಾರೆ. ಪ್ರಧಾನಿ ಮೋದಿ ಭೂಮಿಗೆ ಮರಳಿದ ಗನನಯಾತ್ರಿಗೆ ಪ್ರಧಾನಿ ಮೋದಿ ಸ್ವಾಗತ ಕೋರಿದ್ದಾರೆ.



ಈ ಐತಿಹಾಸಿಕ ಪ್ರವಾಸವು ಭಾರತದ ಗಗನಯಾತ್ರಿ ಮಿಷನ್‌ಗೆ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಮೋದಿ ಹೇಳಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಐತಿಹಾಸಿಕ ಬಾಹ್ಯಾಕಾಶ ಕಾರ್ಯಾಚರಣೆಯಿಂದ ಭೂಮಿಗೆ ಮರಳುತ್ತಿರುವುದನ್ನು ಸ್ವಾಗತಿಸಲು ನಾನು ರಾಷ್ಟ್ರದ ಜನರೊಂದಿಗೆ ಕಾಯುತ್ತಿದ್ದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಭಾರತದ ಮೊದಲ ಗಗನಯಾತ್ರಿಯಾಗಿ, ಅವರು ತಮ್ಮ ಸಮರ್ಪಣೆ, ಧೈರ್ಯ ಮತ್ತು ಪ್ರವರ್ತಕ ಮನೋಭಾವದ ಮೂಲಕ ಶತಕೋಟಿ ಕನಸುಗಳಿಗೆ ಸ್ಫೂರ್ತಿ ನೀಡಿದ್ದಾರೆ. ಇದು ನಮ್ಮದೇ ಆದ ಮಾನವ ಬಾಹ್ಯಾಕಾಶ ಹಾರಾಟ ಮಿಷನ್ - ಗಗನಯಾನಕ್ಕೆ ಮತ್ತೊಂದು ಮೈಲಿಗಲ್ಲು" ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದಕ್ಕೂ ಮೊದಲು, ಶುಭಾಂಶು ಶುಕ್ಲಾ ಅವರು ತಮ್ಮ ಬಾಹ್ಯಾಕಾಶ ಯಾತ್ರೆಯನ್ನು ಆರಂಭಿಸಿದ ನಂತರ, ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿ, ಅವರ ಪ್ರಯಾಣವು ಹೊಸ ಮತ್ತು ಭರವಸೆಯ ಆರಂಭವನ್ನು ಗುರುತಿಸಿದೆ ಮತ್ತು ನಮ್ಮ ದೇಶದ ಯುವಕರಿಗೆ ಶುಭ ಆರಂಭವಾಗಿದೆ ಎಂದು ಹೇಳಿದ್ದರು. 140 ಕೋಟಿ ಭಾರತೀಯರ ಪ್ರೀತಿ ನಿಮ್ಮೊಂದಿಗಿದೆ. ರಾಷ್ಟ್ರಧ್ವಜವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದ ನಿಮಗೆ ಅಭಿನಂದನೆಗಳು ಎಂದು ಹೇಳಿದ್ದರು.

ಈ ಸುದ್ದಿಯನ್ನೂ ಓದಿ: Shubhanshu Shukla: ನಭದಿಂದ ಭೂಮಿಗಿಳಿದ ಶುಭಾಂಶು ಶುಕ್ಲಾ & ಟೀಮ್‌- ನಾಲ್ವರು ಗಗನಯಾತ್ರಿಗಳು ಸೇಫ್‌ ಲ್ಯಾಂಡಿಂಗ್‌

ಲಕ್ನೋ ಮೂಲದ 39 ವರ್ಷದ ಶುಕ್ಲಾ, ಕಳೆದ ಗುರುವಾರ ಐಎಸ್‌ಎಸ್‌ಗೆ ಕಾಲಿಟ್ಟ ಮೊದಲ ಭಾರತೀಯರಾಗಿ ಇತಿಹಾಸ ಸೃಷ್ಟಿಸಿದ್ದಾರೆ. 1984ರಲ್ಲಿ ರಾಕೇಶ್ ಶರ್ಮಾ ಅವರ ಬಳಿಕ ಬಾಹ್ಯಾಕಾಶಕ್ಕೆ ತೆರಳಿದ ಎರಡನೇ ಭಾರತೀಯರಾಗಿರುವ ಶುಕ್ಲಾ, ನಭಕ್ಕೆ ತೆರಳಿದ 634ನೇ ಗಗನಯಾತ್ರಿಯಾಗಿದ್ದಾರೆ.