Saturday, 21st September 2024

ನಡುವೆ ಎನಿತು ಅಂತರ !

#corona

ರಾವ್ – ಭಾಜಿ

ಪಿ.ಎಂ.ವಿಜಯೇಂದ್ರ ರಾವ್

journocate@gmail.com

ಈ ಶತಮಾನದ ಮಹಾ ಸಾಂಕ್ರಾಮಿಕದಿಂದಾದ ಆರ್ಥಿಕ-ಸಾಮಾಜಿಕ ಪಲ್ಲಟಗಳನ್ನು ಕಂಡಿದ್ದೇವೆ. ಕೋಟ್ಯಂತರ ಮಂದಿ ದಿವಾಳಿಯಾಗಿದ್ದಾರೆ. ಮತ್ತೆ ಮತ್ತೆ ವಿಽಸಲಾದ ಲಾಕ್‌ಡೌನ್‌ನಿಂದ, ಕಲ್ಪಿಸಿ ಕೊಳ್ಳಲಾಗದ ಏರುಪೇರುಗಳಾಗಿವೆ. ಹೊರಗೆ ಹೋಗಲೇಬೇಕಾದ ಜರೂರಿದ್ದರೂ ಹೋಗಲಿಕ್ಕಾಗದೆ, ಒತ್ತಡದಿಂದ
ಒಳಗೇ ತಳಮಳಕ್ಕೊಳಗಾದ ಸಾವಿರಾರು ಜನರ ಕತೆಗಳನ್ನು ಕಂಡಿದ್ದೇವೆ, ಕಾಣುತ್ತಿದ್ದೇವೆ; ಕೇಳಿದ್ದೇವೆ, ಕೇಳುತ್ತಿದ್ದೇವೆ.

ಸುಮಾರು ಜನರ ವರ್ತನೆ ಕೋವಿಡ್‌ಪೂರ್ವ ದಿನಗಳಲ್ಲಿದ್ದಂತಿಲ್ಲ. ಅದಕ್ಕೆ ಒಂದು ಸಣ್ಣ ಉದಾಹರಣೆ ಯುವಕರ ಪ್ಯಾಂಟ್‌ನ ಮಟ್ಟ ಕಳವಳಕಾರಿಯಾಗಿ ಕೆಳಗಿಳಿಯುತ್ತಿದೆ. ಪ್ಯಾಂಟಿನ ಜತೆ ಧರಿಸುವ ಅಂಗಿ/ಟಿ-ಶರ್ಟ್ ಕ್ರಮೇಣ ಮೇಲೇರುತ್ತಿದೆ. ತಗ್ಗಿ ಬಗ್ಗಿ ನಡೆಯುವ ಸತ್ಸಂಪ್ರದಾಯ ಕಾಣೆಯಾಗುತ್ತಿರುವುದರ ಬಗ್ಗೆ ಸಂಪ್ರದಾಯಸ್ಥರು ಆತಂಕ ವ್ಯಕ್ತಪಡಿಸುತ್ತಿರುವ ಸಂದರ್ಭದಲ್ಲಿ ಸೊಂಟದ ಕೆಳಗೆ ಪ್ಯಾಂಟ್ ಮತ್ತು ಹೊಕ್ಕಳ ಮೇಲೆ ಶರ್ಟ್ ಧರಿಸುವ ಈ ಹುಡುಗರು ಬಗ್ಗಲು ಉತ್ಸುಕರಾದಂತೆ ಕಾಣುತ್ತಾರಾದಾರೂ ಅದು ಅವರ ಹಿಂದಿನ ತಲೆಮಾರಿನ ಮಂದಿ ಬಯಸುವ ಕಾರಣಕ್ಕಲ್ಲ ಎಂಬುದು ಗಮನಾರ್ಹ.

ಕಾಲುಗಳ ವಿವಿಧ ಭಾಗಗಳ ಕಿರುಪರಿಚಯ ಮಾಡಿಕೊಡುವಂತೆ ಅಲ್ಲಲ್ಲಿ ಹರಿದ ಪ್ಯಾಂಟ್ ಧರಿಸುವ ಹವ್ಯಾಸ, ಹುಡುಗರಿಗಿಂತ ಹುಡುಗಿಯರ ಹೆಚ್ಚು, ಇದು ಮುಂಚಿನಿಂದಲೂ ಇದೆ, ಈಗ ಹೆಚ್ಚುತ್ತಿದೆ. ಲಾಕ್‌ಡೌನ್ ಕಾರಣ ದಿಂದ, ಹೊರಗೆ ಧರಿಸಲ್ಪಡುವ ಬಟ್ಟೆಗಳು ಒಂದು ವರ್ಷಕ್ಕೂ ಮೀರಿ ಬೀರುವಿನ ಕೂತದ್ದರಿಂದ ನುಸಿಹಿಡಿದು, ಪಿಸಿದುಕೊಂಡು ಮುಟ್ಟಿದರೆ ಕೈಗೇ ಕಿತ್ತುಕೊಂಡು ಬರುವಂತಾಗಿ, ಪ್ಯಾಂಟ್‌ಗಳು ಮತ್ತಷ್ಟು ಹರಿದಿರಬಹುದು.

ಆದರೆ ನನ್ನ ಗಮನ ಸದ್ಯಕ್ಕೆ ಅಲ್ಲಿಲ್ಲ, ಪ್ಯಾಂಟಿನ ಮಟ್ಟ ಕುಸಿಯುತ್ತಿರುವುದರ ಮೇಲಿದೆ. ಲಸಿಕೆ ಪಡೆದ ಭಾರತೀ ಯರ ಸಂಖ್ಯೆ ನೂರು ಕೋಟಿ ಮುಟ್ಟಿದ್ದು ಒಂದು ಮುಖ್ಯ ಮೈಲಿಗಲ್ಲು. ಲಸಿಕೆಯನ್ನು ಹಾಕಿಸಿಕೊಳ್ಳುವಾಗ ತೋಳನ್ನೊಡ್ಡುವ ಬದಲು ಹಿಂಭಾಗವನ್ನೇನಾದರೂ ಒಡ್ಡಿ ಆಗ ತೆಗೆಯಬೇಕಾದ ಬೆಲ್ಟನ್ನು ಅ ಏನಾದರೂ ಬಿಟ್ಟುಬಂದು ಲಸಿಕೆ ಪಡೆದವರ ಪ್ಯಾಂಟು ಸುರಕ್ಷಿತ ಮಟ್ಟಕ್ಕಿಂತ ಕೆಳಗುಳಿಯಿತಾ ಎಂಬ ಪ್ರಶ್ನೆ ಏಳುವುದು ಸಹಜ. ಪೃಷ್ಠದ ಮೇಲೆ ಲಸಿಕೆ ಹಾಕಿಸಿಕೊಳ್ಳಬಾರದೆಂಬ ನಿಯಮವೇನಿಲ್ಲ. ಆದರೆ, ಆ ಜಾಗದಲ್ಲಿ ಕೊಬ್ಬಿ ನಂಶ ಹೆಚ್ಚಿರುವುದರಿಂದ ಲಸಿಕೆ ಪರಿಣಾಮಕಾರಿಯಾಗಲಾರದೆಂಬ ಕಾರಣದಿಂದ ಲಸಿಕೆ ಹಾಕಿಕೊಳ್ಳು ವವರೇ ಕೇಳಿದರೂ ಲಸಿಕೆ ಹಾಕುವವರು ಒಪ್ಪುವುದಿಲ್ಲ.

ಹಾಗೆ ನೋಡಿದರೆ, ಬಾಲ ಮೂಳೆಯ ಉಚಿತ ದರ್ಶನವನ್ನು ಹಿಂಬಾಲಿಸುವವರಿಗೆ ನೀಡಲೋ ಎಂಬಂತೆ ಅದರ ಒಂದಿಂಚು ಕೆಳಗೆ ಪ್ಯಾಂಟ್ ಧರಿಸುವ ಪಾಠವೂ ಕೋವಿಡ್- ೧೯ ತಲೆದೋರುವ ಮುಂಚೆಯೇ ಕಂಡುಬರುತ್ತಿತ್ತು. ಲಸಿಕಾ ಸೂಜಿಯನ್ನು ಬಹುಶಃ ಹಿಂಭಾಗಕ್ಕೇ ಚುಚ್ಚುತ್ತಾರೆ ಎಂಬ ನಿರೀಕ್ಷೆಯನೊ ಅನ್ನುವಂತೆ ಹಿಪ್‌ಸ್ಟರ್ ಎಂದು ಕರೆಯಲಾಗುವ ಇಂತಹ ಪ್ಯಾಂಟ್‌ಗಳನ್ನು ಧರಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಂತಹ ನಿರೀಕ್ಷೆಯಲ್ಲಿ ಕೊಂಡ ಕೆಳಮಟ್ಟದ ಪ್ಯಾಂಟನ್ನು
ಧರಿಸಿ ಹವಾ ಸೇವನೆಗೆಂದು (ಲಾಕ್‌ಡೌನ್ ತೆರವಿನಿಂದಾಗಿ) ತಿಂಗಳುಗಳ ನಂತರ ಹೊರಬಂದಾಗ, ತಾಜಾ ಗಾಳಿ ಅ ಹರಿದಾಡಿ ಧರಿಸಿದವರಲ್ಲಿ ಹೊಸತನ ಮೂಡಿಸಿರುವುದನ್ನು ಅಲ್ಲಗಳೆಯಲಾಗುವುದಿಲ್ಲ.

ನವಚೈತನ್ಯವನ್ನು ತಂದುಕೊಟ್ಟ ಪ್ಯಾಂಟನ್ನು ಬಿಡಲಾರದೆ ಅದಕ್ಕೆ ಅಂಟಿಕೊಂಡಿದ್ದಾರೇನೊ ಅಂತ. ಅದೇನೇ ಇರಲಿ, ಈ ಫ್ಯಾಷನ್ ಹೆಚ್ಚು ಹೆಚ್ಚು ಜನಪ್ರಿಯ ಗೊಳ್ಳುವ ಸಾಧ್ಯತೆ ಇದೆ. ಭಾರತದ ಜನಸಂಖ್ಯೆಯ ಶೇ. ನಲವತ್ತಕ್ಕೂ ಹೆಚ್ಚು ಮಂದಿ ಫ್ಯಾಷನ್ ಗೀಳು ಹೆಚ್ಚಾಗಿರುವ ನಲವತ್ತು ವಯಸ್ಸಿನ ಕೆಳಗಿನವರು ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡೇ ಅಂತಹ ಬೆಳವಣಿಗೆಯನ್ನು ಊಹಿಸುತ್ತಿದ್ದೇನೆ. ಅಂಗಿ ಮತ್ತು ಶರಾಯಿ ಅಥವಾ ಬೇರಾವುದೇ ಮೇಲ್ವಸ ಮತ್ತು ಅಡಿಯು ಡುಪಿನ ನಡುವೆ ಅಂತರ ಹೆಚ್ಚಿದಷ್ಟೂ ದೇಹ ದ ಅಷ್ಟು ಭಾಗ ತೆರೆದಿರುತ್ತದೆ. ಅಂದರೆ, ಆ ಮಟ್ಟಿಗೆ ಅರಿವೆಯ ಉತ್ಪಾದನೆ ಕುಸಿಯುತ್ತದೆ ಏಕೆಂದರೆ ಬೇಡಿಕೆ
ಕುಗ್ಗುತ್ತದೆ. ಕೋವಿಡ್ ಹೆಮ್ಮಾರಿಯಿಂದ ನಲುಗಿದ ಅನೇಕ ಕ್ಷೇತ್ರಗಳಲ್ಲಿ ಜವಳಿ ಉದ್ಯಮವೂ ಒಂದು.

ಭಾರತೀಯ ಜವಳಿ ಉದ್ಯಮಕ್ಕೆ ಸಂಕಷ್ಟ ಒದಗಿರುವುದು ಹೊಸತೇನಲ್ಲ. ಏಷ್ಯಾ ಖಂಡದಲ್ಲಿ ವಾಣಿಜ್ಯ ಸಾರ್ವಭೌಮತ್ವ ಸ್ಥಾಪಿಸಲೋಸುಗ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಭಾರತದ ಜತೆ ನೆಂಟಸ್ತಿಕೆ ಬೆಳೆಸಿದ್ದು ೧೬೦೦ರಲ್ಲಿ. ತನ್ನ ಬುಡವನ್ನು ಭದ್ರಮಾಡಿಕೊಳ್ಳುವ ನಿಟ್ಟಿನಲ್ಲಿ, ಸುಮಾರು ೯೦ ವರ್ಷಗಳ ಅವಧಿ ಯಲ್ಲಿ ಮದರಾಸು, ಬಾಂಬೆ, ಮತ್ತು ಕೊಲ್ಕೊತಾ ಪಟ್ಟಣಗಳಿಗೆ ರೂಪಕೊಟ್ಟಿತು. ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಭಾರತದಿಂದ ರಫ್ತು ಮಾಡುತ್ತಿದ್ದ ಮುಖ್ಯ ಸರಕೆಂದರೆ ಜವಳಿ ಮತ್ತು ಕಚ್ಚಾರೇಶ್ಮೆ ಹಾಗೂ ಚೀನಾದಿಂದ ಚಹಾ.

ಮಾಲನ್ನು ಕೊಳ್ಳಲು ಕಂಪನಿ ಹಣ ಹೊಂದಿಸಿಕೊಳ್ಳುತ್ತಿದ್ದುದು ಚಿನ್ನಬೆಳ್ಳಿಯ ರಫ್ತಿನಿಂದ. ಚೀನಾದಿಂದ ಚಹಾ ಕೊಳ್ಳಲು ಬಂಗಾಳದ ಅಫೀಮು ಮತ್ತು ಅರಳೆಯ ವಹಿವಾಟನ್ನು ಅವಲಂಬಿಸಿತ್ತು. ಅದೇ ಸರಿಸುಮಾರಿನಲ್ಲಿ ಬಂಗಾಳವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಕಂಪನಿ ತನ್ನ ಶೋಷಣೆಯ ಕರಾಳ ಮುಖವನ್ನು ತೋರಿತ್ತು. ತನ್ನ ಬುಡವನ್ನು ಭದ್ರಮಾಡಿಕೊಳ್ಳುವಷ್ಟೇ ಉದ್ದಿಶ್ಯ ಹೊಂದಿದ್ದ ಬ್ರಿಟನ್ ಭಾರತದಲ್ಲಿ ಆಡದ ಆಟವಿರಲಿಲ್ಲ. ಜವಳಿ ಉದ್ಯಮದಲ್ಲಿ ಹೆಸರುವಾಸಿ ಯಾಗಿದ್ದ ಭಾರತದಲ್ಲಿ ಬ್ರಿಟನ್ನಿನಿಂದ ಆಮದಾದ ಗಿರಣಿಯ ಬಟ್ಟೆ ಮೇಲೆ ಕರದ ವಿನಾಯಿತಿ ನೀಡಲಾಯಿತು. ನೇಕಾರರು ಮೂರಾ ಬಟ್ಟೆಯಾಗಲು ಬೇರೇನು ಬೇಕು. ೧೬೦೦ರಿಂದ ೧೯೪೭ರವರೆಗೂ ಬ್ರಿಟನ್ನಿನ ತಲಾ ಆದಾಯ ಶೇ.೭೦೦ರಷ್ಟು ಏರಿಕೆ ಕಂಡಿತು.

ಭಾರತದ ತಲಾ ಆದಾಯ ಶೇ.೧೨ರಷ್ಟು ಮಾತ್ರ ಏರಿಕೆಯಾಯಿತು. ನಮ್ಮ ಹೊಟೆಲ್‌ಗಳಲ್ಲಿ ‘ಈ ಲೋಟ ರಾಘವೇಂದ್ರ ವನದಿಂದ ಕದಿಯಲಾಗಿದೆ’ ಎಂದು ಕೆತ್ತಿಸುವ ರೀತಿ ‘ಈ ವಸ್ತುವನ್ನು ಭಾರತದಿಂದ ಕದಿಯಲಾಗಿದೆ’ ಎಂದೇನಾದರೂ ಬರೆಸಿದ್ದರೆ ಬಕಿಂಗ್‌ಹ್ಯಾಮ್ ಅರಮನೆ ಯಲ್ಲಿನ ಬಹುತೇಕ ವಸ್ತುಗಳು ಆ ಬರೆಹದೊಂದಿಗೆ ಕಾಣಸಿ ಗುತ್ತಿತ್ತು. ಬ್ರಿಟಿಷರ ಆಳ್ವಿಕೆಯಲ್ಲಿ ಆ ದೇಶದಿಂದ ಇಲ್ಲಿಗೆ ಅಧಿಕಾರ ಚಲಾಯಿಸಲು ಬಂದ ಅಽಕಾರಿಗಳ ಒಟ್ಟು ಸಂಖ್ಯೆ ಭಾರತದ ಅಂದಿನ
ಜನಸಂಖ್ಯೆಯ ಶೇ.೦.೦೫. ಅವರ ಮನೆಗಳಲ್ಲೂ ಕದ್ದ ಮಾಲುಗಳು ಸಗಟಾಗೆ ಸಿಗಬಹುದು.

ಸ್ವಾತಂತ್ರ್ಯಪೂರ್ವದಲ್ಲಿ ನಮ್ಮನ್ನು ಕೊಳ್ಳೆಹೊಡೆದವರಲ್ಲಿ ಬ್ರಿಟಿಷರು ಪ್ರಮುಖರು, ಪಶ್ಚಿಮ ಯೂರೋಪಿನ ಇತರೆ ಶದವರೂ ಇzರೆ. ನಾವು ಅವರನ್ನು ಇನ್ನೂ ಅವರ ರಾಷ್ಟ್ರೀಯತೆಯಿಂದಷ್ಟೇ ಗುರುತಿಸುವಂತಹ ಸಭ್ಯರು. ಅವರು ಮಾಡಿದ ಅತ್ಯಾಚಾರಗಳನ್ನೆ ಅನುಭವಿಸಿಕೊಂಡು, ಅವರ ನಿರಂತರ ದರೋಡೆಯಿಂದ ಹೈರಾಣಾಗಿದ್ದರೂ ಇನ್ನೂ ಅವರನ್ನು ಸಹಿಸಿಕೊಂಡಿದ್ದೇವೆ. ಅವರನ್ನು ಕಿರಿಸ್ತಾನರೆಂದು ಗುರುತಿಸುವುದಿಲ್ಲ. ಥಾಮಸ್ ಕುಕ್ ಏರ್ಪಡಿಸುವ ಯೂರೋಪ್ ಪ್ರವಾಸವನ್ನು ಕೈಗೊಳ್ಳುತ್ತೇವೆ. ಅಲ್ಲಿಯ ಸುಂದರ ಪ್ರವಾಸಿತಾಣಗಳನ್ನು ನೋಡಿ ಸಂತೋಷಗೊಳ್ಳುತ್ತೇವೆ. ನಮ್ಮ ದೇಶ ಆ ದೇಶಗಳಂತೆ ಯಾವತ್ತು ಅಭಿವೃದ್ಧಿ
ಹೊಂದುವುದು ಎಂದು ದುಗುಡಗೊಳ್ಳುತ್ತೇವೆ. ನಾವೇಕೆ ಇಷ್ಟು ಹಿಂದುಳಿದಿದ್ದೇವೆ ಎಂಬ ಕೀಳರಿಮೆ ನಮ್ಮನ್ನು ಕಿತ್ತು ತಿನ್ನುತ್ತದೆ.

ಪಶ್ಚಿಮ ಯುರೋಪ್‌ನ ಕಿರಿಸ್ತಾನರು ಎಡೆ ಎಸಗಿದ ಕಪ್ಪು ಕೃತ್ಯಗಳು ಅವರ ಬಿಳೀ ಚರ್ಮದ ಹಿಂದೆ ಹುದುಗಿಹೋಗುತ್ತದೆ. ಇಂದಿಗೂ ಅವರು ನಡೆಸುತ್ತಿರುವ
ದೌರ್ಜನ್ಯ, ದುರಾಕ್ರಮಣ ನಮಗೆ ಅಭಿವೃದ್ಧಿಯ ಸಂಕೇತಗಳಾಗಿ ಕಾಣುತ್ತವೆ. ಕೀಳರಿಮೆಯನ್ನು ಮುಚ್ಚಿಕೊಳ್ಳಲು ಪ್ಯಾಂಟನ್ನು ತುಸು ಕೆಳಗಿಳಿಸುತ್ತೇವೆ. ನಾವು ಹಿಂದುಳಿದಿಲ್ಲವೆಂದು ನಮಗೆ ನಾವು ಮನವರಿಕೆ ಮಾಡಿಕೊಳ್ಳುವ ಒಂದು ಪ್ರಯತ್ನವಾಗಿ ಹಿಂಬದಿಯನ್ನು ತೆರೆದಿಡುತ್ತೇವೆ. ಅನುಕರಣೆಯ ಈ ರೋಗ ನಮಗೆ ಅಂಟಿದ್ದೂ ಇತ್ತೀಚೆಗೇನಲ್ಲ. ಇಸವಿ ೧೭೫೭ರಿಂದ ಒಂದು ನೂರು ವರ್ಷದ ಅವಧಿಯಲ್ಲಿ ಬ್ರಿಟಿಷರು ಮೊಘಲರನ್ನು ಮೂಲೆಗುಂಪು ಮಾಡಿದರು.

ತನ್ನ ಅಧೀನದ ಸಂಸ್ಥಾನಗಳನ್ನು ಹೊರತುಪಡಿಸಿ ಉಳಿದೆಡೆ ಶ್ರೀಮಂತರನ್ನು ಬಹುತೇಕ ಬಗ್ಗುಬಡಿಯಲಾಯಿತು. ಅರ್ಧಕ್ಕೂ ಹೆಚ್ಚು ಜಮೀನ್ದಾರರನ್ನು ಹತ್ತಿಕ್ಕಿ ಅವರ ಸ್ಥಾನದಲ್ಲಿ ಐರೋಪ್ಯ ಅಭಿರುಚಿಯ ಅಧಿಕಾರಶಾಹಿಯನ್ನು ನೇಮಿಸಲಾಯಿತು. ಈ ಅಧಿಕಾರಿಗಳು ವರ್ತನೆಯೆಲ್ಲವೂ ಐರೋಪ್ಯರಂತೆಯೇ. ಅವರ ಜೀವನಶೈಲಿ, ಕುಡಿಯುತ್ತಿದ್ದ ವಿಸ್ಕಿ, ಬಿಯರ್, ವೈನ್, ಎಲ್ಲವೂ ಪಾಶ್ಚಾತ್ಯರಂತೆಯೇ. ಅವರ ಪೋಷಾಕೂ ಹಾಗೆಯೇ. ಅವರ ಅಧೀನರಾಗಿ ನೇಮಕವಾದ ನವ ಮಧ್ಯಮ ವರ್ಗದ ಜನರೂ ಅವರನ್ನೇ ಅನುಕರಿಸಲಾರಂಭಿಸಿದರು. ಈ ಅಂಧಾನುಕರಣೆಯಿಂದ ಚಿನ್ನಾಭರಣ, ಜವಳಿಯೂ ಸೇರಿದಂತೆ ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಕುಸಿದು ಹೋಯಿತು. ಉತ್ಕೃಷ್ಠ ಮಟ್ಟದ ದೇಶೀ ಬಟ್ಟೆಯನ್ನು ತಿರಸ್ಕರಿಸಿ ಇಂಗ್ಲೆಂಡಿನಿಂದ ಬರಲಾರಂಭಿಸಿದ ಕಳಪೆ ಬಟ್ಟೆಗಳಿಗೆ ನಮ್ಮವರೂ ಮಾರುಹೋದರು.

ಆಧುನಿಕ ಬಟ್ಟೆ ಗಿರಣಿಗಳು ಬಾಂಬೆಯಲ್ಲಿ ಶುರುವಾದದ್ದು ೧೮೫೧ರಲ್ಲಿ. ಜಪಾನ್ ದೇಶದಲ್ಲಿ ಗಿರಣಿಗಳು ಬಂದದ್ದು ೨೦ ವರ್ಷದ ನಂತರ, ಚೀನಾದಲ್ಲಿ ೪೦ ವರ್ಷದ ನಂತರ. ನಮ್ಮಲ್ಲಿ ತಯಾರಾಗುತ್ತಿದ್ದ ದಪ್ಪ ಬಟ್ಟೆಯ ಅರ್ಧದಷ್ಟು ಚೀನಾ ಮತ್ತು ಜಪಾನ್‌ಗೆ ರಫ್ತಾಗುತ್ತಿದ್ದವು. ಆದರೆ ೧೮೯೦ರ ಹೊತ್ತಿಗೆ ಜಪಾನ್ ಭಾರತಕ್ಕೆ ತೀವ್ರ ಪೈಪೋಟಿ ನೀಡಿ ಸ್ಥಳೀಯ ಜವಳಿ ಮಾರುಕಟ್ಟೆ ಮತ್ತೊಂದು ಪೆಟ್ಟು ತಿಂದಿತು. ಚೀನಾ ದೇಶಕ್ಕೂ ದಾಪುಗಾಲಿಟ್ಟ ಜಪಾನೀಯರು ಭಾರತದ ಜವಳಿಗೆ ಚೀನಾದಲ್ಲೂ ಬೇಡಿಕೆ ಇಲ್ಲವಾಗಿಸುವಲ್ಲಿ ಸಫಲರಾದರು. ಇದು ಪುಸ್ತಕಕ್ಕಾಗುವಷ್ಟು ದೊಡ್ಡ ಕಥೆ.

ಇಸವಿ ೧೦೦೦ದಿಂದ ೧೮೨೦ರವರೆಗೂ ಪಶ್ಚಿಮ ಯೂರೋಪ್, ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್‌ಗಳ ತಲಾ ಆದಾಯ ಕಂಡ ಹೆಚ್ಚಳಿಕೆ ಕೇವಲ ೨.೮ ರಷ್ಟು. ಆದರೆ ಆ ೮೦೦ ವರ್ಷಗ ಳಲ್ಲಿ ಕಂಡ ಹೆಚ್ಚಳ ಏನೇನೂ ಅಲ್ಲವೆಂಬಂತೆ ಆ ದೇಶಗಳ ಆದಾಯ ನಂತರದ
೧೮೦ ವರ್ಷಗಳಲ್ಲಿ ೨೦ ಪಟ್ಟು ಹೆಚ್ಚಳ ಕಂಡವು. ನಾವಿನ್ನೂ ಶರಾಯಿ ಮಟ್ಟ ತಗ್ಗಿಸುವುದರಲ್ಲಿ ನಿರತರಾಗಿದ್ದೇವೆ. ಮೇಲುಡುಪು-ಕೆಳಉಡುಪುಗಳ ನಡುವೆ ಉಂಟಾದ ಅಂತರದಿಂದ ವಸದ ಮೇಲಿನ ಒಟ್ಟಾರೆ ಬೇಡಿಕೆ ಕುಗ್ಗಿತೆಂದು ಹೇಳಿದೆ. ಆ ಮಾತಿನ ಇಂಗಿತವನ್ನಷ್ಟೇ ಗಮನಿಸಿ. ವಸ್ತ್ರಗಳ ಮೇಲಿನ ಬೇಡಿಕೆ ಕುಸಿದಿದೆ. ಆದರೆ, ಪಿಪಿಟಿ ಬೇಡಿಕೆ ಹೆಚ್ಚಿದ್ದು ಅದರ ತಯಾರಿಕೆಯಲ್ಲಿ ಭಾರತದ ಸಾಧನೆ ಲಸಿಕೆಯ ತಯಾರಿಕೆ ಮತ್ತು ವಿತರಣೆಯಷ್ಟೇ ಶ್ಲಾಘನೀಯವಾಗಿದೆ. ಸ್ಮೃತಿ
ಇರಾನಿ ನಂತರವೂ ಕೇಂದ್ರ ಜವಳಿ ಇಲಾಖೆ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ.

ಅರಿವೆಯ ಕುರಿತು ಪ್ರಸ್ತಾಪಿಸುವಾಗ ಬಿಟಿ (ಬ್ಯಾಸಿಲಸ್ ತೂರಿಜೆನ್ಸಿಸ್) ಹತ್ತಿಬೆಳೆಯ ಬಗ್ಗೆಯೂ ಎರಡು ಮಾತನ್ನಾದರೂ ಆಡಬೇಕು. ವಿವಿಧ ಬೆಳೆಗಳ ಕುಲಾಂತರಿ ತಳಿಗಳ ಪೈಕಿ ಭಾರತದಲ್ಲಿ ಬಳಕೆಗೆ ಅನುಮೋದನೆ ನೀಡಿರುವುದು ಬಾರ್ಯ ಕಂಪನಿಯಿಂದ ಮಾರುಕಟ್ಟೆಗೆ ಬಿಡಲಾದ ಬಿಟಿ ಹತ್ತಿ ತಳಿ
ಯೊಂದಕ್ಕಷ್ಟೇ. ಇದರ ಸಾಧಕಬಾಧಕಗಳ ಬಗ್ಗೆ ವಿವಾದ ಬಗೆ ಹರಿಯಲಾರದ್ದು. ಆ ಕುರಿತು ಸದ್ಯದ ಸುದೀರ್ಘವಾಗಿ ಬರೆಯುತ್ತೇನೆ. ಬಿಡುವು ಮಾಡಿಕೊಂಡು ಪರಿಣತರನ್ನು ಸಂದರ್ಶಿಸಲು ಪ್ರಯತ್ನಿಸುವೆ. ಸದ್ಯದ ಆರ್ಥಿಕ ಪರಿಸ್ಥಿತಿ ವಿಷಮವಾಗಿದೆ. ಪ್ರತಿಯೊಬ್ಬ ಪ್ರಜೆಯೂ ಕಚ್ಚೆಗಟ್ಟಿ ಕಾರ್ಯ ನಿರತರಾಗಬೇಕಾದ ಅನಿವಾರ್ಯವಿದೆ. ಅಂತಹ ಸಂಕಷ್ಟದಲ್ಲಿ ಶರಾಯಿ ಕೆಳಗಿಳಿಯಲು ಬಿಡಬಾರದು.

ನನ್ನದೊಂದು ಕಿರು ಸಲಹೆ. ಪಾಪಾಸುಕಳ್ಳಿಯಿಂದ ನಾರು ತೆಗೆಯುವ ತಂತ್ರಜ್ಞಾನವಿದೆ. ಅದರಿಂದ ಯೋಗಾಭ್ಯಾಸಕ್ಕಾಗಿ ಸೂಕ್ತವಾದ ಪೋಷಾಕನ್ನು ತಯಾರಿಸಬಹುದು. ಅದನ್ನು ತಯಾರಿಸುವ ಒಬ್ಬರಿಗೆ ನಾನು ಕೆಲವು ವಸಗಳನ್ನು ವಿನ್ಯಾಸ ಮಾಡಿಕೊಟ್ಟದ್ದೂ ಉಂಟು. ಪಾಪಾಸುಕಳ್ಳಿಯಿಂದ ತಯಾರಾ
ದ ವಸ ರೇಶ್ಮೆಯಷ್ಟೇ ನಯವಾಗಿರುತ್ತೆ, ಅಷ್ಟೇ ಹೊಳಪನ್ನೂ ಹೊಂದಿರುತ್ತೆ. ಬೆಲೆ ಕಡಿಮೆ. ಅಹಿಂಸೆಯಿಂದ ಕೂಡಿದ ಈ ಬಟ್ಟೆ ಯೋಗಾ ವೇರ್ ಆಗಿ ಬಳಸಲು ಸೂಕ್ತ. ನಮ್ಮ ಮೈಸೂರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಯೋಗ ಕೇಂದ್ರವಾಗಿ ಹೆಸರು  ಮಾಡಿರುವುದರಿಂದ ಇಲ್ಲಿಯೇ ಯಾರಾದರೂ ಉದ್ಯಮಿಗಳು ಈ ಕುರಿತು ಮುತುವರ್ಜಿ ವಹಿಸಬಹುದು. ರಾಯಲ್ಟಿ ನೀಡಬೇಕಿಲ್ಲ. ಯಾರಾದರೂ ಇದನ್ನು ಕೈಗೆತ್ತಿಕೊಂಡಿದ್ದೇ ಆದಲ್ಲಿ ನೈಕ್, ಅಡಿದಾಸ್‌ಗಳಿಗೆ ಪೈಪೋಟಿ ಒಡ್ಡಬಹುದು.