Saturday, 18th May 2024

ಶೇಷಾದ್ರಿಪುರಂ ಕಾಲೇಜಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

ತುಮಕೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಮತ್ತು ತುಮಕೂರು ಗ್ರಾಮಾಂತರ ಪೋಲಿಸ್ ಠಾಣೆಯ ಸಂಯಕ್ತಾಶ್ರಯದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ವನ್ನು  ಆಯೋಜಿಸಲಾಗಿತ್ತು.
ತುಮಕೂರು ಗ್ರಾಮಾಂತರ ಪೋಲಿಸ್ ಠಾಣೆಯ ವೃತ್ತ ನೀರೀಕ್ಷಕ ಕುಮಾರ್‌  ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ ಪ್ರಯಾಣ ಮಾಡಬೇಕಾದರೆ ಯಾವ ರೀತಿಯಾದ ಮುಂಜಾಗೃತ ಕ್ರಮಗಳನ್ನು ಪಾಲಿಸಬೇಕೆಂದು ತಿಳಿ ಹೇಳಿದರು.
ಪೋಲೀಸ್ ಇಲಾಖೆಯು ಕೂಡ ಬೇರೆಲ್ಲಾ ಇಲಾಖೆಯಂತೆಯೆ ಜನಸ್ನೇಹಿಯಾಗಿದ್ದು, ಯಾರು ಬೇಕಾದರೂ ಅವಶ್ಯಕತೆ ಇದ್ದಾಗ ಅದರ ಸದುಪಯೋಗಪಡೆದುಕೊಳ್ಳಬಹುದು ಎಂದು ಹೇಳಿ ದರು.
ಯಾವುದೇ ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ, ಕಾನೂನನ್ನು ಪಾಲಿಸದೇ ಬೇಜವಬ್ಧಾರಿ ಯಾಗಿ ವರ್ತಿಸಿದರೆ, ಅದರಿಂದಾಗುವ ಅನಾಹುತಗಳ ಬಗ್ಗೆ ಕೆಲವು ಉಧಾಹರಣೆಗಳ ಮೂಲಕ ವಿವರಿಸಿದರು. ಜೊತೆಗೆ ಮಾದಕ ವ್ಯಸನಗಳಿಂದ ದೂರ ಇರುವಂತೆಯು ಕಿವಿ ಮಾತು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ.ಜಗದೀಶ ಜಿ.ಟಿ., ಎನ್ಎಸ್ಎಸ್  ಸಂಯೋಜಕ ಪ್ರೊ. ರಾಜೇಶ ಎಸ್.ಬಿ., ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
error: Content is protected !!