ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ರೈಲು ಬೋಗಿಯೊಳಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ; ಸುದ್ದಿ ವೈರಲ್!

ದೆಹಲಿಯ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಗುರುವಾರ(ಫೆ.6) ರೈಲು ಬೋಗಿಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಿಹಾರ್‌ನ ಸಮಷ್ಟಿಪುರ ಮೂಲದ ಮಹಿಳೆಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಹಾಯ ಮಾಡಿದ್ದು,ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ. ಇದೀಗ ಆ ಕುರಿತ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ.

ರೈಲು ಬೋಗಿಯೊಳಗೆಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ!

Viral News

Profile Deekshith Nair Feb 7, 2025 7:29 PM

ನವದೆಹಲಿ: ದೆಹಲಿಯ(Delhi) ಆನಂದ್ ವಿಹಾರ್(Anand Vihar) ರೈಲ್ವೆ ನಿಲ್ದಾಣದಲ್ಲಿ ಗುರುವಾರ(ಫೆ.6) ರೈಲು ಬೋಗಿಯಲ್ಲಿ(Railway Coach) ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಿಹಾರ್‌ನ ಸಮಷ್ಟಿಪುರ ಮೂಲದ ಮಹಿಳೆಗೆ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಹಾಯ ಮಾಡಿದ್ದು,ತಾಯಿ ಮತ್ತು ಮಗುವಿನ ಜೀವ ಉಳಿಸಿದ್ದಾರೆ. ಇದೀಗ ಆ ಕುರಿತ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌(Viral News) ಆಗುತ್ತಿದೆ. ಆರ್‌ಪಿಎಫ್ ಸಬ್-ಇನ್‌ಸ್ಪೆಕ್ಟರ್ ನವೀನ್ ಕುಮಾರಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಇತರ ಪ್ರಯಾಣಿಕರ ಸಹಾಯದಿಂದ ಅಧಿಕಾರಿ ಹೆರಿಗೆಗೆ ಸಹಾಯ ಮಾಡಿದ್ದಾರೆ. ನಂತರ ಬಾಣಂತಿ ತಾಯಿ ಮತ್ತು ನವಜಾತ ಶಿಶುವನ್ನು ಹೆಚ್ಚಿನ ಆರೈಕೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ನವೀನ್‌ ಕುಮಾರಿ "ಬಿಹಾರದ ಸಮಷ್ಟಿಪುರದ ಮಹಿಳೆಯೊಬ್ಬರು ಹೆರಿಗೆ ನೋವು ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಾಗ ನಾನು ಕರ್ತವ್ಯದಲ್ಲಿದ್ದೆ. ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಿದೆ. . ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಕೋಚ್‌ನಲ್ಲಿದ್ದ ಇತರ ಮಹಿಳೆಯರ ಸಹಾಯದಿಂದ ನಾವು ಹೆರಿಗೆಗೆ ಸಹಾಯ ಮಾಡಿದೆವು. ನಂತರ ತಾಯಿ ಮಗು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದೆವು" ಎಂದು ಹೇಳಿದ್ದಾರೆ.



ಇನ್ನು ಘಟನೆ ಕುರಿತು ಮಾತನಾಡಿರುವ ಆರ್‌ಪಿಎಫ್ ಇನ್ಸ್‌ಪೆಕ್ಟರ್ ಶೈಲೇಂದ್ರ ಕುಮಾರ್ "ತಾಯಿ ಮತ್ತು ಮಗು ಇಬ್ಬರೂ ಈಗ ಚೆನ್ನಾಗಿದ್ದಾರೆ. ಆನಂದ್ ವಿಹಾರ್‌ನಿಂದ ಸಹರ್ಸಾಗೆ ಹೋಗುವ ರೈಲಿನಿಂದ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಶುರುವಾಗಿದೆ ಎಂಬ ಮಾಹಿತಿ ಸಿಕ್ಕಿತು. ನಮ್ಮ ಮಹಿಳಾ ಸಬ್-ಇನ್ಸ್‌ಪೆಕ್ಟರ್ ಮತ್ತು ಇತರ ಸಿಬ್ಬಂದಿ ಅಲ್ಲಿಗೆ ಕೂಡಲೇ ಹೋದರು. ಬೋಗಿಯಲ್ಲಿದ್ದ ಇತರ ಮಹಿಳೆಯರ ಸಹಾಯದಿಂದ ಹೆರಿಗೆ ಮಾಡಲಾಯಿತು. ಆಂಬುಲೆನ್ಸ್‌ ಸಹಾಯದಿಂದ ತಾಯಿ ಮಗುವನ್ನು ಆಸ್ಪತ್ರೆಗೆ ವರ್ಗಾಯಿಸಿದೆವು. ಈಗ ಅವರು ಆರೋಗ್ಯವಾಗಿದ್ದಾರೆ" ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ:Viral News: ಸಸ್ಯಾಹಾರಿಗಳಿಗೆ ಬಿಗ್‌ ಶಾಕ್: ಪನೀರ್ ಮತ್ತು ಹಾಲು ಕೂಡ ಮಾಂಸಾಹಾರವಂತೆ-ವೈದ್ಯರು ಹೇಳೊದೇನು?

2024 ರಲ್ಲಿ ಇದೇ ರೀತಿಯ ಘಟನೆಯೊಂದು ನಡೆದಿತ್ತು. ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ನಲ್ಲಿ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಬಸ್ ಕಂಡಕ್ಟರ್ ಮತ್ತು ಸಹ ಮಹಿಳಾ ಪ್ರಯಾಣಿಕರು ಸಹಾಯ ಮಾಡಿದ್ದರು. ಮುಶೀರಾಬಾದ್ ಡಿಪೋದಿಂದ 1Z RTC ಬಸ್‌ನಲ್ಲಿ ಪ್ರಯಾಣಿಸುವಾಗ ಮಹಿಳೆಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು ಎಂದು ವರದಿಯಾಗಿತ್ತು.