Friday, 2nd June 2023

ಪ್ರತಾಪ್ ಸಿಂಹ ನಾಳೆಯಿಂದಲೇ ಪ್ರತಿಭಟಿಸಲಿ: ಡಿ.ಕೆ.ಶಿವಕುಮಾರ್ ಟಾಂಗ್

ಬೆಂಗಳೂರು: ಬಳಕೆದಾರರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡ ದಿದ್ದರೆ ಜೂನ್ 1ರಿಂದ ಪ್ರತಿಭಟನೆ ನಡೆಸುವುದಾಗಿ ಹೇಳಿರುವ ಮೈಸೂರು – ಕೊಡಗು ಸಂಸದ ಪ್ರತಾಪ್ ಸಿಂಹ ಅವರಿಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.

ಜೂನ್ 1ರಿಂದ ಯಾಕೆ ಪ್ರತಿಭಟನೆ. ಪ್ರತಾಪ್ ಸಿಂಹ ನಾಳೆಯಿಂದಲೇ ಪ್ರತಿಭಟನೆ ಶುರು ಮಾಡಿಕೊಳ್ಳಲಿ. ನಮ್ಮ ಮನೆ ಮುಂದೆ ಬಂದು ಮಲಗಿ ಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.

ಇತ್ತೀಚೆಗೆ ಮಾತನಾಡಿದ್ದ ಪ್ರತಾಪ್ ಸಿಂಹ, 200 ಯೂನಿಟ್ ಉಚಿತ ವಿದ್ಯುತ್ ನೀಡುವುದನ್ನು ತಕ್ಷಣ ಜಾರಿಗೊಳಿಸಬೇಕು. ಜೂನ್ ನಿಂದ ಬಳಕೆದಾರರು 200 ಯೂನಿಟ್ ವರೆಗೆ ಬಿಲ್ ಕಟ್ಟಬಾರದು ಎಂದಿದ್ದರಲ್ಲದೆ ಯೋಜನೆ ಕೂಡಲೇ ಜಾರಿಯಾಗ ದಿದ್ದಲ್ಲಿ ಜೂನ್ 1ರಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು.

error: Content is protected !!