Viral Video: ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಜನನ; ಬೆಚ್ಚಿ ಬಿದ್ದ ಗ್ರಾಮಸ್ಥರು
ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಜನಿಸಿದ ಘಟನೆ ನಡೆದಿದ್ದು, ಎಮ್ಮೆ ಮತ್ತು ಕರುವಿನ ವಿಡಿಯೊವನ್ನು ಮನೆಯವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ನೋಡಿದವರು ಆಶ್ಚರ್ಯಚಕಿತರಾಗಿದ್ದಾರೆ. ಇಡೀ ಗ್ರಾಮವೇ ತಾಯಿ ಮತ್ತು ಕರುವನ್ನು ನೋಡಲು ಜಮಾಯಿಸಿದೆ ಎನ್ನಲಾಗಿದೆ.

cow viral video

ಕೃಷಿಕರ ಮನೆಯಲ್ಲಿ ಪವಾಡವೊಂದು ನಡೆದಿದೆ. ಅದೇನೆಂದರೆ ಎಮ್ಮೆಯ ಹೊಟ್ಟೆಯಲ್ಲಿ ಹಸುವಿನ ಕರು ಜನಿಸಿದೆ. ಈ ಕುಟುಂಬವು ತಮ್ಮ ಎಮ್ಮೆ ಮತ್ತು ಕರುವಿನ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ. ಇದನ್ನು ನೋಡಿದವರು ಆಶ್ಚರ್ಯಚಕಿತರಾಗಿದ್ದಾರೆ. ಎಮ್ಮೆಯ ಮಾಲೀಕರು ಇದನ್ನು ಕಂಡು ಸಖತ್ ಶಾಕ್ ಆಗಿದ್ದಾರೆ ತಾಯಿ ಮತ್ತು ಕರುವನ್ನು ನೋಡಲು ಇವರ ಮನೆಮುಂದೆ ಜನಜಂಗುಳಿಯೇ ಸೇರಿದೆಯಂತೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಈ ಕರು ಎಮ್ಮೆ ಗುಣಲಕ್ಷಣಗಳನ್ನು ಹೊಂದಿರಬಹುದು ಎಂದು ಪಶುವೈದ್ಯರು ತಿಳಿಸಿದ್ದಾರೆ. ಇಂತಹ ಘಟನೆಗಳು ಈ ಹಿಂದೆಯೂ ನಡೆದಿವೆ ಎನ್ನಲಾಗಿದೆ. ಎಮ್ಮೆಗೆ ಎತ್ತಿನ ವೀರ್ಯವನ್ನು ನೀಡಿದ ಪರಿಣಾಮವಾಗಿ ಕರು ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಊಹಿಸಿದ್ದಾರೆ. ಆದರೆ, ಪಶುವೈದ್ಯರು ಈ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಎಮ್ಮೆಯ ದೇಹವು ಎತ್ತಿನ ವೀರ್ಯವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.
ಈ ರೀತಿ ಪ್ರಾಣಿಗಳ ಜನನ ವಿಚಾರದಲ್ಲಿ ಪವಾಡಗಳು ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ಜುಲೈನಲ್ಲಿ ಕಪ್ಪು ಎಮ್ಮೆಯೊಂದು ಬಿಳಿ ಕರುವಿಗೆ ಜನ್ಮ ನೀಡಿತ್ತು. ರಾಜಸ್ಥಾನದ ಕರೌಲಿಯಲ್ಲಿ ಎಮ್ಮೆಯೊಂದು ಹಾಲಿಗಿಂತ ಬಿಳಿಯಾಗಿ ಕಾಣುವ ವಿಶಿಷ್ಟ ಕರುವಿಗೆ ಜನ್ಮ ನೀಡಿದೆ. ಕರುವಿನ ದೇಹದ ಮೇಲೆ ಒಂದೇ ಗುರುತು ಅಥವಾ ಮಚ್ಚೆ ಕೂಡ ಇಲ್ಲವಂತೆ.
ಈ ವಿಶಿಷ್ಟ ಕರು ಜನಿಸಿದ್ದನ್ನು ಕಂಡು ಆ ಪ್ರದೇಶದ ಜನರು ಆಶ್ಚರ್ಯಚಕಿತರಾಗಿದ್ದಾರೆ. ಕರುವನ್ನು ನೋಡಲು ಕರೌಲಿಯ ಮಚಾನಿ ಗ್ರಾಮದಲ್ಲಿ ಭಾರಿ ಜನಸಮೂಹ ಜಮಾಯಿಸಿತ್ತು. ಮತ್ತು ಅದನ್ನು "ಎಂಟನೇ ಅದ್ಭುತ" ಎಂದು ಕರೆದಿದ್ದಾರೆ. ಜನನದ ಸಮಯದಲ್ಲಿ ತಾಯಿಯ ಗರ್ಭದಿಂದ ಹೊರಬರುತ್ತಿರುವ ಈ ವಿಶಿಷ್ಟ ಕರುವನ್ನು ನೋಡಿದ ಮಾಲೀಕರು ಕೂಡ ಶಾಕ್ ಆಗಿದ್ದರಂತೆ.
ಈ ಸುದ್ದಿಯನ್ನೂ ಓದಿ:Viral Video: ಏಕಾಏಕಿ ಕಾರಿನಡಿಗೆ ಬಿದ್ದ ಕರು... ಜತೆಗಿದ್ದ ದನಗಳು ಮಾಡಿದ್ದೇನು ಗೊತ್ತಾ? ಈ ಹೃದಯಸ್ಪರ್ಶಿ ವಿಡಿಯೊ ಫುಲ್ ವೈರಲ್
ಛತ್ತೀಸ್‌ಗಢದ ರಾಯ್‌ಗಢ ಎಂಬಲ್ಲಿ ಸಂಚಾರ ನಿಬಿಡ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿನ ಅಡಿಗೆ ಬಿದ್ದ ಕರುವನ್ನು ದನಗಳ ಹಿಂಡು ಕಾರನ್ನು ಬೆನ್ನಟ್ಟಿ ನಿಲ್ಲಿಸುವ ಮೂಲಕ ರಕ್ಷಿಸಿವೆ. ಕರುವೊಂದು ಆಕಸ್ಮಿಕವಾಗಿ ಕಾರಿನಡಿಗೆ ಸಿಲುಕಿದೆ. ಆದರೆ, ಆ ಕಾರು ಚಾಲಕ ತನ್ನ ಕಾರನ್ನು ನಿಲ್ಲಿಸದೆ, ಅಡಿಗೆ ಸಿಲುಕಿದ್ದ ಕರುವಿನ ಸಮೇತ ತನ್ನ ಕಾರನ್ನು ಸುಮಾರು 200 ಮೀಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆಗೆ ಆ ಕಾರನ್ನೇ ಹಿಂಬಾಲಿಸುತ್ತಾ ಬಂದ ದನಗಳ ಹಿಂಡು ಕಾರನ್ನು ಸಿನಿಮಿಯ ರೀತಿಯಲ್ಲಿ ಅಡ್ಡಗಟ್ಟಿ ನಿಲ್ಲಿಸಿವೆ.
ಅಲ್ಲಿದ್ದವರೆಲ್ಲಾ ಈ ಘಟನೆಯನ್ನು ಅಚ್ಚರಿಯಿಂದ ಕಂಡು ಬಳಿಕ ಕಾರಿನ ಬಳಿ ಬಂದು ನೋಡಿದಾಗ, ಆ ಕಾರಿನ ಅಡಿಯಲ್ಲಿ ಕರುವೊಂದು ಸಿಲುಕಿಕೊಂಡಿದೆಯಂತೆ. ತಕ್ಷಣವೇ ಸ್ಥಳೀಯರೆಲ್ಲಾ ಸೇರಿ ಕಾರಿನ ಒಂದು ಭಾಗವನ್ನು ಎತ್ತಿದಾಗ, ಕಾರಿನಡಿಯಲ್ಲಿ ಸಿಲುಕಿಕೊಂಡಿದ್ದ ಕರು ಸೇಫಾಗಿ ಹೊರಬಂದಿದೆ. ಕಾರಿನ ಚಾಲಕ ಸುಮಾರು 200 ಮೀಟರ್ ದೂರ ಕರುವನ್ನು ಎಳೆದುಕೊಂಡು ಬಂದಿದ್ದ ಕಾರಣ ಕರು ಸಣ್ಣಪುಟ್ಟ ಗಾಯಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿತ್ತು.