Saturday, 27th April 2024

ವಿಶೇಷ ಚೇತನರಿಗೆ ಅವಕಾಶ ನೀಡಿ ಅಭಿವೃದ್ಧಿಗೆ ಸಹಕರಿಸಿ: ಹಿಮವರ್ಧನ್ ನಾಯ್ಡು ಅಭಿಮತ

ಚಿಕ್ಕಬಳ್ಳಾಪುರ: ಸಮಾಜದ ಮುಖ್ಯವಾಹಿನಿಯಿಂದ ಯಾರೂ ಕೂಡ ಹೊರಗೆ ಉಳಿಯಬಾರದು. ವಿಶೇಷ ಚೇತನ ಸಮುದಾ ಯದ ಮೇಲೆ ಕರುಣೆ ತೋರುವ ಬದಲು ಸಮಾನವಾಗಿ ಅವಕಾಶಗಳನ್ನು ಕಲ್ಪಿಸಿದರೆ ಎಲ್ಲರಂತೆ ಅವರೂ ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತು ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ್ ನಾಯ್ಡು ಅಭಿಪ್ರಾಯಪಟ್ಟರು.

ನಗರದ ಸರಕಾರಿ ಕೇಂದ್ರ ಬಸ್‌ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಚಿಕ್ಕಬಳ್ಳಾಪುರ ವಿಭಾಗದ ವತಿಯಿಂದ ಏರ್ಪಡಿಸಿದ್ದ ವಿಶ್ವ ವಿಶೇಷ ಚೇತನ ದಿನಾಚರಣೆ ಅಂಗವಾಗಿ ವೃದ್ದರಿಗೆ, ವಿಶೇಷ ಚೇತನರಿಗೆ, ಅಂಧರಿಗೆ, ಕ0ಬಳಿ ವಿತರಣೆ ಮಾಡಿ ಮಾತನಾಡಿದರು.

ದೇವರ ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ಭಾವನೆಯಿಂದ ನಾವು ಮುನ್ನಡೆದಾಗ ಮಾತ್ರ ವಿಶ್ವಕುಟುಂಬಕ್ಕೆ ಅರ್ಥ ಬರಲಿದೆ.ನಮ್ಮ ವಿಭಾಗದ ಕೆಲ ನೌಕರರು ಸ್ವಯಂಪ್ರೇರಿತ ವಾಗಿ ಹತ್ತಾರು ವರ್ಷಗಳಿಂದ ಸಹಮಾನವರ ಕಷ್ಟಕ್ಕೆ ನೆರವಾಗುವ ಕೆಲಸ ಮಾಡುತ್ತಾ ಬಂದಿದ್ದಾರೆ.

ಇವರಿಗೆ ಭಗವಂತ ಇನ್ನೂ ಹೆಚ್ಚಿನ ಶಕ್ತಿಯನ್ನು ನೀಡಿ ಬಡವರ ಸೇವೆ ಮಾಡಲು ನೆರವಾ ಗಲಿ. ಈಗ ಅತಿಯಾದ ಚಳಿ ಇರುವುದರಿಂದ ಬೀದಿ ಬದಿ, ಬಸ್‌ನಿಲ್ದಾಣ, ದೇವಾಲಯ, ಹೀಗೆ ಎಲ್ಲೆಂದರಲ್ಲಿ ಮಲಗುವ ಅನಾಥರಿಗೆ, ನಿರ್ಗತಿಕರಿಗೆ ಕಂಬಳಿ ನೀಡುವ ಮೂಲಕ ದೇವರು ಮೆಚ್ಚುವ ಕೆಲಸ ಮಾಡಿದ್ದಾರೆ. ವಿಶೇಷ ಚೇತನರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಉಷಾ ಕಿರಣ್ ಸಾರಥ್ಯದಲ್ಲಿ ಈ ಕಾರ್ಯಕ್ರಮ ನಡೆದಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

ಉಷಾ ಕಿರಣ್ ಮಾತನಾಡಿ ವಿಶೇಷ ಚೇತನರಿಗೆ ಸಮಾಜದಲ್ಲಿ ಹೀಗಳಿಕೆಯ ಮಾತುಗಳೇ ಹೆಚ್ಚಾಗಿ ಕೇಳಿಸುತ್ತವೆ. ನಾವು ಸಹ ಮನುಷ್ಯರೇ ಎಂಬುದನ್ನು ಅರಿಯುವ ದೊಡ್ಡಗುಣವನ್ನು ಎಲ್ಲರೂ ಬಳೆಸಿಕೊಳ್ಳಬೇಕು. ಸರಕಾರಿ ಅಧಿಕಾರಿಗಳು ಈ  ನಿಟ್ಟಿನಲ್ಲಿ ನಮ್ಮ ನೆರವಿಗೆ ಬರುವುದು ಅಗತ್ಯವಾಗಿ ಆಗಬೇಕಿದೆ. ಕಾಲು ಇಲ್ಲದ ನಮ್ಮಂತಹವರು ಟ್ರೆöÊಸಿಕಲ್ಲಿನಲ್ಲಿ, ಮೊಪೆಡ್‌ನಲ್ಲಿ ಬೇಕಾದ ಕಡೆ ಸುಲಭವಾಗಿ ಹೋಗಿಬರಲು ರ‍್ಯಾಂಪ್‌ಗಳನ್ನು ಅಳವಡಿಸಿದರೆ ಪುಣ್ಯ ಬರುತ್ತದೆ. ಚಿಕ್ಕಬಳ್ಳಾಪುರ ಬಸ್ ನಿಲ್ದಾಣ ದಲ್ಲಿ ಉತ್ತಮ ರೀತಿಯಲ್ಲಿ ಶೌಚಾಲಯ, ವಿಶೇಷ ಚೇತನರು ಸಂಚರಿಸಲು ಅನುಕೂಲ ಆಗುವಂತೆ ಇಳಿಜಾರಿನ ಹಾದಿಯನ್ನು ನಿರ್ಮಿಸಿದ್ದಾರೆ.ಇದಕ್ಕಾಗಿ ಅಧಿಕಾರಿಗಳಿಗೆ , ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದರು.

ಕೆಎಸ್‌ಆರ್‌ಟಿಸಿ ನೌಕರರಾದ ಎನ್. ಶ್ರೀನಿವಾಸ್,ಪ್ರಕಾಶ್, ಕೊಂಡಪ್ಪ, ನಾರಾಯಣಸ್ವಾಮಿ, ಇನ್ನಿತರು ಸೇರಿ ನಮ್ಮ ಸಮುದಾಯ ಹಾಗೂ ನಿರ್ಗತಿಕರನ್ನು ಗುರ್ತಿಸಿ ಪ್ರತಿ ವರ್ಷ ೨೦೦/೩೦೦ ಮಂದಿಗೆ ಕಂಬಳಿ ವಿತರಿಸುವ ಕೆಲಸ ಮಾಡುತ್ತಿದೆ.ಇವರ ಈ ಸಹಾಯ ಕ್ಕಾಗಿ ವಿಶೇಷ ಚೇತನರ ಪರವಾಗಿ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ಸುರೇಶ್, ಡಿಟಿಒ ಮಂಜುನಾಥ್, ಡಿ,ಆರ್ ಅಸಿಸ್‌ಟೆಂಟೆ ಸಬ್ ಇನ್ಸ್ಪೆಕ್ಟರ್ ಮುರಳಿ,ಅಂಕಿ ಸಂಖ್ಯೆ ಅಧಿಕಾರಿ ಶ್ರೀಧರ್, ಸೈಯದ್ ಸುಹೈಲ್, ಮತ್ತಿತರರು ಇದ್ದರು.

Read E-Paper click here

error: Content is protected !!