Saturday, 21st September 2024

ಅರಳು ಮರಳನ್ನು ಉರುಳಿಸಲು ಸರಳ ಸೂತ್ರಗಳು

ತಿಳಿರು ತೋರಣ

ಶ್ರೀವತ್ಸ್ ಜೋಶಿ

srivathsajoshi@gmail.com

ಅರವತ್ತಕ್ಕೆ ಅರಳು ಮರುಳು ಅನ್ನೋದು ಪ್ರಸಿದ್ಧಗಾದೆ. ಹಲವರ ಅನುಭವ ಕೂಡ. ಬೇಂದ್ರೆಯವರು ಅರವತ್ತರ ವಯಸ್ಸಿನಲ್ಲಿ ಬಿಡುಗಡೆ ಮಾಡಿದ ಕವನ
ಸಂಕಲನಕ್ಕೇ ‘ಅರಳು ಮರುಳು’ ಎಂದು ಹೆಸರಿಟ್ಟಿದ್ದರು. ಅಂದ ಮಾತ್ರಕ್ಕೇ ಬೇಂದ್ರೆಯವರಿಗೆ ಅರವತ್ತಕ್ಕೆ ಅರಳು ಮರುಳು ತಗುಲಿತ್ತು ಅಂತಲ್ಲ. ಮಾತ್ರವಲ್ಲದೆ ಅರಳು ಮರುಳು ಎಲ್ಲರಿಗೂ ಅನ್ವಯಿಸುತ್ತದೆ ಎಂದೇನಿಲ್ಲ.

ಕೆಲವರು ಅರವತ್ತಾದರೂ ಶಾರೀರಿಕವಾಗಿ, ಮಾನಸಿಕವಾಗಿ ನವತರುಣರಂತೆ ಲವಲವಿಕೆಯಿಂದ ಇರುತ್ತಾರೆ. ಅವರಲ್ಲಿ ಜೀವನೋತ್ಸಾಹ ತುಂಬಿ ತುಳುಕು ತ್ತಿರುತ್ತದೆ. ಮತ್ತೆ ಕೆಲವರಿಗೆ ಅರವತ್ತಾಗುವುದಕ್ಕೆ ಮೊದಲೇ ವೃದ್ಧಾಪ್ಯ ಆವರಿಸುವುದೂ ಇದೆ. ಅವರೊಂಥರ ಅವಧೂತರಂತೆ ಕಾಣುತ್ತಾರೆ, ಶಾರೀರಿಕವಾಗಿಯೂ ವರ್ತನೆಯಲ್ಲೂ. ಆದರೂ ಒಟ್ಟಾರೆಯಾಗಿ ವ್ಯಕ್ತಿಯ ಜೀವನದಲ್ಲಿ ಅರವತ್ತು ವಯಸ್ಸೆಂದರೆ ಒಂದು ಪ್ರಮುಖ ಹಂತ. ಬದುಕಿನ ಸಂಕ್ರಮಣ ಘಟ್ಟ. ಅದು ನಿವೃತ್ತಿಯ ವಯಸ್ಸೂ ಆಗಿರುವುದು, ಅಥವಾ ಒಂದು ಸಂವತ್ಸರ ಚಕ್ರ ಅಷ್ಟು ಹೊತ್ತಿಗೆ ಮುಗಿಯುವುದು ಅಂಥದೊಂದು ಸಾರ್ವತ್ರಿಕ ದೃಷ್ಟಿಕೋನಕ್ಕೆ ಕಾರಣವಿರಬಹುದು.
ಸರಿಯಾಗಿ ಅರವತ್ತಕ್ಕೇ ಅಂತಲ್ಲದಿದ್ದರೂ ಅರಳು ಮರುಳಿನ ಲಕ್ಷಣಗಳು ಅಷ್ಟಿಷ್ಟಾದರೂ ಕಂಡುಬರುವುದು ಸಹಜವೇ.

ಕಾರಣವೇನೆಂದರೆ ವಯಸ್ಸಾದಂತೆಲ್ಲ ನಮ್ಮ ಮೆದುಳಿನ ಕ್ರಿಯಾಶೀಲತೆ ಕ್ಷೀಣಿಸುತ್ತದೆ. ಕೆಲವರಲ್ಲಿ ಅಲ್ಪಸ್ವಲ್ಪ, ಇನ್ನುಳಿದವರಲ್ಲಿ ತುಸುಹೆಚ್ಚು. ಮತ್ತೂ ಅಧಿಕವಾದರೆ ಅದು ಡಿಮೆನ್ಷಿಯಾ ಅಂತಲೂ, ತೀರ ಗಂಭೀರ ಪರಿಸ್ಥಿತಿಯನ್ನು ತಲುಪಿದರೆ ಆಲ್‌ಝೈಮರ್ಸ್ ಅಂತಲೂ ಗುರುತಿಸಲ್ಪಡುತ್ತದೆ. ಅದಂತೂ ನರಕಸದೃಶ. ಕಾಯಿಲೆ ಬಂದವರಿಗೂ ಕಷ್ಟ, ನೋಡಿಕೊಳ್ಳ ಬೇಕಾದವರಿಗೂ ಕಠಿಣ ಸವಾಲು. ಇಷ್ಟೆಲ್ಲ ಗೊತ್ತಿದ್ದರೂ, ಅರಳುಮರುಳಿನವರನ್ನು ನಮ್ಮ ಹತ್ತಿರದ ಬಂಧು ಬಳಗದ ಪೈಕಿಯೇ ಪ್ರತ್ಯಕ್ಷ ಕಂಡಿದ್ದರೂ, ‘ಬೆಂಕಿ ಬಿದ್ದಮೇಲೆ ಬಾವಿ ತೋಡುವ’ ಜಾಯಮಾನ ನಮ್ಮೆಲ್ಲರದು.

ಆದರೆ ಡಿಮೆನ್ಷಿಯಾ, ಆಲ್‌ಝೈಮರ್ಸ್ ಮುಂತಾದ ಕಾಯಿಲೆಗಳ ವಿಷಯದಲ್ಲಿ ಹಾಗೆ ಮಾಡುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ವಿeನಿಗಳು ಮತ್ತು ವೈದ್ಯರು. ಮೂವತ್ತು ಅಥವಾ ನಲ್ವತ್ತರ ವಯಸ್ಸಿನಿಂದಲೇ ಸರಳವಾದ ಕೆಲವು ಜೀವನ ವಿಧಾನಗಳನ್ನು ಅಳವಡಿಸಿ ಕೊಂಡರೆ ಮೆದುಳಿನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಕಾಪಾಡಿಕೊಳ್ಳಬಹುದಂತೆ. ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ನ್ಯೂರೊಸೈಕಾಲಜಿಸ್ಟ್ ಆಗಿರುವ ಡಾ. ಪೌಲ್ ನಸ್‌ಬೌಮ್ ಹೇಳುವಂತೆ ಇಪ್ಪತ್ತು ಅಂಶಗಳನ್ನು ಜೀವನದಲ್ಲಿ ಆದಷ್ಟು ಬೇಗ ಅಳವಡಿಸಿ ಕೊಂಡರೆ ಅರಳುಮರುಳನ್ನಷ್ಟೇ ಅಲ್ಲ, ಡಿಮೆನ್ಷಿಯಾದಂಥ ಕಾಯಿಲೆಗಳನ್ನೂ ಸರಳವಾಗಿ ಉರುಳಿಸಿಬಿಡಬಹುದು!

ಆದಷ್ಟು ಬೇಗ ಅಂದರೆ 30-40 ವಯಸ್ಸಿನಲ್ಲಿ ಅಥವಾ ಅದಕ್ಕಿಂತಲೂ ಮೊದಲು. ಅರವತ್ತಾದ ಮೇಲೂ ಉಲ್ಲಾಸಮಯ, ಲವಲವಿಕೆಯ ಜೀವನ ನಡೆಸ ಬೇಕೆಂದಿದೆಯಾದರೆ ಅದಕ್ಕೆ ತಯಾರಿಯನ್ನು ಎಷ್ಟು ಬೇಗ ಸಾಧ್ಯವಾಗುತ್ತದೋ ಅಷ್ಟು ಬೇಗ ಶುರು ಹಚ್ಚಿಕೊಳ್ಳುವುದು ಒಳ್ಳೆಯದು ಎಂದು ಡಾ. ನಸ್‌ಬೌಮ್ ಅಭಿಪ್ರಾಯ. ಡಾ. ನಸ್‌ಬೌಮ್ ತಿಳಿಸಿರುವ ಇಪ್ಪತ್ತು ಅಂಶಗಳನ್ನು ನಾನಿಲ್ಲಿ ಪಟ್ಟಿಮಾಡುತ್ತೇನೆ. ಒಂದೊಂದು ಅಂಶವನ್ನೂ ಉದ್ಧರಣ ಚಿಹ್ನೆಯೊಳಗೆ ಬರೆದ ಬಳಿಕ ಆಯಾ ಅಂಶಗಳ ಬಗೆಗೆ ನನ್ನ ಜೀವನದಲ್ಲಿ ನಾನೇನು ಕ್ರಮ ಕೈಗೊಂಡಿದ್ದೇನೆ, ಕೈಗೊಳ್ಳಬೇಕೆಂದಿದ್ದೇನೆ, ಅಥವಾ ಪ್ರಯತ್ನಿಸಿ ವಿಫಲನಾಗಿದ್ದೇನೆ ಅಂತ ರಿಯಾ ಲಿಟಿಚೆಕ್ ರೀತಿಯಲ್ಲಿ ಪೂರಕ ಟಿಪ್ಪಣಿ ಸೇರಿಸುತ್ತೇನೆ.

ನನಗೆ ಗೊತ್ತಿದೆ ಇಪ್ಪತ್ತಕ್ಕೆ ಇಪ್ಪತ್ತೂ ಅಂಶಗಳನ್ನು ಆಗಲೇ ಪಾಲಿಸುತ್ತಿದ್ದೇನೆಂದು ಎದೆತಟ್ಟಿ ಹೇಳುವಷ್ಟಾಗಲೀ, ಪಾಲಿಸಿಯೇ ತೀರುತ್ತೇನೆಂದು ಪ್ರತಿಜ್ಞೆ  ಮಾಡುವಷ್ಟಾಗಲೀ ಆದರ್ಶ ಪುರುಷ ನಾನಲ್ಲ. ನನ್ನ ಹಾಗೆಯೇ ನೀವು ಕೂಡ ಈ ಇಪ್ಪತ್ತಂಶಗಳ ಮಟ್ಟಿಗೆ ಎಲ್ಲಿದ್ದೀರಿ, ಏನು ಮಾಡಬೇಕೆಂದಿದ್ದೀರಿ, ಮಾಡಬಲ್ಲವ ರಾಗಿದ್ದೀರಿ ಎಂದು ಗುರುತುಹಾಕಿಕೊಳ್ಳಿ. ತಜ್ಞರ ಸಲಹೆಗಳನ್ನು ಕೇಳಿಸಿಕೊಂಡಂತೆಯೂ ಆಗುತ್ತದೆ. ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿದಂತೆಯೂ ಆಗುತ್ತದೆ. ರೆಡಿನಾ?

೧. ‘ಸಂಘ ಸಂಸ್ಥೆಗಳಲ್ಲಿ ಸ್ವಯಂ ಸೇವಕರಾಗಿ ಸೇರಿಕೊಳ್ಳಿ. ಈಗಿನಿಂದಲೇ ಸ್ವಯಂ ಸೇವಕರಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಮುಂದೆ ನಿವೃತ್ತಿಯಾದಾಗ ನಿಷ್ಪ್ರಯೋಜಕ ವ್ಯಕ್ತಿ ಎಂದೆನಿಸಿಕೊಳ್ಳುವುದು ತಪ್ಪುತ್ತದೆ.’ -ಇದನ್ನು ನಾನು ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾಡಿಕೊಂಡು ಬಂದಿದ್ದೇನೆ. ಉದಾ: ಕೋವಿಡ್ ಯುಗ ಆರಂಭವಾಗುವುದಕ್ಕೆ ಮೊದಲಾದರೆ ಇಲ್ಲಿಯ ಶಿವವಿಷ್ಣು ದೇವಸ್ಥಾನದಲ್ಲಿ ತಿಂಗಳಿಗೊಂದು ಭಾನುವಾರದಂದು ಅಲ್ಲಿಯ ಕೆಫೆಟೇರಿಯಾಕ್ಕೆ ಸಂಬಂಽಸಿದ ಕೆಲಸಗಳಲ್ಲಿ- ತಿಂಡಿತಿನಿಸು ತಯಾರಿ, ಪ್ಯಾಕ್ ಮಾಡುವುದು, ಮಾರುವುದು ಎಲ್ಲವೂ-ಇಡೀ ದಿನ ವೊಲಂಟಿಯರ್ ಆಗಿ ಭಾಗವಹಿಸುತ್ತಿದ್ದೆ. ಕೋವಿಡ್ ಸಮಯದಲ್ಲಿ ದೇವಸ್ಥಾನವು ಅರ್ಚಕರಿಗೆ ಮಾತ್ರ ಪ್ರವೇಶ ಎಂದಾದ ಮೇಲೆ ಕೆಫೆಟೇರಿಯಾ ಮುಚ್ಚಿತು.

ಸ್ವಯಂ ಸೇವಕನಾಗಿ ಈಗ- ಏಪ್ರಿಲ್ ೨೦೨೧ರಿಂದ- ನಾನು ತೊಡಗಿಸಿಕೊಂಡಿರುವುದು ‘ಗೀತಾ ಪರಿವಾರ’ದ ಆನ್‌ಲೈನ್ ಭಗವದ್ಗೀತೆ ಕಲಿಕೆ ಚಟುವಟಿಕೆಗಳಲ್ಲಿ. ಪ್ರಶಿಕ್ಷಕನಾಗಿ, ಕನ್ನಡ ಅನುವಾದಕನಾಗಿ, ಪ್ರಚಾರಕನಾಗಿ. ಅದು ನನಗೊಂದು ದೈವಿಕ ಸಂತೃಪ್ತಿಯನ್ನೂ ತಂದುಕೊಡುತ್ತಿದೆ. ಮೆದುಳಿನ ಆರೋಗ್ಯಕ್ಕೂ ನೆರವಾಗುತ್ತದೆಂದು ನಂಬಿದ್ದೇನೆ.

೨. ‘ಒಂದೆರಡು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮೆದುಳನ್ನು ಚುರುಕಾಗಿಟ್ಟುಕೊಳ್ಳುವುದಕ್ಕೆ ಹವ್ಯಾಸಗಳು ತುಂಬಾ ನೆರವಾಗುತ್ತವೆ.’ – ನಾನು ಹೊಸ ದಾಗಿ ಯಾವ ಹವ್ಯಾಸಗಳನ್ನೂ ಶುರುಮಾಡಿಲ್ಲ. ಆದರೆ ಹಳೆಯ ಹವ್ಯಾಸಗಳಾದ ಬರೆವಣಿಗೆ, ಮಾಹಿತಿ- ಮನೋರಂಜನೆ ಸಂಗ್ರಹ ಮತ್ತು ಹಂಚಿಕೊಳ್ಳು ವಿಕೆ, ವಾಷಿಂಗ್ಟನ್ ಪೋಸ್ಟ್, ರೀಡರ್ಸ್ ಡೈಜೆಸ್ಟ್ ಮತ್ತು ಅಂತರ್ಜಾಲದಲ್ಲಿ ಕನ್ನಡ ಇ-ಪೇಪರ್‌ಗಳ ಓದು, ಪದಬಂಧ, ಸುಡೊಕು ತುಂಬುವುದು, ಭಾರತೀಯ ಸಂಗೀತ ಆಲಿಸುವಿಕೆ ಎಲ್ಲ ಇವೆ. ಜತೆಗೆ ‘ಸ್ವಚ್ಛ ಭಾಷೆ ಅಭಿಯಾನ’ವೂ ಇದೆ.

೩. ‘ದಿನಕ್ಕೆ ಒಂದಿಷ್ಟು ನಿಮಿಷಗಳವರೆಗಾದರೂ ಸರಿ, ನಿಮ್ಮ ಎಡಗೈಯಿಂದ (ನೀವು ಮೂಲತಃ ಎಡಚರಾದರೆ ಬಲಗೈಯಿಂದ) ಬರೆಯುವ ಅಭ್ಯಾಸ ಶುರುಹಚ್ಚಿ. ಇದರಿಂದ ನಿಮ್ಮ ಮೆದುಳಿನ ಉಳಿದರ್ಧ ಭಾಗದ ಕೋಶಗಳು ಜಾಗೃತವಾಗುವುದಕ್ಕೆ ಅನುಕೂಲವಾಗುತ್ತದೆ.’ -ಇದು ನನಗೆ ಹೊಸತು. ಇದುವರೆಗೂ ಮಾಡಿಲ್ಲ. ಅಮೆರಿಕಾಧ್ಯಕ್ಷರಿಗೆಅರವತ್ತಕ್ಕೆ ಅರಳು ಮರುಳು ಅನ್ನೋದು ಪ್ರಸಿದ್ಧಗಾದೆ.

ಹಲವರ ಅನುಭವ ಕೂಡ. ಬೇಂದ್ರೆಯವರು ಅರವತ್ತರ ವಯಸ್ಸಿನಲ್ಲಿ ಬಿಡುಗಡೆ ಮಾಡಿದ ಕವನ ಸಂಕಲನಕ್ಕೇ ‘ಅರಳು ಮರುಳು’ ಎಂದು ಹೆಸರಿಟ್ಟಿದ್ದರು. ಅಂದ
ಮಾತ್ರಕ್ಕೇ ಬೇಂದ್ರೆಯವರಿಗೆ ಅರವತ್ತಕ್ಕೆ ಅರಳು ಮರುಳು ತಗುಲಿತ್ತು ಅಂತಲ್ಲ. ಮಾತ್ರವಲ್ಲದೆ ಅರಳು ಮರುಳು ಎಲ್ಲರಿಗೂ ಅನ್ವಯಿಸುತ್ತದೆ ಎಂದೇನಿಲ್ಲ. ಕೆಲವರು ಅರವತ್ತಾದರೂ ಶಾರೀರಿಕವಾಗಿ, ಮಾನಸಿಕವಾಗಿ ನವತರುಣರಂತೆ ಲವಲವಿಕೆಯಿಂದ ಇರುತ್ತಾರೆ. ಅವರಲ್ಲಿ ಜೀವನೋತ್ಸಾಹ ತುಂಬಿ ತುಳುಕು ತ್ತಿರುತ್ತದೆ.

ಮತ್ತೆ ಕೆಲವರಿಗೆ ಅರವತ್ತಾಗುವುದಕ್ಕೆ ಮೊದಲೇ ವೃದ್ಧಾಪ್ಯ ಆವರಿಸುವುದೂ ಇದೆ. ಅವರೊಂಥರ ಅವಧೂತರಂತೆ ಕಾಣುತ್ತಾರೆ, ಶಾರೀರಿಕವಾಗಿಯೂ
ವರ್ತನೆಯಲ್ಲೂ. ಆದರೂ ಒಟ್ಟಾರೆಯಾಗಿ ವ್ಯಕ್ತಿಯ ಜೀವನದಲ್ಲಿ ಅರವತ್ತು ವಯಸ್ಸೆಂದರೆ ಒಂದು ಪ್ರಮುಖಹಂತ. ಬದುಕಿನ ಸಂಕ್ರಮಣ ಘಟ್ಟ. ಅದು ನಿವೃತ್ತಿಯ ವಯಸ್ಸೂ ಆಗಿರುವುದು, ಅಥವಾ ಒಂದು ಸಂವತ್ಸರ ಚಕ್ರ ಅಷ್ಟು ಹೊತ್ತಿಗೆ ಮುಗಿಯುವುದು ಅಂಥದೊಂದು ಸಾರ್ವತ್ರಿಕ ದೃಷ್ಟಿಕೋನಕ್ಕೆ ಕಾರಣವಿರಬಹುದು.
ಸರಿಯಾಗಿ ಅರವತ್ತಕ್ಕೇ ಅಂತಲ್ಲದಿದ್ದರೂ ಅರಳು ಮರುಳಿನ ಲಕ್ಷಣಗಳು ಅಷ್ಟಿಷ್ಟಾದರೂ ಕಂಡುಬರುವುದು ಸಹಜವೇ.

ಕಾರಣವೇನೆಂದರೆ ವಯಸ್ಸಾದಂತೆಲ್ಲ ನಮ್ಮ ಮೆದುಳಿನ ಕ್ರಿಯಾಶೀಲತೆ ಕ್ಷೀಣಿಸುತ್ತದೆ. ಕೆಲವರಲ್ಲಿ ಅಲ್ಪಸ್ವಲ್ಪ, ಇನ್ನುಳಿದವರಲ್ಲಿ ತುಸುಹೆಚ್ಚು. ಮತ್ತೂ ಅಧಿಕ ವಾದರೆ ಅದು ಡಿಮೆನ್ಷಿಯಾ ಅಂತಲೂ, ತೀರ ಗಂಭೀರ ಪರಿಸ್ಥಿತಿಯನ್ನು ತಲುಪಿದರೆ ಆಲ್‌ಝೈಮರ್ಸ್ ಅಂತಲೂ ಗುರುತಿಸಲ್ಪಡುತ್ತದೆ. ಅದಂತೂ ನರಕಸದೃಶ. ಕಾಯಿಲೆ ಬಂದವರಿಗೂ ಕಷ್ಟ, ನೋಡಿಕೊಳ್ಳ ಬೇಕಾದವರಿಗೂ ಕಠಿಣ ಸವಾಲು. ಇಷ್ಟೆಲ್ಲ ಗೊತ್ತಿದ್ದರೂ, ಅರಳುಮರುಳಿನವರನ್ನು ನಮ್ಮ ಹತ್ತಿರದ
ಬಂಧು ಬಳಗದ ಪೈಕಿಯೇ ಪ್ರತ್ಯಕ್ಷ ಕಂಡಿದ್ದರೂ, ‘ಬೆಂಕಿ ಬಿದ್ದಮೇಲೆ ಬಾವಿ ತೋಡುವ’ ಜಾಯಮಾನ ನಮ್ಮೆಲ್ಲರದು.

ಆದರೆ ಡಿಮೆನ್ಷಿಯಾ, ಆಲ್‌ಝೈಮರ್ಸ್ ಮುಂತಾದ ಕಾಯಿಲೆಗಳ ವಿಷಯದಲ್ಲಿ ಹಾಗೆ ಮಾಡುವುದು ಸರ್ವಥಾ ಸಾಧುವಲ್ಲ ಎನ್ನುತ್ತಾರೆ ವಿಜ್ಞಾನಿಗಳು ಮತ್ತು ವೈದ್ಯರು. ಮೂವತ್ತು ಅಥವಾ ನಲ್ವತ್ತರ ವಯಸ್ಸಿನಿಂದಲೇ ಸರಳವಾದ ಕೆಲವು ಜೀವನ ವಿಧಾನಗಳನ್ನು ಅಳವಡಿಸಿಕೊಂಡರೆ ಮೆದುಳಿನ ಕಾರ್ಯಕ್ಷಮತೆಯನ್ನು ಗಣನೀಯವಾಗಿ ಕಾಪಾಡಿಕೊಳ್ಳಬಹುದಂತೆ. ಅಮೆರಿಕದ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಮತ್ತು ನ್ಯೂರೊಸೈಕಾಲಜಿಸ್ಟ್ ಆಗಿರುವ ಡಾ. ಪೌಲ್ ನಸ್‌ಬೌಮ್ ಹೇಳುವಂತೆ ಇಪ್ಪತ್ತು ಅಂಶಗಳನ್ನು ಜೀವನದಲ್ಲಿ ಆದಷ್ಟು ಬೇಗ ಅಳವಡಿಸಿಕೊಂಡರೆ ಅರಳುಮರುಳನ್ನಷ್ಟೇ ಅಲ್ಲ,
ಡಿಮೆನ್ಷಿಯಾದಂಥ ಕಾಯಿಲೆಗಳನ್ನೂ ಸರಳವಾಗಿ ಉರುಳಿಸಿಬಿಡಬಹುದು!

ಆದಷ್ಟು ಬೇಗ ಅಂದರೆ 30-40 ವಯಸ್ಸಿನಲ್ಲಿ ಅಥವಾ ಅದಕ್ಕಿಂತಲೂ ಮೊದಲು. ಅರವತ್ತಾದ ಮೇಲೂ ಉಲ್ಲಾಸಮಯ, ಲವಲವಿಕೆಯ ಜೀವನ ನಡೆಸ ಬೇಕೆಂದಿದೆಯಾದರೆ ಅದಕ್ಕೆ ತಯಾರಿಯನ್ನು ಎಷ್ಟು ಬೇಗ ಸಾಧ್ಯವಾಗುತ್ತದೋ ಅಷ್ಟು ಬೇಗ ಶುರು ಹಚ್ಚಿಕೊಳ್ಳುವುದು ಒಳ್ಳೆಯದು ಎಂದು ಡಾ. ನಸ್‌ಬೌಮ್ ಅಭಿಪ್ರಾಯ. ಡಾ. ನಸ್‌ಬೌಮ್ ತಿಳಿಸಿರುವ ಇಪ್ಪತ್ತು ಅಂಶಗಳನ್ನು ನಾನಿಲ್ಲಿ ಪಟ್ಟಿಮಾಡುತ್ತೇನೆ. ಒಂದೊಂದು ಅಂಶವನ್ನೂ ಉದ್ಧರಣ ಚಿಹ್ನೆಯೊಳಗೆ ಬರೆದ ಬಳಿಕ ಆಯಾ ಅಂಶಗಳ ಬಗೆಗೆ ನನ್ನ ಜೀವನದಲ್ಲಿ ನಾನೇನು ಕ್ರಮ ಕೈಗೊಂಡಿದ್ದೇನೆ, ಕೈಗೊಳ್ಳಬೇಕೆಂದಿದ್ದೇನೆ, ಅಥವಾ ಪ್ರಯತ್ನಿಸಿ ವಿಫಲನಾಗಿದ್ದೇನೆ ಅಂತ ರಿಯಾ ಲಿಟಿಚೆಕ್ ರೀತಿಯಲ್ಲಿ ಪೂರಕ ಟಿಪ್ಪಣಿ ಸೇರಿಸುತ್ತೇನೆ.

ನನಗೆ ಗೊತ್ತಿದೆ ಇಪ್ಪತ್ತಕ್ಕೆ ಇಪ್ಪತ್ತೂ ಅಂಶಗಳನ್ನು ಆಗಲೇ ಪಾಲಿಸುತ್ತಿದ್ದೇನೆಂದು ಎದೆತಟ್ಟಿ ಹೇಳುವಷ್ಟಾಗಲೀ, ಪಾಲಿಸಿಯೇ ತೀರುತ್ತೇನೆಂದು ಪ್ರತಿಜ್ಞೆ  ಮಾಡು ವಷ್ಟಾಗಲೀ ಆದರ್ಶ ಪುರುಷ ನಾನಲ್ಲ. ನನ್ನ ಹಾಗೆಯೇ ನೀವು ಕೂಡ ಈ ಇಪ್ಪತ್ತಂಶಗಳ ಮಟ್ಟಿಗೆ ಎಲ್ಲಿದ್ದೀರಿ, ಏನು ಮಾಡಬೇಕೆಂದಿದ್ದೀರಿ, ಮಾಡಬಲ್ಲವರಾ ಗಿದ್ದೀರಿ ಎಂದು ಗುರುತುಹಾಕಿಕೊಳ್ಳಿ. ತಜ್ಞರ ಸಲಹೆಗಳನ್ನು ಕೇಳಿಸಿಕೊಂಡಂತೆಯೂ ಆಗುತ್ತದೆ. ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿದಂತೆಯೂ ಆಗುತ್ತದೆ. ರೆಡಿನಾ?

೧. ‘ಸಂಘ ಸಂಸ್ಥೆಗಳಲ್ಲಿ ಸ್ವಯಂ ಸೇವಕರಾಗಿ ಸೇರಿಕೊಳ್ಳಿ. ಈಗಿನಿಂದಲೇ ಸ್ವಯಂ ಸೇವಕರಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಮುಂದೆ ನಿವೃತ್ತಿ ಯಾದಾಗ ನಿಷ್ಪ್ರಯೋಜಕ ವ್ಯಕ್ತಿ ಎಂದೆನಿಸಿಕೊಳ್ಳುವುದು ತಪ್ಪುತ್ತದೆ.’ -ಇದನ್ನು ನಾನು ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾಡಿಕೊಂಡು ಬಂದಿದ್ದೇನೆ. ಉದಾ: ಕೋವಿಡ್ ಯುಗ ಆರಂಭವಾಗುವುದಕ್ಕೆ ಮೊದಲಾದರೆ ಇಲ್ಲಿಯ ಶಿವವಿಷ್ಣು ದೇವಸ್ಥಾನದಲ್ಲಿ ತಿಂಗಳಿಗೊಂದು ಭಾನುವಾರದಂದು ಅಲ್ಲಿಯ ಕೆಫೆಟೇರಿಯಾಕ್ಕೆ ಸಂಬಂಽಸಿದ ಕೆಲಸಗಳಲ್ಲಿ- ತಿಂಡಿ ತಿನಿಸು ತಯಾರಿ, ಪ್ಯಾಕ್ ಮಾಡುವುದು, ಮಾರುವುದು ಎಲ್ಲವೂ-ಇಡೀ ದಿನ ವೊಲಂಟಿಯರ್ ಆಗಿ ಭಾಗವಹಿಸುತ್ತಿದ್ದೆ. ಕೋವಿಡ್ ಸಮಯ ದಲ್ಲಿ ದೇವಸ್ಥಾನವು ಅರ್ಚಕರಿಗೆ ಮಾತ್ರ ಪ್ರವೇಶ ಎಂದಾದ ಮೇಲೆ ಕೆಫೆಟೇರಿಯಾ ಮುಚ್ಚಿತು.

ಸ್ವಯಂ ಸೇವಕನಾಗಿ ಈಗ- ಏಪ್ರಿಲ್ 2021ರಿಂದ- ನಾನು ತೊಡಗಿಸಿಕೊಂಡಿರುವುದು ‘ಗೀತಾ ಪರಿವಾರ’ದ ಆನ್‌ಲೈನ್ ಭಗವದ್ಗೀತೆ ಕಲಿಕೆ ಚಟುವಟಿಕೆ ಗಳಲ್ಲಿ. ಪ್ರಶಿಕ್ಷಕನಾಗಿ, ಕನ್ನಡ ಅನುವಾದಕನಾಗಿ, ಪ್ರಚಾರಕನಾಗಿ. ಅದು ನನಗೊಂದು ದೈವಿಕ ಸಂತೃಪ್ತಿಯನ್ನೂ ತಂದುಕೊಡುತ್ತಿದೆ. ಮೆದುಳಿನ ಆರೋಗ್ಯಕ್ಕೂ ನೆರವಾಗುತ್ತದೆಂದು ನಂಬಿದ್ದೇನೆ.

೨. ‘ಒಂದೆರಡು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಮೆದುಳನ್ನು ಚುರುಕಾಗಿಟ್ಟುಕೊಳ್ಳುವುದಕ್ಕೆ ಹವ್ಯಾಸಗಳು ತುಂಬಾ ನೆರವಾಗುತ್ತವೆ.’ – ನಾನು ಹೊಸ ದಾಗಿ ಯಾವ ಹವ್ಯಾಸಗಳನ್ನೂ ಶುರುಮಾಡಿಲ್ಲ. ಆದರೆ ಹಳೆಯ ಹವ್ಯಾಸಗಳಾದ ಬರೆವಣಿಗೆ, ಮಾಹಿತಿ- ಮನೋರಂಜನೆ ಸಂಗ್ರಹ ಮತ್ತು ಹಂಚಿ ಕೊಳ್ಳುವಿಕೆ, ವಾಷಿಂಗ್ಟನ್ ಪೋಸ್ಟ್, ರೀಡರ್ಸ್ ಡೈಜೆಸ್ಟ್ ಮತ್ತು ಅಂತರ್ಜಾಲದಲ್ಲಿ ಕನ್ನಡ ಇ-ಪೇಪರ್‌ಗಳ ಓದು, ಪದಬಂಧ, ಸುಡೊಕು ತುಂಬುವುದು, ಭಾರತೀಯ ಸಂಗೀತ ಆಲಿಸುವಿಕೆ ಎಲ್ಲ ಇವೆ. ಜತೆಗೆ ‘ಸ್ವಚ್ಛ ಭಾಷೆ ಅಭಿಯಾನ’ವೂ ಇದೆ.

೩. ‘ದಿನಕ್ಕೆ ಒಂದಿಷ್ಟು ನಿಮಿಷಗಳವರೆಗಾದರೂ ಸರಿ, ನಿಮ್ಮ ಎಡಗೈಯಿಂದ (ನೀವು ಮೂಲತಃ ಎಡಚರಾದರೆ ಬಲಗೈಯಿಂದ) ಬರೆಯುವ ಅಭ್ಯಾಸ ಶುರುಹಚ್ಚಿ. ಇದರಿಂದ ನಿಮ್ಮ ಮೆದುಳಿನ ಉಳಿದರ್ಧ ಭಾಗದ ಕೋಶಗಳು ಜಾಗೃತವಾಗುವುದಕ್ಕೆ ಅನುಕೂಲವಾಗುತ್ತದೆ.’ -ಇದು ನನಗೆ ಹೊಸತು. ಇದುವರೆಗೂ ಮಾಡಿಲ್ಲ. ಅಮೆರಿಕಾಧ್ಯಕ್ಷರಿಗೆ ಸಂಬಂಽಸಿದ ಒಂದು ಪ್ರತೀತಿಯಂತೆ ಜೇಮ್ಸ್ ಎ. ಗ್ಯಾರ್ ಫೀಲ್ಡ್, 1881ರಲ್ಲಿ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಆರು ತಿಂಗಳು ಮಾತ್ರ ಅಮೆರಿಕಾಧ್ಯಕ್ಷನಾಗಿದ್ದವನು, ಏಕಕಾಲಕ್ಕೆ ಎಡಗೈಯಿಂದ ಗ್ರೀಕ್ ಭಾಷೆಯಲ್ಲೂ, ಬಲಗೈಯಿಂದ ಲ್ಯಾಟಿನ್ ಭಾಷೆಯಲ್ಲೂ ಬರೆಯ ಬಲ್ಲವನಾಗಿದ್ದನಂತೆ!

ಬರೆಯುವುದಲ್ಲದಿದ್ದರೂ ಬೇರೆ ಕೆಲವು ಕೆಲಸಗಳಿಗೆ, ಉದಾ: ಹಲ್ಲುಜ್ಜುವಾಗ, ಕೈಗಳ ಪಾತ್ರವನ್ನು ಅದಲು ಬದಲು ಮಾಡಿನೋಡಬಹುದು.

೪. ‘ಸಾಧ್ಯವಿದ್ದರೆ ಯಾವುದಾದರೂ ಡ್ಯಾನ್ಸ್ ತರಗತಿಗಳಿಗೆ ಸೇರಿಕೊಳ್ಳಿ. ಡ್ಯಾನ್ಸ್‌ನಿಂದ ದೈಹಿಕ ವ್ಯಾಯಾಮವೂ ಆಗುತ್ತದೆ, ಮೆದುಳಿಗೂ ಕೆಲಸ ಸಿಗುತ್ತದೆ. ವಾರಕ್ಕೆ ಮೂರು ಅಥವಾ ನಾಲ್ಕು ಸಲ ಡ್ಯಾನ್ಸ್ ಮಾಡುವವರಿಗೆ ಡಿಮೆನ್ಷಿಯಾ ರೋಗ ತಗಲುವ ಸಾಧ್ಯತೆಯು ಉಳಿದವರಿಗಿಂತ 75 ಶೇಕಡಾದಷ್ಟು ಕಡಿಮೆ.’
-ಅಯ್ಯೋ ಡ್ಯಾನ್ಸ್ ಮತ್ತು ನಾನು!? ಬಾತ್‌ರೂಮ್ ಸಿಂಗಿಂಗ್ ಇದ್ದಂತೆ ಬಾತ್‌ರೂಮ್ ಡ್ಯಾನ್ಸ್ ಅಂತ ಇದ್ದರೆ ಅದಕ್ಕೆ ಕನ್ನಡದಲ್ಲಿ ಏನೆನ್ನಬಹುದು? ಉತ್ತರ: ಭರತನಾಟ್ಯ ಅಲ್ಲ, ಬಾಹುಬಲಿನಾಟ್ಯ! -ಇಂಥ ತರ್ಲೆಜೋಕುಗಳನ್ನು ಸಿಡಿಸಿಯೇನೇ ಹೊರತು ಡ್ಯಾನ್ಸ್ ಮಾಡುವುದು ನನ್ನಿಂದಾಗದಪ್ಪಾ.

೫. ‘ಹೂತೋಟ ಬೆಳೆಸುವುದು (ಗಾರ್ಡನಿಂಗ್) ಒಂದು ಒಳ್ಳೆಯ ಹವ್ಯಾಸ. ಇದು ದಣಿವನ್ನು ನಿವಾರಿಸಿ ಮನಸ್ಸಿಗೆ ಆಹ್ಲಾದ ನೀಡುವುದಷ್ಟೇ ಅಲ್ಲ, ಹೂಗಿಡಗಳ ಪಾತಿಗಳನ್ನು ಹೇಗೆ ವಿನ್ಯಾಸಗೊಳಿಸಬೇಕು ಅಂತೆಲ್ಲ ಮೆದುಳಿಗೂ ಕೆಲಸ ಇರುವುದರಿಂದ ತುಂಬ ಸಹಕಾರಿ. ಗಾರ್ಡನಿಂಗ್ ಅಭ್ಯಾಸವುಳ್ಳವರಿಗೆ ಡಿಮೆನ್ಷಿಯಾ ಬರುವ ಸಂಭವನೀಯತೆ ಕಡಿಮೆ.’ – ನಮ್ಮ ಮನೆಯ ಪುಟ್ಟ ಕೈತೋಟದಲ್ಲಿ ಗುಲಾಬಿ, ಸೇವಂತಿಗೆ, ತುಳಸಿ, ಕರಿಬೇವು, ದೊಡ್ಡಪತ್ರೆ ಮುಂತಾದುವನ್ನೆಲ್ಲ ಬೆಳೆಸಿದ್ದೇವೆ. ನನ್ನ ಹೆಂಡತಿಯ ಡಿಪಾಟ್ ಮೆಂಟ್ ಅದು. ಅವಳಿಗೆ ಚಿಕ್ಕಪುಟ್ಟ ನೆರವು ನೀಡುವೆನಾದರೂ ಗಾರ್ಡನಿಂಗ್ ಪುಣ್ಯ ನನ್ನ ಖಾತೆಗೆ ಬರುವಷ್ಟು ಇಲ್ಲ.

೬. ‘ದಿನಕ್ಕೆ 10000 ಹೆಜ್ಜೆಗಳಷ್ಟಾದರೂ ನಡೆಯಿರಿ. ಇದರಿಂದ ಮೆದುಳಿಗೆ ರಕ್ತಸಂಚಾರ ಚೆನ್ನಾಗಿ ಆಗುತ್ತದೆ. ಡಿಮೆನ್ಷಿಯಾ ರಿಸ್ಕ್ ಕಡಿಮೆಯಾಗುತ್ತದೆ.’ – ಹಿಂದೆಲ್ಲ ನಾನು ಇದನ್ನು ಸೀರಿಯಸ್ಸಾಗಿ ಪರಿಗಣಿಸಿರಲಿಲ್ಲ. ಆದರೆ ಕೋವಿಡ್ ಸಮಯದಲ್ಲಿ ಆರಂಭಿಸಿದ ‘ದಿನಕ್ಕೆ ಕನಿಷ್ಠ ಒಂದು ಗಂಟೆ ಅವಽಯ ನಡಿಗೆ’ ಈಗ ದೈನಂದಿನ ಅಭ್ಯಾಸವೇ ಆಗಿ ಹೋಗಿದೆ. ವಾಕಿಂಗ್ ವೇಳೆಯಲ್ಲೇ ಸಂಗೀತ ಶ್ರವಣವೋ ಅಂಕಣ ಮತ್ತಿತರ ಬರೆವಣಿಗೆಯನ್ನು ತಲೆಯೊಳಗೆ ಬಿಲ್ಡ್ ಮಾಡಿಡು ವುದೋ ಮಲ್ಟಿಟಾಸ್ಕಿಂಗ್ ಸಹ ಆಗುತ್ತದೆ!

೭. ‘ಪ್ರತಿದಿನವೂ ಸ್ವಲ್ಪ ಹೊತ್ತನ್ನು ಓದು ಮತ್ತು ಬರಹಕ್ಕೆ ಮೀಸಲಾಗಿಡಿ. ಓದುವ ಕ್ರಿಯೆಯಲ್ಲಿ ಮೆದುಳಿಗೆ ಸಂಸ್ಕರಣ ಮತ್ತು ಸಂಗ್ರಹಣೆಯ ಕೆಲಸವಾಗುವು ದರಿಂದ ಒಳ್ಳೆಯ ವ್ಯಾಯಾಮ ಸಿಗುತ್ತದೆ. ಬರೆವಣಿಗೆಯೂ ಅಷ್ಟೇ. ಯೋಚಿಸಿ ಬರೆದರೆ (ಕ್ರಿಯೇಟಿವ್ ರೈಟಿಂಗ್) ಮತ್ತೂ ಒಳ್ಳೆಯದು.’ – ನಾನು ಓದುವುದರಲ್ಲಿ ಕಡುಬಡವ. ಅಲ್ಲಿ ಇಲ್ಲಿ ವಿಷಯ ಸಂಗ್ರಹಕ್ಕೆ ರೆಫರೆನ್ಸ್ ಸರಕನ್ನು ಓದುತ್ತೇನೆಯೇ ವಿನಾ ಕಥೆ ಕಾದಂಬರಿಗಳನ್ನು ಓದುವಷ್ಟು ಅಟೆನ್ಷನ್ ಸ್ಪಾನ್ ನನಗಿಲ್ಲ. ಆ
ಕೊರತೆಯನ್ನು ಬರೆವಣಿಗೆ ನೀಗಬಲ್ಲದಾದರೆ ನಾನುಬಚಾವ್.

೮. ‘ಹೆಣಿಗೆ(ನಿಟ್ಟಿಂಗ್) ರೀತಿಯ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಅದರಲ್ಲಿ ಎರಡೂ ಕೈಗಳಿಗೆ ಕೆಲಸವಾದ್ದರಿಂದ ಮೆದುಳಿನ ಎರಡೂ ಭಾಗಗಳು ಜಾಗೃತ ವಾಗುತ್ತವೆ. ಹೆಣಿಗೆ ಅಥವಾ ಕಸೂತಿಯಿಂದಾದ ರಚನೆಗಳು ಮನಸ್ಸಿಗೆ ಸಂತೋಷವನ್ನೂ ಕೊಡುತ್ತವೆ.’ – ನಿಟ್ಟಿಂಗ್ ಮಾಡುವುದು ಹೆಚ್ಚಾಗಿ ಹೆಂಗಸರೇ.
ನಿಟ್ಟಿಂಗೇ ಆಗಬೇಕಂತಿಲ್ಲ, ಹೂಮಾಲೆ ಕಟ್ಟುವುದು, ಪೇಪರ್ ಕ್ರಾಫ್ಟ್ ತಯಾರಿ ಇತ್ಯಾದಿಯಲ್ಲೂ ಎರಡೂ ಕೈಗಳಿಗೆ ಕೆಲಸ ಇದೆಯಷ್ಟೇ?

೯. ‘ಹೊಸ ಭಾಷೆಯೊಂದನ್ನು ಕಲಿತುಕೊಳ್ಳಿ. ನಿಮ್ಮ ಭಾಷೆಗೂ ಅದಕ್ಕೂ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸುವ ಕೆಲಸ ಮೆದುಳಿಗೆ ಒಳ್ಳೆಯದಾಗಿ ಪರಿಣ ಮಿಸುತ್ತದೆ. ಸಂಜ್ಞೆಗಳ ಭಾಷೆ (ಸೈನ್ ಲ್ಯಾಂಗ್ವೇಜ್) ಕಲಿಕೆ ಮತ್ತಷ್ಟು ಒಳ್ಳೆಯದು. ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿತಷ್ಟೂ ವ್ಯಕ್ತಿಯ ಐ.ಕ್ಯೂ ಹೆಚ್ಚುತ್ತದೆಯೆಂದು ತಿಳಿದು ಬಂದಿದೆ.’ – ಈ ವಿಚಾರದಲ್ಲಿ ನಾನು ಒಳ್ಳೆಯ ಸ್ಕೋರ್ ಗಳಿಸಿಯೇನು. ಈಚಿನ ವರ್ಷಗಳಲ್ಲಿ ಹೊಸದಾಗಿ ಯಾವ ಭಾಷೆಯನ್ನೂ ಕಲಿತಿಲ್ಲವಾದರೂ ಈಗಾಗಲೇ ಗೊತ್ತಿರುವ ಸುಮಾರು ಹತ್ತು ಭಾಷೆಗಳನ್ನು ನಾನು ನನ್ನ ಮಿದುಳಿನಲ್ಲೇ ಪ್ರತಿನಿತ್ಯವೂ ‘ಉಳುಮೆ’ ಮಾಡುತ್ತಿರುತ್ತೇನೆ. ಭಾಷೆಗಳ ನಡುವಿನ ಹೋಲಿಕೆ ವ್ಯತ್ಯಾಸಗಳನ್ನು ಗುರುತಿಸಿ ವಿಶ್ಲೇಷಿಸುವುದಂತೂ ನನಗೆ ಅಚ್ಚುಮೆಚ್ಚಿನ ಅಭ್ಯಾಸ.

೧೦. ‘ಚೆಸ್, ಮೊನೊಪಾಲಿ, ಸ್ಕ್ರಾಬಲ್‌ನಂಥ ಬೋಡ್ ಗೇಮ್ಸ್ ಆಡಿ. ಇದರಿಂದ ಮೆದುಳಿಗೂ ಕೆಲಸ, ಇನ್ನೊಬ್ಬರ ಒಡನಾಟಸಿಕ್ಕಿದಂತೆಯೂ ಆಗುತ್ತದೆ.’ – ಇದರಲ್ಲಿ ನನ್ನ ಪರ್ಫಾರ್ಮೆನ್ಸು ‘ನಾಟ್ ಸ್ಯಾಟಿಸ್‌ಫಾಕ್ಟರಿ’. ಮಗ ಚಿಕ್ಕವನಿದ್ದಾಗ ಅವನೊಂದಿಗೆ ಆಡಿದ್ದಿದೆಯಾದರೂ ಸೀರಿಯಸ್ಸಾಗಿ ತೊಡಗಿಸಿಕೊಂಡದ್ದು ಕಡಿಮೆಯೇ.

೧೧. ‘ಯಾವುದಾದರೂ ಹೊಸಕೋರ್ಸ್ ಅಥವಾ ತರಬೇತಿ ಪಡೆದುಕೊಳ್ಳಿ. ಕಲಿಕೆಯಿಂದ ಮೆದುಳಿನಲ್ಲಿ ಚೋದಕಗಳ ಸ್ರಾವ ಹೆಚ್ಚುತ್ತದೆ; ಮತ್ತೆ, ಶಿಕ್ಷಣವೆಂದ ಮೇಲೆ ಜೀವನದಲ್ಲಿ ಒಂದಲ್ಲ ಒಂದು ವೇಳೆಯಲ್ಲಿ ಉಪಯೋಗಕ್ಕೂ ಬರುತ್ತದೆ.’ -ಕಂಪನಿಯ ಕೆಲಸದಲ್ಲಿ ಕೆಲವುಕೋರ್ಸುಗಳನ್ನು ಮಾಡುವುದು ಇದ್ದೇ ಇದೆ.
ಆದರೆ ಅದಷ್ಟೇ ಸಾಲದು. ಜೀವನದುದ್ದಕ್ಕೂ ಹೊಸ ತರಬೇತಿ, ಕಲಿಕೆ ಆಗುತ್ತಲೇ ಇರಬೇಕು.

೧೨. ‘ಸಂಗೀತ ಆಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಮೆಲುದನಿಯ ಶಾಸ್ತ್ರೀಯ ಸಂಗೀತ ಮತ್ತೂ ಚೆನ್ನ. ಮೆದುಳಿನ ಎರಡೂ ಭಾಗಗಳಿಗೆ ತಾಳಮೇಳ ಮೂಡಿ ಸುವುದಕ್ಕೆ ಸಂಗೀತ ಶ್ರವಣ ತುಂಬ ಒಳ್ಳೆಯದು.’ – ಇದರಲ್ಲಿ ನನಗೆ ಫುಲ್ ಮಾಕ್ . ಕರ್ನಾಟಕ ಶಾಸ್ತ್ರೀಯ ಸಂಗೀತ, ಅದರಲ್ಲೂ ಇನ್ ಟ್ರುಮೆಂಟಲ್ ಮ್ಯೂಸಿಕ್, ಅದರಲ್ಲೂ ಕೊಳಲು ಮತ್ತು ಕ್ಸೊಫೋನ್ ನನಗೆ ಅಚ್ಚುಮೆಚ್ಚು. ಶಾಸ್ತ್ರೀಯ ಸಂಗೀತದ ಅಆಇಈ ಗೊತ್ತಿಲ್ಲ ಎನ್ನುವುದು ಬೇರೆಮಾತು. ಗೊತ್ತಿರ ಬೇಕಾಗಿಲ್ಲ, ಎಷ್ಟೆಂದರೂ ‘ಶಿಶುರ್ವೇತ್ತಿ ಪಶುರ್ವೇತ್ತಿ ವೇತ್ತಿ ಗಾನರಸಂ ಫಣಿಃ’ ತಾನೆ?

೧೩. ‘ಯಾವುದಾದರೂ ಸಂಗೀತವಾದ್ಯ ನುಡಿಸುವುದನ್ನು ಕಲಿಯಿರಿ. ಬಾಲ್ಯದಲ್ಲಾದಷ್ಟು ಸುಲಭವೆನಿಸದಿದ್ದರೂ ಮೆದುಳಿನ ಜಡತ್ವ ನಿವಾರಣೆಗೆ ಒಳ್ಳೆಯ ಉಪಾಯ.’ -ತುಂಬಾ ಹಿಂದೆ ಹೈದರಾಬಾದ್‌ನಲ್ಲಿದ್ದಾಗ ಚಿಕ್ಕದೊಂದು ಕ್ಯಾಸಿಯೊ ಕೀ ಬೋರ್ಡ್ ಖರೀದಿಸಿ, ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಸ್ನೇಹಿತರೊಬ್ಬರಿಂದ ಅಷ್ಟಿಷ್ಟು ಕಲಿತಿದ್ದು, ಆಮೇಲೆ ಮರೆತಿದ್ದು ಹಳೆಯ ಅಧ್ಯಾಯ. ಈ ವಿಷಯದಲ್ಲಿ ಮೈಸೂರಿನಲ್ಲಿರುವ ನನ್ನೊಬ್ಬ ಹಿರಿಯ ಹಿತೈಷಿ ಸ್ನೇಹಿತರನ್ನು
ಮೆಚ್ಚಲೇಬೇಕು. ವಯಸ್ಸಲ್ಲಿ ಎಂಬತ್ತು ದಾಟಿರುವ ಅವರು ಕಳೆದ ವರ್ಷದಿಂದ ಕೀಬೋರ್ಡ್‌ನಲ್ಲಿ ಪಾಶ್ಚಾತ್ಯಸಂಗೀತ ನುಡಿಸುವುದನ್ನು ಕಲಿಯುತ್ತಿದ್ದಾರಂತೆ!

೧೪. ‘ಪ್ರವಾಸ ಮಾಡಿ. ಅದೇನೂ ದೂರದ ಊರಿಗೆ ಅಥವಾ ವಿದೇಶಕ್ಕೇ ಆಗಬೇಕಂತಿಲ್ಲ, ನಿಮ್ಮೂರಿನ ಆಸುಪಾಸಿನಲ್ಲೇ ಹೊಸ ಹೊಸ ಜಾಗಗಳಿಗೆ ಭೇಟಿ ಕೊಟ್ಟರೂ ಆಗುತ್ತದೆ. ಅಂತೂ ಮೆದುಳಿಗೆ ಕೆಲಸ ಇರಬೇಕು. ಲಂಡನ್‌ನ ಟ್ಯಾಕ್ಸಿ ಡ್ರೈವರ್‌ಗಳ ಮೆದುಳು ಹೆಚ್ಚು ಆರೋಗ್ಯಕರವಾಗಿರುವುದು ಒಂದು ಅಧ್ಯಯನ ದಿಂದ ತಿಳಿದು ಬಂದಿದೆ. ಬೇರೆಬೇರೆ ಜಾಗಗಳ ಮಾಹಿತಿಯನ್ನು ಸಂಗ್ರಹಿಸಿ ಉಪಯೋಗಿಸುವ ಕೆಲಸ ನಿರಂತರ ನಡೆಯುವುದರಿಂದ ಅದು ಅವರ ಮೆದುಳನ್ನು ಸುಪರ್ದಿಯಲ್ಲಿಟ್ಟಿರುತ್ತದೆ.’ – ನಾನೊಬ್ಬ ಮಹಾನ್ ಪ್ರವಾಸಿಗ ಎನ್ನಲಾರೆನಾದರೂ ಹೊಸ ಜಾಗಗಳಿಗೆ, ವಿಶೇಷವಾಗಿ ಪ್ರಕೃತಿಯ ಮಡಿಲಿಗೆ ಹೋಗಿ ಬಂದ ಅನುಭವ ಕೊಡುವ ಜಾಗಗಳಿಗೆ ಭೇಟಿಕೊಡುವುದು ನನಗೂ ಇಷ್ಟವೇ. ಆದರೂ ಮೆದುಳಿನ ಆರೋಗ್ಯಕ್ಕಾಗಿಯೇ ಟ್ಯಾಕ್ಸಿಡ್ರೈವರ್ ಆಗಬೇಕಾದ ಅನಿವಾರ್ಯ ನನಗೆ ಬರಲಿಕ್ಕಿಲ್ಲ ಎಂದುಕೊಂಡಿದ್ದೇನೆ. ಲಂಡನ್ ಅಧ್ಯಯನ ಏನೇ ಹೇಳಲಿ.

೧೫. ‘ದೈನಂದಿನ ಪ್ರಾರ್ಥನೆಗೆ ಸ್ವಲ್ಪ ಸಮಯವನ್ನಾದರೂ ಮೀಸಲಿಡಿ. ಮನಸ್ಸಿಗೆ ಶಾಂತಿ ಮತ್ತು ಸಮತೋಲನ, ತನ್ಮೂಲಕ ಆನಂದ ಮತ್ತು ಆರೋಗ್ಯ ಭಾಗ್ಯ. ಇದಕ್ಕೆ ಪ್ರಾರ್ಥನೆಯಂಥ ಸುಲಭ ಮಾರ್ಗ ಬೇರೆ ಇಲ್ಲ.’ -ಖಂಡಿತ ಹೌದು. ಪ್ರಾರ್ಥನೆ ಎಂದರೆ ಬೇಡಿಕೆ ಅಲ್ಲ. ಆತ್ಮದ ನಿವೇದನೆ. ನಮ್ಮಲ್ಲಿನ ದೈನ್ಯಭಾವ ವನ್ನು ದಿನದಿನವೂ ಒಪ್ಪಿಕೊಳ್ಳುವ ರೀತಿ. ಪ್ರಾರ್ಥನೆಯಲ್ಲಿ ಪದಗಳಿಲ್ಲದಿದ್ದರೂ ಸರಿಯೇ, ಹೃದಯ ಇರಬೇಕು. ಹೃದಯವೇ ಇಲ್ಲದೆ ಬರಿ ಪದಗಳ ಅಬ್ಬರವು ಪ್ರಾರ್ಥನೆ ಎನಿಸದು ಎಂದಿದ್ದರು ಗಾಂಧೀಜಿ. ಪ್ರಾರ್ಥನೆಯ ಅತಿದೊಡ್ಡ ಪ್ರಯೋಜನವೆಂದರೆ ಮನಸ್ಸಿನ ಏಕಾಗ್ರತೆಗೆ, ಮೆದುಳಿನ ಆರೋಗ್ಯಕ್ಕೆ ಅನುಕೂಲ ಆಗುವುದು.

೧೬. ‘ಧ್ಯಾನ (ಮೆಡಿಟೇಷನ್) ಸಹ ಅತ್ಯಗತ್ಯ. ಪ್ರಾಪಂಚಿಕ ಜಂಜಡಗಳಿಂದ ಮನಸ್ಸಿಗೆ ಕಿಂಚಿತ್ತಾದರೂ ಮುಕ್ತಿ ಸಿಗುತ್ತದೆ.’ – ನಾನು ಉಜಿರೆ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದಾಗ ಅಲ್ಲಿಗೆ ‘ಟ್ರಾನ್ಸೆಂಡೆಂಟಲ್ ಮೆಡಿಟೇಷನ್’ ಮಾಡಿಸುವ ಒಂದಿಬ್ಬರು ವಿದೇಶೀಯರು ಬಂದಿದ್ದರು. ನಮ್ಮಿಂದ ಮೆಡಿಟೇಷನ್ ಮಾಡಿಸಿದ್ದರು. ಆಮೇಲೆ ಮಾತ್ರ ನಾನೆಂದೂ ಯಾವ ಧ್ಯಾನವನ್ನೂ ಮಾಡಿಲ್ಲ.

೧೭. ‘ಯಥಾ ಯೋಗ್ಯ ಪ್ರಮಾಣದಲ್ಲಿ ನಿದ್ದೆ ಮಾಡಿ. ನಿದ್ರಾಹೀನತೆಯು ಡಿಮೆನ್ಷಿಯಾ ಸೇರಿದಂತೆ ಹಲವು ರೋಗಗಳ ಕಾರಣವೂ ಹೌದು ಲಕ್ಷಣವೂ ಹೌದು.’ – ದೇವರ ದಯೆಯಿಂದ ಯಥಾಯೋಗ್ಯ ಪ್ರಮಾಣದಲ್ಲಿ ನಿದ್ದೆ ಮಾಡುವ ಅಭ್ಯಾಸ ನನಗೆ ಬಾಲ್ಯದಿಂದ ಇದ್ದದ್ದು ಈಗಲೂಇದೆ. ವಾರಾಂತ್ಯಗಳಲ್ಲಿ ಕೂಡ ‘ಬೇಗ ಮಲಗಿ ಬೇಗಏಳುವ’ ಅಭ್ಯಾಸದ ವಿಚಿತ್ರಜೀವಿ ನಾನು!

೧೮. ‘ಬಾದಾಮಿ ಮತ್ತು ಅಕ್ರೂಟ್‌ನಂಥ ಪೌಷ್ಟಿಕ ಬೀಜಗಳ ಸೇವನೆ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಮೀನು ಮತ್ತಿತರ ಸಾಗರೋತ್ಪನ್ನಗಳ ಸೇವನೆಯೂ ಮೆದುಳನ್ನು ಗಟ್ಟಿಮುಟ್ಟಾಗಿ ಇಡುತ್ತದೆ.’ – ಬಾದಾಮಿಯಿಂದ ಈ ಬೆನಿಫಿಟ್ಟೂ ಇದೆಯೆಂದು ಗೊತ್ತಿರಲಿಲ್ಲ, ಆದರೆ ಕುರುಕಲು ತಿಂಡಿಯ ಬದಲಿಗೆ ಬಾದಾಮಿ ಪಿಸ್ಟಾಶಿಯೊ ಮುಂತಾದ ‘ನಟ್ ’ಗಳನ್ನು ತಿನ್ನುವುದೊಳ್ಳೆಯದು ಎಂಬ ಜ್ಞಾನೋದಯ ನನಗೀಗ ಆಗಿದೆ. ಮತ್ತೆ ನಾನು ತಿನ್ನುವ ಏಕೈಕ ಸಾಗರೋತ್ಪನ್ನವೆಂದರೆ ಉಪ್ಪು! ನೋಡಿದ್ದೆಲ್ಲ ತಿನ್ನಬೇಕೆನಿಸುವ ‘ಸೀ-ಫುಡ್’ಅಭ್ಯಾಸವೂ ನನಗಿಲ್ಲ.

೧೯. ‘ಹಣ್ಣು- ತರಕಾರಿಗಳನ್ನು ಯಥೇಚ್ಛ ಸೇವಿಸಿ. ಇದರಿಂದ ಮೆದುಳಿನ ಕೋಶಗಳು ಸವೆಯುವುದು ಮತ್ತು ನಾಶವಾಗುವುದು ಕಡಿಮೆಯಾಗುತ್ತದೆ.’ -ಇದನ್ನು ನನಗೇನೂ ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ಎಲ್ಲ ಬಗೆಯ ಹಣ್ಣು ಮತ್ತು ತರಕಾರಿಗಳು ನನಗೆ ಪಂಚಪ್ರಾಣ.

೨೦. ‘ದಿನದಲ್ಲಿ ಒಂದು ಹೊತ್ತಾದರೂ ಮನೆಮಂದಿಯೊಟ್ಟಿಗೆ ಅಥವಾ ಸ್ನೇಹಿತರ ಒಟ್ಟಿಗೆ ಸೇರಿ ಊಟಮಾಡಿ. ಇದರಿಂದ ನೀವು ಸಾವಕಾಶವಾಗಿ, ಪರಸ್ಪರ ಆತ್ಮೀಯ ಭಾವನೆಯಲ್ಲಿ, ಆರೋಗ್ಯಕರವಾಗಿ ಉಣ್ಣುವುದು ಸಾಧ್ಯವಾಗುತ್ತದೆ. ಮೆದುಳು ಲವಲವಿಕೆಯಿಂದ ಇರುವಂತಾಗುತ್ತದೆ.’ – ಬೇರೆ ಸಮಯದಲ್ಲಾದರೆ ಈ ಸಲಹೆ ಹೆಚ್ಚು ಅಗತ್ಯವಾಗುತ್ತಿತ್ತು.

ಕೋವಿಡ್ ಮಹಾಮಾರಿಯ ಒಂದು ಒಳ್ಳೆಯ ಅಡ್ಡ ಪರಿಣಾಮವೆಂದರೆ ಬ್ರೇಕ್‌ಫಾಸ್ಟ್, ಲಂಚ್, ಡಿನ್ನರ್ ಎಲ್ಲವೂ ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ತಿನ್ನುವಂತಾ ಗಿರುವುದು. ಡಾ. ನಸ್‌ಬೌಮ್ ಉಪದೇಶದ ಇವಿಷ್ಟೂ ಸೂತ್ರಗಳು ಸುಲಭವಾಗಿಯೇ ಇವೆ ಅಂತನಿಸುವುದಿಲ್ಲವೇ? ಇವುಗಳನ್ನು ಪಾಲಿಸಿದರೆ ಆಗುವುದಿದ್ದರೆ ಏನಾದರೂ ಒಳಿತೇ ಹೊರತು ಕೆಟ್ಟದೇನೂ ಅಲ್ಲ. ಅಂದ ಮೇಲೆ ಅಳವಡಿಸಿಕೊಳ್ಳುವುದಕ್ಕೆ ಹಿಂದೆಮುಂದೆ ನೋಡಬೇಕಾದ್ದಿಲ್ಲ. ಯಾವುವು ಇಪ್ಪತ್ತು ಸೂತ್ರಗಳು ಎನ್ನುವುದು ಈಗಾಗಲೇ ಮರೆತುಹೋಯ್ತು ಅಂತಾದರೆ ಮಾತ್ರ ಕಷ್ಟ!