Sunday, 19th May 2024

ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ಸಿಂಗಾಪುರದಲ್ಲಿ ನಿಷೇಧ

ನವದೆಹಲಿ: ಕಾಶ್ಮೀರ ಕಣಿವೆಯಿಂದ ಹಿಂದೂಗಳ ವಲಸೆ (1990ರ ದಶಕ) ಕುರಿತಾದ ವಿವಾದಾತ್ಮಕ ಚಲನಚಿತ್ರ ಕಾಶ್ಮೀರ್ ಫೈಲ್ಸ್ ಅನ್ನು ಸಿಂಗಾಪುರದಲ್ಲಿ ನಿಷೇಧಿಸಲಾಗಿದೆ.

ಚಿತ್ರವು ವಿವಿಧ ಸಮುದಾಯಗಳ ನಡುವೆ ದ್ವೇಷ ಉಂಟುಮಾಡುವ ಸಂಭಾ ವ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಚಿತ್ರ ನಿಷೇಧ ಮಾಡಲಾಗಿದೆ.

ಕಾಶ್ಮೀರದಲ್ಲಿ ನಡೆದ ಸಂಘರ್ಷದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಕಿರುಕುಳಕ್ಕೊಳಗಾಗುವ ಚಿತ್ರಣವನ್ನು ಪ್ರಚೋದನಕಾರಿ ಮತ್ತು ಏಕಪಕ್ಷೀಯ ವಾಗಿ ಚಿತ್ರಿಸಲಾಗಿದೆ ಎಂದು ಸಿಂಗಾಪುರ್ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ವಿವಿಧ ಸಮುದಾಯಗಳ ನಡುವೆ ದ್ವೇಷವನ್ನು ಉಂಟುಮಾಡುವ ಸಂಭವವಿದೆ. ನಮ್ಮ ಬಹು-ಧರ್ಮೀಯ ಸಮಾಜದಲ್ಲಿ ಸಾಮಾಜಿಕ ಒಗ್ಗಟ್ಟು ಮತ್ತು ಧಾರ್ಮಿಕ ಸಾಮರಸ್ಯವನ್ನು ಅಡ್ಡಿಪಡಿಸುವ ಸಾಮರ್ಥ್ಯವನ್ನು ಚಿತ್ರ ಹೊಂದಿದೆ ಎಂದಿದೆ.

ಮಾರ್ಚ್ 11 ರಂದು ಬಿಡುಗಡೆಯಾದ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಕಾಶ್ಮೀರ ಫೈಲ್ಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಹಲವಾರು ಬಿಜೆಪಿ ನಾಯಕರು ಹೊಗಳಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಹಿಟ್ ಆಗಿದ್ದ ಸಿನಿಮಾಗೆ ಹಲವು ರಾಜ್ಯಗಳು ತೆರಿಗೆ ವಿನಾಯಿತಿ ನೀಡಿದೆ.

 

error: Content is protected !!