Friday, 1st December 2023

ವಿಕ್ಟೋರಿಯಾ ಗೌರಿ ನೇಮಕಕ್ಕೆ ಆಕ್ಷೇಪ: ಅರ್ಜಿ ಅಮಾನ್ಯ

ನವದೆಹಲಿ: ದ್ರಾಸ್‌ ಹೈಕೋರ್ಟ್‌ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕ ಗೊಂಡಿದ್ದ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ವಿಕ್ಟೋರಿಯಾ ಗೌರಿಯವರ ನೇಮಕಕ್ಕೆ ಕೆಲ ಹಿರಿಯ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಪ್ರಮಾಣವಚನ ಸ್ವೀಕರಿಸಿದ್ದಾರೆ.

ವಿಕ್ಟೋರಿಯಾ ಗೌರಿ ಅವರ ಪ್ರಮಾಣವಚನ ಸ್ವೀಕಾರಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್‌ ನಲ್ಲಿ ಮನವಿ ಮಾಡಲಾಗಿತ್ತಾ ದರೂ ಅದನ್ನು ಮಾನ್ಯ ಮಾಡಿಲ್ಲವಾದ ಕಾರಣ ವಿಕ್ಟೋರಿಯಾ ಗೌರಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

 

error: Content is protected !!