Saturday, 21st September 2024

ಜಗತ್ತಿನ ಯೋಜಿತ ಪ್ರಾಚೀನ ಶಸ್ತ್ರಚಿಕಿತ್ಸೆ – ಸುನ್ನತಿ

ಹಿಂದಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

ಮನುಷ್ಯ ರೂಪಿಸಿದ ಮೊತ್ತಮೊದಲ ಯೋಜಿತ ಶಸ್ತ್ರಚಿಕಿತ್ಸೆ ಯೆಂದರೆ ಸುನ್ನತಿ (ಸರ್ಕಮ್ಸಿಷನ್). ಮನುಷ್ಯ ಸುನ್ನತಿ ಯಾವಾಗ ಮತ್ತು ಏಕೆ ಮಾಡಲಾರಂಭಿಸಿದ ಎನ್ನುವ ಪ್ರಶ್ನೆಗೆ ಬಹುಶಃ ಖಚಿತ ಉತ್ತರ ದೊರೆಯಲಾರದು. ಗ್ರಾಫ್ಟನ್ ಇಲಿಯಟ್ ಸ್ಮಿತ್ (1871-1937) ಎನ್ನುವ ಆಸ್ಟ್ರೇಲಿಯನ್-ಬ್ರಿಟಿಶ್ ಅಂಗರಚನ
ಶಾಸ್ತ್ರಜ್ಞನ ಅನ್ವಯ, ಕ್ರಿ.ಪೂ.15000 ವರ್ಷದ ಹಿಂದಿನ ಇತಿಹಾಸವಿದೆ. ಆದರೆ ಈ ವಾದದಲ್ಲಿ ಹುರುಳಿಲ್ಲ ಎಂದು ಅನೇಕ ಪ್ರಾಕ್ತನ ಶಾಸ್ತ್ರಜ್ಞರ ಅನಿಸಿಕೆ.

ಮನುಷ್ಯ ಇತಿಹಾಸದಲ್ಲಿ ಸುನ್ನತಿ ನಡೆಯುತ್ತಿದ್ದ ಬಗ್ಗೆ ಮೊದಲ ಪುರಾವೆಯು ಈಜಿಪ್ಷಿಯನ್ ಸಂಸ್ಕೃತಿಯಲ್ಲಿ ದೊರೆಯುತ್ತದೆ. ಈಜಿಪ್ಟ್ ದೇಶವನ್ನು 6 ನೆಯ ವಂಶವು ಕ್ರಿ.ಪೂ.2345- ಕ್ರಿ.ಪೂ.2181 ರವರೆಗೆ ಆಳಿತು. ಅಂದು (ಇಂದಿನ) ಸಕ್ಕಾರ ಪ್ರದೇಶದಲ್ಲಿ ಒಂದು ನೆಕ್ರೋಪೊಲೀಸ್ (ಸ್ಮಶಾನ) ನಿರ್ಮಾಣ ವಾಯಿತು. ಇಲ್ಲಿರುವ ಸಮಾಧಿಗಳ ಗೋಡೆಗಳ ಮೇಲೆ ಸುನ್ನತಿಯನ್ನು ಮಾಡುವ ಭಿತ್ತಿಚಿತ್ರವಿದೆ (ಕ್ರಿ.ಪೂ.2400). ಈ ಚಿತ್ರದ ಜತೆಯಲ್ಲಿ ಅವನನ್ನು ಕೆಳಕ್ಕೆ ಬೀಳದಂತೆ ಗಟ್ಟಿಯಾಗಿ ಹಿಡಿದುಕೊ ಎನ್ನುವ ವಾಕ್ಯವಿದೆ. ಕ್ರಿ.ಪೂ. ೨೩೦೦ರ ಆಸುಪಾಸಿನಲ್ಲಿದ್ದ ಉಹಾ ಎನ್ನುವ ವ್ಯಕ್ತಿಯು ಬರೆದಿರುವ ಹಾಗೆ, ಅಂದಿನ ಈಜಿಪ್ಟಿನಲ್ಲಿ ಸಾಮೂಹಿಕ ಸುನ್ನತಿ ನಡೆಯುತ್ತಿದ್ದವಂತೆ. ತಾನು ಸುನ್ನತಿಯ ನೋವನ್ನು ಹೇಗೆ ಸಹಿಸಿಕೊಂಡೆ ಎನ್ನುವುದನ್ನು ಅವನು ಜಂಬದಿಂದ ಹೇಳುತ್ತಾನೆ.

120 ಜನರ ಜತೆಯಲ್ಲಿ ನಾನೂ ಸುನ್ನತಿ ಮಾಡಿಸಿಕೊಂಡೆ. ಎಲ್ಲರಿಗಿಂತಲೂ ನಾನು ನೋವನ್ನು ಸಮರ್ಥವಾಗಿ ಸಹಿಸಿದೆ ಎಂಬರ್ಥದ ಮಾತುಗಳನ್ನು ಬರೆದಿ ದ್ದಾನೆ. ಈಜಿಪ್ಟಿನ ಪಿರಮಿಡ್ಡುಗಳಲ್ಲಿ ದೊರೆತಿರುವ ಪುರುಷ ಮಮ್ಮಿಗಳು ಸುನ್ನತಿ ಮಾಡಿಸಿಕೊಂಡಿರುವುದನ್ನು ನೋಡಬಹುದು. ಮಾನವ ಜನಾಂಗದಲ್ಲಿ ನಡೆಯುವ ಸರ್ವಸಾಮಾನ್ಯ ಯೋಜಿತ ಹಾಗೂ ವಿಶ್ವದ ಅತ್ಯಂತ ಹಳೆಯ (ಕ್ರಿ.ಪೂ.4000?) ಶಸ್ತ್ರಚಿಕಿತ್ಸೆಗಳಲ್ಲಿ ಸುನ್ನತಿಯು ಮುಖ್ಯವಾದದ್ದು. ಜಗತ್ತಿನ 37%-39% ಪುರುಷರು ಸುನ್ನತಿಗೆ ಒಳಗಾಗಿದ್ದಾರೆ ಎನ್ನಲಾಗಿದೆ.

ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಅರ್ಧಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ ಧಾರ್ಮಿಕ ಅಥವಾ ಸಾಮಾಜಿಕ ಕಾರಣವೇ ಮುಖ್ಯವಾಗಿರುತ್ತದೆ. ಸುನ್ನತಿ ಬಹುಶಃ ಸೂಡಾನ್ ಮತ್ತು ಇಥಿಯೋಪಿಯ ದೇಶಗಳಲ್ಲಿ ಆರಂಭ ವಾಯಿತು. ಅಲ್ಲಿಂದ ಪ್ರಾಚೀನ ಈಜಿಪ್ಟ್ ದೇಶಕ್ಕೆ ಹರಡಿತು. ನಂತರ ಈಜಿಪ್ಟಿನಿಂದ ಯಹೂದಿ ಮತ್ತು ಮುಸ್ಲೀಮರು ವಾಸ ಮಾಡುತ್ತಿದ್ದ ಪ್ರದೇಶ ಗಳಿಗೆ ವ್ಯಾಪಿ ಸಿತು. ಅವರಿಂದ ಆಫ್ರಿಕದ ಬಂಟು ಜನಾಂಗಕ್ಕೆ ಹರಡಿತು. ಆಸ್ಟ್ರೇಲಿಯಾ, ಪಾಲಿನೇಶಿಯನ್, ಅಮೆರಿಕದ ಅಜ್ಟೆಕ್ ಮತ್ತು ಮಾಯಾ ಜನ ಸಹ ಸುನ್ನತಿ ಪಾಲಿಸು ತ್ತಿದ್ದರು.

ಸುನ್ನತಿಯನ್ನು ಏಕೆ ಮಾಡುತ್ತಿದ್ದರು ಎನ್ನುವುದಕ್ಕೆ ನಿಖರ ವಿವರಣೆ ದೊರೆಯದಿದ್ದರೂ, ಗ್ರೀಸಿನ ಹೆರಡೋಟಸ್ (ಕ್ರಿ.ಪೂ.೪೮೪-ಕ್ರಿ.ಪೂ.೪೨೫) ಎನ್ನುವ ಇತಿಹಾಸಕಾರ ಈಜಿಪ್ಷಿಯನ್ನರು ಸ್ವಚ್ಛತೆಗಾಗಿ ಸುನ್ನತಿ ಮಾಡಿಸಿಕೊಳ್ಳುತ್ತಿದ್ದರು ಎಂದು ದಾಖಲಿಸಿದ್ದಾನೆ. ಸುನ್ನತಿಯು ಬಾಲಕರಿಗೆ ಅಧ್ಯಾತ್ಮಿಕ ಮತ್ತು
ಬೌದ್ಧಿಕ ಪ್ರಬುದ್ಧತೆಯನ್ನು ನೀಡುತ್ತದೆ ಎಂದು ನಂಬಿದ್ದರು. ಸುನ್ನತಿಯು ಸಾರ್ವಜನಿಕವಾಗಿ ನಡೆಯುತ್ತಿತ್ತು. ಈಜಿಪ್ಟಿನ ‘ದಿ ಬುಕ್ ಆಫ್ ಡೆಡ್’ ಅನ್ವಯ, ಈಜಿಪ್ಷಿ ಯನ್ನರ ಸೂರ್ಯ ದೇವತೆಯಾದ ‘ರಾ’ ಸಹ ಮಾಡಿಸಿಕೊಂಡಿದ್ದರಂತೆ. ಹಿಬ್ರೂ ಬೈಬಲ್ಲಿನ ಜೆನೆಸಿಸ್ ಚಾಪ್ಟರ್ ೧೭ರಲ್ಲಿ ಅಬ್ರಹಾಮ್, ಆತನ ಬಂಧುಗಳು ಹಾಗೂ ಗುಲಾಮರೆಲ್ಲರೂ ಸುನ್ನತಿ ಮಾಡಿಸಿಕೊಳ್ಳುವ ವಿವರಣೆಯಿದೆ.

ಹಾಗೆಯೇ ಆತನ ಸಂತತಿಯವರೆಲ್ಲ ತಮ್ಮ ತಮ್ಮ ಮಕ್ಕಳಿಗೆ, ಮಗು ಹುಟ್ಟಿದ ೮ ದಿನದಂದು ಸುನ್ನತಿ ಮಾಡಬೇಕೆಂದು ನಿರ್ದೇಶನವಿದೆ. ಅಲೆಗ್ಸಾಂಡರ್ ದಿ ಗ್ರೇಟ್ ಮಧ್ಯಪ್ರಾಚ್ಯವನ್ನು ಕ್ರಿ.ಪೂ.೪ನೆಯ ಶತಮಾನದಲ್ಲಿ ಗೆದ್ದ. ಗ್ರೀಕರು ಯಹೂದಿ ಗಳ ಸುನ್ನತಿಯನ್ನು ಮಾನ್ಯ ಮಾಡಲಿಲ್ಲ. ಇದರಿಂದ ಯಹೂದಿಗಳು ಕ್ರುದ್ಧರಾಗಿ ಗ್ರೀಕರ ವಿರುದ್ಧ ದಂಗೆ ಯೆದ್ದರು. ಇದು ಇತಿಹಾಸದಲ್ಲಿ ಬಾರ್ ಕೋಕ್ಬ ದಂಗೆ ಎಂದು ಹೆಸರಾಗಿದೆ. ‘ಗಾಸ್ಪೆಲ್ ಆಫ್ ಲ್ಯೂಕ್’ ಗ್ರಂಥವು ಏಸುಕ್ರಿಸ್ತನು ಸುನ್ನತಿ ಮಾಡಿಸಿಕೊಂಡ ಬಗ್ಗೆ ಪ್ರಸ್ತಾಪಿಸುತ್ತದೆ. ಆದರೆ ವಾಸ್ತವದಲ್ಲಿ ಭೌತಿಕವಾಗಿ ಸುನ್ನತಿ ನಡೆಯಲಿಲ್ಲ, ಅದೊಂದು ಅಧ್ಯಾತ್ಮಿಕ ವಿಧಿ ಮಾತ್ರವಾಗಿತ್ತು ಎನ್ನಲಾಗಿದೆ. ಕ್ರೈಸ್ತಧರ್ಮಿ ಗಳು ಸುನ್ನತಿ ಮಾಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎನ್ನುವ ನಿಲುವು, ಯಹೂದಿ ಧರ್ಮದಿಂದ ಕ್ರೈಸ್ತ ಧರ್ಮವು ಬೇರ್ಪಡಲು ಪ್ರಮುಖ ಕಾರಣವಾಯಿತು.

ಇಸ್ಲಾಂ ಧರ್ಮ ೭ನೆಯ ಶತಮಾನದ ಆದಿಯಲ್ಲಿ ಹುಟ್ಟಿತು. ಮುಸ್ಲೀಮರು ಸುನ್ನತಿ ಮಾಡಿಸಿಕೊಳ್ಳಲೇಬೇಕೆನ್ನುವ ಸ್ಪಷ್ಟ ನಿರ್ದೇಶನವು ಕುರಾನಿನಲ್ಲಿ ಇಲ್ಲ. ಆದರೂ ಜಗತ್ತಿನಲ್ಲಿ ಸುನ್ನತಿ ಮಾಡಿಸಿ ಕೊಳ್ಳುತ್ತಿರುವವರಲ್ಲಿ ಶೇ.70 ಮುಸ್ಲೀಮರೇ ಎನ್ನುವುದು ಗಮನೀಯ. ಸುನ್ನತಿ ಎಂದರೆ ಶಿಶ್ನದ ಮುಂತೊಗಲನ್ನು ಛೇದಿಸುವಿಕೆ. ಶಿಶ್ನಶಿರವನ್ನು ಆವರಿಸಿರುವ ಮುಂತೊಗಲು ಲೈಂಗಿಕ ಕ್ರಿಯೆಯಲ್ಲಿ ನೆರವಾಗುತ್ತದೆ. ಮುಂತೊಗಲಲ್ಲಿ ನರಾಗ್ರಗಳು ಇರುವ ಕಾರಣ, ಲೈಂಗಿಕ ತೃಪ್ತಿಯಲ್ಲಿ ಪಾತ್ರವಹಿ ಸುತ್ತ. ಮುಂತೊ ಗಲಿನಲ್ಲಿರುವ ಗ್ರಂಥಿಗಳು ಉತ್ಪಾದಿಸುವ ತೈಲವು ಶಿಶ್ನಶಿರದ ಆರೋಗ್ಯ ಕಾಪಾಡುತ್ತದೆ. ಧಾರ್ಮಿಕ ಕಾರಣಗಳಿಗಾಗಿ ಸುನ್ನತಿಯನ್ನು ಮಾಡಿಸಿಕೊಳ್ಳುವವರು ಬಹುಶಃ ಈ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಕಾಣುತ್ತದೆ. ಇಂದು ಅಮೆರಿಕದಲ್ಲಿ ಸುಮಾರು ಶೇ.2 ಜನರು ಹಾಗೂ ಬ್ರಿಟನ್ನಿನಲ್ಲಿ ಶೇ.೬.೫ರಷ್ಟು ವೈದ್ಯಕೀಯ ಕಾರಣಗಳಿಗಾಗಿ ಸುನ್ನತಿ ಮಾಡಿಸಿಕೊಳ್ಳುತ್ತಾರೆ.

ಆದರೆ ಧಾರ್ಮಿಕ ಕಾರಣಗಳಿಗೆ ಸುನ್ನತಿ ಮಾಡಿಸಿಕೊಳ್ಳುವವರ ಸಂಖ್ಯೆಯಲ್ಲಿ ಅಂತಹ ಬದಲಾವಣೆಯೇನೂ ಇಲ್ಲ. ಕೆಲ ವೈದ್ಯಕೀಯ ಗಂಭೀರ ಸ್ಥಿತಿಗಳಲ್ಲಿ ಸುನ್ನತಿಗೆ ವೈದ್ಯರು ಸೂಚಿಸಬಹುದು. ಹುಟ್ಟುವಾಗ ಇವು ಏಕವಾಗಿದ್ದು, ಮಗುವಿಗೆ ೩ ವರ್ಷಗಳಾದಾಗ ಅವು ಪ್ರತ್ಯೇಕಗೊಳ್ಳುತ್ತವೆ. ಆಗ ಮುಂತೊಗಲನ್ನು ಹಿಂದಕ್ಕೆಳೆಯಲು ಸಾಧ್ಯವಾಗುತ್ತದೆ. ೫ ವರ್ಷಗಳಾದ ಮೇಲೆ ಶೇ.೯೯ ಗಂಡುಮಕ್ಕಳು ತಮ್ಮ ಮುಂತೊಗಲನ್ನು ಹಿಂದಕ್ಕೆ ಸರಿಸಬಲ್ಲರು. ಸಾಮಾನ್ಯವಾಗಿ
ಹುಡುಗರಿಗೆ ೧೭-೧೮ ವರ್ಷಗಳಾಗುವ ವೇಳೆಗೆ ಮುಂತೊಗಲು ಸರಾಗವಾಗಿ ಹಿಂದಕ್ಕೆ ಸರಿಯುತ್ತದೆ. ಹಾಗೆ ಸರಿಯಲಿಲ್ಲವೆಂದರೆ ಮಾತ್ರ, ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗಿ ಬರಬಹುದು.

ಸುನ್ನತಿ ಮಾಡಬೇಕಾಗಿ ಬರುವಂತಹ ಎರಡನೆಯ ಮುಖ್ಯ ಸಂದರ್ಭವೆಂದರೆ ಶಿಶ್ನಶಿರ ಉರಿಯೂತ (ಬ್ಯಾಲನೈಟಿಸ್). ಇದು ಎಲ್ಲ ವಯಸ್ಸಿನ ಗಂಡಸರಲ್ಲಿ ಕಂಡುಬರುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯ ಕಾರಣ ವೈಯುಕ್ತಿಕ ಸ್ವಚ್ಛತೆಯ ಕೊರತೆ. ಪದೇ ಪದೇ ಉರಿಯೂತವು ಕಾಣಿಸಿಕೊಳ್ಳುತ್ತಿದ್ದರೆ, ಸುನ್ನತಿ ಶಸ್ತ್ರಚಿಕಿತ್ಸೆ ಶಾಶ್ವತ ಪರಿಹಾರ ನೀಡಬಹುದು. ಮೂರನೆಯ ಕಾರಣ, ಮುಂತೊಗಲು ಹಿಂದಕ್ಕೆ ಸರಾಗವಾಗಿ ಸರಿಯದೆ, ಲೈಂಗಿಕ ಕ್ರಿಯೆಯೇ ನೋವುಭರಿತವಾದಾಗ ಅಥವಾ ಅಸಾಧ್ಯವಾದಾಗ, ಇಲ್ಲವೇ ಶಿಶ್ನದಂಡದ ಸುತ್ತಲೂ ಉರುಳಿನಂತೆ ಬಿಗಿದುಕೊಂಡಾಗ ಸುನ್ನತಿಯನ್ನು ಮಾಡಲೇಬೇಕಾಗುತ್ತದೆ.

ಸುನ್ನತಿ ಮಾಡಿಸಿಕೊಳ್ಳುವುದರಿಂದ ಕೆಲವು ಅನುಕೂಲ ಇವೆ ಎನ್ನಲಾಗಿದೆ. ಮೊದಲನೆಯದು ಶಿಶ್ನ ಸ್ವಚ್ಛತೆ ಸುಲಭ. ಮೂತ್ರ ಸೋಂಕು ತೀರಾ ಅಪರೂಪ. ಸುನ್ನತಿಯನ್ನು ಮಾಡಿಸಿಕೊಂಡ ವರಲ್ಲಿ ಎಚ್‌ಐವಿ ಒಳಗೊಂಡಂತೆ ಎಲ್ಲ ಲೈಂಗಿಕ ರೋಗಗಳು ಅಂಟುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದರೂ ಸುನ್ನತಿ
ಮಾಡಿಸಿಕೊಂಡವರೂ ಸುರಕ್ಷಿತ ಲೈಂಗಿಕ ನಿಯಮ ಪರಿಪಾಲಿಸಲೇಬೇಕು ಎನ್ನುವುದರಲ್ಲಿ ಅನುಮಾನವಿಲ್ಲ. ಸುನ್ನತಿಯನ್ನು ಮಾಡಿಸಿಕೊಂಡವರಲ್ಲಿ ಶಿಶ್ನ ಕ್ಯಾನ್ಸರ್ ಕಡಿಮೆ ಎನ್ನಲಾಗಿದೆ.

ಸುನ್ನತಿಯನ್ನು ಮಾಡಿಸಿಕೊಳ್ಳುವುದರಿಂದ ಅನಾನುಕೂಲತೆಗಳು ಶೇ.೨ ಜನರಲ್ಲಿ ಕಂಡುಬರಬಹುದು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮೇಲೆ ರಕ್ತಸ್ರಾವವು ನಿಲ್ಲದಿರಬಹುದು. ಸೋಂಕಿಗೆ ಈಡಾಗಬಹುದು. ಹುಣ್ಣಾಗಬಹುದು. ಗುಣವಾದ ಮೇಲೆ ಛೇದಿಸಿದ ಭಾಗವು ಶಿಶ್ನದಂಡಕ್ಕೆ ತೀರಾ ನಿಕಟವಾಗಿದ್ದರೆ, ಶಿಶ್ನ
ನಿಮಿರಿದಾಗ ನೋಯಬಹುದು. ಕೆಲವು ಸಂದರ್ಭಗಳಲ್ಲಿ ಛೇದನವು ಸ್ವಲ್ಪ ಹ್ರಸ್ವವಾಗಿ ಮುಂತೊಗಲು ಉಳಿದುಬಿಟ್ಟಿದ್ದರೆ ಅದು ಮತ್ತೆ ಶಿಶ್ನಶಿರಕ್ಕೆ ಅಂಟಿಕೊಂಡು ಎರಡನೆಯ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾಗಿ ಬರಬಹುದು. ಆದರೆ ನುರಿತ ಶಸ್ತ್ರ ವೈದ್ಯರ ಕೈಯಲ್ಲಿ ಇಂತಹ ತೊಡಕುಗಳು ತೀರಾ ಅಪರೂಪ.

ಇತ್ತೀಚಿನ ದಿನಗಳಲ್ಲಿ ಲೇಸರ್ ಶಸ್ತ್ರಚಿಕಿತ್ಸೆ ಸಹ ಬಂದಿದೆ. ಸುನ್ನತಿ ಮಾಡಿಸಿಕೊಂಡ ಮೇಲೆ, ಅಪರೂಪಕ್ಕೆ ಕೆಲ ಗಂಡಸರಲ್ಲಿ ಒಂದು ರೀತಿಯ ಅಳುಕು ಆರಂಭ ವಾಗಿ, ತಮ್ಮಲ್ಲಿ ಏನೋ ‘ಕೊರತೆಯಿದೆ ಎಂದು ಕೊರಗಬಹುದು’. ಅಂತಹವರಲ್ಲಿ ಕೆಲವರು ಮುಂತೊಗಲ ಮರುರೂಪಿಕೆ (-ರ್‌ಸ್ಕಿನ್ ರೆಸ್ಟೋ ರೇಶನ್) ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳಲು ಹಾತೊರೆಯಬಹುದು. ವಿಶ್ವದ ಎರಡನೆಯ ಮಹಾ ಯುದ್ಧದ ಕಾಲದಲ್ಲಿ ಯಹೂದಿಗಳು ನಾಜ಼ಿಗಳ ಕೈಯಿಂದ ಜೀವವನ್ನು ಉಳಿಸಿಕೊಳ್ಳಲು ಮುಂತೊಗಲ ಮರುರೂಪಿಕೆಗಾಗಿ ಪ್ರಯತ್ನ ಪಟ್ಟರು.

ಶಿಶ್ನದಂಡದ ಮೇಲಿರುವ ಚರ್ಮವನ್ನೇ ಜಗ್ಗಿ ಜಗ್ಗಿ ಮುಂತೊಗಳನ್ನು ರೂಪಿಸಬಹುದು. ಆದರೆ ಈ ವಿಧಾನದಿಂದ ಮುಂತೊಗಲು ಪೂರ್ಣವಾಗಿ ಬೆಳೆಯಬೇಕಾದರೆ ವರ್ಷಗಳು ಬೇಕಾಗಬಹುದು. ಶಸ್ತ್ರಚಿಕಿತ್ಸೆಯ ಮೂಲಕವೂ ಮುಂತೊಗಲನ್ನು ಮರುರೂಪಿಸ ಬಹುದು. ಬೀಜಚೀಲದಿಂದ ಅಗತ್ಯ ಚರ್ಮ ಛೇದಿಸಿ, ಅದನ್ನೇ ಮುಂತೊಗಲಾಗಿ ಮರುಜೋಡಿಸ ಬಹುದು. ಆದರೆ ಇಂತಹ ಚಿಕಿತ್ಸೆಯೇ ಅಗತ್ಯವೇ ಎಂದು ಎರಡು ಬಾರಿ ಯೋಚಿಸುವುದು ಒಳ್ಳೆಯದು. ೧೯೩೪ರಲ್ಲಿ -ಲಿಕ್ಸ್ ಬ್ರಿಕ್ಸ್ (೧೮೮೨-೧೯೫೭) ಎನ್ನುವ ಸ್ವೀಡಿಶ್ ಬರಹಗಾರನು ಸ್ತ್ರೀ ಪುರುಷರಲ್ಲಿ ನಡೆಯುವ ಸುನ್ನತಿಯ ಬಗ್ಗೆ (ಸರ್ಕಮ್ಸಿಶನ್ ಇನ್ ಮ್ಯಾನ್ ಅಂಡ್ ವುಮನ್: ಸೈಕಾಲಜಿ ಅಂಡ್ ಎಥ್ನಾಲಜಿ) ಪುಸ್ತಕವನ್ನು ಬರೆದ. ಇದರಲ್ಲಿ ಸುನ್ನತಿಯು ಸಮಕಾಲೀನ ಸಮಾಜದ ಧರ್ಮ, ರಾಜಕೀಯ, ಮ್ಯಾಜಿಕ್, ಶಸ್ತ್ರವೈದ್ಯಕೀಯ, ಸ್ವಚ್ಛತೆ, ಲೈಂಗಿಕತೆ, ಅಮಾನವೀಯತೆ ಮೇಲೆ ಬೀರಿದ ಪ್ರಭಾವವನ್ನು ಚರ್ಚಿಸಿದ. ಗಂಡಸರಲ್ಲಿ ಸುನ್ನತಿಯ ನಡೆಯುವುದು ಸಾಮಾನ್ಯವಾಗಿ ಎಲ್ಲರಿಗೂ ಪರಿಚಿತವಾದ ವಿಷಯ.

ಆದರೆ ಹೆಂಗಸರಿಗೂ ಸುನ್ನತಿಯನ್ನು ಮಾಡುವರೆ? ಇದನ್ನು ಸ್ತ್ರೀ ಜನನಾಂಗ ಛಿದ್ರಣ ಎನ್ನುವರು. ಇಲ್ಲಿ ಹೆಣ್ಣುಮಕ್ಕಳ ಜನನಾಂಗವನ್ನು ಭಾಗಶಃ ಅಥವಾ ಪೂರ್ಣ
ಛೇದಿಸುವರು. ಪ್ರಸ್ತುತ ೩೦ ದೇಶಗಳ ೨೦೦ ದಶಲಕ್ಷ ಹೆಣ್ಣುಮಕ್ಕಳು ಈ ಕ್ರೂರಾತಿಕ್ರೂರ ಅಮಾನವೀಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ವೈಜ್ಞಾನಿಕ ಶಿಕ್ಷಣ ಹಾಗೂ ವೈಜ್ಞಾನಿಕ ಮನೋಭಾವವು ಮಾತ್ರ ಈ ಮೌಢ್ಯವನ್ನು ನಿವಾರಿಸಬಲ್ಲುದು.