Sunday, 19th May 2024

ಗೌರವ, ಪ್ರೀತಿ ಹೆಚ್ಚಿಸುವ ತನಕ ಕಡೆಗಣನೆ ನಿರಂತರ

ವಿಶ್ವವಾಣಿ ಸಂದರ್ಶನ: ಅಪರ್ಣಾ ಎ.ಎಸ್

ಕನ್ನಡದ ಬಗ್ಗೆ ಪ್ರೀತಿ, ಗೌರವ ಮೂಡಿಸಿಕೊಳ್ಳುವ ತನಕ ಭಾಷೆಯ ಕಡೆಗಣನೆಯ ಕೂಗು ನಿರಂತರವಾಗಿರುತ್ತದೆ. ಆದರೆ ಕನ್ನಡ ವನ್ನು ಅನ್ನದ ಭಾಷೆ ಮಾಡಲು ನಮ್ಮ ನಾಯಕರಿಗೆ ಇರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಹೊರ ರಾಜ್ಯ ದಿಂದ ಬಂದ ಅಧಿಕಾರಿಗಳು, ಕನ್ನಡವನ್ನು ಒಪ್ಪಿಕೊಳ್ಳುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಾಗಾಭರಣ ರಾಜ್ಯೋತ್ಸವದ ಪ್ರಯುಕ್ತ ‘ವಿಶ್ವವಾಣಿ’ಗೆ ನೀಡಿರುವ ಸಂದರ್ಶನ.

ಕನ್ನಡದ ಕಡೆಗಣನೆಯಾಗುತ್ತಿದೆ ಎನಿಸುವುದೇ?
ಕನ್ನಡದ ಕಡೆಗಣನೆ ಎಲ್ಲಿ? ಹೇಗೆ ಆಗುತ್ತಿದೆ ಎನ್ನುವುದು ಮೊದಲು ನೋಡಬೇಕು. ಒಟ್ಟಾರೆ ಕರ್ನಾಟಕದಲ್ಲಿ ಆಗುತ್ತಿದೆಯೇ? ಶಿಕ್ಷಣದಲ್ಲಿಯೇ, ಉದ್ಯೋಗದಲ್ಲಿಯೇ ಅಥವಾ ನಾಯಕರ ಇಚ್ಛಾಶಕ್ತಿಯಲ್ಲಿಯೇ ಎನ್ನುವುದನ್ನು ಅರಿಯಬೇಕು. ಎಲ್ಲಿಯವರೆಗೆ ನಮ್ಮನ್ನು ಆಳುವ ಅಧಿಕಾರಿ ವರ್ಗ ಕನ್ನಡದ ಬಗ್ಗೆ ಪ್ರೀತಿ ಗೌರವವನ್ನು ಹೊಂದುವು ದಿಲ್ಲವೋ, ನಮ್ಮ ಶಿಕ್ಷಣದಲ್ಲಿ ಕನ್ನಡ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ದವರೆಗೆ ತನ್ನ ಸ್ಥಾನವನ್ನು ಭದ್ರ ಮಾಡಿಕೊಳ್ಳುವುದಿಲ್ಲವೋ ಎಲ್ಲಿಯವರೆಗೆ ಉದ್ಯೋಗದಲ್ಲಿ ಕನ್ನಡಿಗರಿಗೆ ಮೇರು ಸ್ಥಾನ ದಕ್ಕುವ ಹಾಗಾಗುವುದಿಲ್ಲವೋ ಅಲ್ಲಿಯವರೆಗೆ ಅದು ಇದ್ದೇ ಇರುತ್ತದೆ. ಅಂದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿಯೇ ಬರೆಯುವ ಹಾಗಾಗುವುದಿಲ್ಲವೋ ಸಾಂಸ್ಕೃತಿಕವಾಗಿ ಸಂಪೂರ್ಣ ಕರ್ನಾಟಕವನ್ನು ಕನ್ನಡಮ ಯವಾಗಿ ಸುವ ಸಂಸ್ಕೃತಿಯ ಹರಿಕಾರರ ಬಗ್ಗೆ ಗೌರವ ಪ್ರೀತಿ ನಂಬಿಕೆ ಇರುವುದಿಲ್ಲವೋ ಅಲ್ಲಿಯವರೆಗೆ ಕನ್ನಡದ ಕಡೆಗಣನೆ ನಿರಂತರವಾಗಿರುತ್ತದೆ.

ಹೊರರಾಜ್ಯದ ಅಧಿಕಾರಿಗಳು ಕನ್ನಡವನ್ನುಕಲಿಯುತ್ತಿಲ್ಲ ಏಕೆ ?
ನಿಜವಾಗಿ ಹೇಳಬೇಕೆಂದರೆ ಇತ್ತೀಚೆಗೆ ನಾನು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸುವ ಪತ್ರಗಳನ್ನು ಗಮನಿಸಿದರೆ, ಮೊದಲನೇ ವರ್ಷದಲ್ಲಿ 80 ಜನ ಎರಡನೇ ವರ್ಷದಲ್ಲಿ ೧೦೦ ಜನ ಅದಾದ ಮೇಲೆ ೧೩೦ರ ಸುಮಾರು ಜನರಿಗೆ ಶಿಸ್ತುಕ್ರಮ ಕ್ಕಾಗಿ ಆಗ್ರಹಿಸಿ ದ್ದೇನೆ. ಆದರೆ ಯಾರಿಗೂ ಯಾವ ಶಿಸ್ತುಕ್ರಮ ಆಗಿಲ್ಲ.

ಅಂದರೆ ಕನ್ನಡವನ್ನು ಯಾವ ಅಧಿಕಾರಿಗಳು ತಮ್ಮದಾಗಿಸಿಕೊಂಡು ಕೆಲಸ ಮಾಡುತ್ತಿಲ್ಲ. ಹೊರಗಿನಿಂದ ಬಂದವರಾದುದರಿಂದ ಅವರಿಗೆ ಕನ್ನಡ ಹೊರಗಿನದೇ. ನಮ್ಮದು ಅಂತ ಅಂದುಕೊಂಡಾಗ ಅವರಿಗನಿಸುತ್ತದೆ ನಮ್ಮದಿದು ನಾವು ಮಾಡಬೇಕಲ್ಲಾ ಅಂತ ಅನ್ನಿಸದಿದ್ದಾಗ ಹೀಗಾಗುತ್ತದೆ. ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ವಿಧೇಯಕ ಬರುತ್ತಿದೆ. ಅದನ್ನು ಸರಿಯಾಗಿ ಯೋಚನೆ ಮಾಡಿದರೆ, ಪ್ರಮಾಣೀಕರಿಸಿ ಮಂಡನೆ ಮಾಡಿದರೆ ಅದನ್ನು ಸದನಗಳು ಒಪ್ಪಿದರೆ ಅದು ನಿಜವಾಗಿಯೂ ಒಂದು ಅದ್ಭುತ ಬದಲಾವ ಣೆಯನ್ನು ಪ್ರಾರಂಭ ಮಾಡುತ್ತದೆ ಎಂದು ನನಗೆ ಅನಿಸುತ್ತದೆ.

ಪ್ರಾಧಿಕಾರದಲ್ಲಿರುವಾಗ ಕನ್ನಡ ಅನುಷ್ಠಾನಕ್ಕೆ ಎದುರಾದ ಸಮಸ್ಯೆ ಏನು?
ಎಲ್ಲವೂ ಸಮಸ್ಯೆ. ಪ್ರತಿಯೊಂದು ಸಮಸ್ಯೆ. ಕೇವಲ ಒಂದು ಸಮಸ್ಯೆ ಎಂದು ಹೇಳಲು ಆಗುವುದಿಲ್ಲ. ಇವತ್ತಿಗೂ ಸಮ ಸ್ಯೆಗಳೆಲ್ಲಾ ಜೀವಂತವಾಗಿದೆ. ಯಾವುದಕ್ಕೂ ಪರಿ ಹಾರ ದೊರೆತಿಲ್ಲ. ಯಾವ ಸಮಸ್ಯೆಗೂ ಶಾಶ್ವತವಾದ ಪರಿಹಾರವನ್ನು ಈ ೬೭ ವರ್ಷ ದಲ್ಲಿ ಕನ್ನಡಿಗರು ಪಡೆ ದಿಲ್ಲ. ಯಾವುದೇ ಒಂದು ಪ್ರಾದೇಶಿಕ ಭಾಷೆ ಒಟ್ಟಾರೆ ಯಾಗಿ ೮ನೇ ಪರಿಚ್ಛೇದದಲ್ಲಿರುವ ೨೭ ಭಾಷೆಗಳು ಒಟ್ಟಾರೆಯಾಗಿ ಶಾಶ್ವತ ಪರಿಹಾರಗಳನ್ನು ಪಡೆದಿಲ್ಲ.

ಕನ್ನಡದ ಅಭಿವೃದ್ಧಿಗೆ ಸರಕಾರಗಳೇನು ಮಾಡಬಹುದು?
ರಾಜ್ಯ ಸರಕಾರ ಏನು ಮಾಡಬೇಕು ಎಂಬುದು ಸ್ಪಷ್ಟವಾಗಿದೆ. ಅವರು ನುಡಿದಂತೆ ನಡೆಯಬೇಕು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಅಂತೀರ, ಆದರೆ ಸಾರ್ವಭೌಮ ವಾದರೂ ಕಡ್ಡಾಯ ಮಾಡಲು ಹೋಗಿ ಕೋರ್ಟ್‌ನಲ್ಲಿ ವಾಪಾಸು ತೆಗೆದು ಕೊಳ್ಳುತ್ತೀರಾ? ಕೋರ್ಟ್‌ನಲ್ಲಿ ಫೈಟ್ ಮಾಡಿ ಕಡ್ಡಾಯ ಮಾಡಬೇಕಲ್ಲಾ? ಮತ್ತೆ ಯಾಕೆ ವಾಪಾಸು ತೆಗೆದುಕೊಳ್ಳುತ್ತೀರಾ? ಹಾಗೇ ಕೇಂದ್ರ ಸರಕಾರಮಾತೃಭಾಷೆಯಲ್ಲಿ ಶಿಕ್ಷಣ ಎನ್ನುತ್ತಾರೆ. ಹಾಗೆಂದರೆ ಏನು? ಸ್ಪಷ್ಟವಾಗಿ ಹೇಳಬೇಕು ಅಡ್ಡಗೋಡೆ ಮೇಲೆ ದೀಪ ಇಡುವುದಲ್ಲ ಸ್ಪಷ್ಟವಾಗಿ ಹೇಳಬೇಕು. ರಾಜ್ಯ ಪ್ರಾದೇಶಿಕ ಭಾಷೆ ಆಡಳಿತ ಭಾಷೆಯಲ್ಲಿ ಶಿಕ್ಷಣ ಕಲಿಯಬೇಕು ಅಂತ ಹೇಳಬೇಕು.

ಶಿಕ್ಷಣ ತಜ್ಞರು ಹಾಗೇ ಹೇಳುತ್ತಾರೆ. ಗೊಂದಲ ಸೃಷ್ಟಿಸದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಎಲ್ಲಿಯವರೆಗೆ ಪ್ರಾದೇಶಿಕ ಭಾಷೆಗಳಿಗೆ ಸೂಕ್ತ ಅವಕಾಶ ಸಿಗದೇ ಇರುವವರೆಗೂ ಅಸಮತೋಲನ ನಡೆಯುತ್ತಿ ರುತ್ತದೆ. ನಾವು ಸ್ವತಂತ್ರ ಪಡೆದು 75 ವರ್ಷ ಆಗಿದೆ ಅನ್ನುವುದನ್ನು ಅದು ಪ್ರಶ್ನೆ ಮಾಡುತ್ತಾ ಇರುತ್ತದೆ. ಯಾರಿಂದ ಸ್ವತಂತ್ರ ಪಡೆದಿ ದ್ದೇವೆ ಬ್ರಿಟೀಷರಿಂದ ಈಗ ಅನ್ಯ ಭಾಷಿಗರಿಂದ ಪಡೆಯಬೇಕು ಅಷ್ಟೇ. ಈಗ ಮಾಡಬೇಕು ಅಂತ ಅಂದುಕೊಂಡದ್ದನ್ನು ಜಾರಿಗೆ ತಂದರೆ ಕನ್ನಡದ ಉಳಿವು ಸಾಧ್ಯ.

ಕನ್ನಡದ ಯಾವ ಚಿತ್ರ ನಿಮಗಿಷ್ಟ
– ನಾಗಮಂಡಲ, ಮೈಸೂರು ಮಲ್ಲಿಗೆ, ಅಲ್ಲಮ

ಕನ್ನಡ ಎಂದ ಕೂಡಲೇ ನೆನಪಾಗುವ ಒಂದು ಗೀತೆ 
– ಹುಟ್ಟಿದರೆಕನ್ನಡ ನಾಡಲಿ ಹುಟ್ಟಬೇಕು

ಕರ್ನಾಟಕವನ್ನು ಒಂದು ವಾಕ್ಯದಲ್ಲಿ ಹೇಳುವುದಾದರೆ ಏನು ಹೇಳುವಿರಿ?
– ನನ್ನ ನಾಡು
ನಿಮ್ಮ ನೆಚ್ಚಿನ ಸ್ಥಳ ಯಾವುದು?
– ತಲಕಾಡು
ಭಾಷೆಯ ವಿಷಯದಲ್ಲಿ ಕನ್ನಡಿಗರು ನಿರಭಿಮಾನಿಗಳೇ?
– ಖಂಡಿತಾ ಇಲ್ಲ

error: Content is protected !!