Sunday, 22nd September 2024

ಪಂಚ ರಾಜ್ಯಗಳಿಗೆ ವರ್ಷಧಾರೆ

ಬೆಂಗಳೂರು: ಕರ್ನಾಟಕ, ಒಡಿಶಾ, ಕೇರಳ, ತಮಿಳುನಾಡು ಹಿಮಾಚಲ ಪ್ರದೇಶದಲ್ಲಿ ವಾರಾಂತ್ಯಕ್ಕೆೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದಲ್ಲಿ ಮತ್ತೆೆ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ಹಿಮಾಚಲ ಪ್ರದೇಶದಲ್ಲಿ ಹೆಚ್ಚು ಮಳೆಯಾಗಲಿರುವ ಕಾರಣ ಐದು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರದ ಚಂಬಾ, ಮಂಡಿ, ಕುಲ್ಲು, ಶಿಮ್ಲಾಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಹಿಮಾಚಲ ಪ್ರದೇಶದಲ್ಲಿ ಕನಿಷ್ಠ ತಾಪಮಾನ 1-2 ಡಿಗ್ರಿಿ ಸೆಲ್ಸಿಿಯಸ್‌ಗೆ ಇಳಿದಿದೆ. ಕೀಲಾಂಗ್‌ನಲ್ಲಿ ಅತಿ ಕಡಿಮೆ ಉಷ್ಣಾಾಂಶ ದಾಖಲಾಗಿದೆ. ಕನಿಷ್ಠ 0.3 ಡಿಗ್ರಿಿ ಸೆಲ್ಸಿಿಯಸ್, ಗರಿಷ್ಠ 15.6 ಡಿಗ್ರಿಿ ಸೆಲ್ಸಿಿಯಸ್ ಉಷ್ಣಾಾಂಶ ದಾಖಲಾಗಿದೆ. ಪ್ರೇಕ್ಷಣೀಯ ಸ್ಥಳ ಮನಾಲಿಯಲ್ಲಿ ಕನಿಷ್ಠ 4.2 ಡಿಗ್ರಿಿ ಸೆಲ್ಸಿಿಯಸ್, ಗರಿಷ್ಠ 17.6 ಡಿಗ್ರಿಿ ಸೆಲ್ಸಿಿಯಸ್, ಶಿಮ್ಲಾಾದಲ್ಲಿ ಕನಿಷ್ಠ 10.5 ಡಿಗ್ರಿಿ ಸೆಲ್ಸಿಿಯಸ್, ಗರಿಷ್ಠ 20.6 ಡಿಗ್ರಿಿ ಉಷ್ಣಾಾಂಶ ದಾಖಲಾಗಿದೆ. ಕರ್ನಾಟಕದಲ್ಲಿ ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಮೋಡಕವಿದ ವಾತಾವರಣ ನಿರ್ಮಾಣವಾಗಿದ್ದು, ವಾರಾಂತ್ಯದಲ್ಲಿ ಮಳೆಯಾಗಲಿದೆ. ಉತ್ತರ ಕರ್ನಾಟಕ ಇತರ ಪ್ರದೇಶಗಳಲ್ಲಿ ಒಣಹವೆ ಮುಂದುವರಿದಿದೆ. ಬುಧವಾರದವರೆಗೂ ಬಿಸಿಲಿತ್ತು ಆದರೆ, ಗುರುವಾರ ಬೆಳಗ್ಗೆೆಯಿಂದಲೇ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ.