Sunday, 19th May 2024

ಅಮಿತ್‌ ಶಾ ಹೇಳಿಕೆಗೆ ಕೇರಳ ಸಿಎಂ ಆಕ್ಷೇಪ

ತಿರುವನಂತಪುರ: ಕೇರಳಕ್ಕಿಂತ ಕರ್ನಾಟಕ ಹೇಗೆ ಸುರಕ್ಷಿತ ಎಂಬುದನ್ನು ಶಾ ಸ್ಪಷ್ಟಪಡಿಸಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದಾರೆ.

ಮಂಗಳೂರು ಭೇಟಿ ಸಂದರ್ಭ ಕೇರಳದಲ್ಲಿನ ಸುರಕ್ಷತೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶನಿವಾರವಷ್ಟೇ ಮಂಗಳೂರಿಗೆ ಭೇಟಿ ನೀಡಿದ್ದ ಶಾ, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, “ನಿಮ್ಮ ನೆರೆಯ ರಾಜ್ಯದ ಪರಿಸ್ಥಿತಿಯನ್ನೇ ಒಮ್ಮೆ ಗಮನಿಸಿ, ಅವಲೋಕಿಸಿ. ನಾನು ಹೆಚ್ಚಿಗೆ ಏನೂ ಹೇಳಬೇಕಾದ ಆವಶ್ಯಕತೆ ಇಲ್ಲ…’ ಎಂದಿದ್ದರು.

ಈ ಹೇಳಿಕೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕೇರಳ ಸಿಎಂ ಪಿಣರಾಯಿ, ಕೇರಳದಲ್ಲಿ ಅಭದ್ರತೆ ತೋರುವಂಥ ಯಾವ ಪರಿಸ್ಥಿತಿ ಎದುರಾಗಿದೆ? ಇಲ್ಲಿನ ಜನರು ಸಂವಿಧಾನದ ಮೇಲೆ ನಂಬಿಕೆ ಹೊಂದಿದ್ದಾರೆ. ನೆಮ್ಮದಿಯಾಗಿ ಜೀವಿಸುತ್ತಿದ್ದಾರೆ, ಅದೇ ಕರ್ನಾಟಕದಲ್ಲಿ ಈ ಪರಿಸ್ಥಿತಿ ಇದೆಯೇ?

ಕರ್ನಾಟಕದಲ್ಲಿ ಕ್ರಿಶ್ಚಿಯನ್ನರು, ಅಲ್ಪಸಂಖ್ಯಾಕ ಸಮುದಾ ಯದವರು ಅನೇಕ ದಾಳಿಗಳನ್ನು ಎದುರಿಸು ತ್ತಿದ್ದಾರೆ. ಆದರೆ ಕೇರಳದಲ್ಲಿ ಅಂತಹ ಕೋಮುದ್ವೇಷವೇ ಇಲ್ಲ. ಕೇರಳವನ್ನು ನೋಡಿ ಕಲಿಯಿರಿ ಎಂದರೆ ಅದನ್ನು ಸ್ವಾಗತಿಸ ಬಹುದಿತ್ತು. ಆದರೆ ಶಾ ಅವರ ಹೇಳಿಕೆ ಅದಾಗಿರಲಿಲ್ಲ. ಅವರು ತಮ್ಮ ವಾಕ್ಯವನ್ನು ಪೂರ್ಣಗೊಳಿಸಬೇಕು. ಇಲ್ಲವೇ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

error: Content is protected !!