Sunday, 19th May 2024

ಕೊಲ್ಹಾರ ತಾಲ್ಲೂಕು ನಿವೃತ್ತ ನೌಕರರ ಸಂಘದ ಸಭೆ

ಕೋಲಾರ: ಕೊಲ್ಹಾರ ತಾಲ್ಲೂಕು ನಿವೃತ್ತ ನೌಕರರ ಸಭೆಯೂ ಇತ್ತಿಚೆಗೆ ಪಟ್ಟಣದ ಎಂ.ಪಿ.ಎಸ್. ಶಾಲೆಯಲ್ಲಿ ತಾಲ್ಲೂಕಾಧ್ಯಕ್ಷ ಕೆ.ಯು ಗಿಡ್ಡಪ್ಪಗೋಳ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕಳೆದ ಮೂರು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಘಟಕ ಕೊರೋನಾ ಪರಿಸ್ಥಿತಿ ಹಾಗೂ ಇತರೆ ಕಾರಣಗಳಿಂದ ಕಾರ್ಯ ಚಟುವಟಿಕೆಗಳು ಸ್ಥಗಿತ ಗೊಂಡಿದ್ದವು.

ಸದ್ಯ ಅಡೆತಡೆಗಳು ದೂರಾಗಿದ್ದು ಸಂಘವನ್ನು ಬಲಪಡಿಸಿ ನಿವೃತ್ತ ನೌಕರರ ಶಯೋ ಭಿವೃದ್ಧಿಗಾಗಿ ಎಲ್ಲರೂ ಕೈಜೋಡಿಸೋಣ ಎಂದು ತಾಲ್ಲೂಕಾಧ್ಯಕ್ಷ ಕೆ.ಯು.ಗಿಡ್ಡಪ್ಪಗೋಳ ಕರೆ ನೀಡಿದರು.

ಪಟ್ಟಣದ ಹಮ್ಮಿಕೊಂಡಿದ್ದ ನಿವೃತ್ತ ನೌಕರರ ಸಭೆಯಲ್ಲಿ ಅವರು ಮಾತ ನಾಡಿ, ಮುಂಬರುವ ದಿನಗಳಲ್ಲಿ ತಾಲ್ಲೂಕಿನಲ್ಲಿರುವ ಎಲ್ಲಾ ನಿವೃತ್ತ ನೌಕರರನ್ನು ಸಂಘದಲ್ಲಿ ಸದಸ್ಯರನ್ನಾಗಿ ಮಾಡಿಕೊಂಡು ನಿವೃತ್ತ ನೌಕರರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುವುದು.

ಅಲ್ಲದೇ ಸದ್ಯದಲ್ಲೇ 75 ವರ್ಷ ವಯಸ್ಸು ಪೂರೈಸಿದ ತಾಲ್ಲೂಕಿನ ನಿವೃತ್ತ ನೌಕರರನ್ನು ಗುರುತಿಸಿ ಅವರನ್ನು ಕುಟುಂಬ ಸಮೇತರಾಗಿ ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ನಿವೃತ್ತ ನೌಕರರಾದ ಟಿ.ಎಲ್.ಹಗೇದಾಳ, ಸಿ.ಎ ಗುಂಗಿ ಹಾಗೂ ಡಾ.ಬಿ.ಆರ್.ಮಠ ಅವರು ಮಾತನಾಡಿದರು.

ಇದೇ ವೇಳೆ ಸಂಘದ ಹಿಂದಿನ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಮೇಶ ಹರನಟ್ಟಿ ಯವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಿವೃತ್ತ ಶಿಕ್ಷಕ ಎಸ್.ಎಸ್, ಪತಂಗಿಯ ವರನ್ನು ಹಾಗೂ ತಾಲ್ಲೂಕು ಖಜಾಂಚಿಯಾಗಿ ಪರಪ್ಪ ಗಣಿಯವರನ್ನು ನೇಮಕ ಮಾಡ ಲಾಯಿತು.

ಎಪ್ಪತ್ತಕ್ಕೂ ಅಧಿಕ ಸೈಕ್ಲಿಸ್ಟ್ ಗಳಿಗೆ ಮಾರ್ಗದರ್ಶನ ನೀಡಿ ಹಲವಾರು ಸೈಕ್ಲಿಸ್ಟ್ ಗಳಿಗೆ ರಾಷ್ಟ್ರ, ರಾಜ್ಯಮಟ್ಟದಲ್ಲಿ ಮಿಂಚುವಂತೆ ಮಾಡಿ ಅವರಿಗೆ ಉದ್ಯೋಗ ಹಾಗೂ ಭವಿಷ್ಯ ರೂಪಿಸಿಕೊಟ್ಟ ಖ್ಯಾತ ಸೈಕ್ಲಿಂಗ್ ತರಬೇತುದಾರ ಪಟ್ಟಣದ 75 ವರ್ಷ ವಯಸ್ಸಿನ ದುಂಡಪ್ಪ ಅಥಣಿಯವರು ಇಂದಿಗೂ ಪಿಂಚಣಿ, ನಿವೇಶನಕ್ಕಾಗಿ ಹೋರಾಡು ತ್ತಿದ್ದು, ಅವರಿಗೆ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘದಿಂದ ಅವರ ಹೋರಾಟಕ್ಕೆ ಕೈಜೋಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.

ತಾಲ್ಲೂಕಿನಲ್ಲಿರುವ ನಿವೃತ್ತ ನೌಕರರು ಸಂಘದ ಸದಸ್ಯರಾಗಲು ಅಧ್ಯಕ್ಷ ಕೆ.ಯು ಗಿಡ್ಡಪ್ಪಗೋಳ (ಮೊಬೈಲ್ ಸಂ.9008399091) ಹಾಗೂ ಪ್ರ.ಕಾರ್ಯದರ್ಶಿ ಎಸ್.ಎಸ್.ಪತಂಗಿ (ಮೊ.ಸಂ.9986312571) ಅವರನ್ನು ಸಂಪರ್ಕಿಸಲು ಕೋರಲಾಗಿದೆ.

error: Content is protected !!