Sunday, 19th May 2024

ಫೆ.28 ರಂದು ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ

ಬೆಳಗಾವಿ: ಫೆ.28 ರಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ 238 ಕಿ.ಮೀ ದೂರದ 23,972 ಕೋಟಿ ರೂ.ಗಳ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಅವರು, ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪೈಕಿ 40.07 ಕಿ.ಮೀ ಉದ್ದದ ಆರು ಪಥಗಳ ಬೆಳಗಾವಿ-ಸಂಕೇಶ್ವರ ರಸ್ತೆಯನ್ನು ಗಡ್ಕರಿ ಉದ್ಘಾಟಿಸಲಿದ್ದಾರೆ.

69.17 ಕಿ.ಮೀ ಉದ್ದದ ಸಂಕೇಶ್ವರ ಬೈಪಾಸ್ ಮಹಾರಾಷ್ಟ್ರ ಗಡಿಯ ಆರು ಲೇನಿಂಗ್ ಗಡ್ಕರಿ ಅವರು ಉದ್ಘಾಟಿಸುವ ಎರಡನೇ ಯೋಜನೆಯಾಗಿದೆ. ಈ ಯೋಜನೆಯ ಅಂದಾಜು ವೆಚ್ಚ 1,388.7 ಕೋಟಿ ಎಂದು ಹೇಳಿದರು. ಎನ್‌ಎಚ್ 48ಎಎಯಲ್ಲಿ ಸ್ಯಾಂಕ್ವೆಲಿಮ್ – ಜಾಂಬೋಟಿ-ಬೆಳಗಾವಿ ರಸ್ತೆಯ ಎರಡು ಲೇನಿಂಗ್ ಉದ್ಘಾಟನೆ ಮಾಡುವ ಮೂರನೇ ಯೋಜನೆಯಾಗಿದೆ. ಈ ರಸ್ತೆಯ ಉದ್ದ 69.17 ಕಿಮೀ ಮತ್ತು ಯೋಜನೆಯ ವೆಚ್ಚ 246.78 ಕೋಟಿ ಎಂದು ಹೇಳಿದರು.

ನಾಲ್ಕನೇ ಯೋಜನೆ ಚೋರ್ಲಾ ರಸ್ತೆಯಾಗಿದ್ದು, ಇದನ್ನು ಭಾರತಮಾಲಾ ಪರಿಯೋಜನಾ ಅಡಿಯಲ್ಲಿ ಎರಡು ಪಥಗಳಾಗಿ ಅಭಿವೃದ್ಧಿಪಡಿಸಲಾಗು ವುದು ಎಂದು ಮಂಗಳಾ ಅಂಗಡಿ ನೀಡಿದರು. 766.64 ಕೋಟಿ ವೆಚ್ಚದ 79.70 ಕಿ.ಮೀ ದೂರದ 766.64 ಕೋಟಿ ವೆಚ್ಚದ 79.70 ಕಿ.ಮೀ., ಸಿದ್ದಾಪುರದಿಂದ ವಿಜಯಪುರ 90.13 ಕೋಟಿ ವೆಚ್ಚದ ಎರಡು ಲೇನ್‌ಗಳ ಅಗಲೀಕರಣ ಕಾಮಗಾರಿಯನ್ನು ಸಹ ಗಡ್ಕರಿ ಅವರು ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

 

error: Content is protected !!