Saturday, 23rd November 2024

IND vs BAN: ಭಾರತ-ಬಾಂಗ್ಲಾ ಮೊದಲ ಟಿ20 ಅನುಮಾನ; ಅ.6ರಂದು ಗ್ವಾಲಿಯರ್‌ ಬಂದ್‌!

IND vs BAN

ಗ್ವಾಲಿಯರ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯವನ್ನು ಗೆದ್ದ ಭಾರತ(IND vs BAN) ದ್ವಿತೀಯ ಟೆಸ್ಟ್‌ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯ ಸೆ.27 ರಿಂದ ಕಾನ್ಪುರದಲ್ಲಿ ಆರಂಭಗೊಳ್ಳಲಿದೆ. ಈ ಸರಣಿ ಮುಕ್ತಾಯದ ಬಳಿಕ ಇತ್ತಂಡಗಳು 3 ಪಂದ್ಯಗಳ ಟಿ20 ಸರಣಿಯನ್ನಾಡಲಿವೆ. ಮೊದಲ ಪಂದ್ಯ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಅಕ್ಟೋಬರ್‌ 6 ರಂದು ನಡೆಯಲಿದೆ. ಆದರೆ, ಈ ಪಂದ್ಯ ನಡೆಯುವುದು ಅನುಮಾನ ಎನ್ನುವಂತಿದೆ. ಕಾರಣ ಪಂದ್ಯ ನಡೆಯುವ ದಿನದಂದೇ ಹಿಂದೂ ಮಹಾಸಭಾ(Hindu Mahasabha) ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ(Gwalior Bandh) ಬಂದ್‌ಗೆ ಕರೆ ನೀಡಿದೆ.

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ. ಈ ಬಗ್ಗೆ ಮಾತನಾಡಿರುವ ಸಂಘಟನೆಯ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್‌ ಭಾರದ್ವಾಜ್‌, ಅಕ್ಟೋಬರ್‌ 6 ರಂದು ಗ್ವಾಲಿಯರ್‌ನಲ್ಲಿ ನಡೆಯಲಿರುವ ಭಾರತ-ಬಾಂಗ್ಲಾದೇಶ ಪಂದ್ಯವನ್ನು ಹಿಂದೂ ಮಹಾಸಭಾ ವಿರೋಧಿಸುತ್ತಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಇನ್ನೂ ನಡೆಯುತ್ತಲೇ ಇದೆ. ಹೀಗಾಗಿ ಹಿಂದೂ ವಿರೋಧಿ ಬಾಂಗ್ಲಾದೇಶದೊಂದಿಗೆ ಕ್ರಿಕೆಟ್‌ ಆಡುವುದು ಸರಿಯಲ್ಲ ಎಂದು ಅವರು ಹೇಳಿದ್ದಾರೆ. ಬಂದ್‌ಗೆ ಕರೆ ನೀಡಿರುವ ಕಾರಣ ಬಿಸಿಸಿಐ ಇಲ್ಲಿ ನಡೆಯ ಬೇಕಿರುವ ಪಂದ್ಯವನ್ನು ಸ್ಥಳಾಂತರಿಸುವ ಸಾಧ್ಯತೆಯೂ ಕಂಡು ಬಂದಿದೆ. ಬಾಂಗ್ಲಾದ ವಿರುದ್ಧ ಭಾರತದಲ್ಲಿ ಹೆಚ್ಚಿನ ಆಕ್ರೋಶವಿರಯವ ಕಾರಣದಿಂದಲೇ ಬಾಂಗ್ಲಾ ತಂಡಕ್ಕೆ ಬಿಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಇದನ್ನೂ ಓದಿ IND vs BAN: ದ್ವಿತೀಯ ಟೆಸ್ಟ್‌ಗೆ ಭಾರತ ತಂಡ ಪ್ರಕಟ; ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ

ಬಾಂಗ್ಲಾದೇಶ(Bangladesh Unrest)ದಲ್ಲಿ ತಲೆದೋರಿರುವ ಅರಾಜಕತೆ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಜೀವಕ್ಕೆ ಅಪಾಯವನ್ನು ತಂದೊಡ್ಡಿದೆ. ಶೇಕ್ ಹಸೀನಾ ಪ್ರಧಾನಿ ಹುದ್ದೆಯಿಂದ ನಿರ್ಗಮನದ ಬಳಿಕ ಮೊಹಮ್ಮದ್ ಯೂನಸ್ ಅಧಿಕಾರ ವಹಿಸಿಕೊಂಡರೂ ಹಿಂದೂಗಳ ಮೇಲಿನ ದಾಳಿ ಕಡಿಮೆಯಾಗಿಲ್ಲ. ದೇವಾಲಯ ಮತ್ತು ಮನೆಗೆ ಬೆಂಕಿ ಹಚ್ಚಲಾಗುತ್ತಿದೆ. ಮನೆಗಳಿಗೆ ನುಗ್ಗಿ ಮಹಿಳೆಯರನ್ನ ಅತ್ಯಾಚಾರ ಮಾಡಿದ ಘಟನೆಯೂ ನಡೆದಿದೆ.

ಪ್ರವಾಸಿ ಬಾಂಗ್ಲಾದೇಶ(IND vs BAN) ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಭಾರತ 280 ರನ್‌ಗಳ ಗೆಲುವು ಸಾಧಿಸಿ ಮೆರೆದಾಡಿತ್ತು. ಭಾರತ ತಂಡ ಈ ಗೆಲುವಿನೊಂದಿಗೆ ವಿಶೇಷ ದಾಖಲೆಯನ್ನು ನಿರ್ಮಿಸಿದೆ. 92 ವರ್ಷಗಳ ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಸೋಲುಗಳಿಗಿಂತ ಹೆಚ್ಚಿನ ಗೆಲುವುಗಳನ್ನು ಹೊಂದಿದ ಸಾಧನೆ ಮಾಡಿತ್ತು.