Saturday, 21st September 2024

ಎನ್‌ಡಿಎಯಲ್ಲಿ ವೀರಾಂಗನೆಯರಿಗೆ ದಕ್ಕಿದ ಅವಕಾಶ

ಅಭಿಪ್ರಾಯ

ಬೈಂದೂರು ಚಂದ್ರಶೇಖರ ನಾವಡ

ಕಳೆದ ವರ್ಷ ಪರ್ಮನೆಂಟ್ ಕಮಿಷನ್ ಆದೇಶದ ಬಳಿಕ ಮಹಿಳೆಯರಿಗೆ ಸೇನೆಯ ಸಪೋರ್ಟಿಂಗ್ ಸರ್ವೀಸಸ್‌ಗಳಲ್ಲಿನ ಕಮಾಂಡಿಗ್ ಹುದ್ದೆಗಳನ್ನು ನಿಭಾಯಿ ಸುವ ಅವಕಾಶ ದೊರಕಿತ್ತು.

ಇದುವರೆಗೆ ಪುರುಷರಿಗಷ್ಟೇ ಸೀಮಿತವಾಗಿದ್ದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶದಲ್ಲಿಯೂ ಮಹಿಳೆಯರಿಗೂ ಅವಕಾಶ ಇರಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದರಿಂದಾಗಿ ಸಕ್ರಿಯ ಬಟಾಲಿ ಯನ್‌ಗಳ ಕಮಾಂಡ್ ಮಾಡುವ ಅವಕಾಶವೂ ಮಹಿಳೆಯರಿಗೆ ಸಿಕ್ಕಂತಾಗಿದೆ. ಎನ್‌ಡಿಎ ಮೂಲಕ ಮತ್ತು ಸಿಡಿಎಸ್ (ಕಂಬೈಂಡ್ ಡಿಫೆನ್ಸ್ ಎಕ್ಸಾಮ್) ಪಾಸು ಮಾಡಿದ ಮಹಿಳಾ ಅಧಿಕಾರಿಗಳಿಗೆ ಪುರುಷರಂತೆ ಇಂಡಿಯನ್ ಮಿಲಿಟರಿ ಅಕಾಡೆಮಿ, ಏರ್ ಫೋರ್ಸ್ ಅಕಾಡೆಮಿ, ನೇವಲ್ ಅಕಾಡೆಮಿಗಳಲ್ಲಿ ಇದುವರೆಗೆ ಎಂಟ್ರಿ ಇರಲಿಲ್ಲ.

ಬದಲಾಗಿ ಅವರು ಓಟಿಎ (ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಚೆನ್ನೈ) ಯಲ್ಲಿ ತರಬೇತಿ ಪಡೆಯಬೇಕಿತ್ತು. ಎನ್‌ಡಿಎ ಪರೀಕ್ಷೆಯಲ್ಲಿ ಸಫಲರಾದ ಅಭ್ಯರ್ಥಿಗಳು ಮೂರು ವರ್ಷ ಪುಣೆಯ ಖಡಕವಾಸ್ಲದಲ್ಲಿ ಕಮಿಷನ್ ಪೂರ್ವ ತರಬೇತಿಯೊಂದಿಗೆ ಪದವಿ ಪಡೆಯುತ್ತಾರೆ. ಅದರ ನಂತರ ಒಂದು ವರ್ಷ ಐಎಂಎ (ಇಂಡಿಯನ್ ಮಿಲಿಟರಿ ಅಕಾಡೆಮಿ) ಡೆಹರಾಡೂನ್‌ನಲ್ಲಿ ಸೈನ್ಯ ತರಬೇತಿ ಪಡೆದು ಸೇನೆಯಲ್ಲಿ ಕಮಿಷಂಡ್ ಅಧಿಕಾರಿಯಾಗಿ ನಿಯುಕ್ತಿ ಪಡೆಯುತ್ತಾರೆ. ಎನ್‌ಡಿಎ ಮೂಲಕ ಸೇನೆಯಲ್ಲಿ ಕಮಿಷನ್ ಪಡೆಯುವ ಅಽಕಾರಿಗಳೇ ಹೆಚ್ಚಾಗಿ ಆರ್ಮಿ ಕಮಾಂಡರ್ ಮತ್ತು ಸೇನಾಧ್ಯಕ್ಷರಂತಹ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸುತ್ತಾ ಬಂದಿದ್ದರಿಂದ ಇಂದಿಗೂ ಎನ್‌ಡಿಎ, ಸೇನೆಯ ಆಂತರಿಕ ವಲಯದಲ್ಲಿ ತನ್ನ ಪಾರಮ್ಯವನ್ನು ಮೆರೆದಿದೆ ಎಂದರೆ ತಪ್ಪಾಗದು.

-ಟಿಂಗ್ ಟ್ರೂಪ್ಸ್‌ಗಳ ಕಠಿಣ ಮಾನದಂಡ: ಪಿರಮಿಡ್ ಆಕಾರದ ರ‍್ಯಾಂಕ್ ವ್ಯವಸ್ಥೆ ಹೊಂದಿರುವ ಸೇನೆಯಲ್ಲಿ ಎಲ್ಲರಿಗೂ ಉನ್ನತ ಹಂತದ ರ‍್ಯಾಂಕ್‌ಗಳಿಗೆ ಪ್ರಮೋ ಶನ್‌ನ ಅವಕಾಶ ದೊರಕುವುದಿಲ್ಲ. ಅದರಲ್ಲೂ -ಟಿಂಗ್ ಟ್ರೂಪ್ಸ್ ಗಳೆನಿಸಿರುವ ಇನೆಂಟ್ರಿ, ಆರ್ಟಿಲರಿ, ಆರ್ಮ್ಡ್ ಅಧಿಕಾರಿ ಗಳಿಗಿರುವಷ್ಟು ಪ್ರಮೋಶನ್ ಅವಕಾಶ ಸಪೋರ್ಟಿಂಗ್ ಸರ್ವೀಸಸ್‌ಗಳ ಅಧಿಕಾರಿಗಳಿಗೆ ಸಿಗುವುದಿಲ್ಲ. ಸೇನೆಯ ವೃತ್ತಿಪರ ಕರ್ತವ್ಯವಾದ ಶತ್ರುಗಳೊಂದಿಗೆ ಹೋರಾಡಬೇಕಾದ ಮಹತ್ವ ಪೂರ್ಣ ಕಾರ್ಯ ನಿಭಾಯಿಸಬೇಕಾದ, ಒಟ್ಟಾರೆ ಸೇನೆಯ ಅರ್ಧದಷ್ಟಿರುವ ಇನೆಂಟ್ರಿ, ಮೆಕನೈಸಡ್ ಇನೆಂಟ್ರಿ, ಆರ್ಟಿಲರಿ, ಆರ್ಮ್ಡ್ ಮೊದಲಾದ -ಟಿಂಗ್ -ರ್ಸಸ್‌ಗಳಿಂದ ಇದುವರೆಗೆ ಮಹಿಳೆಯರನ್ನು ದೂರ ಇಡಲಾಗಿತ್ತು.

-ಟಿಂಗ್ ಟ್ರೂಪ್ಸ್‌ಗಳಲ್ಲಿ ತರಬೇತಿ ಸ್ತರ ಹೆಚ್ಚು ಕಠಿಣವೂ, ಪ್ರಮೋಶನ್‌ನ ಮಾನದಂಡ ಕ್ಲಿಷ್ಟವೂ, ಸೈನಿಕ ಸವಾಲುಗಳನ್ನು ಎದುರಿಸುವ ದೈಹಿಕ ಸಾಮರ್ಥ್ಯ
ಉನ್ನತವೂ ಆಗಿರುವುದು ಅಪೇಕ್ಷಣೀಯ. ನಿಜಾರ್ಥದಲ್ಲಿ ಸೇನೆಯ ಬೆನ್ನೆಲುಬು -ಟಿಂಗ್ ಟ್ರೂಪ್ಸ್. -ಟಿಂಗ್ ಟ್ರೂಪ್ಸ್ ರಂಗದ ಮೇಲಿನ ಪ್ರಧಾನ ಪಾತ್ರಧಾರಿ ಗಳಾದರೆ ಸಪೋರ್ಟಿಂಗ್ ಟ್ರೂಪ್ಸ್ ಹಿನ್ನೆಲೆಯಲಿದ್ದುಕೊಂಡು ತಂಡದ ಅಗತ್ಯಗಳನ್ನು ಪೂರೈಸುವ ಹಾಗೂ ಒಟ್ಟಾರೆ ಪರಿಣಾಮ ಸಕಾರಾತ್ಮಕವಾಗಿರುವಂತೆ ಶ್ರಮಿಸುವ ಭೂಮಿಕೆಯನ್ನು ನಿಭಾಯಿಸುವವರು ಎನ್ನಬಹುದು. ಹಿನ್ನೆಲೆಯಲ್ಲಿ ದುಡಿಯುವ ಅವಕಾಶದಿಂದ ತೃಪ್ತರಾಗದೇ ಮುನ್ನೆಲೆಗೆ ಬರಲು ಕಾತರರಾಗಿರುವ ಮಹಿಳೆಯರು ನ್ಯಾಯಾಲಯದ ಮೂಲಕ ನ್ಯಾಯ ದೊರಕಿಸಿಕೊಂಡಿದ್ದಾರೆ.

ವೀರಾಂಗನೆಯರಿಗೆ ಅವಕಾಶ: ಒಂದು ದೇಶದ ಸೇನೆಯ ಮನೋಬಲ, ಸಾಮರ್ಥ್ಯ, ಯುದ್ಧಕುಶಲತೆ, ಯಂತ್ರ-ತಂತ್ರ ಎಲ್ಲದರ ಮೇಲೆ ಆ ದೇಶದ ಜನರ ಸುಖದ ಬದುಕು ನಿಂತಿರುತ್ತದೆ. ಹತಾಶ-ನಿರಾಶ, ನಾಯಕತ್ವವಿಲ್ಲದ ಸೇನೆ ಸಂಖ್ಯೆಯಲ್ಲಿ ಎಷ್ಟು ದೊಡ್ಡದಿದ್ದರೂ ಶತ್ರವನ್ನು ಎದುರಿಸಲಾರದು ಎನ್ನುವುದನ್ನು ಇತ್ತೀಚೆಗಷ್ಟೇ ಅಫ್ಘಾನಿಸ್ತಾನದಲ್ಲಿ ಕಂಡಿದ್ದೇವೆ. ಮಾನವ ಅಧಿಕಾರದ ಕುರಿತು ಕಿಂಚಿತ್ತೂ ಕಾಳಜಿ ಇಲ್ಲದ ಉಗ್ರವಾದಿಗಳೊಂದಿಗೆ ಸೆಣಸಬೇಕಾದ, ಅಂತಾ ರಾಷ್ಟ್ರೀಯ ನಿಯಮಗಳಿಗೆ ಕ್ಯಾರೇ ಎನ್ನದೇ ಯುದ್ಧ ಬಂದಿಗಳಿಗೆ ಚಿತ್ರಹಿಂಸೆ ನೀಡುವ ಪಾಕ್ -ಚೀನಿ ಶತ್ರುಗಳನ್ನು ಎದುರಿಸಬೇಕಾದವರು ಇನೆಂಟ್ರಿ,
ಆರ್ಟಿಲರಿಗಳು ಮಂಚೂಣಿಯಲ್ಲಿ ಕಾರ್ಯನಿರ್ವಹಿಸುವ ಸೇನೆಯ -ಟಿಂಗ್ ಟ್ರೂಪ್ಸ್‌ಗಳು. ಇದುವರೆಗಿನ ಶೌರ‍್ಯ ಪದಕಗಳ ತ್ಯಾಗ-ಬಲಿದಾನಗಳೆಲ್ಲವುದರಲ್ಲಿ ಈ ಸೈನಿಕರದೇ ಸಿಂಹಪಾಲು.

ಶತ್ರುವಿನೊಂದಿಗೆ ಮುಖಾಮುಖಿಯಾಗಿ ಸೆಣಸುವ ಇನೆಂಟ್ರಿಯ ಅಧಿಕಾರಿಗಳು ಜವಾನರಿಗೆ ಮುಂದಿನಿಂದ ನಾಯಕತ್ವ ಪ್ರಧಾನ ಮಾಡುವ ಕ್ಷಮತೆಯನ್ನು
ಹೊಂದಿರಬೇಕು. ಅಽಕಾರಿಗಾಗಿ ತಮ್ಮ ಜೀವವನ್ನೇ ಬಲಿಗೊಡಲು ಜವಾನರು ಸಿದ್ಧರಾಗಿರಬೇಕಾದರೆ ಆ ಅಧಿಕಾರಿ ಸ್ವತಃ ಅಷ್ಟು ಸಮರ್ಥರಾಗಿರಬೇಕು. ಪೂರಕ ಸೇವೆ ನೀಡುವ ವರ್ಕ್‌ಶಾಪ್ ಕಮಾಂಡರ್ ಆಗಿಯೋ ಆರ್ಮಿ ಸಪ್ಲೈ ಕೋರ್‌ನ ಬಟಾಲಿಯನ್ ಕಮಾಂಡರ್ ಆಗಿಯೋ ಕರ್ತವ್ಯ ನಿರ್ವಹಿಸುವುದಕ್ಕೂ ಇನಫ್ಯಾಂಟ್ರಿ ಬಟಾಲಿಯನ್ ಕಮಾಂಡರ್ ಹುದ್ದೆ ನಿರ್ವಹಿಸುವುದಕ್ಕೂ ಅಜಗಜಾಂತರವಿದೆ.

ಓರ್ವ ಇನ್ ಫ್ಯಾಂಟ್ರಿಯ ಅಧಿಕಾರಿ ಬ್ಯಾಟಲ್ ಫಿಸಿಕಲ್ ಎಫಿಶಿಯೆನ್ಸಿ ಟೆಸ್ಟ್‌ನಲ್ಲಿ ಬಂದೂಕು ಹೆಗಲಿಗೇರಿಸಿ, ನಿತ್ಯಾವಶ್ಯಕ ವಸ್ತುವನ್ನಿಟ್ಟುಕೊಂಡ ಪಿಟ್ಟುವನ್ನು ಬೆನ್ನಿಗೆ ಕಟ್ಟಿಕೊಂಡು ಕಿಮೀ ದೂರವನ್ನು ೨೧-೨೨ ನಿಮಿಷದಲ್ಲಿ ಕ್ರಮಿಸುತ್ತಾನಾದರೆ ಆ ಹುದ್ದೆ ಬಯಸುವ ಮಹಿಳೆಯೂ ಆ ಷರತ್ತನ್ನು  ಪೂರೈಸುವಂತಿರ ಬೇಕು. ಹಾಗಿಲ್ಲವಾದರೆ ಅದು ಪುರುಷ ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಬಹುದು. ಪುರುಷ ಅಧಿಕಾರಿಗೆ ಸಮಾನವಾಗಿ ಕಠಿಣ ದೈಹಿಕ ಮಾನ ದಂಡಗಳನ್ನು ಪೂರೈಸಬಲ್ಲಳಾದರೆ ಮಾತ್ರ ಆಕೆ ಜವಾನರಿಗೆ ನಾಯಕತ್ವ ನೀಡಬಲ್ಲ ನೈತಿಕ ಅಧಿಕಾರ ಪಡೆಯಬಲ್ಲಳು. ಇದುವರೆಗೆ ಸಪೋರ್ಟಿಂಗ್ ಸರ್ವೀಸ್ ಗಳಿಗಷ್ಟೇ ಸೀಮಿತವಾಗಿದ್ದ ಮಹಿಳೆಯರಿಗೆ ಇಂತಹ ಅನೇಕ ದೈಹಿಕ ಷರತ್ತುಗಳಲ್ಲಿ ರಿಯಾಯತಿ ನೀಡಲಾಗುತ್ತಿದೆ.

ಮಹಿಳೆ ಎಂಬ ಕಾರಣಕ್ಕಾಗಿ ನೀಡುವ ರಿಯಾಯತಿಗಳಿಂದ ಸೇನೆಯ ಹೋರಾಡುವ ಕ್ಷಮತೆಯ ಮೇಲೆ ಪ್ರಭಾವದ ಬೀರದಿರಲಿ. ಯಾವುದೇ ರಿಯಾಯತಿ ಇಲ್ಲದೇ ಸಾಮರ್ಥ್ಯ ತೋರುವ ವೀರಾಂಗನೆಯರಿಗಷ್ಟೇ ಈ ಅವಕಾಶ ಲಭಿಸಲಿ.