Saturday, 23rd November 2024

ಹೊಸ ದಾಖಲೆ ನಿರ್ಮಿಸಿದ ಸೆನ್ಸೆಕ್ಸ್, ನಿಫ್ಟಿ

ಮುಂಬೈ: ಭಾರತದ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ ಸೂಚ್ಯಂಕ ನಿಫ್ಟಿ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿ ಹೊಸ ದಾಖಲೆ ಬರೆದವು. ಸೆನ್ಸೆಕ್ಸ್ 150ಕ್ಕೂ ಹೆಚ್ಚು ಅಂಶ ಏರಿದರೆ, ನಿಫ್ಟಿ 13,300ರ ಮಟ್ಟ ದಾಟಿತು.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಗರಿಷ್ಠ 45, 245.30 ಅಂಶಕ್ಕೇರಿದ್ದು, ಬಳಿಕ 45,230.33 ಅಂಶದಲ್ಲಿ ವಹಿವಾಟು ಮುಂದು ವರಿಸಿದೆ. ಇದೇ ರೀತಿ ನಿಫ್ಟಿ 48.35 ಅಂಶ ಏರಿಕೆಯಾಗಿ 13,306.90 ಅಂಶ ತಲುಪಿ ಬಳಿಕ 13,310.85 ಅಂಶದಲ್ಲಿ ವಹಿವಾಟು ಮುಂದುವರಿಸಿದೆ. ಸೆನ್ಸೆಕ್ಸ್ ಪಟ್ಟಿಯಲ್ಲಿ ಒಎನ್​ಜಿಸಿ ಟಾಪ್​ ಗೇನರ್ ಆಗಿದ್ದು ಶೇಕಡ 2 ಏರಿಕೆ ದಾಖಲಿಸಿತ್ತು.

ಶುಕ್ರವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 446.90 ಅಂಶ ಏರಿಕೆಯೊಂದಿಗೆ 45,079.55 ಅಂಶದಲ್ಲಿ ದಿನದ ವಹಿವಾಟು ಮುಗಿಸಿತ್ತು. ನಿಫ್ಟಿ 124.65 ಅಂಶ ಏರಿಕೆಯೊಂದಿಗೆ 13,258.55 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿತ್ತು.