Saturday, 27th April 2024

ಯುದ್ಧದ ಕಾರ್ಮೋಡ: ಸಂವೇದಿ ಸೂಚ್ಯಂಕ 1,004 ಅಂಕಗಳ ಭಾರೀ ಇಳಿಕೆ

ಮುಂಬೈ: ರಷ್ಯಾ ಮತ್ತು ಉಕ್ರೇನ್ ಗಡಿಯಲ್ಲಿ ಸೇನಾ ಜಮಾವಣೆ ಹೆಚ್ಚುತ್ತಿದ್ದಂತೆ ಯುದ್ಧದ ಕಾರ್ಮೋ ಡವೂ ಮತ್ತಷ್ಟು ಆವರಿಸಿಕೊಂಡಿದೆ. ಈ ಯುದ್ಧ ಭೀತಿಯ ಪರಿಣಾಮ ಭಾರತದ ಷೇರುಪೇಟೆ ಹೂಡಿಕೆದಾರರ ಮೇಲೆ ಬೀರಿದೆ.

ಮಂಗಳವಾರ ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿಯೇ 1,000ಕ್ಕೂ ಅಧಿಕ ಅಂಕ ಕುಸಿತ ಕಂಡಿದೆ. ಸಂವೇದಿ ಸೂಚ್ಯಂಕ 1,004 ಅಂಕಗಳಷ್ಟು ಭಾರೀ ಇಳಿಕೆಯಾಗಿದ್ದು, 56,680 ಅಂಕ ಗಳಲ್ಲಿ ವಹಿವಾಟು ಮುಂದುವರಿದಿದೆ. ದೆಹಲಿಯಲ್ಲಿರುವ ಭಾರತೀಯ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ನಿಫ್ಟಿ ಕೂಡ 285 ಅಂಕಗಳಷ್ಟು ಕುಸಿತವಾಗಿದ್ದು, 16,922 ಅಂಕಗಳಿಗೆ ಇಳಿಕೆಯಾಗಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಸೋಮವಾರ ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 149 ಅಂಕಗಳ ಇಳಿಕೆಯೊಂದಿಗೆ 57,684 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿತ್ತು. ಎನ್‌ಎಸ್‌ಇ ನಿಫ್ಟಿ 70 ಅಂಕ ಕುಸಿದಿದ್ದು, 17,207 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಕೊನೆಗೊಂಡಿತ್ತು.

error: Content is protected !!