ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಸಸ್ಯಾಹಾರಿಗಳಿಗೆ ಬಿಗ್‌ ಶಾಕ್: ಪನೀರ್ ಮತ್ತು ಹಾಲು ಕೂಡ ಮಾಂಸಾಹಾರವಂತೆ-ವೈದ್ಯರು ಹೇಳೊದೇನು?

ಸಸ್ಯಾಹಾರಿಗಳಿಗೆ ವೈದ್ಯರು ಆಗಿಂದಾಗ್ಗೆ ಶಾಕ್ ನೀಡುತ್ತಿರುತ್ತಾರೆ. ಮೊಟ್ಟೆ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬ ಪ್ರಶ್ನೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಕೆಲವು ದಿನಗಳ ಹಿಂದೆಯಷ್ಟೇ ವೈದ್ಯರೊಬ್ಬರು ಹಾಲು ಕೂಡ ಮಾಂಸಾಹಾರ ಎಂದು ಹೇಳುವ ಮೂಲಕ ಶುದ್ಧ ಸಸ್ಯಾಹಾರಿಗಳನ್ನು ಬೆಚ್ಚಿ ಬೀಳಿಸಿದ್ದರು. ಇದೀಗ ಕೆಲವು ವೈದ್ಯರು ಸಸ್ಯಾಹಾರಿಗಳು ಅತೀ ಹೆಚ್ಚು ಇಷ್ಟಪಡುವ ಮತ್ತು ಚಪ್ಪರಿಸಿಕೊಂಡು ತಿನ್ನುವ ಪನೀರ್‌ ಕೂಡ ಮಾಂಸಾಹಾರ ಎಂಬ ಹೇಳಿಕೆ ನೀಡುವ ಮೂಲಕ ಪನೀರ್‌ ಪ್ರಿಯರಿಗೆ ಅದರಲ್ಲೂ ಸಸ್ಯಾಹಾರಿಗಳಿಗೆ ಬಿಗ್‌ ಶಾಕ್‌ ನೀಡಿದ್ದಾರೆ.

ಪನೀರ್ ಮತ್ತು ಹಾಲು ವೆಜ್‌ ಅಲ್ವಂತೆ- ಸಸ್ಯಾಹಾರಿಗಳಿಗೆ ಬಿಗ್‌ ಶಾಕ್‌!

Viral News

Profile Deekshith Nair Feb 7, 2025 3:16 PM

ನವದೆಹಲಿ: ಸಸ್ಯಾಹಾರಿಗಳಿಗೆ(Vegetarian) ವೈದ್ಯರು ಆಗಿಂದಾಗ್ಗೆ ಶಾಕ್ ನೀಡುತ್ತಿರುತ್ತಾರೆ. ಮೊಟ್ಟೆ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಎಂಬ ಪ್ರಶ್ನೆ ಈಗಲೂ ಪ್ರಶ್ನೆಯಾಗಿಯೇ ಉಳಿದಿದೆ. ಕೆಲವು ದಿನಗಳ ಹಿಂದೆಯಷ್ಟೇ ವೈದ್ಯರೊಬ್ಬರು ಹಾಲು ಕೂಡ ಮಾಂಸಾಹಾರ ಎಂದು ಹೇಳುವ ಮೂಲಕ ಶುದ್ಧ ಸಸ್ಯಾಹಾರಿಗಳನ್ನು ಬೆಚ್ಚಿ ಬೀಳಿಸಿದ್ದರು. ಇದೀಗ ಭಾರತದ ವೈದ್ಯರೊಬ್ಬರು ಸಸ್ಯಾಹಾರಿಗಳು ಅತೀ ಹೆಚ್ಚು ಇಷ್ಟಪಡುವ ಮತ್ತು ಚಪ್ಪರಿಸಿಕೊಂಡು ತಿನ್ನುವ ಪನೀರ್‌ ಕೂಡ ಮಾಂಸಾಹಾರ ಎಂಬ ಹೇಳಿಕೆ ನೀಡುವ ಮೂಲಕ ಪನೀರ್‌(Paneer) ಪ್ರಿಯರಿಗೆ ಅದರಲ್ಲೂ ಸಸ್ಯಾಹಾರಿಗಳಿಗೆ ಬಿಗ್‌ ಶಾಕ್‌ ನೀಡಿದ್ದಾರೆ. ಈ ಸುದ್ದಿ(Viral News) ಸಾಕಷ್ಟು ವೈರಲ್‌ ಆಗುವುದರೊಂದಿಗೆ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ.

ಭಾರತೀಯ ವೈದ್ಯರೊಬ್ಬರು ಹಾಲು ಮತ್ತು ಪನೀರ್ ಅನ್ನು ಮಾಂಸಾಹಾರಿ ಆಹಾರವೆಂದು ಹೇಳುವ ಮೂಲಕ ಭಾರೀ ವಿವಾದವನ್ನು ಹುಟ್ಟುಹಾಕಿದ್ದಾರೆ. ಡಾ. ಸಿಲ್ವಿಯಾ ಕಾರ್ಪಗಮ್ ಹಾಲು ಮತ್ತು ಪನೀರ್ ಅನ್ನು ಪ್ರಾಣಿಯಿಂದ ಪಡೆಯಲಾಗುತ್ತದೆ. ಆದ್ದರಿಂದ ಅವುಗಳನ್ನು ಸಸ್ಯಾಹಾರಿ ಆಹಾರಗಳೆಂದು ವರ್ಗೀಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅವರ ಹೇಳಿಕೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ನೂರಾರು ಸಸ್ಯಾಹಾರಿಗಳನ್ನು ಕೆರಳಿಸಿದೆ.



ಸಾಮಾಜಿಕ ಜಾಲತಾಣದ ಬಳಕೆದಾರರೊಬ್ಬರು ಪ್ರೋಟಿನ್‌ ಮತ್ತು ಫೈಬರ್‌ ಇದೆ ಎಂಬ ಕ್ಯಪ್ಶನ್‌ ಬರೆದು ವೆಜ್ ಥಾಲಿ, ಪನೀರ್, ಹೆಸರು ಬೇಳೆ, ಕ್ಯಾರೆಟ್, ಸೌತೆಕಾಯಿ ಮತ್ತು ಈರುಳ್ಳಿಯಿಂದ ಮಾಡಿದ ಸಲಾಡ್, ಹಸಿ ತೆಂಗಿನಕಾಯಿ, ವಾಲ್ನಟ್ಸ್ ಮತ್ತು ಸಿಹಿಕಾರಕಗಳಿಲ್ಲದ ಖೀರ್ ಅನ್ನು ಒಳಗೊಂಡ ಫೋಟೊವನ್ನು ಶೇರ್‌ ಮಾಡಿದ್ದರು. ಸುನೀತಾ ಸಾಯಮ್ಮಗ ಎಂಬ ಮತ್ತೋರ್ವ ಬಳಕೆದಾರರು ಕೂಡ ಇದೇ ರೀತಿಯ ಫೋಟೊವನ್ನು ಹಂಚಿಕೊಂಡು ನಮ್ಮ ಪತಿಯ ಸಸ್ಯಾಹಾರದ ಊಟ ಎಂದು ಬರೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ:Delhi Election 2025: ದೆಹಲಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ? ಮತ್ತೆರಡು ಸಮೀಕ್ಷೆಗಳು ಪ್ರಕಟ

ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿರುವ ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಎಥಿಕ್ಸ್‌ನ ಸಂಪಾದಕಿ ಡಾ. ಸಿಲ್ವಿಯಾ ಕಾರ್ಪಗಮ್, ಹಾಲು ಮತ್ತು ಪನೀರ್ ಸಸ್ಯಾಹಾರಿ ಆಹಾರವಲ್ಲ ಎಂದಿದ್ಧಾರೆ. ಅವು ಪ್ರಾಣಿ ಮೂಲದ ಆಹಾರಗಳು. ಕೋಳಿ, ಮೀನು, ಗೋಮಾಂಸ ಮತ್ತು ಎಲ್ಲದರಂತೆಯೇ ಪನೀರ್‌ ಕೂಡ. ಅದು ಸಸ್ಯಾಹಾರ ಎಂಬ ಭ್ರಮೆಯಿಂದ ಹೊರಬನ್ನಿ ಎಂದು ಕಾಮೆಂಟ್‌ ಹಾಕಿದ್ದಾರೆ. ವೈದ್ಯರ ಹೇಳಿಕೆಯಿಂದ ಸಸ್ಯಾಹಾರಿಗಳು ಆಕ್ರೋಶಗೊಂಡಿದ್ದಾರೆ. ವಾದ ಪ್ರತಿವಾದಗಳು ನಡೆದಿವೆ. ಹಾಲು ಮತ್ತು ಪನೀರ್‌ಗಾಗಿ ಪ್ರಾಣಿಗಳನ್ನು ಕೊಲ್ಲುವುದಿಲ್ಲ. ಅದು ಶುದ್ಧ ಸಸ್ಯಾಹಾರ ಎಂದು ಸಮರ್ಥಿಸಿಕೊಂಡಿದ್ದಾರೆ. ವೈದ್ಯರ ಹೇಳಿಕೆಯಿಂದಾಗಿ ವಿವಾದ ಭುಗಿಲೆದ್ದಿದೆ.