Friday, 26th April 2024

ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರ

ಮಹಿಳೆ‌ ಸಬಲೀಕರದಿಂದ-ಕುಟುಂಬ ಸದೃಢ-ಸೌರ ಉದ್ಯಮಿ ನಿರ್ಮಲಾ‌ ಗಾಣಾಪುರ…

ಯಾದಗಿರಿ: ಸೆಲ್ಕೋ ಸೋಲಾರ್ ಲೈಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ನಗರದ ಎನ್.ವಿ.ಎಂ. ಹೊಟೇಲ್ ಸಭಾಂಗಣದಲ್ಲಿ ಬುಧವಾರ ಇಂಧನ ಆಧಾರಿತ ಸಾಮಾಜಿಕ ಅಭಿವೃದ್ಧಿ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸುಲೇಪೇಟ್ ಸೌರ ಉದ್ಯಮಿ ನಿರ್ಮಲಾ ಗಾಣಾಪುರ ಮಾತನಾಡಿ, ಜೀವನ ನಿರ್ವಹಣೆ ಜೊತೆಗೆ ಸಮಾಜದ ಇತರ ಮಹಿಳೆಯರ ಬಲರ್ವಧನೆಗೆ ಸೆಲ್ಕೋ ಸಹಕಾರಿಯಾಗಿದೆ. ಮಹಿಳೆಯರ ಸಬಲೀ ಕರಣ, ಏಳಿಗೆಗೆ ಸೆಲ್ಕೋ ಸಾಕಷ್ಟು ಒತ್ತು ನೀಡಿದೆ. ವಿದ್ಯುತ್ ಕಡಿತದಿಂದ‌ ಸಾಕಷ್ಟು ಸಮಸ್ಯೆ ಆಗುತ್ತಿತ್ತು. ಸೆಲ್ಕೋ ಸಹಕಾರದಿಂದ ‌ವಿದ್ಯುತ್ ದೀಪ, ರೊಟ್ಟಿ, ಜೆರಾಕ್ಸ್ ಸೇರಿದಂತೆ ಇತರೆ ಯಂತ್ರಾಂಗಗಳ‌ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗಿದೆ. ಮಹಿಳೆಯರು ಅಭಿವೃದ್ಧಿಗೆ ಸ್ವಸಹಾಯ ಸಂಘ, ಸೆಲ್ಕೋ‌ ಸಂಸ್ಥೆ ಪ್ರಮುಖ ಕಾರಣವಾಗಿದೆ ಎಂದರು.

ಕಲಿಕೆ ಟ್ರಸ್ಟ್‌ ಜಿಲ್ಲಾ ಮುಖ್ಯಸ್ಥ ಗಿರೀಶ್ ಮಾತನಾಡಿ, ಸೋಲಾರ್ ಜೀವನದ ಅವಿಭಾಜ್ಯವಾಗಿದೆ. ಇತರೆ ಇಂಧನಗಳು ಖಾಲಿ ಯಾಗುತ್ತವೆ. ಅಲ್ಲದೇ ಪ್ರಕೃತಿಗೆ ಪೂರಕವಾಗಿಲ್ಲ. ಆದರೆ ಸೋಲಾರ್ ಜಗತ್ತಿನ ಯಾವುದೇ ಭಾಗಕ್ಕೂ ಹೋದರು ಲಭ್ಯವಿದೆ. ಜೊತೆಗೆ ಸ್ವಚ್ಛ ಹಾಗೂ ಪ್ರಕೃತಿಗೆ ಪೂರಕ, ಸಹಕಾರಿಯಾಗಿದೆ. ಸೌರ ಇಂಧನ ಮೂಲಕ ಉದ್ಯೋಗ ಸೃಷ್ಠಿಗೂ ಹೆಚ್ಚು ಸಹಕಾರಿ ಯಾಗಿದೆ. ಪ್ರಸ್ತುತ ಸೋಲಾರ್ ಬಳಕೆ, ಅದರಿಂದ ದೊರೆಯುವ ಉಪಯೋಗ ಗಳ ಬಗ್ಗೆ ಸೆಲ್ಕೋ ಸೋಲಾರ್ ಲೈಟ್ ಸಂಸ್ಥೆ ಮುಂದಾಗಿರು ವುದು ಶ್ಲಾಘನೀಯ ಎಂದು ಹೇಳಿದರು.

ಬೆಂಗಳೂರಿನ ಸೆಲ್ಕೋ ಉಪ ಮಹಾ ಪ್ರಬಂಧಕ ಸುದೀಪ್ತ ಘೋಷ್ ಅಧ್ಯಕ್ಷತೆವಹಿಸಿ ಮಾತ ನಾಡಿದರು. ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಬೆಂಗಳೂರು ಸೆಲ್ಕೋ ಸಹಾಯಕ ಮಹಾ ಪ್ರಬಂಧಕ ಕರಿಸ್ವಾಮಿ ಕೆ. ನಿರೂಪಿಸಿದರು. ಕ್ಷೇತ್ರ ವ್ಯವಸ್ಥಾಪಕ ಯಲ್ಲಾಲಿಂಗ ಸ್ವಾಗತಿಸಿದರು. ಶಾಖಾ‌ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ದರು.

ಬೆಂಗಳೂರು ಸೆಲ್ಕೋ ಸಹಾಯಕ ಮಹಾ ಪ್ರಬಂಧಕ ಕರಿಸ್ವಾಮಿ ಕೆ. ನಿರೂಪಿಸಿದರು. ಕ್ಷೇತ್ರ ವ್ಯವಸ್ಥಾಪಕ ಯಲ್ಲಾಲಿಂಗ ಸ್ವಾಗತಿಸಿದರು. ಶಾಖಾ‌ ವ್ಯವಸ್ಥಾಪಕ ಗುರುರಾಜ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲ್ಯಾಣ ಕರ್ನಾಟಕ ಪತ್ರಕರ್ತರು‌ ಭಾಗವಹಿಸಿದ್ದರು.

error: Content is protected !!