Viral Video: ಹೈವೇಯಲ್ಲಿ ಡ್ರಿಂಕ್ಸ್ ಬಾಟಲಿ ಹಿಡಿದು ಚಿಯರ್ಸ್ ಎಂದ ಕಿಡಿಗೇಡಿಗಳು; ಕುಡಿದ ಮತ್ತಿನಲ್ಲಿ ಮಾಡಿದ ಅವಾಂತರಗಳು ಒಂದೆರಡಲ್ಲ! ವಿಡಿಯೊ ಇದೆ
ಉತ್ತರ ಪ್ರದೇಶದ ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿ 9 ರ ದಿದೌಲಿ ಕೊಟ್ವಾಲಿ ಪ್ರದೇಶದಲ್ಲಿ ಯುವಕರು ಹೆದ್ದಾರಿಯಲ್ಲಿ ಮದ್ಯ ಸೇವಿಸುತ್ತಾ ಗಲಾಟೆ ಮಾಡಿದ್ದಾರೆ. ಈ ಘಟನೆಯನ್ನು ಅದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ರೆಕಾರ್ಡ್ ಮಾಡಿದ್ದು, ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.


ಲಖನೌ: ಮದ್ಯ ಸೇವಿಸಿ ಕಾರು ಚಲಾಯಿಸಿ ನಿಂತಿದ್ದ ಬೈಕುಗಳಿಗೆ ಡಿಕ್ಕಿ ಹೊಡೆದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು. ಈಗ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕಾರು- ಬೈಕ್ ಚಲಾಯಿಸಿಕೊಂಡು ಬಂದ ಯುವಕರು ಹೆದ್ದಾರಿಯಲ್ಲಿ ಫುಲ್ ಟೈಟ್ ಆಗಿ ಗಲಾಟೆ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಘಟನೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ವಿಡಿಯೊದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದ ಯುವಕರು ಡ್ರಿಂಕ್ಸ್ ಬಾಟಲಿಯನ್ನು ಕೈಯಲ್ಲಿ ಹಿಡಿದುಕೊಂಡು ಕಾರಿನ ವಿಂಡೋದ ಹೊರಗೆ ತಲೆ ಹಾಕಿ ನಿಂತಿದ್ದಾರೆ. ಹಾಗೇ ಬೈಕ್‌ನಲ್ಲಿದ್ದ ಯುವಕರು ಕೈಯಲ್ಲಿ ಡ್ರಿಂಕ್ಸ್ ಬಾಟಲಿ ಹಿಡಿದುಕೊಂಡು ಅವರನ್ನು ಫಾಲೋ ಮಾಡಿರುವುದು ಸೆರೆಯಾಗಿದೆ.
ಅಮ್ರೋಹಾದ ರಾಷ್ಟ್ರೀಯ ಹೆದ್ದಾರಿಯ ದಿದೌಲಿ ಕೊಟ್ವಾಲಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಅದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇನ್ನೊಬ್ಬ ವ್ಯಕ್ತಿ ಈ ಘಟನೆಯನ್ನು ರೆಕಾರ್ಡ್ ಮಾಡಿದ್ದಾನೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ
अमरोहा : कार सवार युवकों ने जमकर मचाया हुड़दंग
— News1India (@News1IndiaTweet) February 18, 2025
कार की दोनों खिड़कियों में लटक कर पी शराब
चलती कार में शराब पीते वीडियो हुआ वायरल
फेमस होने के लिए जान को जोखिम डाल रहे युवा
युवाओं ने यातायात के नियमों की भी उड़ाई जमकर धज्जियां
कार बार युवक अपने दूसरों की जान को डाल रहे खतरे… pic.twitter.com/Mxh18gYOJw
ಈ ವಿಡಿಯೊ ವೈರಲ್ ಆದ ಕೂಡಲೇ, ದಿದೌಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಸ್ಟಂಟ್ ಮಾಡಿದ ಯುವಕರನ್ನು ಪತ್ತೆಹಚ್ಚಲು ತನಿಖೆಯನ್ನು ಶುರುಮಾಡಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಮತ್ತು ತಮ್ಮ ಜೀವವನ್ನು ಪಣಕ್ಕಿಟ್ಟು ಹೆದ್ದಾರಿಯಲ್ಲಿ ಅಜಾಗರೂಕ ಸ್ಟಂಟ್‍ನಲ್ಲಿ ತೊಡಗಿರುವ ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಿದೌಲಿ ಕೊಟ್ವಾಲಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ನಡು ರಸ್ತೆಯಲ್ಲಿ ಸ್ಕೂಟರ್‌ನಲ್ಲಿ ಸ್ಟಂಟ್ ಮಾಡಿದ ಯುವಕರು ಅರೆಸ್ಟ್
ಬೆಂಗಳೂರಿನ ಇಬ್ಬರು ಯುವಕರು ಜನನಿಬಿಡ ರಸ್ತೆಯಲ್ಲಿ ವ್ಹೀಲಿಂಗ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿ ಮಡಿವಾಳ ಸಂಚಾರ ಪೊಲೀಸರು ಅವರ ವಿರುದ್ಧ ಕ್ರಮ ತೆಗೆದುಕೊಂಡಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರ ಅಧಿಕೃತ ಹ್ಯಾಂಡಲ್ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊದಲ್ಲಿ, ಇಬ್ಬರು ಯುವಕರು ಸ್ಕೂಟರ್‌ನಲ್ಲಿ ಅಪಾಯಕಾರಿ ಸ್ಟಂಟ್ ಮಾಡುವುದನ್ನು ಸೆರೆ ಹಿಡಿಯಲಾಗಿದೆ. ಇದನ್ನು ನೋಡಿದ ಅಧಿಕಾರಿಗಳು ಅಪರಾಧಿಗಳನ್ನು ಗುರುತಿಸಿ ಬಂಧಿಸಿದ್ದಾರೆ. "ಬೆಂಗಳೂರು ರಸ್ತೆಗಳು ಸುರಕ್ಷಿತ ಸವಾರಿಗಾಗಿಯೇ ಹೊರತು ಸ್ಟಂಟ್ ಶೋಗಳಿಗಾಗಿ ಅಲ್ಲ!ʼʼ ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ವಿಡಿಯೊದಲ್ಲಿ ಸ್ಕೂಟರ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರಲ್ಲಿ ಒಬ್ಬ ಮುಂಭಾಗದ ಚಕ್ರ ಎತ್ತಿ ವ್ಹೀಲಿಂಗ್ ಮಾಡಿದರೆ, ಹಿಂದೆ ಕುಳಿತವನು ಖುಷಿಯಿಂದ ಕುಣಿದಾಡಿದ್ದಾನೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸ್ಟಂಟ್‍ಗಳನ್ನು ಮಾಡುವುದು ಅಪಾಯಕಾರಿ ಮಾತ್ರವಲ್ಲ - ಅದು ಕಾನೂನುಬಾಹಿರವೂ ಹೌದು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 279ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ರಾಶ್ ಡ್ರೈವಿಂಗ್‌ಗೆ ಸಂಬಂಧಿಸಿದ್ದಾಗಿದೆ. ಈ ರೀತಿಯ ಕೃತ್ಯಗಳು ಶಿಕ್ಷಾರ್ಹ ಅಪರಾಧಗಳಾಗಿವೆ. ಮೂಲಭೂತವಾಗಿ, ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಅಜಾಗರೂಕ ಸ್ಟಂಟ್ ಈ ವರ್ಗಕ್ಕೆ ಸೇರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.