Friday, 26th April 2024

ಹೆದರೋದು ಯಾಕೆ ? ನಡೀರಿ ನಿಮ್ಮ ದಾರಿಯಲ್ಲಿ ನೀವೇ

ಪರಿಶ್ರಮ 

ಪ್ರದೀಪ್‌ ಈಶ್ವರ್‌

parishramamd@gmail.com

ಕಷ್ಟ ಎಲ್ಲರಿಗೂ ಇರುತ್ತೆ. ಕಣ್ಣೀರು ಬರುತ್ತೆ, ದುಃಖ ಬರುತ್ತೆ, ನಡೆಯುವವನು ಎಡುವುತ್ತಾನೆ, ಓಡುವವನು ಬೀಳುತ್ತಾನೆ. ಮನೆಯಲ್ಲಿ ಕಷ್ಟ ಇದೆ ಅಂತ ಆತ್ಮಹತ್ಯೆ
ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನೋವಿದೆ ಅಂದ ತಕ್ಷಣ ಗೆಲುವನ್ನ ಮಧ್ಯದ ಬಿಡುತ್ತೀರಾ? ಕೊನೆವರೆಗೂ ನಡೆಯಬೇಕು ಕಷ್ಟನೋ, ಸುಖನೋ ನಡಿಬೇಕು. ತೋರಿಸಬೇಕು.

ಸೋಲಿನಿಂದ ಗೆಲುವಿನ ಕಡೆಗೆ, ನೋವಿನಿಂದ ಸಂಭ್ರಮದ ಕಡೆಗೆ, ದುಃಖದಿಂದ ಧೈರ್ಯದ ಕಡೆಗೆ, ಒಂಟಿತನ ದಿಂದ ಏಕಾಂತದ ಕಡೆಗೆ, ಧೃತಿಗೆಡದೆ ನಡೆಯು ವುದೇ ಜೀವನ. ಬದುಕಲ್ಲಿ ಗೆಲ್ಲಬೇಕು ಅಂತ ಕನಸು ಕಾಣು ತ್ತೀವಿ. ಆದರೆ ಹೆದರುತ್ತಿವಿ. ಚಿಕ್ಕ ಸೋಲಿಗೆ ಹತಾಶರಾಗ ಬಿಡುತ್ತೀವಿ. Frustratioನ ವಿಳಾಸದ ಥರ, ದುಃಖವನ್ನ ಬಾಳ ಸಂಗಾತಿ ಥರ ಮಾಡಿಕೊಂಡು ಬಿಡುತೀವಿ. ಜೀವನದಲ್ಲಿ ಕನಸು ಕಾಣಬೇಕು.

ಪುಕ್ಸಟ್ಟೆ ಸಿಗುವ ಕನಸನ್ನೇ ನಮ್ಮ ಕೈಯಲ್ಲಿ ನೆಟ್ಟಗೆ ಕಾಣಲಿಕ್ಕೆ ಆಗಲಿಲ್ಲ ಅಂದರೆ ಕಷ್ಟ ಪಟ್ಟು ಪಡೆಯುವಂತಹ ಗೆಲುವನ್ನು ಹೇಗೆ ಪಡೆಯಲು ಸಾಧ್ಯ. ಧೈರ್ಯ ವಾಗಿ ಕನಸನ್ನ ಕಾಣಬೇಕು. ಇಲ್ಲಿ ಪ್ರತಿಯೊಬ್ಬರು ವಿಶಿಷ್ಟ. ಒಬ್ಬರು ಮಾಡುವ ಕೆಲಸ ಇನ್ನೊಬ್ಬರು ಮಾಡುವುದಕ್ಕೆ ಆಗಲ್ಲ. ಇರುವೆ ನಮ್ಮ ಕಾಲಿಗೆ ಕಚ್ಚಿತ್ತು ಅಂತ ನಾವು ಇರುವೆ ಕಾಲಿಗೆ ಕಚ್ಚಲು ಸಾಧ್ಯನಾ? ಎಷ್ಟು ದೊಡ್ಡವರಾದರು ಕಚ್ಚೋಕೆ ಆಗುತ್ತಾ? ಆದರೆ., ಇರುವೆ ಮಾಡುವ ಕೆಲಸ ನಮ್ಮ ಕೈಯಲ್ಲಿ ಮಾಡೋಕೆ ಆಗಲ್ಲ. ನಿಮ್ಮ ಮೇಲೆ ನಂಬಿಕೆ ಇಡಿ. ದೊಡ್ಡದಾಗಿ ಕನಸು ಕಾಣುವಂತಹ ವರಿಗೆ ಬಡತನ ಶಾಪವಾಗಬಾರದು, ಒಂಟಿತನ ಶಾಪವಾಗಬಾರದು, ಡಿಪ್ರೆಷನ್‌ನಿಂದ ನಲುಗಿ ಹೋಗ ಬಾರದು. ಜೀವನದಲ್ಲಿ ನೀವು ಅಂದುಕೊಂಡಿದ್ದನ್ನು ಸಾಧಿಸಬಹುದು.

ಧೈರ್ಯ ಇರಲಿ, ಭರವಸೆ ಇರಲಿ, ಗೆದ್ದೇ ಗೆಲ್ಲುತ್ತೀನಿ ಅನ್ನೋ ಹೋಪ್ ಇರಲಿ. ಟೆರಿ ಫಾಕ್ಸ್ ಅಂತ. ಈತ ಕೆಡನಾದವನು. ಒಂದು ಬಡತನ ಕುಟುಂಬದ ಹುಡುಗ. ಅಷ್ಟೇನು ಶ್ರೀಮಂತಿಕೆ ಇರಲಿಲ್ಲ. ಆದ್ರೆ ಒಂದು ದಿನ ಅಚಾನಕ್ಕಾಗಿ ದುರಾದೃಷ್ಟ ಅವನ ಮನೆ ಬಾಗಿಲು ತಟ್ಟಿತ್ತು. ಇದ್ದಕ್ಕಿಂದಂತೆ ಅವನ ಕಾಲನ್ನ ತೆಗೆದು ಹಾಕಿ ದರು. ಕಾಲು ಕಟ್ ಆಯಿತು. ಅಂಗ ವೈಫಲ್ಯ ಅಂದರೆ ದಿವ್ಯಾಂಗ ಆಯಿತು. ಏನು ಮಾಡಬೇಕುಅಂತ ಗೊತ್ತಾಗ್ಲಿಲ್ಲ. ಟೆರಿ ಫಾಕ್ಸ್ ಣ್ಣೀರ‍್ಹಾಕಿ ಹಾಕಿ ಬೇಜಾರಾಗಿ ಲೈಫಿಗೆ ವಿದಾಯ ಹೇಳಿಬಿಡೋಣ ಎಂದು ತೀರ್ಮಾನವಾದಾಗ ಒಂದು ಸಲ ಧೈರ್ಯ ಮಾಡುತ್ತಾನೆ.

ಹೋಗಿದ್ದಾಗೋ ಹೋಗುತ್ತೀವಿ ಏನಾದರು ಸಾಧಿಸಿ ಹೋಗಿಬಿಡೋಣ ಅಂತ. ಗಟ್ಟಿ ಮನಸ್ಸಿಂದ ಆ ಹುಡುಗ ಕೆನಡಾದ ಒಂದು ತುದಿಯಲ್ಲಿ ಅಟ್ಲಾಂಟಿಕ್ ಓಷನ್ ಇದೆ. ಇನ್ನೊಂದು ತುದಿಯಲ್ಲಿ ಪೆಸಿಫಿಕ್ ಸಾಗರ ಇದೆ. ಈ ಒಂದು ಕಾಲನ್ನ ಅದ್ದಿ ಮತ್ತೆ ಆ ಕೊನೆವರೆಗೂ ಹೋಗುತ್ತೀನಿ ಅಂತ ಸುಮಾರು ಮೂರು ಸಾವಿರ ಕಿ.ಮೀ ಮ್ಯಾರಥಾನ್ ಓಡುತ್ತೀನಿ ಅಂತ ನಿರ್ಧಾರ ಮಾಡುತ್ತಾನೆ. ನೋಡಿದವರೆಲ್ಲ ನಗುತ್ತಾರೆ. ‘ಏನಪ್ಪಾ ಟೆರಿ ಫಾಕ್ಸ್ ಒಂದು ಕಾಲಿದೆ ಆರಾಮಾಗಿ ಜೀವನ ಮಾಡಿಕೊಂಡು ಇರು. ಯಾಕೆ ಹೀಗೆ ಆಡುತ್ತಿಯಾ?’ ಅಂದರೆ ಅದಕ್ಕೆ ಟೆರಿ ಫಾಕ್ಸ್ ಹೇಳುತ್ತಾನೆ.

‘ಇಲ್ಲ ನಾನು ಏನನ್ನಾದರೂ ಸಾಽಸಬೇಕು ಪ್ರಪಂಚಕ್ಕೆ ಒಂದು ಸಂದೇಶ ಕೊಡಬೇಕು’ ಅಂತ. ಈ ಕಡೆ ಇಂದ ಆಕಡೆಗೆ ಓಡಿ ವಿಶ್ವ ದಾಖಲೆ ನಿರ್ಮಿಸುತ್ತಾನೆ. ಒಂದು ಕಾಲಲ್ಲಿ ಕೆನಡಾದ ಒಂದು ತುದಿ ಇಂದ ಮತ್ತೊಂದು ತುದಿಗೆ ಓಡಿ ಮ್ಯಾರಥಾನ್‌ನಲ್ಲಿ ತನ್ನದೇ ಆದ ಸಾಧನೆ ಮಾಡುತ್ತಾರೆ. ಇವತ್ತು ಆತ ಟೆರಿ ಫಾಕ್ಸ್ ಮ್ಯಾರಥಾನ್‌ನಲ್ಲಿ ಎಷ್ಟು ಫೇಮಸ್ ಅಂದರೆ Force Season group ರವರು ನಮ್ಮ ಬೆಂಗಳುರಿನಲ್ಲೇ ಆಯೋಜಿಸುತ್ತಾರೆ. ಒಂದು ಕಾಲಲ್ಲಿ ಒಬ್ಬ ವ್ಯಕ್ತಿ ಮೂರು ಸಾವಿರ ಕಿ.ಮೀ. ಓಡುವುದಕ್ಕೇ ಸಾಧ್ಯ ಆದರೆ ಆತನಗಿಂತ ಕಷ್ಟನಾ? ಲೈಫ್.

ಬಹಳಷ್ಟು ಜನ ಮತ್ತೆ ಕೇಳುತ್ತಾ ಇರುತ್ತಾರೆ. ಗೆಲ್ಲಬೇಕು ಅಂತ ಆಸೆ ಇರುತ್ತೆ ದೊಡ್ಡದಾಗಿ ಕನಸು ಕಾಣುತ್ತಾ ಇರುತ್ತೀವಿ. ಹೌದು, ನಮ್ಮ ಪ್ರಾಬ್ಲಮ್ ಇದು. ಇವತ್ತು
ಸಂಬಂಧಗಳನ್ನು ನಿಭಾಹಿಸಲು ಅಹಂ ಬಿಡುತ್ತಿಲ್ಲ. ಇವತ್ತು ಬಾಲ್ಯದ ಸ್ನೇಹಿತರು ಇದಾರೆ, ಆದರೆ ಅವರ ಜತೆ ಅಂಗಡಿಗೆ ಹೋಗಿ ಮಿಠಾಯಿಯನ್ನ ಚಪ್ಪರಿಸಲು ಆಗುತ್ತಿಲ್ಲ. ಆವತ್ತು ಕಲಿಸಿದ ಶಿಕ್ಷಕರು ಈಗಲೂ ಇದ್ದಾರೆ. ಆದರೆ ಹೋಗಿ ಮಾತನಾಡಿಸಲು ಪುರುಸೊತ್ತಿಲ್ಲ. ಇವತ್ತು ಹಕ್ಕಿಗಳು ಹಾಡುತ್ತಿದೆ ಕೇಳುವಷ್ಟು ವ್ಯವಧಾನವಿಲ್ಲ. ತುಂಬ ಸಿಂಪಲ್ ಆಗಿ ಬದುಕ ಬೇಕು ಅನ್ನಿಸುತ್ತಾ ಇದೆ. ಆದರೆ ಪರರ ಶ್ರೀಮಂತಿಕೆ ನಮ್ಮನ್ನ ಬಿಡುತ್ತಿಲ್ಲ. ನಮ್ಮನ್ನು ಇನ್ನೊಬರ ಜತೆ ಹೋಲಿಕೆ
ಮಾಡುತ್ತಲೇ ಬದುಕಿಬಿಡುತ್ತೇವೆ. ಬಹಳಷ್ಟು ಜನ ಹೇಳುತ್ತಾರೆ.ತ್ವರಿತ ಸಕ್ಸಸ್ ಬೇಕು. ಅಂದುಕೊಂಡಿದ್ದು ಹಾಗೆ ಸಿಕ್ಕಿ ಬಿಡಬೇಕು.

ಆತನ ಹೆಸರು ಕರೀಂ ನಸ್ಸೇರಿ. ಇರಾನ್‌ನಲ್ಲಿ ಇರುತ್ತಾನೆ. ಯಾವುದೊ ರಾಜಕೀಯ ಗಲಾಟೆಗಳಿಂದ ಆತನನ್ನ ಹೊರಹಾಕುತ್ತಾರೆ. ಅಲ್ಲಿಂದ ಇಂಗ್ಲೆಂಡ್ ಹೋಗುತ್ತಾನೆ. ಇಂಗ್ಲೆಂಡಿನಿಂದ ಪಾಸ್ ಪೋರ್ಟ್ ಇಲ್ಲ ಅಂತ ಪ್ಯಾರಿಸ್‌ಗೆ ಕಳಿಸುತ್ತಾರೆ. ಪ್ಯಾರಿಸ್ ಇಂದ ಮತ್ತೆ ಇಂಗ್ಲೆಂಡ್ ಹೋಗಿ ಮತ್ತೆ ಪ್ಯಾರಿಸ್‌ನ ಡಿಗಾಲಯ ಏರ್‌ಪೋರ್ಟ್‌ಗೆ ಬಂದು ಉಳಿದುಕೊಂಡು ಬಿಡುತ್ತಾರೆ. ಒಂದಲ್ಲ, ಎರಡಲ್ಲ, ಪ್ಯಾರಿಸ್ ಏರ್‌ಪೋರ್ಟ್‌ನಲ್ಲಿ ಆ ನಸ್ಸೇರಿ ೧೭ ವರ್ಷ ಬೆಳಿಗ್ಗೆ ಎದ್ದೇಳು ರೆಡಿ ಆಗಿ ಸಂಜೆವರೆಗೂ ನ್ಯೂಸ್ ಪೇಪರ್ ಓದಿ ಒಂದು ಕೊಠಡಿ ಹೋಗಿ ಮಲಗುತ್ತಾರೆ. ಹೀಗೆ ಪ್ಯಾರಿಸ್ ಏರ್‌ಪೋರ್ಟ್‌ನಲ್ಲಿ ೧೭ ವರ್ಷ ಆತ ಉಳಿದು ಬಿಡುತ್ತಾನೆ.
ಏನು ಮಾಡಬೇಕು ಗೊತ್ತಿಲ್ಲ. ಒಂದು ಸಲ stiphan spil burg ಏರ್‌ಪೋರ್ಟ್‌ಗೆ ಹೋದಾಗ ಈ ನಸ್ಸೇರಿ ಬದುಕನ್ನ ನೋಡಿ ದಿ ಟರ್ಮಿನಲ್ ಅನ್ನೋ ಮೂವಿ
ತೆಗಿತ್ತಾರೆ. ಒಬ್ಬ ವ್ಯಕ್ತಿ ಒಂದು ಏರ್‌ಪೋರ್ಟ್‌ನಲ್ಲಿ ೧೭ ವರ್ಷ ಕಳೆಯುವುದು ತಮಾಷೇನಾ.

ಏನಾದರು ಸಾಽಸಬೇಕು ಅಂದರೆ ಮೊದಲನೆಯದಾಗಿ ಧೈರ್ಯ ಬೆಳಿಸಿಕೊಳ್ಳಿ. ಧೈರ್ಯವಿರಲಿ. ಕಾಲ ಎದಕ್ಕೂ ಉತ್ತರಿಸುತ್ತೆ. ಅವಶ್ಯಕತೆಗೂ ಮೀರಿ ಹೆದರ ಬೇಡಿ. ಲೈಫಲ್ಲಿ ಎಲ್ಲರಿಗೂ ಒಂದು ಸಮಯ ಬರುತ್ತೆ. ಕೆರೆ ತುಂಬಾ ನೀರು ಇzಗ, ಮೀನು ಹುಳುವನ್ನು ತಿನ್ನುತ್ತೆ. ನೀರು ಒಣಗಿಹೋದ್ರೆ ಹುಳು ಮೀನನ್ನು ತಿನ್ನುತ್ತೆ. ದಯ ವಿಟ್ಟು ಪೇಷ ಬೆಳಿಸಿಕೊಳ್ಳಿ. ಯಾವುದಕ್ಕೂ ಅಂಜಬೇಡಿ. ಅವರು ಬಿಲ್ ಹೆವೆಅಂತ. ದೋಣಿ ಸ್ಪರ್ಧೆಯಲ್ಲಿ ಸಿಕ್ಕಾಪಟ್ಟೆ ಪ್ರಾಕ್ಟಿಸ್ ಮಾಡಿದ್ದ. ಒಲಂಪಿಕ್ಸ್ ಗೆ ಆಯ್ಕೆ ಕೂಡ ಆಗಿದ್ದ. ಇನ್ನೇನು ಒಲಂಪಿಕ್ಸ್ ಗೆ ಹೋದ್ರೆ ಬಿಲ್ ಹೆವೆ ಗ್ಯಾರಂಟಿ ಚಿನ್ನದ ಪದಕ ಗೆಲ್ಲುತ್ತಾರೆ. ಇದನ್ನ ಎಲ್ಲರೂ ನಿರ್ಧಾರ ಮಾಡಿದರು. ಗೋಲ್ಡ್ ಮೆಡಲ್ ಗೆದ್ದೇ ಗೆಲ್ಲುತ್ತಾರೆ ಅಂತ ತೀರ್ಮಾನ ಮಾಡಿ ಬಿಲ್ ಹೆವೆನ ಸೆಲೆಕ್ಟ್ ಮಾಡಿದಾಗ, ಬಿಲ್ ಹೆವೆ ಹೇಳುತ್ತಾರೆ.

‘ನಾನು ಈ ಬಾರಿ ಒಲಂಪಿಕ್ಸ್ ಗೆ ಬರುತ್ತಿಲ್ಲ’ ಅಂತ. ಎಲ್ಲರೂ ಶಾಕ್ ಆಗುತ್ತಾರೆ. ‘ನೋಡಿ ನನ್ನ ಹೆಂಡತಿಗೆ ಚೊಚ್ಚಲ ಡೆಲಿವರಿ. ಅಂದರೆ ಮೊದಲೆನೆ ಮಗುವಿಗೆ ಜನ್ಮ ಕೊಡೋದಕ್ಕೆ ಹೋಗುತ್ತಿದಾಳೆ. ಈ ಸಂಧರ್ಭದಲ್ಲಿ ನಾನು ಅವಳ ಜತೆ ಇರಬೇಕು ನನ್ನ ಕುಟುಂಬದ ಜತೆ ನಾನು ಇರಬೇಕು’ ಅಂತ ಹೇಳಿದ ತಕ್ಷಣ ಎಲ್ಲರು ನಗುತ್ತಾರೆ. ಬಿಲ್ ಹೆವೆ your doing a great mistake. ನೀನು ತಪ್ಪು ಮಾಡುತ್ತಾ ಇದ್ದಿಯ ನೀನು ದುಡುಕುತ್ತಾ ಇದ್ದಿಯ, ನಿನ್ನ ಲೈಫ್ ಹಾಳಾಗಿಬಿಡುತ್ತೆ ಅಂತ, ಶಾಪ ಹಾಕಿದ್ರು. ಆದ್ರೂ ಬಿಲ್ ಹೆವೆ ತಾಳ್ಮೆಯಿಂದಾನೆ ಇದ್ರು.

ಇವರೆಲ್ಲರೂ ದೋಣಿ ಸ್ಪರ್ಧೆಯಲ್ಲಿ ಹೋದರು ಗೋಲ್ಡ್ ಮೆಡಲ್ ಗೆದ್ದುಕೊಂಡು ವಾಪಾಸ್ ಬಂದರು, ವಾಪಾಸ್ ಬಂದು ಹೇಳಿದ್ರು, ‘ನೋಡಿದಿಯಾ, ನೀನು ಇಲ್ಲ ಅಂದ್ರೂ ನಾವು ಗೋಲ್ಡ್ ಮೆಡಲ್ ಗೆದ್ದಿದ್ದಿವಿ’ ಅಂತ ಹೇಳುತ್ತಾರೆ. ಬಿಲ್ ಹೆವೆ ಬೇಜಾರು ಮಾಡಿಕೊಳ್ಳುತ್ತಾರೆ. ಬಿಲ್ ಹೆವೆಗೆ ಮಗು ಕೂಡ ಆಗುತ್ತೆ. ೨೮-೩೦ ವರ್ಷ ನಂತರ ೧೯೫೨ರಲ್ಲಿ ಬಿಲ್ ಹೆವೆಗೆ ಒಂದು ಟೆಲಿ ಗ್ರಾಂ ಬರುತ್ತೆ. ಆ ಟೆಲಿಗ್ರಾಂನಲ್ಲಿ ಹೀಗೆ ಇರುತ್ತೆ ಡ್ಯಾಡಿ… ಹೆಲ್ ಸಿಂಕ್‌ನಲ್ಲಿ ನಡೆಯುತ್ತಿರುವ ಒಲಂಪಿPನಲ್ಲಿ ನಾನು ಚಿನ್ನದ ಪದಕ ಗೆದ್ದಿದ್ದಿನಿ ಅಂತ. ಬಿಲ್ ಹೆವೆ ಮಗ ಟೆಲಿ ಗ್ರಾಂ ಕಳಿಸುತ್ತಾನೆ.

ಯಾವ ತಂದೆ ಮಗನಿಗೋಸ್ಕರ ಒಲಂಪಿಕ್ಸ್ ನ ಬಿಟ್ಟು ಕೊಟ್ಟಿದ್ರೋ ಅದೇ ಒಲಂಪಿಕ್ಸ್ ನಲ್ಲಿ ಆತನ ಮಗ ಚಿನ್ನದ ಪದಕವನ್ನು ಗೆದ್ದು ತಂದೆಗೆ ಉಡುಗೊರೆಯಾಗಿ
ಕೊಡುತ್ತಾರೆ. ತಂದೆಯ ತ್ಯಾಗ ಅಂತದ್ದು. ಏನಾದರು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಬೇಜಾರು ಮಾಡಿಕೊಳ್ಳಬಾರದು. ಕಷ್ಟ ಎಲ್ಲರಿಗೂ ಇರುತ್ತೆ. ಕಣ್ಣೀರು ಬರುತ್ತೆ, ದುಃಖ ಬರುತ್ತೆ, ನಡೆಯುವವನು ಎಡುವುತ್ತಾನೆ, ಓಡುವವನು ಬೀಳುತ್ತಾನೆ. ಮನೆಯಲ್ಲಿ ಕಷ್ಟ ಇದೆ ಅಂತ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಮನೆಯಲ್ಲಿ ನೋವಿದೆ
ಅಂದ ತಕ್ಷಣ ಗೆಲುವನ್ನ ಮಧ್ಯದ ಬಿಡುತ್ತೀರಾ? ಕೊನೆವರೆಗೂ ನಡೆಯಬೇಕು ಕಷ್ಟನೋ, ಸುಖನೋ ನಡಿಬೇಕು. ತೋರಿಸಬೇಕು. ಬಿzದೆ ನಿನ್ನ ಕೈಯಲ್ಲಿ ಆಗಲ್ಲ ಅಂದಿದವರ ಮುಂದೆ ಬೆಳೆದು ತೋರಿಸಬೇಕು. ಹಾಗೆ ಅಂತ ಹಗೆ ಸಾಽಸಬಾರದು. ಹೊಟ್ಟೆಕಿಚ್ಚು ಇಟ್ಟುಕೊಳ್ಳಬಾರದು.

ಪರರು ನಮ್ಮ ಮೇಲೆ ಕಲ್ಲು ಹಾಕಿದರೆ ಅದರಿಂದ ನಾವು ಕೋಟೆಯನ್ನ ಕಟ್ಟಿಕೊಳ್ಳಬೇಕು. ಅದರಿಂದ ರಸ್ತೆ ನಿರ್ಮಾಣ ಮಾಡಿಕೊಳ್ಳಬೇಕು. ಅವರು ಕಲ್ಲು ಹಾಕಿ ದ್ದಕ್ಕೆ, ನೀನೂ ಕಲ್ಲು ಹಾಕಿದರೆ! ಅವರಿಗೆ ನಿಮಗೆ ಏನು ವ್ಯತ್ಯಾಸ. ಮೊದಲ ಸೋಲು ನಮ್ಮ ಅಚಾತುರ್ಯದ ಸಂಕೇತ. ಮತ್ತೊಂದು ಸೋಲು ನಮ್ಮ ಸೋಮಾ ರಿತನದ ಸಂಕೇತ. ಪದೇ ಪದೇ ಸೋಲುತ್ತಿದ್ದಿವಿ ಅಂದರೆ ನಾವು ಬದಲಾಗಿಲ್ಲ ಅಂತ ಅರ್ಥ. ಈ ಜಗತ್ತಿನಲ್ಲಿ ಬದಲಾಗದೆ ಇರುವುದು ಒಂದೇ ಅದು ಬದಲಾವಣೆ ಮಾತ್ರ.

error: Content is protected !!