ತಿಪಟೂರು: ದೀಕ್ಷಾ ಹೆರಿಟೇಜ್ ಶಾಲೆಯಲ್ಲಿ ಮಕ್ಕಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಂದ್ರಯಾನ-೩ ಉಪಗ್ರಹ ಉಡಾವಣೆ ಗೊಂಡ ರಾಕೆಟ್ ಉಪಗ್ರಹವನ್ನು ಶಾಲೆಯ ತರಗತಿಗಳಲ್ಲಿ ವಿಡಿಯೋ ಕಾನ್ಪರೆನ್ಸ್ ದೃಶ್ಯಾವಳಿ ಮೂಲಕ ಮಕ್ಕಳಿಗೆ ತೋರಿಸಿಕೊಟ್ಟರು.
ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಭಾಗವಹಿಸಿ ಚಂದ್ರಯಾನ ಉಪಗ್ರಹದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ನವೀನ್‌ಯಾದವ್ ಪ್ರಾಂಶುಪಾಲರು ಶಿಕ್ಷಕರು ಸಿಬ್ಬಂದಿಯವರು ಹಾಜರಿದ್ದರು.