Friday, 29th November 2024

ಕ್ಯಾಥೋಲಿಕ್ ಪಾದ್ರಿ ದಲಿತರ ಮನೆಗೆ ಬರುವರೇ ?

ವೀಕೆಂಡ್ ವಿತ್ ಮೋಹನ್

ಮೋಹನ್ ವಿಶ್ವ

camohanbn@gmail.com

ಅಸ್ಪೃಶ್ಯತೆ ಹೋಗಲಾಡಿಸಲು ಹಿಂದೂ ಯತಿಗಳು, ನಾಯಕರು, ಹೋರಾಟಗಾರರು ಪಟ್ಟಿರುವ ಶ್ರಮವನ್ನು ಅಪಹಾಸ್ಯ ಮಾಡಬೇಡಿ. ನಿಮಗೆ ನಿಜವಾದ
ದಲಿತಪರ ಕಾಳಜಿ ಇದ್ದರೆ ದಲಿತರ ಅಸಹಾಯಕತೆ ಬಳಸಿಕೊಂಡು ಮತಾಂತರ ಮಾಡುತ್ತಿರುವ ಕ್ರಿಶ್ಚಿಯನ್ ಮಿಷನರಿಗಳ ಬಗ್ಗೆ ಮಾತನಾಡಿ ಹಂಸಲೇಖರೇ!

‘ಗಂಗರಾಜು’ ಅಲಿಯಾಸ್ ಹಂಸಲೇಖ ಕನ್ನಡ ಚಿತ್ರರಂಗ ಕಂಡಂತಹ ಅದ್ಬುತ ಸಂಗೀತ ನಿರ್ದೇಶಕ, ಹಲವಾರು ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಕೀರ್ತಿ ಇವರಿಗೆ ಸಲ್ಲಬೇಕು. ತನ್ನ ವಿಶೇಷ ‘ಟ್ಯೂನ್ ’ಗಳ ಮೂಲಕ ಕೇಳುಗರ ಮನಗೆದ್ದ ಹಂಸಲೇಖ ಇತ್ತೀಚಿಗೆ ವಿವಾದವೊಂದನ್ನು ತಲೆಯ ಮೇಲೆ  ಎಳೆದು ಕೊಂಡಿದ್ದಾರೆ.

ವ್ಯಕ್ತಿಯೊಬ್ಬನಿಗೆ ಪಿತ್ತ ನೆತ್ತಿಗೇರಿದಾಗ ಹೇಗೆಲ್ಲ ಆಡುತ್ತಾನೆಂಬುದನ್ನು ಹಂಸಲೇಖರನ್ನು ನೋಡಿ ಕಲಿಯಬೇಕು. ಎದುರಿನವರ ಚಪ್ಪಾಳೆ ಶಿಳ್ಳೆಗಳು ಹೆಚ್ಚಾದರೆ ನಾಲಿಗೆಗೂ ಮೆದುಳಿಗೂ ಸಂಪರ್ಕವಿಲ್ಲವಿರುವುದೆಂಬುದನ್ನು ಹಂಸಲೇಖ ಸಾಬೀತುಪಡಿಸಿzರೆ. ಸಾಮಾಜಿಕ ಜೀವನದಲ್ಲಿರುವವರು ಒಂದೊಂದು ಮಾತನ್ನೂ ಹೇಳ ಬೇಕಾದರೆ ಹತ್ತು ಬಾರಿ ಯೋಚಿಸಬೇಕು ಅಭಿಮಾನಿಗಳ ಶಿಳ್ಳೆಗಳಲ್ಲಿ ಮುಳುಗಿ ಹೋಗಿ ಬಾಯಿಗೆ ಬಂದಂತೆ ಮಾತನಾಡಿದರೆ, ಅಚಾತುರ್ಯವಾಗುವುದು ಪಕ್ಕಾ.

ದಲಿತರ ಮನೆಗೆ ’ಪೇಜಾವರ ಶ್ರೀ’ಗಳು ಹೋಗುವುದನ್ನು ಅಪಹಾಸ್ಯ ಮಾಡಿದ ಹಂಸಲೇಖ, ದಲಿತರ ಶ್ರೇಯೋಭಿವೃದ್ದಿಯ ಹಿಂದೆ ಪೇಜಾವರ ಶ್ರೀಗಳಿಗಿದ್ದಂತಹ ಕಾಳಜಿಯನ್ನೊಮ್ಮೆ ನೆನಪಿಸಿಕೊಳ್ಳಬೇಕಿತ್ತು. ಹಂಸಲೇಖರಿಗೆ ಶ್ರೀಗಳು ಕೇವಲ ದಲಿತರ ಮನೆಗೆ ಹೋಗುವುದು ಮಾತ್ರ ಕಂಡಿರುತ್ತದೆ, ಆದರೆ ಆ ಪ್ರಯತ್ನದ ಹಿಂದೆ ಪೇಜಾವರ ಶ್ರೀಗಳಿಗಿರುವ ಸಾಮಾಜಿಕ ಕಳಕಳಿಯ ಅರಿವಿಲ್ಲ. ಸಾಮಾನ್ಯ ಬ್ರಾಹ್ಮಣನೊಬ್ಬ ದಲಿತನ ಮನೆಗೆ ಹೋಗುವುದಕ್ಕೂ, ಅಷ್ಟ ಮಠಗಳಲ್ಲಿ ಶ್ರೇಷ್ಠ ಮಟವಾದಂತಹ ಉಡುಪಿಯ ಪೇಜಾವರ ಶ್ರೀಗಳು ದಲಿತನ ಮನೆಗೆ ಹೋಗುವುದಕ್ಕೂ ವ್ಯತ್ಯಾಸವಿದೆಯೆಂಬ ಸಾಮಾನ್ಯಜ್ಞಾನ ಹಂಸಲೇಖರಿಗಿರಬೇಕಿತ್ತು.

ಹಂಸ ಲೇಖರಿಗೆ ತಮ್ಮ ಮನೆಯ ಹತ್ತಿರವಿರುವ ಮಸೀದಿಯೊಳಗೆ ಹೋಗಿ, ಮುಸಲ್ಮಾನ್ ಬಾಂಧವರ ಜೊತೆ ಕುಳಿತು ಊಟ ಮಾಡುವ ಧೈರ್ಯವಿದೆಯಾ ಅಥವಾ ತಮ್ಮ ಮನೆಯ ಕಾಂಪೌಂಡಿನಲ್ಲಿ ಮುಸಲ್ಮಾನರಿಗೆ ನಮಾಜ್ ಮಾಡಲು ಜಾಗ ಕೊಡುವ ಔದಾರ್ಯತೆ ಇದೆಯೇ? ಪೇಜಾವರ ಶ್ರೀಗಳು ಉಡುಪಿ ಮಠದ ಅಂಗಳದಲ್ಲಿ ಮುಸಲ್ಮಾನ್ ಬಾಂಧವರಿಗೆ ಊಟ ಹಾಕಿಸಿ ಕಳುಹಿಸಿದ್ದಾರೆ, ಶ್ರೀಗಳ ಈ ಸಾಮಾಜಿಕ ಸಮನ್ವತಾ ಕಾರ್ಯದಿಂದ ಹಿಂದೂ ಮುಸಲ್ಮಾನರಿಗೆ ಎಂತಹ ಸಂದೇಶ ತಲುಪಿದೆಯೆಂಬ ಅರಿವಿದೆಯೇ ಮಿಸ್ಟರ್ ‘ಗಂಗರಾಜು’? ‘ಸೆಲೆಬ್ರಿಟಿ’ಯಾದವರು ಕೇವಲ ಅಭಿಮಾನಿಗಳೊಂದಿಗೆ ಚೆನ್ನಾಗಿ ನಡೆದುಕೊಂಡರೆ ಸಾಲದು, ಸಮಾಜದ ಲ್ಲಿನ ಸಮಸ್ಯೆಗಳ ಬಗ್ಗೆ ಕಾಳಜಿವಹಿಸಬೇಕು.

ನಿಮ್ಮ ಜೀವನದನಾದರೂ ಅಸ್ಪೃಶ್ಯತೆ ನಿರ್ಣಾಮ ಮಾಡುವ ಕೆಲಸ ಮಾಡಿದ್ದೀರಾ? ಶತಮಾನಗಳಿಂದ ದಲಿತರು ಅನುಭವಿಸುತ್ತಿರುವ ದೌರ್ಜನ್ಯದ ಅರಿವು ನಿಮಗಿದ್ದರೆ, ದೌರ್ಜನ್ಯಗಳನ್ನು ಹೋಗಲಾಡಿಸಲು ಬ್ರಾಹ್ಮಣ ನಾಯಕರು ಹಾಗು ಸ್ವಾಮಿಗಳು ಪಟ್ಟಿರುವ ಶ್ರಮದ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು.
ಕೇರಳದಲ್ಲಿ ‘ಕಂಚಿ ಕಾಮಕೋಟಿ ಶ್ರೀಗಳ’ ನೇತೃತ್ವದಲ್ಲಿ ೨೫ ದಲಿತರಿಗೆ ಎರಡು ವರ್ಷಗಳ ಕಾಲ ವೇದಗಳ ಪಾರಾಯಣ ಮಾಡಿಸಿ, ಪೌರೋಹಿತ್ಯವನ್ನು ಕಲಿಸಿ ೪೦,೦೦೦ ಜನಗಳ ಮುಂದೆ ದೀಕ್ಷೆಯನ್ನು ನೀಡಲಾಗಿತ್ತು. ಈ ಮಹಾನ್ ಕಾರ‍್ಯದ ಹಿಂದೆ ಇದ್ದದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರು, ಪ್ರಚಾರಕರೂ ಸಹ ಬ್ರಾಹ್ಮಣರೇ ಆಗಿದ್ದರು.

ಸಮಾಜದಲ್ಲಿನ ಹಿರಿಯ ಸ್ವಾಮೀಜಿಯೊಬ್ಬರು ತಮ್ಮ ಆಚರಣೆಗಳನ್ನು ಬದಿಗೊತ್ತಿ, ಅಸ್ಪೃಶ್ಯತೆಯನ್ನು ನಿವಾರಿಸುವಲ್ಲಿ ಈ ಮಟ್ಟದ ಪ್ರಯತ್ನ ಮಾಡುವುದು ಸುಲಭದ ಮಾತಲ್ಲ. ಇತ್ತೀಚಿಗೆ ರಾಜ್ಯದ ಸಂಸದರು ಹಾಗು ಸಚಿವ ‘ನಾರಾಯಣಸ್ವಾಮಿ’ ಯವರು ದಲಿತರೆಂಬ ಕಾರಣಕ್ಕೆ ಚಿತ್ರದುರ್ಗ ಹಳ್ಳಿಯೊಂದರ
ಜನರು ಒಳಗೆ ಬರಲು ಬಿಡಲಿಲ್ಲ, ಸುಮಾರು ಆರು ಘಂಟೆಗಳ ಕಾಲ ನಡೆದ ಮಾತುಕತೆಯ ನಂತರ ಅವರನ್ನು ಹಳ್ಳಿಯೊಳಗೆ ಬಿಡಲಾಯಿತು. ಆ ಊರಿನಲ್ಲಿದ್ದವ ರ್ಯಾರು ಸಹ ಬ್ರಾಹ್ಮಣರಾಗಿರಲಿಲ್ಲ, ಬ್ರಾಹ್ಮಣೇತರ ವರ್ಗದ ಜನರೇ ಕೇಂದ್ರ ಮಂತ್ರಿಗಳನ್ನು ಒಳಗೆ ಬಿಟ್ಟುಕೊಳ್ಳಲಿಲ್ಲ.

ಮಂತ್ರಿಗಳು ಆ ಹಳ್ಳಿಯಜನರ ಮನೆಗೆ ಊಟಕ್ಕೆಂದು ಬಂದಿರಲಿಲ್ಲ, ಅವರ ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ಮಾತನಾಡಲು ಬಂದಿದ್ದರು. ದಲಿತರ ಮನೆ ಯೊಳಗೆ ಹೋಗುವುದು ದೊಡ್ಡ ವಿಷಯವಲ್ಲವೆಂದು ಹಂಸಲೇಖ ಹೇಳುತ್ತಾರೆ, ಆದರೆ ನಾರಾಯಣಸ್ವಾಮಿಯವರ ವಿಷಯದಲ್ಲಿ ಜನರಿಂದ ಆರಿಸಿ ಬಂದಂತಹ ಸಂಸದನನ್ನೇ ಊರಿನ ಒಳಗೆ ಬಿಟ್ಟುಕೊಳ್ಳಲಿಲ್ಲವಲ್ಲ, ಇಂತಹ ಜನರ ನಡುವೆ ಪೇಜಾವರ ಶ್ರೀಗಳು ದಲಿತರ ಮನೆಯೊಳಗೆ ಹೋಗುವುದು ದೊಡ್ಡ ವಿಷಯ ವಲ್ಲದೆ ಮತ್ತೇನು? ಕಳೆದ ವಾರ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಬಾಗಲೂರಿನ ಗ್ರಾಮ ಪಂಚಾಯಿತಿಯಲ್ಲಿ ಚುನಾಯಿತ ದಲಿತ ಉಪಾಧ್ಯಕ್ಷೆ ಕುಳಿತಿದ್ದ ಕುರ್ಚಿ ಯನ್ನು ಗೋಮೂತ್ರದಿಂದ ಸ್ವಚ್ಛಗೊಳಿಸಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಕುಳಿತುಕೊಂಡಿದ್ದ, ಇಂತಹ ವಿಕೃತ ಮನಸ್ಸಿನ ವ್ಯಕ್ತಿಗಳ ನಡುವೆ ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗುವುದು ಒಳ್ಳೆಯ ವಿಷಯವಲ್ಲದೆ ಮತ್ತೇನು? ಕೇವಲ ಕುರ್ಚಿಯಲ್ಲಿ ಕುಳಿತಿದ್ದಕ್ಕೆ ಸ್ವಚ್ಛಗೊಳಿಸುವ ಇಂತಹವರು, ಇನ್ನು ದಲಿತರ ಮನೆಯಲ್ಲಿ ಊಟ ಮಾಡಿ ಬಿಟ್ಟರೆ ಬಹುಷ್ಯ ವಿಷವನ್ನು ಕುಡಿದು ಸತ್ತೇ ಹೋಗಬಹುದಲ್ಲವೇ ಗಂಗರಾಜು ಅಲಿಯಾಸ್ ಹಂಸಲೇಖ? ದಲಿತರ ಮೇಲಿನ ದೌರ್ಜನ್ಯಗಳನ್ನು ಬಳಿಸಿಕೊಂಡು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಮಿಷನರಿಗಳ ಬಗ್ಗೆ ತಾವು ಮಾತನಾಡಬೇಕಿತ್ತು? ರಾಜ್ಯದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮತಾಂತರದಲ್ಲಿ ಹೆಚ್ಚಿನ ಶೋಷಿತರು ದಲಿತರೆಂಬುದುದರ ಅರಿವು ತಮಗಿದೆಯೇ? ಹಂಸಲೇಖರ ಪರ ನಿಂತಿರುವ ದಲಿತ ಸಂಘಟನೆಗಳು ಮತಾಂತರದ ವಿರುದ್ಧ ಯಾಕೆ ಪ್ರತಿಭಟನೆ ಮಾಡುತ್ತಿಲ್ಲ? ದಲಿತ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆಯ ಮೇಲೆ ಬೆಂಕಿ ಹಚ್ಚಿದ ಮುಸಲ್ಮಾನ್ ಸಂಘಟನೆಗಳ ವಿರುದ್ಧ ಯಾಕೆ ಧ್ವನಿ ಎತ್ತಲಿಲ್ಲ ? ಬ್ರಾಹ್ಮಣರನ್ನು ಟಾರ್ಗೆಟ್ ಮಾಡುವ ಒಂದೇ ಉದ್ದೇಶದಿಂದ ದಲಿತರ ಅಸ್ಪೃಶ್ಯತೆಯನ್ನು ಬ್ರಾಹ್ಮಣರ ತಲೆಗೆ ಕಟ್ಟುವ ಸಂಘಟನೆ ಗಳಿಗೆ, ಬ್ರಾಹ್ಮಣೇತರ ಜಾತಿಗಳು ದಲಿತರ ಮೇಲೆ ನಡೆಸುವ ದೌರ್ಜನ್ಯದ ಬಗ್ಗೆ ಧ್ವನಿ ಎತ್ತುವುದಿಲ್ಲ.

ಭಾರತೀಯ ಜನತಾ ಪಕ್ಷದ ಶಾಸಕ ‘ಗೂಳಿಹಟ್ಟಿ ಶೇಖರ್’ರ ತಾಯಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದರು. ಆಡಳಿತ ಪಕ್ಷದ ಶಾಸಕನ ತಾಯಿ ಯೊಬ್ಬರು ಮಿಷನರಿಗಳ ಹಾವಳಿಗಳಿಗೆ ಸಿಕ್ಕು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರರಾಗುತ್ತಾರೆಂದರೆ, ದಲಿತ ರನ್ನು ಅತಿ ಹೆಚ್ಚು ಶೋಷಣೆಗೊಳಪಡಿಸು ತ್ತಿರುವುದು ಕ್ರಿಶ್ಚಿಯನ್ನರೇ ಹೊರತು ಬ್ರಾಹ್ಮಣರಲ್ಲ. ದಲಿತರ ಅಸಹಾಯಕತೆ ಬಳಸಿಕೊಂಡು ತಮ್ಮ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಕ್ರಿಶ್ಚಿಯನ್ ಮಿಷನರಿಗಳ ಬಗ್ಗೆ ತಾವು ಮಾತನಾಡಬೇಕಿತ್ತು.

ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಎಷ್ಟು ದಲಿತ ಕುಟುಂಬಗಳ ಬಳಿ ತಾವು ತೆರಳಿ, ಹಿಂದೂ ಧರ್ಮಕ್ಕೆ ವಾಪಾಸ್ ಕರೆದುಕೊಂಡು ಬಂದಿದ್ದೀರಿ ? ಮತಾಂತರಗೊಂಡಿರುವ ದಲಿತರನ್ನು ಮೂಲ ಕ್ರಿಶ್ಚಿಯನ್ನರು ಯಾವ ರೀತಿಯಲ್ಲಿ ನೋಡಿಕೊಳ್ಳುತ್ತಾರೆಂಬುದರ ಅರಿವು ನಿಮಗಿದೆಯೇ ? ‘ಕ್ಯಾಥೊಲಿಕ್’ರು ಹಾಗು ‘ಪ್ರೊಟೆಸ್ಟೆಂಟ್’ಗಳ ನಡುವಿನ ಅಸ್ಪ್ರುಶ್ಯತೆ ಅರಿವು ನಿಮಗಿದೆಯೇ ? ಮತಾಂತರಗೊಂಡಿರುವ ದಲಿತರು ‘ಕ್ಯಾಥೊಲಿಕ್’ರ ಚುರ್ಚುಗಳಿಗೆ ಕಾಲಿಡುವಂತಿಲ್ಲ, ಚರ್ಚಿನ ಹೊರಗಡೆಯೇ ಯಾರು ಬರಬೇಕು ಯಾರು ಬರಬಾರದೆಂದು ದೊಡ್ಡ ಫಲಕ ಹಾಕಿರುತ್ತಾರೆ.

‘ಕ್ಯಾಥೊಲಿಕ್’ ಪಾದ್ರಿಗಳು ಮತಾಂತರಗೊಂಡಂತಹ ದಲಿತರ ಮನೆಗೆ ಕಾಲಿಡುವುದಿಲ್ಲ, ಅಷ್ಟೆಲ್ಲ ಯಾಕೆ ಮತಾಂತರಗೊಳ್ಳದ ಸಾಮಾನ್ಯ ದಲಿತನ ಮನೆಗೆ ಒಬ್ಬ‘ಕ್ಯಾಥೊಲಿಕ್’ ಪಾದ್ರಿಯನ್ನು ಕರೆಸುವ ತಾಕತ್ತು ನಿಮಗಿದೆಯಾ? ಅವರು ದಲಿತರ ಮನೆಯಲ್ಲಿ ಊಟ ಮಾಡುವುದು ಬೇಡ, ಕೇವಲ ಬಂದು ಎರಡು ನಿಮಿಷ
ಕುಳಿತು ಹೋದರೆ ಸಾಕು. ಪ್ರೊಟೆಸ್ಟೆಂಟ್ ಚುರ್ಚುಗಳಲ್ಲಿ ಮತಾಂತರಗೊಂಡಂತಹ ದಲಿತರಿಗೆ ಮೊದಲ ಪ್ರವೇಶವಿಲ್ಲ, ಮೂಲ ಪ್ರೊಟೆಸ್ಟೆಂಟ್‌ಗಳು ಮೊದಲು ಚುರ್ಚಿನ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ, ನಂತರವಷ್ಟೇ ಮತಾಂತರ ಗೊಂಡಂತಹ ಕ್ರಿಶ್ಚಿಯನ್ನರು ಪಾಲ್ಗೊಳ್ಳುತ್ತಾರೆ.

ಉಡುಪಿಯ ದೇವಸ್ಥಾನದ ಗೇಟಿನಲ್ಲಿ ಭಕ್ತರು ದರ್ಶನ ಪಡೆಯಲು ಈ ರೀತಿಯ ತಾರತಮ್ಯವಿರುವುದನ್ನು ಕಂಡಿದ್ದೀರಾ ? ಧರ್ಮಸ್ಥಳದಲ್ಲಿ ಈ ರೀತಿಯ ತಾರ ತಮ್ಯವಿದೆಯೇ ? ಹೊರನಾಡಿನಲ್ಲಿ ಈ ರೀತಿಯ ತಾರತಮ್ಯವಿದೆಯೇ ? ಇಂತಹ ಮನಸ್ಥಿತಿಗಳ ನಡುವೆ ಪೇಜಾವರ ಶ್ರೀಗಳು ದಲಿತನ ಮನೆಗೆ ಬರುವುದು ದೊಡ್ಡ ವಿಷಯವಲ್ಲದೆ ಮತ್ತೇನು? ಪೇಜಾವರರು ಎಲ್ಲ ಬ್ರಾಹ್ಮಣರ ಮನೆಯಲ್ಲೂ ಊಟ ಮಾಡುವುದಿಲ್ಲವೆಂಬುದು ತಿಳಿದಿರಲಿ, ಮಠಾಧೀಶರಿಗೆ ತಮ್ಮದೇ ಆದಂತಹ ಪೂಜಾ ಪದ್ದತಿಗಳಿರುತ್ತವೆ, ಊಟೋಪಚಾರದ ಪದ್ದತಿಗಳಿರುತ್ತವೆ ಹಾಗಾಗಿ ಅದು ಬ್ರಾಹ್ಮಣರ ಮನೆಯಾದರೂ ಸರಿ ಅಥವಾ ಬ್ರಾಹ್ಮಣೇತರರ ಮನೆಯಾದರೂ ಸರಿ ಎಂದರಲ್ಲಿ ಯತಿಗಳು ಊಟ ಮಾಡುವುದಿಲ್ಲ.

ಶತಮಾನಗಳಿಂದ ನಡೆಯುತ್ತಿರುವ ಶೋಷಣೆಯ ಜೊತೆಗೆ, ಶೋಷಣೆಯನ್ನು ನಿಲ್ಲಿಸುವ ಕಾರ್ಯಗಳೂ ಸಹ ಆಗಿವೆ. ಅವರ್ಯಾರೂ ಸಹ ದಲಿತರ ಅಸಹಾ ಯಕತೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿಲ್ಲ.ಕ್ರಿಶ್ಚಿಯನ್ ಮಿಷನರಿಗಳು ದಲಿತರ ಅಸಹಾಯಕತೆಯನ್ನೇ ಬಳಸಿಕೊಂಡು ತಮ್ಮ ಧರ್ಮದ ವಿಸ್ತರಣೆಯಲ್ಲಿ ತೊಡಗಿವೆ. ‘ಚಿತ್ಪಾವನ’ ಬ್ರಾಹ್ಮಣರಾಗಿದ್ದಂತಹ ‘ವೀರ ಸಾವರ್ಕರ್’ ದಲಿತರಿಗೆ ಮಂದಿರ ಪ್ರವೇಶ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಪತಿತ ಪಾವನ ಮಂದಿರವನ್ನೇ ನಿರ್ಮಿಸಿದ್ದರು. ತನ್ನ ಜಾತಿಯ ಪ್ರಮುಖರನ್ನು ಎದುರು ಹಾಕಿಕೊಂಡು ದಲಿತರಿಗೆ ದೇಗುಲ ಪ್ರವೇಶ ಮಾಡಿಸಿದ್ದರು ಸಾವರ್ಕರ್. ಸ್ವತಃ ಅಂಬೇಡ್ಕರ್ ದಲಿತರ ಮೇಲಿನ ಶೋಷಣೆಯನ್ನು ಕಂಡು ಕ್ರಿಶ್ಚಿಯನ್ ಅಥವಾ ಮುಸಲ್ಮಾನ್ ಧರ್ಮಕ್ಕೆ ಮತಾಂತರವಾಗಲಿಲ್ಲ, ಯಾಕೆಂದರೆ ಅವರಿಗೆ ಭಾರತ ಮತ್ತೊಂದು ‘ಈಸ್ಟ್ ಇಂಡಿಯಾ ಕಂಪನಿ’ಯಾಗುವುದು ಬೇಕಿರಲಿಲ್ಲ.

ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸಂಸ್ಥಾಪಕ ’ಡಾಕ್ಟರ್ ಹೆಡ್ಗೆವಾರ್’ ರಿಗೆ ದಲಿತರನ್ನು ‘ಹರಿಜನ’ರೆಂದು ಕರೆಯುವುದು ಇಷ್ಟವಿರಲಿಲ್ಲ, ಅಂಬೇಡ್ಕರರಿಗೆ ಪಾಠ ಮಾಡುತ್ತಿದ್ದಂತಹ ಮೇಷ್ಟ್ರು ಒಬ್ಬ ಬ್ರಾಹ್ಮಣನೆಂಬುದನ್ನು ಮರೆಯುವ ಹಾಗಿಲ್ಲ. ಇತ್ತೀಚಿಗೆ ದಲಿತ ನಾಯಕ ‘ಮಲ್ಲಿಕಾರ್ಜುನ ಖರ್ಗೆ’ಯವರ ಮೊಮ್ಮೊಗಳ ಮದುವೆ ಹವ್ಯಕ ಬ್ರಾಹ್ಮಣ ಕುಟುಂಬದ ವರನೊಂದಿಗೆ ನೆರವೇರಿತು, ಅಲ್ಲಿಯೂ ಸಹ ಬ್ರಾಹ್ಮಣನೆಂಬ ಉನ್ನತ ಜಾತಿ ಪ್ರಶ್ನೆ ಏಳಲೇ ಇಲ್ಲ. ಮುಸ್ಲಿಂ ಧರ್ಮದಲ್ಲಿನ ಅಸ್ಪೃಶ್ಯತೆಯ ಬಗ್ಗೆಯೂ ತಾವು ಮಾತನಾಡಬೇಕಿದೆ, ಅವರಲ್ಲಿ ಪೂಜಿಸುವ ದೇವರು ಒಬ್ಬನಿರಬಹುದು ಆದರೆ ‘ಶಿಯಾ’ ಹಾಗು ‘ಸುನ್ನಿ’ ಮುಸಲ್ಮಾನರು ಎಂದೂ ಸಹ ಒಂದೇ ತಕ್ಕಡಿಯಲ್ಲಿರುವುದಿಲ್ಲ.

ಮುಸ್ಲಿಂ ಧರ್ಮದಲ್ಲಿನ ಮೇಲ್ಜಾತಿಯವರು, ಕೆಲ ಜಾತಿಯ ಮನೆಗೆ ಹೆಣ್ಣು ಅಥವಾ ಗಂಡು ಕೊಡುವುದಿಲ್ಲ. ಅವರಲ್ಲಿಯೂ ನೂರಾರು ಒಳ ಪಂಗಡಗಳಿವೆ, ಕೊಲ್ಲಿ ರಾಷ್ಟ್ರದ ಹಲ ಮೌಲ್ವಿಗಳು ಭಾರತದ ಪ್ರತಿ ಮುಸಲ್ಮಾನ್ ಮಸೀದಿಗಳಿಗೆ ಭೇಟಿ ನೀಡುವುದಿಲ್ಲ, ಕೆಳಸ್ತರದ ಮುಸಲ್ಮಾನನ ಮನೆಗೆ ಭೇಟಿ ನೀಡುವುದಿಲ್ಲ. ನೀವು ಅವರನ್ನಾದರೂ ಒಮ್ಮೆ ದಲಿತರ ಮನೆಗೆ ಕರೆಸುವ ಪ್ರಯತ್ನ ಮಾಡಬೇಕು, ಬಹುಷ್ಯ ಆಗ ನಿಮಗೆ ಶ್ರೀಗಳ ಸಮಾಜಮುಖಿ ಚಿಂತನೆಯ ಅರಿವಾಗುತ್ತದೆ.
ದೇವನೊಬ್ಬನೇ ‘ಯೇಸುಕ್ರಿಸ್ತ’ನೆಂದು ಪ್ರಚಾರ ಮಾಡುವ ‘ಕ್ಯಾಥೊಲಿಕ್’ ಚರ್ಚಿನ ಗುರುಗಳು ತಮ್ಮದೇ ಪಂಥದ ‘ಪ್ರೊಟೆಸ್ಟೆಂಟ್’ ಚರ್ಚುಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ, ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್ನರಿಗೆ ಸುಲಭವಾಗಿ ‘ಕ್ಯಾಥೊಲಿಕ್ ಚರ್ಚು’ಗಳಿಗೆ ಪ್ರವೇಶವಿಲ್ಲ, ಕ್ಯಾಥೊಲಿಕ್ ಚರ್ಚುಗಳಲ್ಲಿ ಮತಾಂತರಗೊಂಡ ದಲಿತ ಕ್ರಿಶ್ಚಿಯನ್ನರಿಗೆ ಪ್ರವೇಶವಿಲ್ಲ.

‘ಪ್ರೊಟೆಸ್ಟೆಂಟ’ ಚರ್ಚುಗಳಲ್ಲಿ ಮತಾಂತರಗೊಂಡಂತಹ ದಲಿತ ಕ್ರಿಶ್ಚಿಯನ್ನರಿಗೆ ಪ್ರಾರ್ಥನೆಯ ಸಂದರ್ಭದಲ್ಲಿ ಮೊದಲ ಪ್ರವೇಶವಿಲ್ಲ. ಮತಾಂತರ ಮಾಡಲು ಮನೆಗೆ ಬರುವ ಮತಾಂತರಿಗಳು ಪ್ರೊಟೆಸ್ಟೆಂಟ್ ವರ್ಗದ ಕ್ರಿಶ್ಚಿಯನ್ನರು, ಅವರಿಗೂ ಸಹ ಕ್ಯಾಥೊಲಿಕ್ ಚರ್ಚುಗಳಿಗೆ ಅಷ್ಟು ಸುಲಭದ ಪ್ರವೇಶವಿಲ್ಲ ಇವರೆಲ್ಲರ ಮಡಿ ಮೈಲಿಗೆಗಳು ನಿಮ್ಮ ಕಣ್ಣಿಗೆ ಯಾಕೆ ಕಾಣುವುದಿಲ್ಲ ? ಹಿಂದೂ ಧರ್ಮದಲ್ಲಿ ದಲಿತರ ಶೋಷಣೆಗಳು ಶತ ಶತಮಾನಗಳಿಂದ ಆಗುತ್ತಿದೆಯೆಂಬ ಸತ್ಯವನ್ನು ನಾವು ಒಪ್ಪಿಕೊಳ್ಳುತ್ತೇವೆ, ಆದರೆ ಶೋಷಣೆಗಳನ್ನು ಹೋಗಲಾಡಿಸಲು ಹಿಂದೂ ಧರ್ಮದ ಸ್ವಾಮಿಗಳು ಪಟ್ಟಿರುವ ಶ್ರಮವನ್ನೂ ಒಪ್ಪಿ ಕೊಳ್ಳಬೇಕು. ಪೇಜಾವರ ಶ್ರೀಗಳು ದಲಿತರ ಮನೆಗೆ ಭೇಟಿ ನೀಡಿರುವ ವಿಷಯವು ನಿಮಗೆ ಹಾಸ್ಯಾಸ್ಪದವಾಗಿ ಕಾಣುತ್ತದೆಯೆಂದಾದರೆ, ಮತ್ತದೇ ಪ್ರಶ್ನೆ ಕೇಳುತ್ತಿದ್ದೇನೆ ಕ್ಯಾಥೊಲಿಕ್ ಚರ್ಚಿನ ಗುರುಗಳನ್ನು ಮತಾಂತರವಾದ ದಲಿತರ ಮನೆಗೆ ಕರೆಸುವ ಧೈರ್ಯ ನಿಮಗಿದೆಯೇ? ಅವರು ಬಂದು ಊಟ ಮಾಡುವುದು ಬೇಡ, ಅವರಿಗೆ ಕುರಿಯ ರಕ್ತ,
ಲಿವರ್,ಬೋಟಿ, ಕೈ, ಕಾಲಿನಿಂದ ಮಾಡಿದ ಖಾದ್ಯಗಳನ್ನೂ ಸಹ ನೀಡುವುದಿಲ್ಲ, ಅವರು ಬಂದು ಒಂದೇ ಒಂದು ಲೋಟ ನೀರನ್ನು ಕುಡಿದುಕೊಂಡು ಹೋಗಲಿ ಸಾಕು.

ದಲಿತರ ಮೇಲಿನ ಅಸ್ಪ್ರುಶ್ಯತೆಯನ್ನು ಹೋಗಲಾಡಿಸಲು ಹಿಂದೂ ಧರ್ಮದ ಯತಿಗಳು, ನಾಯಕರು, ಹೋರಾಟಗಾರರು ಪಟ್ಟಿರುವ ಶ್ರಮವನ್ನು ಅಪಹಾಸ್ಯ ಮಾಡಬೇಡಿ. ದಲಿತರ ಪರ ನೀವೇ ಹೋರಾಟಕ್ಕೆ ಧುಮುಕಿದರೂ, ನಾವು ಮುಂದೆ ನಿಂತು ಸಹಾಯ ಮಾಡುತ್ತೇವೆ, ನಿಮಗೆ ನಿಜವಾದ ದಲಿತಪರ ಕಾಳಜಿ ಇದ್ದರೆ ದಲಿತರ ವಿಚಾರದಲ್ಲಿ ಕೇಳಿಬರುವ ಪ್ರತಿ ಅಸ್ಪೃಶ್ಯತೆ ವಿರುದ್ಧ ಮಾತನಾಡಿ, ದಲಿತರ ಅಸಹಾಯಕತೆಯನ್ನು ಬಳಸಿಕೊಂಡು ಮತಾಂತರ ಮಾಡುತ್ತಿರುವ
ಕ್ರಿಶ್ಚಿಯನ್ ಮಿಷನರಿಗಳ ಬಗ್ಗೆ ಮಾತನಾಡಿ, ಮತಾಂತರವಾದ ನಂತರ ಕ್ರಿಶ್ಚಿಯನ್ ಧರ್ಮದಲ್ಲಿ ದಲಿತರು ಅನುಭವಿಸುತ್ತಿರುವ ಅಸ್ಪ್ರುಶ್ಯತೆಯ ಬಗ್ಗೆ ಮಾತ ನಾಡಿ, ಅದನ್ನು ಬಿಟ್ಟು ಪೇಜಾವರ ಶ್ರೀಗಳ ಬಗ್ಗೆ ತುಚ್ಛವಾಗಿ ಮಾತನಾಡಬೇಡಿ.