Wednesday, 14th April 2021

ಕಾರು ಅಪಘಾತ: ಮಾಜಿ ಸಚಿವ ಯು.ಟಿ.ಖಾದರ್ ಪ್ರಾಣಾಪಾಯದಿಂದ ಪಾರು

ದಾವಣಗೆರೆ : ದಾವಣಗೆರೆ ಜಿಲ್ಲೆಯ ಆನಗೋಡು ಗ್ರಾಮದ ಬಳಿ ಮಾಜಿ ಸಚಿವ ಯು.ಟಿ.ಖಾದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಖಾದರ್ ಅವರು ದಾವಣಗೆರೆಯಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸುತ್ತಿದ್ದ ವೇಳೆ ಕಾರು ಮುಂದೆ ಹೋಗುತ್ತಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದೆ. ಅದೃಷ್ಟ ವಶಾತ್ ಪ್ರಾಣಹಾನಿಯಾಗಿಲ್ಲ. ಕಾರು ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಬಳಿಕ ಖಾದರ್ ಅವರು ಮತ್ತೊಂದು ಕಾರಿನ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ಯಲ್ಲಿ ಅಪಘಾತ ನಡೆದಿದೆ.

ಮುಂದೆ ಓದಿ

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಸರಲ್ಲಿ ನಕಲಿ ಫೇಸ್‌ಬುಕ್‌ ಖಾತೆ

ದಾವಣಗೆರೆ: ಸರ್ಕಾರಿ ವಲಯದಲ್ಲಿ ಉನ್ನತ ಹುದ್ದೆಯಲ್ಲಿರುವವರಿಗೆ ಫೇಕ್‌ ಖಾತೆಗಳ ಕಾಟ ಬಿಟ್ಟು ಬಿಡುವಂತೆ ಕಾಣುತ್ತಿಲ್ಲ. ಒಂದು ದಿನ ಹಿಂದಷ್ಟೇ, ಚಿಕ್ಕಬಳ್ಳಾಪುರ ಡಿಸಿ ಹೆಸರಿನಲ್ಲಿ ನಕಲಿ ಫೇಸ್‌ ಬುಕ್...

ಮುಂದೆ ಓದಿ

ಕೊಟ್ಟೂರು ಹಬ್ಬದ ಪ್ರಯುಕ್ತ ಮೂರು ದಿನ ವಿಶೇಷ ರೈಲು ಸಂಚಾರ

ದಾವಣಗೆರೆ: ಕೊಟ್ಟೂರು ಹಬ್ಬದ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲನ್ನು ಮಾರ್ಚ್ 6ರಿಂದ 8ರ ತನಕ ಓಡಿಸಲಿದೆ. ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯ ಹೊಸಪೇಟೆ-ದಾವಣಗೆರೆ-ಹೊಸಪೇಟೆ ನಡುವೆ...

ಮುಂದೆ ಓದಿ

ಬಿಜೆಪಿ ತೆಕ್ಕೆಗೆ ದಾವಣಗೆರೆ ಮಹಾನಗರ ಪಾಲಿಕೆ

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಎಸ್. ಟಿ. ವೀರೇಶ್ ಮೇಯರ್ ಆಗಿ ಹಾಗೂ ಉಪ ಮೇಯರ್ ಆಗಿ...

ಮುಂದೆ ಓದಿ

ರಾ.ಹೆದ್ದಾರಿ 4: ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ ಟಿಪ್ಪರ್‌ ಲಾರಿ, ಕಾರು

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4ರ ಬೈಪಾಸ್‌ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಟಿಪ್ಪರ್ ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡೂ ವಾಹನಗಳು ಹೊತ್ತಿ ಉರಿದಿವೆ....

ಮುಂದೆ ಓದಿ

ದಾಖಲೆ ಇಲ್ಲದ ಕೋಟ್ಯಂತರ ರುಪಾಯಿ ಬೇನಾಮಿ ಹಣ ಪತ್ತೆ: ಮೂವರು ವಶಕ್ಕೆ

ದಾವಣಗೆರೆ: ದಾಖಲೆ ಇಲ್ಲದ ಸಾಗಿಸುತ್ತಿದ್ದ ಕಂತೆ ಕಂತೆ ನೋಟುಗಳ ಕೋಟ್ಯಂತರ ರುಪಾಯಿ ಬೇನಾಮಿ ಹಣ ಪತ್ತೆಯಾ ಗಿದ್ದು, ದಾವಣಗೆರೆಯ ಅಜಾದ್ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ....

ಮುಂದೆ ಓದಿ

ಕೇಂದ್ರದ ನಾಯಕರ ಮುಂದೆ ಆರೋಪ ಮಾಡಲು ಅಡ್ಡಿ ಮಾಡಿಲ್ಲ: ಯಡಿಯೂರಪ್ಪ

ದಾವಣಗೆರೆ/ ಬೆಂಗಳೂರು: ಸಚಿವ ಸ್ಥಾನ ದೊರೆಯದಿರುವ ಜನರು ಇಲ್ಲಿ ಹೇಳಿಕೆ ನೀಡುವ ಬದಲಿಗೆ ಕೇಂದ್ರದ ನಾಯಕರ ಮುಂದೆ ಹೇಳಿಕೆ ನೀಡಲಿ, ಆರೋಪ ಮಾಡಲಿ ಎಂದು ಮುಖ್ಯಮಂತ್ರಿ ಬಿ.ಎಸ್....

ಮುಂದೆ ಓದಿ

ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ.ಮಲ್ಲಪ್ಪ ಇನ್ನಿಲ್ಲ

ದಾವಣಗೆರೆ : ಹಿರಿಯ ರಾಜಕಾರಣಿ, ಮಾಜಿ ಶಾಸಕ ಕೆ.ಮಲ್ಲಪ್ಪ (92) ಸೋಮವಾರ ದಾವಣಗೆರೆ ಯಲ್ಲಿ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಮಲ್ಲಪ್ಪ, ದಾವಣಗೆರೆ ನಗರದ ಆಂಜನೇಯ...

ಮುಂದೆ ಓದಿ

ನಾಲ್ಕು ಬಾರಿ ನಡೆಸಿದ ಕೋವಿಡ್ ಟೆಸ್ಟ್ ನೆಗೆಟಿವ್: ಎಂ.ಪಿ. ರೇಣುಕಾಚಾರ್ಯ

ದಾವಣಗೆರೆ: ನಾಲ್ಕು ಬಾರಿ ಕೋವಿಡ್ ಟೆಸ್ಟ್ ಗೆ ಒಳಗಾಗಿದ್ದು, ನಾಲ್ಕು ಬಾರಿಯೂ ನೆಗೆಟಿವ್ ಬಂದಿದೆ. ಕೋವಿಡ್ ಭೀತಿಯ ನಡುವೆಯೂ ಕ್ಷೇತ್ರದಲ್ಲಿ ಸಾರ್ವಜನಿಕರ ಹಿತಕ್ಕಾಗಿ ಹಲವು ಕಾರ್ಯಗಳನ್ನು ಕೈಗೊಂಡಿದ್ದು,...

ಮುಂದೆ ಓದಿ

ಸಾಲಕಟ್ಟೆ ಅಂಚೆ ಶಾಖಾ ಕಚೇರಿ ಲೋಕಾರ್ಪಣೆ

ದಾವಣಗೆರೆ ಹರಿಹರ ತಾಲ್ಲೂಕಿನ ಸಾಲಕಟ್ಟೆ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ನೂತನವಾಗಿ ಜೂನ್ 14 ರಂದು ಸಾಲಕಟ್ಟೆ ಅಂಚೆ ಶಾಖಾ ಕಚೇರಿಯನ್ನು ಲೋಕಾರ್ಪಣೆಗೊಳಿಸಲಾಯಿತು. ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಶ್ರೀದೇವಿ...

ಮುಂದೆ ಓದಿ