Sunday, 19th May 2024

ಗುಣಮಟ್ಟದ ಶಿಕ್ಷಣ ನೀಡುವುದು ಶೇಷಾದ್ರಿಪುರಂ ಸಂಸ್ಥೆಯ ಗುರಿ: ನಾಡೋಜ ಡಾ.ವುಡೇ ಪಿ.ಕೃಷ್ಣ

ತುಮಕೂರು: ಗುಣಮಟ್ಟದ ಶಿಕ್ಷಣ ನೀಡುವುದು ಶೇಷಾದ್ರಿಪುರಂ ಸಂಸ್ಥೆಯ ಮುಖ್ಯ ಗುರಿ ಎಂದು ಸಂಸ್ಥೆಯ ಪ್ರಧಾನ ಕಾರ್ಯ ದರ್ಶಿ ನಾಡೋಜ ಡಾ.ವುಡೇ ಪಿ.ಕೃಷ್ಣ ತಿಳಿಸಿದರು.

ಶೇಷಾದ್ರಿಪುರಂ ಶಾಲೆಯ 4ನೇ ವಾರ್ಷಿಕೋತ್ಸವದ ಅಂಗವಾಗಿ ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪಲ್ಲವ ಪ್ರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸುಮಾರು 93 ವರ್ಷ ಇತಿಹಾಸವಿರುವ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳಿಗೆ ಪ್ಲೇ ಗ್ರೂಫ್,ಮಾಂಟೆಸರಿ ತರಗತಿಯಿಂದ 10ನೇ ತರಗತಿವರೆಗೆ ಕಲಿಸಲಾಗುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ,ಅವರ ಭವಿಷ್ಯವನ್ನು ಉಜ್ವಲ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನಿಟ್ಟಿನಲ್ಲಿ ಸಂಸ್ಥೆಯ ಶಿಕ್ಷಕರು ತಮ್ಮ ಪಾಠಪ್ರವಚನಗಳಿಂದ ವಿದ್ಯಾರ್ಥಿ ಗಳಿಗೆ ಸರಿಯಾದ ಮಾರ್ಗ ತೋರುವ ಕೆಲಸ ಮಾಡುತ್ತಿದ್ದಾರೆ ಎಂದರು.

ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ, ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡಕೋಣೆ ಅವರೂ ಸಹ ನಮ್ಮ ಸಂಸ್ಥೆಯಲ್ಲಿ ಕಲಿತಿ ದ್ದಾರೆ ಎನ್ನುವ ಹೆಗ್ಗಳಿಕೆ ನಮ್ಮ ಸಂಸ್ಥೆಗೆ ಸಲ್ಲುತ್ತದೆ. ಮಕ್ಕಳ ಕಲಿಕೆಯೇ ನಮ್ಮ ಆದ್ಯತೆ.ಮಕ್ಕಳ ಪೋಷಕರು ಈವರೆಗೂ ನೀಡಿದಂತೆಯೇ ಮುಂದಿನ ದಿನಗಳಲ್ಲಿಯೂ ಸಂಸ್ಥೆಗೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಕಲಾವಿದ ಶ್ರೀನಿವಾಸಪ್ರಭು ಮಾತನಾಡಿ, ಶರಣರು ಹೇಳಿರುವಂತೆ ನುಡಿದರೆ ಮತ್ತಿನ ಹಾರದಂತೆ ಇರಬೇಕು, ಸ್ಪಟಿಕದ ಸಲಾಕೆ ಯಂತಿರಬೇಕು ಎಂಬ0ತೆ, ಮಾತು ಮತ್ತು ಕೃತಿಗೆ ವೆತ್ಯಾಸವಿಲ್ಲದಂತೆ, ಇನ್ನೊಬ್ಬರ ಮನನೋಯದಂತೆ ಮಾತನಾಡುವು ದನ್ನು ನಾವುಗಳು ಕಲಿಯಬೇಕು.ಯಾವುದೇ ವಿಚಾರದ ಬಗ್ಗೆ ಸಂಪೂರ್ಣ ತಿಳುವಳಿಕೆ ಇಲ್ಲದೆ ಮಾತನಾಡುವುದು ಒಳ್ಳೆಯದಲ್ಲ ಎಂಬ ಕಿವಿಮಾತು ಹೇಳಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕಿ ರಂಜನಿ ಪ್ರಭು ಮಾತನಾಡಿ, ಗುರು, ಶಿಷ್ಯರ ಸಂಬ0 ಎಂಬುದು ಅತ್ಯಂತ ಪವಿತ್ರವಾದುದ್ದು. ಶಿಕ್ಷಣ, ಗುರು ಮತ್ತು ವಿದ್ಯಾರ್ಥಿಗಳು ಮೂರು ಅಂಶಗಳು ಕಲಿಕೆಯ ಆಧಾರ ಸ್ತಂಬಗಳು. ಇದರ ಜೊತೆಗೆ ಮಕ್ಕಳ ಪೋಷಕರು ಸಹ ಹೆಚ್ಚಿನ ಜವಾಬ್ದಾರಿ ಪ್ರದರ್ಶಿಸಬೇಕಿದೆ ಎಂದರು.

ಶಾಲೆಯ ಪ್ರಾಂಶುಪಾಲೆ ನಂದರಾಜು, ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಪ್ರತಿ ಮಗುವಿನ ಸಮಗ್ರ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿ, ಎಲ್ಲರ ಭೌತಿಕ ಮತ್ತು ಬೌದ್ದಿಕ ಬೆಳೆವಣಿಗೆಗೆ ಶ್ರಮವಹಿಸಲಾಗುತ್ತಿದೆ.ಪಠ್ಯದ ಜೊತೆಗೆ, ಪಠ್ಯೇತರ ಚಟುವಟಿಕೆಗಳಲ್ಲಿಯೂ ಮಕ್ಕಳಿಗೆ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷರು ಹಾಗು ಗವರ್ನಿಂಗ್ ಕೌನ್ಸಿಲ್ ಟಿ.ಎಸ್.ಹೆಂಜಾರಪ್ಪ,ವಿದ್ಯಾರ್ಥಿಗಳು, ಪೋಷಕರು, ಶಾಲೆಯ ಬೋಧಕ ಹಾಗೂ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
Read E-Paper click here

error: Content is protected !!