Saturday, 21st September 2024

ಲೋಸರ್‌ನಲ್ಲೊಮ್ಮೆ ಕಳೆದು ಹೋಗಿಬಿಡಿ

ಅಲೆಮಾರಿಯ ಡೈರಿ

ಸಂತೋಷಕುಮಾರ ಮೆಹೆಂದಳೆ

mehendale100@gmail.com

ಅಪರ ಕರ್ಮಠ ಧ್ಯಾನಕ್ಕೆ ಕೂರುವವರಿಂದ ಹಿಡಿದು, ಅeತರಾಗಿ ಕಳೆದುಹೋಗಬಯಸುವವರೆಗಿನ ವ್ಯಕ್ತಿಗಳಿಗೂ ಹೇಳಿ ಮಾಡಿಸಿದ ಸುಲಭಕ್ಕೆ ಎಟುಕದ, ಪ್ರತಿಯೊಬ್ಬರ ನಿರೀಕ್ಷೆಗೆ ಸಲ್ಲುವ ಲೋಸರ್‌ಅನ್ನು ಸಂದರ್ಶಿಸದಿದ್ದರೆ ನಿಜಕ್ಕೂ ಲುಕ್ಸಾನು !

ಸಹಜ ಪ್ರವಾಸಿ ತಾಣಗಳಾದ ಮನಾಲಿ ಅಥವಾ ರೋಥಾಂಗ್‌ನ ಹೊರತಾಗಿ ಆಚೀಚೆಗೆ ಜನ ತೆರಳುವುದೇ ಕಡಿಮೆ. ಹಾಗಾಗಿ ಲೋಸರ್‌ನಂಥ ಅಗಾಧ ಸ್ವರ್ಗ ಅಪರಿಚಿತವಾಗೇ ಉಳಿದು ಬಿಡುತ್ತದೆ.

ಇದೊಂದು ತರಹ ತ್ರಿಕೋನಾವಸ್ಥೆಯಲ್ಲಿರುವ ತಾಣ. ಅತ್ತ ಕೊಂಚ ಸರಿದರೆ ಭಾರತ ಚೀನಾ ಬಾರ್ಡರ್ ಮೇಲೆ ಉಳಿದು ಬಿಡುವ, ಮೇಲಕ್ಕೆ ಸರಿದರೆ ಅರೇ ಇದು ಅಪ್ಪಟ ಲಢಾಕ್ ಎನ್ನಿಸುವ, ಕೆಳಗಿನಿಂದ ಪ್ರವೇಶಿಸಿದರೆ ತೀರ ಲಾಹುಲ್ ಸ್ಪಿಟಿ ವ್ಯಾಲಿಯ ಮತ್ತೊಂದು ಪಡಿಯಚ್ಚು ಎನ್ನಿಸುವ ಮೂಲಕ ಯಾವ ಭಾಗಕ್ಕೂ ಸೇರದ ಆದರೆ, ಚಾರಣ, ಹಿಮದಲ್ಲಿ ಸ್ಕೀಯಿಂಗ್, ಅತ್ತ ಸರೋವರಗಳಿಗೆ ಎಡತಾಕುವ, ಲಢಾಕ್ ಪ್ರಾಂತ್ಯದ ವಿಶೇಷವೇ ಆಗಿರುವ ಪಾಸ್‌ಗಳ ರಾಣಿ ಕುಂಜುಮ್ ಪಾಸ್‌ನ ನೆತ್ತಿಯನ್ನು ಸವರಿ ಬರುವ ಸಾಹಸ, ಬೇಡದಿದ್ದರೆ ನಿಶ್ಚಿಂತೆಯಾಗಿ ಕಾಲೂರಿ ಕೂರಬಲ್ಲ ಎಲ್ಲ ಆಮೋದ ಗಳಿಗೂ ಪಕ್ಕಾಗಬಲ್ಲ ತಾಣ.

ಅದರಲ್ಲೂ ಸ್ಪಿಟಿವ್ಯಾಲಿ ಅಪ್ಪಟ ನಿರ್ಮಾನುಷ್ಯ ಹಿಮಾಚ್ಛಾದಿತ ಜತೆಗೆ ಹಸುರು ಸೆರಗು ಹೊದ್ದ ಕಾಂಬಿನೇಶನ್ನಿನ ಅಪರೂಪದ ಕಣಿವೆ. ಚಳಿಗಾಲ ಬಂತಾ? ಅಪ್ಪಟ್ಟ ಹಿಮ ಹೊದ್ದು ಮಲಗಿ ಬಿಡುವ, ಬೇಸಿಗೆಯಲ್ಲಿ ಮೈಕೊಡವಿ ನಗ್ನ ಪರ್ವತಗಳ ಅಗಾಧತೆಯನ್ನು ಬಿಚ್ಚಿಡುತ್ತ ಸಾಹಸಿಗರಿಗೆ ತನ್ನನ್ನು ಮೆಟ್ಟಿ ನೋಡೆಂಬಂತೆ ಸವಾಲೆಸೆಯುತ್ತ ನಿಲ್ಲುತ್ತಿದ್ದರೆ, ಮಳೆಗಾಲ ಇಲ್ಲಿ ಇಲ್ಲವೇ ಇಲ್ಲ. ಆದರೂ ಬೀಳುವ ನಾಲ್ಕಾರು ಹನಿಗೆ ಅರಳಿ ನಿಲ್ಲುವ ಹಳದಿ ಹೂಗಳ ಸ್ವರ್ಗ ಇದನ್ನು ಯೆ ಹೆವೆನ್ ಎನ್ನಿಸುವಂತೆ ಮಾಡುತ್ತದೆ. ಅಪರ ಕರ್ಮಠ ಧ್ಯಾನಕ್ಕೆ ಕೂರುವವರಿಂದ ಹಿಡಿದು, ಅಜ್ಞಾತರಾಗಿ ಕಳೆದುಹೋಗೊಣ ಎನ್ನುವವರೆಗಿನ ವ್ಯಕ್ತಿತ್ವಗಳಿಗೂ ಹೇಳಿ ಮಾಡಿಸಿದ ಸುಲಭಕ್ಕೆ ಎಟುಕದ, ಯಾವ ಕಾಲಕ್ಕೂ ಪ್ರತಿಯೊಬ್ಬರ ನಿರೀಕ್ಷೆಗೆ ಸಲ್ಲುವ ಲೋಸರ್‌ಅನ್ನು ಪ್ರವಾಸಿಯೊಬ್ಬ ಸಂದರ್ಶಿಸದಿದ್ದರೆ ನಿಜಕ್ಕೂ ಲುಕ್ಸಾನು ನಮಗೇ ಹೊರತು ಲೋಸರ್‌ಗಲ್ಲ. ಅದಕ್ಕೆ ಹೇಳುವುದು ಲೋಸರ್‌ನಲ್ಲಿ ಕಳೆದುಹೋಗಿಬಿಡಿ ಎಂದು.

ಕಾರಣ ಇಲ್ಲಿ ಸಿಕ್ಕುವಷ್ಟು ದಿವ್ಯ ಏಕಾಂತ ಬಹುಶ: ಇನ್ನೆಲ್ಲೂ ಸಿಕ್ಕಲಿಕ್ಕಿಲ್ಲ. ಎಷ್ಟೆಂದರೆ ಸರಿಯಾಗಿ ಮುಕ್ಕಾಲು ದಿನ ಕಳೆಯುವ ಮೊದಲೇ ಯಾರಾದರೊಬ್ಬ ಮನುಷ್ಯ ಸಿಕ್ಕಿದರೆ ಸಾಕೆನ್ನಿಸುವಷ್ಟು. ಅದೇ ಜೋಡಿಯಾಗಿ ಅನುಭವಿಸಲೆಂದೇ ಆಪ್ತವಾಗಿ ಕೂತೆದ್ದು, ಪ್ರೇಮಿಯಾಗಿ ಜಗತ್ತಿಗೆ ಒಂದು ಮುಸುಗೆಳೆದು ಬದುಕಿ ಬಿಡಲು ಬರಲು ಹೋದಿರಾ..? ಆಗಲೂ ಕಳೆದುಹೋಗುವುದೇ ಇದ್ದ, ಹೊರಗಿನ ಜಗತ್ತು ಮರೆತು. ಎರಡಕ್ಕೂ ಪಕ್ಕಾಗಬಲ್ಲ ಏಕಮಾತ್ರ ಸ್ಥಳ ಲೋಸರ್.
ವಿಶೇಷ ಎಂದರೆ ಮೊದಲೇ ಹೇಳಿದಂತೆ ಹಿಮಗಾಲದಲ್ಲಿ ಅಪ್ಪಟ ಹದಿನಾಲ್ಕು ಅಡಿ ಹಿಮ ಹೊದ್ದು ಮಲಗುವ ಈ ಪರಿಸರಕ್ಕೆ, ಹಿಮದ ಹುಡಿಯನ್ನು ಆಸ್ವಾದಿಸುವುದೇ ಪ್ರವಾಸಿಗರ ಆಯ್ಕೆಯಾಗಿದ್ದರೆ ಆಗೆಲ್ಲ ಅದು ಅಪ್ಪಟ ಸ್ವರ್ಗ.

ಕಾರಣ ಇಲ್ಲಿನ ಹಿಮಾಚ್ಛಾದಿತ ಪ್ರದೇಶದಲ್ಲಿ ಹುಡಿಹುಡಿ ಹಿಮದಲ್ಲಿ ಅಪಾಯ ರಹಿತ ವಿಹಾರ ಅದ್ಭುತ. ಹಾಗಾಗಿ ಇದರ ಆಯ್ಕೆ ಮೊದಲು. ಜತೆಗೆ ಕಿನ್ನೂರ ಕಡೆಯದ್ದು ಸರ್ವಋತು ರಸ್ತೆ ಇದ್ದಂತೆ. ಅಲ್ಲ ಮೈನಸ್ ೨-೩ ಡಿಗ್ರಿಯಷ್ಟು ಉಷ್ಣಾಂಶ ಇಳಿಯುತ್ತಿದ್ದರೂ ಹಿಮ ಸುರಿದರೂ ರಸ್ತೆ ಬಂದಾಗುವುದಿಲ್ಲ. ಹಾಗಾಗಿ ಎಲ್ಲೂ ಸಿಕ್ಕದಿದ್ದರೂ ಇಲ್ಲಿ ಸುಮಾರು ಎರಡ್ಮೂರು ತಿಂಗಳು ಹಿಮಗಾವಲು.

ಇನ್ನೂ ಬಿಸಿಲು ಅರಳಿ ಹಿಮ ಕರಗಿ ಮಳೆಗಾಲ ಎನ್ನುವ ಶಾಸ್ತ್ರದ ಹನಿಗಳು ಉದುರಿ ಭೂಮಿ ಅರಳಿ ನಿಲುತ್ತದಲ್ಲ; ಆಗ ಅದೆಲ್ಲಿ ಹುದುಗಿರುತ್ತವೇಯೋ ಆ ಹಳದಿ ಹೂಗಳ ಬುಡ. ಕೂಡಲೇ ಎದ್ದು ನಿಲ್ಲುತ್ತದೆ. ಎರಡ್ಮೂರು ವಾರದಲ್ಲಿ ಅರ್ಧ ಅಡಿ ಭೂಮಿಯ ಮೇಲೇರಿ ಎಕರೆಗಟ್ಟಲೇ ನೆಲಕ್ಕೆ ಹಾಸು ಹಾಸಿದಂತೆ ಅರಳಿ ನಿಲ್ಲುತ್ತಿದ್ದರೆ ಅವುಗಳ ಮಧ್ಯೆ ಹುದುಗುತ್ತ ಓಡಾಡುವ ಖುಷಿಯೇ ಬೇರೆ. ಅಕ್ಕಪಕ್ಕದ ಕಣ್ಮನ ಸೆಳೆಯುವ ಚಂದ್ರತಾಲ್ ಸರೋವರ, ಕುಂಜುಮ್ ಪಾಸ್, ಅತ್ಯಂತ
ಎತ್ತರದಲ್ಲಿ ಹಸಿರು ಬಟಾಣಿಗೆ ಪ್ರಸಿದ್ಧಿಯ ನಾಕೋಹಳ್ಳಿ, ದೂರದ ಬೋಳು ಪರ್ವತದಂಚಿಗೆ ಇರುವ ಪುಟಾಣಿ ದೇವ ಸ್ಥಾನದ ಅದ್ಭುತ ವಿವ್ಯೂ ಪಾಯಿಂಟು ಹೀಗೆ ದಿನಕ್ಕೊಂದು ಜಾಗಕ್ಕೆ ದೌಡು ಬೀಳಲು ಬರವಿಲ್ಲ. ಈ ನಾಕೋ ಹಳ್ಳಿಗೆ ಹೋಗಿದ್ದೇ ಆದರೆ ಕೋಟೆಯೊಂದರೊಳಗೆ ಕಟ್ಟಿರುವ ಊರಿನಂತಿರುವ ಇದು ಅಪ್ಪಟ ದೊಡ್ಡ ಪರ್ವತದ ತುತ್ತ ತುದಿಗೆ ಇದ್ದು ಉಳಿದ ಭಾಗಗಳೇ ಸುತ್ತುವರಿದ ವೈಶಿಷ್ಟ್ಯ ಇದರದ್ದು.

ಉಳಿದ ಸಮಯದಲ್ಲಿ ಹಿಮ ಕರಗಿ ಬೋಳು ಬೆಟ್ಟಗಳು ಮೈದೆರೆದು ನಿಲ್ಲುತ್ತವಲ್ಲ, ಆಗ ಅದರ ಬಣ್ಣ ಬಣ್ಣದ ಬೆರಗು ಮೂಡಿಸುವ ಕೊರೆತಗಳ ಮುಗಿಲಿಗೆ ನೇರ ಚಾಚಿಕೊಂಡ ಪರ್ವತಾಗ್ರಹಗಳು ಕೊಡುವ ಮುದವೇ ಬೇರೆ. ಇಂತಹ ಬೋಳು ಬೆಟ್ಟಗಳನ್ನು ಏರಲು ಬರುವ ಮತ್ತು ಅದಕ್ಕೆ ಲಗ್ಗೆ  ಇಡುವ ಸಾಹಸಿಗರು ಅವುಗಳ ಪಾದದಲ್ಲಿ ಸಾಲು ಸಾಲು ಡೇರೆ ಹಾಕಿಕೊಂಡು ಇದ್ದು ಬಿಡುತ್ತಾರೆ. ಅವರಿಗೆಲ್ಲ ಲೋಸರ್ ನ ಜನರೇ ಆತಿಥೆಯರು.

ಸುಮಾರು ಹದಿನಾಲ್ಕು ಸಾವಿರ ಅಡಿ ಎತ್ತರದಲ್ಲಿರುವ ಆಮ್ಲಜನಕ ಕೊರತೆಯ ಸಮಸ್ಯೆ ತಂದೊಡ್ಡುವ ಲೋಸರ್ ಹಿಮಾಚಲ ಪ್ರದೇಶದ ಗ್ರೇಟ್ ಲಾಹುಲ-ಸ್ಪಿಟಿ ವ್ಯಾಲಿಯ ಪಕ್ಕಾ ಬಲ ಪಾರ್ಶ್ವದಲ್ಲಿರುವ ಗಡಿಭಾಗ. ಮನಾಲಿಯಿಂದ ರೋಥಾಂಗ್ ಪಾಸ್ ಹತ್ತಿ, ಕಾಝ್ಹಾ ಎಂಬ ಮುಖ್ಯ ಊರಿನ ಮೂಲಕ ತಲುಪಬಹುದಾದರೆ ಇತ್ತ, ಕುಂಜುಮ್‌ಪಾಸ್ ಮೂಲಕ ಹಾಯ್ದು ಕಿನ್ನೂರ್ ಸೇರಿ ಅಲ್ಲಿಂದಲೂ ಲೋಸರ್ ತಲುಪಬಹುದು. ಲೋಸರ್ ಅತ್ಯಂತ ಚೆಂದ ಚೆಂದದ ಸರ್ವ ಋತು ಪ್ರವಾಸಿ ತಾಣವಾದರೂ ಐಷಾರಾಮಿಗಳಿಗಲ್ಲ.

ಕಾರಣ ಆ ಮಟ್ಟದ ವ್ಯವಸ್ಥೆ ಇಲ್ಲಿ ಲಭ್ಯವೂ ಇಲ್ಲ. ಇರುವ ಸೀದಾ ಸಾದಾ ಡೆರೆಗಳು, ಕಂಬೈಂಡ್ ಟೆಂಟುಗಳು, ಅಂದು ಇಂದು ಬಿಟ್ಟು ಕೊಡುವ ಮನೆಗಳು,
ಮೊದಲೇ ಬುಕಿಂಗ್ ಮಾಡಿಕೊಂಡ ಇಂಡಿಪೆಂಡೆಂಟ್ ಸಣ್ಣ ಸಣ್ಣ ಸವಲತ್ತಿನ ಕಾಟೇಜುಗಳು ಹೀಗೆ ಹಲವು ಸೌಲಭ್ಯಗಳಿದ್ದು ನಮ್ಮ ಅನುಕೂಲಕ್ಕಿಂತ, ಲಭ್ಯ ಇರುವ ವ್ಯವಸ್ಥೆಗೆ ಹೊಂದಿಕೊಳ್ಳಲೇಬೇಕು. ಹೆಚ್ಚಿನ ಭಾಗzಲ್ಲಿ ದಿನವೂ ಬೆಳಗ್ಗೆ ಬರುವ ಮೊಬೈಲ್ ಸರ್ವೀಸ್ ವೆಹಿಕಲ್‌ನಲ್ಲಿ ಬ್ರೆಡ್ಡು, ಮೊಟ್ಟೆ ಇತ್ಯಾದಿ ಸರ್ವೀಸು ನಂಬಿಕೊಂಡು ತಮ್ಮದೇ ಟೆಂಟ್ ಹಾಕಿಕೊಂಡು ಮಲಗೆದ್ದು ಮುಂದಕ್ಕೆ ಹೊರಡುವ ಅಲೆಮಾರಿ ಪ್ರವಾಸಿಗರಿಗೂ ಬರವಿಲ್ಲ ಇಲ್ಲಿ.

ಲೋಸರ್ ಗ್ರಾಮದ ಪ್ರತೀ ಮನೆಗಳು ಪೆಯಿಂಗ್ ಗೆಸ್ಟ್ ತರಹದ ಸರ್ವೀಸು ಸೆಂಟರ್‌ಗಳೇ. ಸೀದಾ ಸಾದಾ ಆದರೆ ಪ್ರೀತಿ ಭರಿತ ಅತಿಥಿ ಸತ್ಕಾರದ ಊಟೋಪ ಚಾರ ಇಲ್ಲಿ ಸಿಕ್ಕುತ್ತದೆ. ಜೇಬಿಗೂ ಅಂಥಾ ಭಾರವಲ್ಲ. ಒಂದೆರಡು ದಿನ ತೀರಾ ನಿಶ್ಚಿಂತೆಯಿಂದ ಕಾಲ ಕಳೆಯುವವರು ಇಲ್ಲಿ ಲಗ್ಗೆ ಹಾಕಿ ರಾತ್ರಿ ಕಳೆದು ಬೆಳಗ್ಗೆ ಸುಮ್ಮನೆ ನಿರ್ಜನ ಕಣಿವೆಯ ಸಂದುಗಳಲ್ಲಿ ಕಳೆದು ಹೋಗುತ್ತಾರೆ. ಸಂಜೆಯ ನಾಲ್ಕು ಗಂಟೆಯ ಮೊದಲೇ ಮತ್ತೆ ಲೊಸರ್‌ನ ಮನೆಗಳನ್ನು ಸೇರಿ ಬೆಚ್ಚಗೆ ಕೌದಿಗಳೊಳಗೆ ತೂರಿಕೊಂಡು ಅಗೀಗ ಲಭ್ಯವಾಗುವ ಸಿಗ್ನಲ್‌ಗೆ ತಡಕಾಡುತ್ತ ಎದುರಿಗೆ ಹಾಕಿರಿಸುವ ಬೆಂಕಿಯ ನಾಲಿಗೆಗೆ ಕೈಯೊಡ್ಡುತ್ತ ಬೆಚ್ಚಗಾಗುತ್ತಾರೆ.

ಅಲ್ಲೇ ಸುಡುವ ಕೆಂಡದ ರೊಟ್ಟಿ, ಚೈನೀಸ್ ಮೌಮೌ, ಹಸಿರು ಬಣ್ಣದ ಹೆಸರಿಲ್ಲದ ರುಚಿ ಮಾತ್ರ ಅದ್ಭುತ ಎನ್ನಿಸುವ ಹಲವು ಪಲ್ಯಗಳು, ಚಪಾತಿ, ದಾಲ್ ಇಲ್ಲಿನ ಕಾಮನ್ ಮೆನು. ದೂರದ ಕಾಝ್ಹಾದಿಂದ ಹೆಚ್ಚಿನ ಸಾಮಾನು ಇಲ್ಲಿಗೆ ಪೂರೈಕೆಯಾಗುತ್ತದೆ. ಅದೂ ರೇಷನ್ ಲೆಕ್ಕದಲ್ಲಿ. ಆಲೂ ಯಥೇಚ್ಛವಾಗಿ ಬೆಳೆಯುತ್ತಾರೆ. ಪ್ರತಿ ತರಕಾರಿ ಜತೆಗೆ ಅದೂ ಕಾಮನ್ ಐಟಮ್ಮು. ಪರಿಸರ ಕೆದರಲು ಅವಕಾಶ

ಮಾಡಿಕೊಡದಿರಲು ಪ್ರವಾಸಿಗರನ್ನು ಕಟ್ಟುನಿಟ್ಟಾಗಿ ಪ್ಲಾಸ್ಟಿಕ್ಕು ಉಪಯೋಗಿಸದಂತೆ ಕಾಯುವುದು ಇಲ್ಲಿನ ವಿಶೇಷ. ಸ್ಥಳೀಯರು ಬರುವ ಪ್ರವಾಸಿಗರಿಗೆ ಅದನ್ನು ಪದೆ ಪದೇ ನೆನಪಿಸುತ್ತ ತಮ್ಮ ಜತೆ ತಂದಿರುವ ಪ್ಲಾಸ್ಟಿಕ್ಕನ್ನು ಹೊರಡುವಾಗ ವಾಪಸು ಒಯ್ಯುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಕೆಲವರಂತೂ ಲೆಕ್ಕ ಇಟ್ಟು ಕಳಿಸುತ್ತಾರೆ. ಆ ಮಟ್ಟಿಗೆ ಲೋಸರ್ ಪ್ಲಾಸ್ಟಿಕ್ ಲುಕ್ಷಾನಿಂದ ಬಚಾವು.

ಉಳಿದಂತೆ ಸರ್ವ ಋತುವಿನ ಸ್ವರ್ಗ ಸಾಮಾನ್ಯ ಪ್ರವಾಸಿಗರಿಗೆ ಜುಲೈನಿಂದ ಸೆಪ್ಟೆಂಬರ್ ಹಳದಿ ಹೂಗಳ ಕಾಲದಲ್ಲಿ ಸರ್ವರಿಗೂ ತೆರೆದುಕೊಳ್ಳುತ್ತಿದ್ದರೆ, ಉಳಿದ
ಕಾಲದಲ್ಲಿ ಆಯಾ ಜನರ ಇಚ್ಛೆ ಆಯ್ಕೆಗೆ ಬಿಟ್ಟಿದ್ದು. ಬರುವ ಮುನ್ನ ಕೊಂಚ ದೈಹಿಕ ಹಿಡಿತ ಮತ್ತು ಮಾನಸಿಕ ಸ್ಥಿಮಿತತೆ ಇದ್ದಲ್ಲಿ ಎತ್ತರದಲ್ಲಿ ಕಾಡುವ ಆಕಸ್ಮಿಕ ಖಿನ್ನತೆ ಬಾಽಸದು. ಉಳಿದಂತೆ ಹೇಳಿದೆನಲ್ಲಾ; ಲೋಸರ್ ನೋಡದಿದ್ದರೆ ನಮಗೇ ಲುಕ್ಸಾನು.