#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video ಕುಂಭಮೇಳದಲ್ಲಿ ಚಹಾ ಮಾರಿದಾತ ಗಳಿಸಿದ ಲಾಭ ಕೇಳಿದ್ರೆ ಶಾಕ್‌ ಆಗ್ತೀರಿ! ವಿಡಿಯೊ ನೋಡಿ

ಕಂಟೆಂಟ್ ಕ್ರಿಯೇಟರ್ ಶುಭಂ ಪ್ರಜಾಪತ್ ಮಹಾಕುಂಭಮೇಳದಲ್ಲಿ ಚಹಾ ಮಾರಾಟ ಮಾಡುವ ಮೂಲಕ ಒಂದು ದಿನದಲ್ಲಿ ಎಷ್ಟು ಹಣವನ್ನು ಗಳಿಸಬಹುದು ಎಂಬುದನ್ನು ಕಂಡುಹಿಡಿಯಲು ಹೋಗಿ ದಿನಕ್ಕೆ 5,000 ರೂಪಾಯಿ ಲಾಭ ಗಳಿಸಿದ್ದಾನಂತೆ. ಇದನ್ನು ಆತ ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದು ಈಗ ವೈರಲ್ (Viral Video) ಆಗಿದೆ.

ಚಹಾ ಮಾರಾಟ ಮಾಡಿದ ಕಟೆಂಟ್‌ ಕ್ರಿಯೇಟರ್‌ ಗಳಿಸಿದ್ದೆಷ್ಟು?

ಕುಂಭಮೇಳದ ಚಾಯ್‌ವಾಲಾ

Profile pavithra Feb 13, 2025 4:05 PM

ಲಖನೌ: ಕುಂಭಮೇಳ ಸಾಕಷ್ಟು ವಿಶೇಷತೆಗಳಿಂದಲೇ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಕುಂಭಮೇಳದಲ್ಲಿ ಚಹಾ ಮಾರಾಟ ಮಾಡಿ ಕಟೆಂಟ್‌ ಕ್ರಿಯೇಟರೊಬ್ಬ ದಿನವೊಂದಕ್ಕೆ 5,000 ರೂಪಾಯಿ ಗಳಿಸಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಚಹಾ ಮಾರಾಟ ಮಾಡಿ ದಿನಕ್ಕೆ ಎಷ್ಟು ದುಡಿಯಬಹುದು ಎಂದು ತಿಳಿದುಕೊಳ್ಳುವುದಕ್ಕಾಗಿ ಆತ ಈ ಕೆಲಸ ಮಾಡಿದ್ದಾನಂತೆ. ಇವನ ಒಂದು ದಿನದ ದುಡಿಮೆ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಕಂಟೆಂಟ್ ಕ್ರಿಯೇಟರ್ ಶುಭಂ ಪ್ರಜಾಪತ್ ಸಣ್ಣ ಗಾಡಿಯಲ್ಲಿ ಚಹಾ ಮತ್ತು ನೀರಿನ ಬಾಟಲಿಗಳನ್ನು ಮಾರಾಟ ಮಾಡುವ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.

ಪ್ರಜಾಪತ್ ಒಂದು ದಿನದಲ್ಲಿ ಚಹಾ ಮಾರಾಟದಿಂದ 5,000 ರೂಪಾಯಿ ಲಾಭ ಗಳಿಸಿದ್ದಾನಂತೆ. ವಿಡಿಯೊ ನೋಡಿ ಕೆಲವರು ಇವನ ಕೆಲಸವನ್ನು ಹೊಗಳಿದರೆ, ಇತರರು ಒಂದು ಹೆಜ್ಜೆ ಮುಂದೇ ಹೋಗಿ ಒಂದು ತಿಂಗಳಲ್ಲಿ ಎಷ್ಟು ಸಂಪಾದಿಸಬಹುದು ಎಂದು ಲೆಕ್ಕ ಕೂಡ ಹಾಕಿದ್ದಾರೆ.

ಒಬ್ಬ ವ್ಯಕ್ತಿಯು ಪೋಸ್ಟ್ ಮಾಡಿ, "1 ದಿನ = 5000, ಆದ್ದರಿಂದ 30 ದಿನಗಳು = 150,000." ಎಂದು ಲೆಕ್ಕಾಚಾರ ಹಾಕಿದರೆ ಇದಕ್ಕೆ ಪ್ರತಿಕ್ರಿಯಿಸಿದ ಇನ್ನೊಬ್ಬ, "ತಿಂಗಳಿಗೆ ರೂ 1,50,000 ?" ಎಂದು ಆಶ್ಚರ್ಯಗೊಂಡಿದ್ದಾನೆ. ಮೂರನೆಯವನು, "ಕುಂಭ್ ಚಾಯ್ ವಾಲಾ" ಎಂದು ಕರೆದಿದ್ದಾನೆ. ಇನ್ನೊಬ್ಬರು ಕಾಮೆಂಟ್‌ ಮಾಡಿ "ಇದು ನನಗೂ ವರ್ಕೌಟ್ ಆಗುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral Video: ಹಣ ನೀಡಿದರೂ ಫುಡ್‍ ವ್ಲಾಗರ್‌ಗೆ ಚಹಾ ನೀಡಲು ನಿರಾಕರಿಸಿದ ಮಹಿಳೆ; ಕಾರಣ ಏನ್‌ ಗೊತ್ತಾ?

ಕೆಲವು ದಿನಗಳ ಹಿಂದೆ ವಾರಣಾಸಿಯಲ್ಲಿ ಚಹಾ ಮಾರಾಟ ಮಾಡುತ್ತಿದ್ದ ವಿದೇಶಿ ಮಹಿಳೆಯೊಬ್ಬಳು ಫುಡ್‌ ವ್ಲಾಗರ್‌ ಒಬ್ಬನಿಗೆ ಚಹಾ ನೀಡಲು ನಿರಾಕರಿಸಿರುವಂತಹ ಘಟನೆ ವರದಿಯಾಗಿದೆ. ವಾರಣಾಸಿಯ ಘಾಟ್‍ನಲ್ಲಿ ಫುಡ್‌ವ್ಲಾಗರ್‌ ಒಬ್ಬರು ಚಹಾ ಮಾರಾಟ ಮಾಡುತ್ತಿರುವ ವಿದೇಶಿ ಮಹಿಳೆಯ ಬಳಿ ಹೋಗಿ ಒಂದು ಕಪ್ ಚಹಾ ಕೊಡಲು ಹೇಳಿ ಹಣ ನೀಡಿದರೆ ಆಕೆ ಅವರಿಗೆ ಚಹಾ ನೀಡಲು ನಿರಾಕರಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ರೆಕಾರ್ಡ್ ಮಾಡಿದ ವ್ಲಾಗರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸೋಶಿಯಲ್ ಮೀಡಿಯಾದಲ್ಲಿ  ಅಪ್ಲೋಡ್ ಮಾಡಿದ ವಿಡಿಯೊದಲ್ಲಿ, ಅಂಕಿತ್ ಕುಮಾರ್ ಅವರು 'ಚಾಯ್ ವಾಲಿ' ಕೈಸಾಗೆ ಹಣ ನೀಡಿ ಚಹಾ ನೀಡುವಂತೆ ಕೇಳಿದ್ದಾರೆ. ಆ ವ್ಯಕ್ತಿಯಿಂದ ಹಣವನ್ನು ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ, ಚಹಾ ಮಾರಾಟ ಮಾಡುತ್ತಿದ್ದ ಮಹಿಳೆ ಅಂಕಿತ್ ನಿರಂತರವಾಗಿ ವಿಡಿಯೊವನ್ನು ಮಾಡುತ್ತಿರುವುದನ್ನು ಗಮನಿಸಿ ʼನೀವು ಫುಡ್‌ವ್ಲಾಗರ್...ʼ ಎಂದು ಕೇಳಿದ್ದಾಳೆ. ಆಗ ಅಂಕಿತ್‌ ಹೌದು ಎಂದಾಗ ಮಹಿಳೆ ಅವರಿಗೆ ಚಹಾ ತಯಾರಿಸಲು ನಿರಾಕರಿಸಿ ಅಂಕಿತ್‌ ನೀಡಿದ ಹಣವನ್ನು  ಹಿಂದಿರುಗಿಸಿದ್ದಾಳೆ. "ತುಮ್ಕೊ ನಹೀ ಮಿಲೇಗಾ (ನಿಮಗೆ ಸಿಗುವುದಿಲ್ಲ)" ಎಂದು ಆಕೆ ಹೇಳಿದ್ದಾಳೆ."ನೀವು ವಿಡಿಯೊ ಮಾಡಿ ದುಡ್ಡು ಮಾಡ್ತಿರಿ ನಂತರ ಇದರ ಬಗ್ಗೆ ಕೆಟ್ಟದ್ದಾಗಿ ಹೇಳ್ತಿರಿ" ಎಂದು ಆಕೆ ಹೇಳಿದ್ದಾಳೆ.