Sunday, 19th May 2024

ಬಾಂಗ್ಲಾದೇಶದಲ್ಲಿ ಇಂಧನ ಬೆಲೆ ಶೇ.51.7 ರಷ್ಟು ಹೆಚ್ಚಳ

ಢಾಕಾ: ಬಾಂಗ್ಲಾದೇಶ ಸರ್ಕಾರವು ಇಂಧನ ಬೆಲೆಯನ್ನು ಶೇಕಡಾ 51.7 ರಷ್ಟು ಹೆಚ್ಚಿಸಿದೆ.

ಇದರಿಂದಾಗಿ ಬಾಂಗ್ಲಾದೇಶದಲ್ಲಿ ಹಣದುಬ್ಬರದ ಭೀತಿ ಮತ್ತಷ್ಟು ಹೆಚ್ಚಿದೆ. ಸರ್ಕಾರದ ಈ ಕ್ರಮವು ಸಬ್ಸಿಡಿ ಹೊರೆ ಕಡಿಮೆ ಮಾಡಲಿದೆ ಎಂಬ ಲೆಕ್ಕಾಚಾರ ಹಾಕಿಕೊಂಡಿದೆ.

ವಿದ್ಯುತ್, ಇಂಧನ ಮತ್ತು ಖನಿಜ ಸಂಪನ್ಮೂಲ ಸಚಿವಾಲಯದ ಅಧಿಸೂಚನೆಯ ಪ್ರಕಾರ, ಒಂದು ಲೀಟರ್ ಪೆಟ್ರೋಲ್ ಬೆಲೆ ಈಗ 130 ಟಾಕಾ (ಕರೆನ್ಸಿ) ಕ್ಕೆ ಏರಿಕೆಯಾಗಿದೆ. ಇದರಲ್ಲಿ 44 ಟಾಕಾ ಹೆಚ್ಚಳ ಕಂಡಿದೆ. ಸರಕಾರದ ನಡೆಯಿಂದ ಆಕ್ರೋಶ ಗೊಂಡ ಬಾಂಗ್ಲಾದ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ರಷ್ಯಾ ಹಾಗೂ ಉಕ್ರೇನ್ ಯುದ್ಧ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಸ್ಪಷ್ಟನೆ ನೀಡಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಸಾಮಾನ್ಯ ಸ್ಥಿತಿಗೆ ಬಂದಾಗ ದರ ಪರಿಶೀಲಿಸಲಾಗುವುದು ಎಂದು ಬಾಂಗ್ಲಾ ಸರಕಾರ ಹೇಳಿದೆ.

ಬಾಂಗ್ಲಾದೇಶದಲ್ಲಿ ಡೀಸೆಲ್ ಮತ್ತು ಸೀಮೆಎಣ್ಣೆ ಬೆಲೆ ಶೇ.42.5ರಷ್ಟು ಏರಿಕೆಯಾಗಿದೆ. ಈಗ ಡೀಸೆಲ್ ಮತ್ತು ಸೀಮೆಎಣ್ಣೆ ಪ್ರತಿ ಲೀಟರ್‌ಗೆ ಟಾಕಾ 114 ದರದಲ್ಲಿ ದೊರೆಯುತ್ತಿದೆ. ಚಿಲ್ಲರೆ ಮಟ್ಟದಲ್ಲಿ ಇತ್ತೀಚಿನ ಬೆಲೆ ಏರಿಕೆಯು ಸರ್ಕಾರಿ ವಿತರಣಾ ಕಂಪನಿ ಗಳ ಮೇಲಿನ ಸಬ್ಸಿಡಿ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರುತ್ತಿರುವ ಇಂಧನ ಮತ್ತು ಆಹಾರದ ಬೆಲೆಗಳು ಅದರ ಆಮದು ಬಿಲ್ ಅನ್ನು ಹೆಚ್ಚಿಸಿವೆ, ಇದು ಅಂತರರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಜಾಗತಿಕ ಸಾಲ ನೀಡುವ ಸಂಸ್ಥೆಗಳಿಂದ ಸಾಲ ಪಡೆಯುವಂತೆ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸಿದೆ.

error: Content is protected !!