Sunday, 22nd September 2024

ವಿಶ್ವ ಭಾರತದೆಡೆಗೆ ನೋಡುವಂತಾಗಿದೆ ಎಂದಿದ್ದೇಕೆ ಗೇಟ್ಸ್ ?

Bill Gates

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಲಸಿಕೆಯಲ್ಲಿ ಭಾರತ ವಿಶ್ವಸಮುದಾಯಕ್ಕೆ ಮಾದರಿಯಾಗುವಂಥದ್ದು. ಭಾರತದ ಜನಸಂಖ್ಯಾ ಬಾಹುಳ್ಯವನ್ನು ಗಮನದಲ್ಲಿಟ್ಟು ಹೇಳುವುದಾದರೆ, ಕನಿಷ್ಠ ಅವಧಿ ಯಲ್ಲಿ ಗರಿಷ್ಠ ವ್ಯಾಕ್ಸಿನ್‌ಗಳನ್ನು ಕೊಟ್ಟಿರುವುದು ಗಮನಾರ್ಹ. ಈ ಅವಧಿಯಲ್ಲಿ ವಿಶ್ವದ ಉಳಿದ ದೇಶಗಳು ತಂತಮ್ಮ ದೇಶಗಳಲ್ಲಿ ಚುಚ್ಚುಮದ್ದು ನೀಡಿಕೆ ಪ್ರಕ್ರಿಯೆ ಇಷ್ಟರ ಪೂರ್ಣಗೊಳಿಸಬಹುದಾಗಿತ್ತು. ಆ ಮೂಲಕವಾಗಿ ಸಾಂಕ್ರಾಮಿಕವನ್ನು ತಹಬಂದಿಯಲ್ಲಿಡುವುದು ಕೂಡ ಸಾಧ್ಯವಿತ್ತು ಎಂದು ಶ್ಲಾಸಿದ್ದಾರೆ ಬಿಲ್ ಗೇಟ್ಸ್.

ಭಾರತದ ಬಗ್ಗೆ ಅಮೆರಿಕ ಪತ್ರಿಕೆಗಳಲ್ಲಿ ನಕಾರಾತ್ಮಕ ವರದಿಗಳೇ ಬರುವುದನ್ನು ಗಮನಿಸಿರಬಹುದು. ಅಂತಾರಾಷ್ಟೀಯ ಮಟ್ಟದಲ್ಲಿ ಭಾರತದ ಸಾಧನೆಯ ಬಗ್ಗೆ ಯಾರೂ ಮಾತಾಡುವುದಿಲ್ಲ. ನಮ್ಮ ಪತ್ರಿಕೆಗಳೂ ಬರೆಯುವುದಿಲ್ಲ. ಭಾರತದ ಬಗ್ಗೆ ಸಕಾರಾತ್ಮಕ ಸಂಗತಿಗಳಿಗೆ ಸಿಗಬೇಕಾದ ಮಹತ್ವ ಸಿಗುವುದಿಲ್ಲ. ಹೀಗಾಗಿ
ಭಾರತ ಎಷ್ಟೇ ಉತ್ತಮ ಕೆಲಸ ಮಾಡಿದರೂ ಅದಕ್ಕೆ ಸಿಗಬೇಕಾದ ಮಾನ್ಯತೆ, ಪ್ರಶಂಸೆ ಸಿಗುವುದಿಲ್ಲ. ಆದರೆ ಭಾರತ ಸರಕಾರ ನೂರು ಕೋಟಿ ಜನರಿಗೆ ಲಸಿಕೆ ಹಾಕಿದ್ದನ್ನು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮುಕ್ತ ಕಂಠದಿಂದ ಹೊಗಳಿದ್ದಾರೆ.

ಅಷ್ಟೇ ಅಲ್ಲ, ಈ ವಿಷಯದಲ್ಲಿ ಭಾರತ ಇಡೀ ವಿಶ್ವಕ್ಕೆ ಮಾದರಿ ಎಂದು ಹೇಳಿದ್ದಾರೆ. ಸರಿಸುಮಾರು ೧೪೦ ಕೋಟಿ ಜನಸಂಖ್ಯೆಯುಳ್ಳ ಉಪಖಂಡ ಭಾರತ, ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಇರುವ ಈ ದೇಶದ ಕ್ಷಮತೆಯನ್ನು ಕಂಡು ನಾನು ಪ್ರಭಾವಿತನಾಗಿದ್ದೇನೆ ಎಂದು ಎನ್ನುವ ಮಾತುಗಳು ಬಿಲ್ ಗೇಟ್ಸ್ ಬಾಯಿಂದ ಬಂದಿದೆ. ಭಾರತ ದೇಶ ನೂರು ಕೋಟಿಗೂ ಹೆಚ್ಹಿನ ಕೋವಿಡ-೧೯ ವ್ಯಾಕ್ಸಿನ್ ಗಳನ್ನು ದೇಶವಾಸಿಗಳಿಗೆ ಕೊಡುವ ಮೂಲಕ ಒಂದು ಮೈಲಿಗಲ್ಲನ್ನು ಸಾಧಿಸಿದೆ. ಜಗತ್ತು ಭಾರತದೆಡೆಗೆ ನೋಡುವಂತಾಗಿದೆ ಎಂದು ಅವರು ಹೇಳಿರುವುದು ಗಮನಾರ್ಹ.

ಬಿಲ್ ಗೇಟ್ಸ್ ಈ ಬಗ್ಗೆ ಸವಿಸ್ತಾರವಾಗಿ ಬರೆಯುತ್ತಾರೆ – ಈ ವ್ಯಾಕ್ಸಿನ್ ಅಭಿಯಾನ ಬೃಹತ್ತಾದದ್ದು ಮತ್ತು ಅಷ್ಟೇ ವೇಗಯುತವಾದದ್ದು, ಅಂಕಿ ಅಂಶಗಳ ಪ್ರಕಾರ ಭಾರತದ ಶೇ.೭೫ ವಯಸ್ಕ ಜನರು ಮೊದಲ ಡೋಸನ್ನು ಪಡೆದುಕೊಂಡಿದ್ದಾರೆ ಮತ್ತು ಶೇ.೩೧ ಜನರು ಎರಡನೇ ಡೋಸನ್ನು ಕೂಡ ಪಡೆದುಕೊಂಡಿzರೆ. ಈ ಪೈಕಿ ಶೇ.೪೮ ಮಹಿಳೆಯರಿದ್ದಾರೆ. ಈ ಸಾಧನೆ ಕೇವಲ ಭಾರತಕ್ಕೆ ಮಾತ್ರವಲ್ಲ ವಿಶ್ವಸಮುದಾಯಕ್ಕೆ ಮಾದರಿಯಾಗುವಂಥಾದ್ದು. ಭಾರತದ ಜನಸಂಖ್ಯಾ ಬಾಹುಳ್ಯವನ್ನು ಗಮನದಲ್ಲಿಟ್ಟು ಹೇಳುವುದಾದರೆ, ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಮಾಣದ ವ್ಯಾಕ್ಸಿನ್‌ಗಳನ್ನು ಕೊಟ್ಟಿರುವುದು ಗಮನಾರ್ಹವಾಗಿದ್ದು, ಈ ಅವಧಿ ಯಲ್ಲಿ ವಿಶ್ವದ ಉಳಿದ ದೇಶಗಳು ತಮ್ಮ ತಮ್ಮ ದೇಶಗಳಲ್ಲಿ ಚುಚ್ಚುಮದ್ದು ನೀಡಿಕೆ ಪ್ರಕ್ರಿಯೆಯನ್ನು ಇಷ್ಟರ ಪೂರ್ಣಗೊಳಿಸಬಹುದಾಗಿತ್ತು. ಆ ಮೂಲಕವಾಗಿ ಎಗಳ ಹಂಗಿಲ್ಲದ ಈ ಸಾಂಕ್ರಾಮಿಕವನ್ನು ತಹಬಂದಿಯಲ್ಲಿಡುವುದು ಕೂಡ ಸಾಧ್ಯವಿತ್ತು.

ಈ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೇ ಇರುವಾಗ, ಭಾರತದ ಈ ಮಹತ್ಸಾಧನೆಯ ಪ್ರಮುಖ ಅಂಶ ಏನು ಎಂಬುದನ್ನು ನಾವು ವಿಶ್ಲೇಷಣೆ ಮಾಡಬೇಕಿದೆ. ಆ ಮೂಲಕವಾಗಿ ಭಾರತ ತನ್ನ ಪ್ರಗತಿಪಥದಲ್ಲಿ ಮುಂದುವರಿಯುವ ಕ್ಷಮತೆಯನ್ನು ವಿಶ್ವಕ್ಕೆ ತೋರಿದೆ. ಮಾತ್ರವಲ್ಲ ಇದು ಅನ್ಯರಾಷ್ಟ್ರಗಳಿಗೆ ಒಂದು ಅನನ್ಯ
ಮಾದರಿಯೂ ಆಗಿದೆ. ಮೊದಲನೆಯದಾಗಿ ಹೇಳಬೇಕೆಂದರೆ ಇಲ್ಲಿ ಸಾದ್ಯಂತವಾಗಿ ಕೆಲಸ ಮಾಡಿರುವುದು ರಾಜಕೀಯ ಇಚ್ಛಾಶಕ್ತಿ. ೩೧ ಡಿಸೆಂಬರ್ ೨೦೨೧ರ ಒಳಗಾಗಿ ದೇಶದ ಎಲ್ಲ ವಯಸ್ಕರಿಗೂ ವ್ಯಾಕ್ಸಿನ್ ನೀಡುವುದನ್ನು ಪೂರ್ಣಗೊಳಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ಇಲ್ಲಿ ಗಮನಾರ್ಹ.

ಅದಕ್ಕೆ ತಕ್ಕಂತೆ ರಾಜ್ಯ ಮತ್ತು ಜಿಗಳ ಪ್ರಮುಖರು ಸಂದರ್ಭವನ್ನು ಗಮನಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉನ್ನತಮಟ್ಟದ  ಮಿತಿಗಳಡಿಯಲ್ಲಿ ೨೦೨೦ರಲ್ಲಿ ಸಿದ್ದಗೊಂಡ ನೀಲನಕಾಶೆಗಳು, ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯಗಳಿಂದಾಗಿ ವ್ಯಾಕ್ಸಿನ್ ತಯಾರಿಕೆ, ಹಂಚಿಕೆ, ಸಾಗಣೆ ಮತ್ತು ನೀಡಿಕೆ ಕ್ರಮಬದ್ಧವಾಗಿ ದೇಶಾದ್ಯಂತ ಆಗಿರುವುದು ಕಂಡುಬರುತ್ತದೆ. ಎರಡನೆಯದಾಗಿ, ಭಾರತ ಯಶಸ್ವಿಯಾಗಿ ಅನೇಕ ಸಾಮೂಹಿಕ ಚುಚ್ಚುಮದ್ದು ಕಾರ್ಯಕ್ರಮ ಗಳನ್ನು ಈಗಾಗಲೇ ನಡೆಸಿದ್ದು, ಅವುಗಳ ಅನುಭವ ಕೂಡ ಇಲ್ಲಿ ಕೆಲಸ ಮಾಡಿದೆ.

ಅದು ಕೋವಿಡ್-೧೯ ವಿರುದ್ಧ ಹೋರಾಡುವುದಕ್ಕೆ ದೇಶಕ್ಕಿರುವ ಕ್ಷಮತೆಯನ್ನು ಮತ್ತೆ ಸಾಬೀತು ಮಾಡಿದೆ. ಭಾರತದ ಸಾಮೂಹಿಕ ಚುಚ್ಚುಮದ್ದು ಅಭಿಯಾನ ಆರೋಗ್ಯ ಸಂರಕ್ಷಣೆಯ ದೃಷ್ಟಿಯಲ್ಲಿ ಇಡೀ ವಿಶ್ವಕ್ಕೆ ಮಾದರಿಯಾದುದು. ಭಾರತದಲ್ಲಿ ಬೇರೆ ಬೇರೆ ಆರೋಗ್ಯಸಂಬಂಽತ ವಿಚಾರಗಳಿಗೆ ೨೭ ಮಿಲಿಯನ್ ನವಜಾತ ಶಿಶುಗಳಿಗೆ ಪಾಥಮಿಕ ಚುಚ್ಚುಮದ್ದು ನೀಡಲಾಗಿದೆ. ೧-೫ ವಯೋಮಾನದ ೧೦ ಕೋಟಿ ಮಕ್ಕಳು ಪ್ರತಿವರ್ಷ ಚುಚ್ಚುಮದ್ದು ಪಡೆಯುತ್ತಾರೆ. ಭಾರತದಲ್ಲಿ ಸರಿಸುಮಾರು ೨೭೦೦೦ ಕೋಲ್ಡ ಸ್ಟೋರೇಜ್ ವ್ಯವಸ್ಥೆ ಇದೆ. ಈ ಎಲ್ಲ ಅಂಕಿ-ಅಂಶಗಳನ್ನು ಗಮನಿಸಿದಾಗ ಕಳೆದ ಕೆಲವಾರು ವರ್ಷಗಳಿಂದ ನಿರಂತರವಾಗಿ ಆರೋಗ್ಯಕ್ಷೇತ್ರದಲ್ಲಿ ಸದ್ದಿಲ್ಲದೇ ಭಾರತ ನಡೆಸಿಕೊಂಡು ಬಂದಿರುವ ಅಭಿಯಾನ, ದೇಶದ ಮೂಲೆಮೂಲೆಗಳನ್ನು ಕೋವಿಡ್ ವ್ಯಾಕ್ಸಿನ್ ತಲುಪಿಸುವಲ್ಲಿ ಸಹಕಾರಿಯಾಗಿದೆ ಎನ್ನಬಹುದು.

ಪ್ರಸಕ್ತ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದೇಶದಲ್ಲಿರುವ ಈ ಮೂಲಭೂತ ವ್ಯವಸ್ಥೆ ಕೆಲಸಕ್ಕೆ ಬಂದಿದೆ. ದೇಶದಲ್ಲಿ ಈಗಾಗಲೇ 348000 ಸಾರ್ವಜನಿಕ
ಕೇಂದ್ರಗಳು ಮತ್ತು ೨೮,೦೦೦ ಖಾಸಗಿ ಕೇಂದ್ರಗಳು ಕೋವಿಡ್ 19 ವ್ಯಾಕ್ಸಿನ್ ಕೊಡುವುದರಲ್ಲಿ ನಿರತವಾಗಿವೆ. ಉತ್ತರ ಮತ್ತು ಈಶಾನ್ಯ ಭಾಗದ ದುರ್ಗಮ
ಬೆಟ್ಟಗುಡ್ಡಗಳ ಪ್ರದೇಶಗಳೂ ಸೇರಿದಂತೆ, ಪ್ರವಾಹಪೀಡಿತ ಪ್ರದೇಶಗಳನ್ನು ಕೂಡ ಈ ವ್ಯಾಕ್ಸಿನ್ ಅಭಿಯಾನ ತಲುಪಿದೆ. ಜೊತೆಗೆ ಭಾರತದ ೨.೩೦ ಕೋಟಿ ಸೇವಾ ಮನೋಭಾವದ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಅವರುಗಳಿಗೆ ಸೂಕ್ತ ತರಬೇತಿ ಕೊಡುವಲ್ಲಿ, ವೈದ್ಯರನ್ನು ಸಜ್ಜುಗೊಳಿಸುವಲ್ಲಿ, ದಾದಿಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಯನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿ, ದೇಶಾದ್ಯಂತ ಸಮಾನವಾಗಿ ಕೋವಿಡ-19 ವ್ಯಾಕ್ಸಿನ್ ಪೂರೈಸುವ ಆಡಳಿತ ವಿಧಾನ ಶ್ಲಾಘನೀಯವಾದುದು.

ಮೂರನೆಯದಾಗಿ, ಭಾರತ ವ್ಯಾಕ್ಸಿನ್ ಮತ್ತು ಔಷಧಗಳನ್ನು ಕಂಡು ಹಿಡಿದು ಉತಾದಿಸುವಲ್ಲಿ ತನಗಿರುವ ಪರಿಣತಿಯನ್ನು ಮತ್ತೆ ಸಾಬೀತುಪಡಿಸಿದೆ. ಈ ಸಾಂಕ್ರಾ ಮಿಕ ರೋಗಕ್ಕೆ ಮೊದಲು ಭಾರತದಲ್ಲಿ ಕೋಟ್ಯಂತರ ಜನರಿಗೆ ವಿವಿಧ ಸೋಂಕು ರೋಗಗಳಾದ ಮೆನಿಂಜೈಟಿಸ್, ನ್ಯುಮೋನಿಯಾ, ವಾಂತಿಭೇದಿ ಯಂತಹ ರೋಗಲಕ್ಷಣಗಳಿಗೆ ಚುಚ್ಚುಮದ್ದು ನೀಡಿ  ರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ. ಬಿಲ್ ಗೇಟ್ಸ್ ಪ್ರತಿಷ್ಠಾನವು ಭಾರತ ಸರಕಾರ ದೊಂದಿಗೆ ಕೈಜೋಡಿಸಿದೆ. ಏಕೆಂದರೆ ಭಾರತೀಯ ಉತ್ಪಾದನಾ ಘಟಕಗಳಾದ ಸಿರಮ್ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಮತ್ತು ಬಯೋ-ಇ ಇವೆಲ್ಲವೂ ಸೂಕ್ತ, ಸುರಕ್ಷಿತ ಮತ್ತು ಕೈಗೆಟಕುವ ಬೆಲೆಯ ವ್ಯಾಕ್ಸಿನ್ ತಯಾರಿಸಿ ದೇಶಾದ್ಯಂತ ಇರುವ ಕೆಳ ಮತ್ತು ಮಧ್ಯಮವರ್ಗದ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಿದೆ.

ದೇಶೀಯವಾಗಿ ತಯಾರಾದ ವ್ಯಾಕ್ಸಿನ್‌ಗಳಾದ ಕೋವಿಶೀಲ್ಡ ಮತ್ತು ಕೋವಾಕ್ಸಿನ್ ಭಾರತೀಯರನ್ನು ಕೋವಿಡ್-19 ನಿಂದ ಪಾರುಮಾಡುವಲ್ಲಿ ದೊಡ್ಡಮಟ್ಟದಲ್ಲಿ ಸಹಾಯಕವಾಗಿವೆ. ಈ ದಿಸೆಯಲ್ಲಿ ಸೀರಮ್ ನವರ ಉತಾದನೆಗಳಾದ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ತಯಾರಿಕೆ ಮತ್ತು ಅದನ್ನು ವಿಶ್ವಾದ್ಯಂತ ಹಂಚಿಕೆ ಮಾಡುವ ಯೋಜನೆಗೆ ಬಿಲ್ ಗೇಟ್ಸ್ ಪ್ರತಿಷ್ಠಾನ ಅನುದಾನ ನೀಡಿದೆ. ನಾಲ್ಕನೆಯದಾಗಿ, ಭಾರತವು ತನ್ನ ತಾಂತ್ರಿಕ ಕ್ಷಮತೆಯನ್ನು ಸಕಾಲದಲ್ಲಿ ಬಳಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ವ್ಯಾಕ್ಸಿನ್ ಎಲ್ಲ ಮಾಹಿತಿಯ ಡಿಜಿಟಲೀಕರಣದೊಂದಿಗೆ ಹೊಸತೊಂದು ಕ್ರಾಂತಿಯನ್ನೇ ಮಾಡಿದೆ.

ಉದಾಹರಣೆಗೆ ಹೇಳುವುದಾದರೆ ಕೋವಿನ್ ಎಂಬ ಭಾರತದಲ್ಲಿ ಚಾಲನೆಯಲ್ಲಿರುವ ಮುಕ್ತ ಜಾಲತಾಣ ವೇದಿಕೆ, ವ್ಯಾಕ್ಸಿನ್ ಸಂಬಂಧಿತ ಎಲ್ಲ ಸಂಗತಿಗಳನ್ನು
ಪರಿಣಾಮಕಾರಿಯಾಗಿ ನಿಭಾಯಿಸುತ್ತಿದೆ. ವ್ಯಾಕ್ಸಿನ್ ಪಡೆದವರಿಗೆ ಪ್ರಮಾಣೀಕರಿಸಬಹುದಾದ ಡಿಜಿಟಲ್ ದೃಢೀಕರಣ ಪತ್ರ ನೀಡುವಲ್ಲಿ ಮಹತ್ವದ ಪಾತ್ರವನ್ನು
ನಿರ್ವಹಿಸುತ್ತಿದೆ. ಭಾರತದ ಈ ಜಾಲತಾಣ ವೇದಿಕೆಯ ಕ್ಷಮತೆಯಿಂದ ನಾನು ವಿಶೇಷವಾದ ಪ್ರೇರಣೆಯನ್ನು ಪಡೆದಿದ್ದೇನೆ. ಭಾರತದ ಆರೋಗ್ಯ ಕ್ಷೇತ್ರದ ಸಾಧನೆಯ ಹಿಂದಿರುವ ಈ ವ್ಯವಸ್ಥೆಯನ್ನು ವಿಶ್ವದ ಇತರ ರಾಷ್ಟ್ರಗಳೂ ಕೂಡ ಅನುಕರಿಸಿ ಅನುಷ್ಠಾನಕ್ಕೆ ತರಬಹುದಾಗಿದೆ.

ಐದನೆಯದಾಗಿ ಬಹಳ ಮುಖ್ಯವಾದ ಅಂಶವೆಂದರೆ ಈ ಆರೋಗ್ಯ ಅಭಿಯಾನದಲ್ಲಿ ಜನರ ಪಾಲ್ಗೊಳ್ಳುವಿಕೆ. ಇದರಿಂದಾಗಿ ಭಾರತದಲ್ಲಿ ಕೋವಿಡ್-19 ವ್ಯಾಕ್ಸಿ ನೇಶನ್ ಯಶಸ್ವಿಯಾಗುವುದು ಸಾಧ್ಯವಾಗಿದೆ. ಪೋಲಿಯೋ ನಿರ್ಮೂಲನ ಲಸಿಕೆಯ ಅನುಭವದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೃಹತ್ ಜನ ಸಂಖ್ಯೆಯುಳ್ಳ ದೇಶದಲ್ಲಿ ಇಂತಹದೊಂದು ವ್ಯಾಕ್ಸಿನ್ ಅಭಿಯಾನವನ್ನು ನಿರ್ವಹಣೆ ಮಾಡುವಲ್ಲಿ ಯಶಸ್ಸನ್ನು ಕಂಡಿದೆ. ಜನರಲ್ಲಿ ಇರಬಹುದಾದ ಹಿಂಜರಿಕೆ ಯನ್ನು ಹೋಗಲಾಡಿಸುವಲ್ಲಿ ಸ್ಥಳೀಯವಾಗಿ ಸ್ವಸಹಾಯ ಗುಂಪುಗಳ ಮೂಲಕ ಸಂದೇಶ ರವಾನೆ ಮಾಡಿ ತಪ್ಪು ಮಾಹಿತಿಗಳನ್ನು ದೂರೀಕರಿಸಿ ಸಾಮೂಹಿಕವಾಗಿ ಮಾಧ್ಯಮಗಳ ಮೂಲಕ ಜಾಗೃತಿಯನ್ನು ಮೂಡಿಸಿ, ಈ ವ್ಯಾಕ್ಸಿನ್ ಅಭಿಯಾನವನ್ನು ಮಹೋತ್ಸವದಂತೆ ನಿರ್ವಹಿಸಿದೆ. ಭಾರತದ
ಜನ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಕೂಡ.

ಇಂತಹದೊಂದು ಪ್ರಗತಿಪರ ಕಾರ್ಯವಿಧಾನದ ಹೊರತಾಗಿ ನಾವು ವಿಶ್ವಾದ್ಯಂತ ಈ ಸಾಂಕ್ರಾಮಿಕ ಕಾಯಿಲೆಯನ್ನು ಕಟ್ಟಿ ಹಾಕುವುದು ಖಂಡಿತವಾಗಿಯೂ ಸಾಧ್ಯವಿಲ್ಲ. ಇಂತಹ ಪರಿಕ್ರಮದಿಂದ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ, ಅದರ ರೂಪಾಂತರಿಗಳು ಹುಟ್ಟದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ. ವ್ಯಾಕ್ಸಿನ್ ಗಳನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿಲ್ಲ, ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ಜನರ ಪೈಕಿ ಶೇ.3 ಕ್ಕಿಂತ ಕಡಿಮೆ ಪ್ರಮಾಣದ ಜನರಿಗೆ ಒಂದು ಡೋಸ್ ವಾಕ್ಸಿನ್ ಸಿಕ್ಕಿದೆ ಎಂಬ ಟೀಕೆ ಕೇಳಿ ಬಂದಿವೆ. ಅದಕ್ಕೆ ಉತ್ತರವೆಂಬಂತೆ ವ್ಯಾಕ್ಸಿನ್ ಗಳ ಹೆಚ್ಚಿನ ಉತಾದನೆಗೆ ವೇಗವರ್ಧನೆ ನೀಡುವುದು ಅವಶ್ಯಕ. ಇದಕ್ಕೆ ವಿಶ್ವಮಟ್ಟದಲ್ಲಿ ಕ್ಸಿನ್ ತಯಾರಿಕಾ ಘಟಕಗಳ ಕ್ಷಮತೆಯನ್ನು ಅನುಲಕ್ಷಿಸಿ ಕ್ರಮ ನಿರ್ವಹಿಸುವುದು ಸೂಕ್ತ.

ಭಾರತ ಈ ನಿಟ್ಟಿನಲ್ಲಿ ಸಕ್ಷಮವಾಗಿದ್ದು ವ್ಯಾಕ್ಸಿನ್ ರಫ್ತಿನಲ್ಲಿ ದೊಡ್ಡ ಮಟ್ಟದಲ್ಲಿ ವಿಶ್ವದ ಗಮನ ಸೆಳೆದಿದೆ. ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ರಾಷ್ಟ್ರಗಳಿಗೆ ಕೋವಿಡ್-19 ವ್ಯಾಕ್ಸಿನ್ ಪೂರೈಕೆ ಮಾಡುವ ನಿಟ್ಟಿನಲ್ಲಿ, ಮೈತ್ರಿ ಎಂಬ ಅಭಿಯಾನದ ಮೂಲಕವೂ ಭಾರತ ಸಾಕಷ್ಟು ಕೆಲಸ ಮಾಡುತ್ತಲಿದೆ. ಭಾರತದ ಈ ನಡೆ ನನ್ನಲ್ಲಿ ಆಶಾಭಾವವನ್ನು ಮೂಡಿಸಿದೆ. ಒಂದು ರಾಷ್ಟ್ರದಲ್ಲಿ ನಾಯಕತ್ವ ಸಮರ್ಥವಾಗಿದ್ದರೆ ಆರೋಗ್ಯ ಕ್ಷೇತ್ರ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಹೂಡಿಕೆ
ಮಾಡುವ ಮೂಲಕ ಹೇಗೆ ದೇಶದ ಜನರ ಆರೋಗ್ಯ ಕಾಪಾಡುವಲ್ಲಿ ದೃಢ ಹೆಜ್ಜೆ ಇಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ.

ಕಳೆದ ೧೮ ತಿಂಗಳಲ್ಲಿ ನಾವೆಲ್ಲರೂ ಅನುಭವಿಸಿದ ದುರಂತ ಸನ್ನಿವೇಶವನ್ನು ತೊಡೆದು ಮುಂದಿನ ೧೮ ತಿಂಗಳಲ್ಲಿ ನಾವು ಗಮನಾರ್ಹವಾದ ಬದಲಾವಣೆಯನ್ನು
ಕಾಣಲಿದ್ದೇವೆ ಎಂಬ ಭಾವನೆ ನನ್ನದು.

ಹೃದಯವಂತನ ಕಲೆಯ ಬೆಲೆ
ಒಮ್ಮೆ ಶ್ರೀಮಂತನೊಬ್ಬ ಪ್ಯಾಬ್ಲೋ ಪಿಕಾಸೋ ಬಳಿ ಬಂದು ತನ್ನ ಚಿತ್ರ ಬಿಡಿಸುವಂತೆ ಹೇಳಿದ. ಜಗತ್ಪ್ರಸಿದ್ಧ ಕಲಾವಿದ ಪಿಕಾಸೋ ಹೇಳಿದ -‘ನಿನ್ನ ಚಿತ್ರ ಬಿಡಿಸಬಲ್ಲೆ. ಆದರೆ ಬಹಳ ದುಬಾರಿಯಾಗುತ್ತದೆ’. ಪಿಕಾಸೋನ ಮಾತು ಕೇಳಿ ಶ್ರೀಮಂತನಿಗೆ ತಲೆ ‘ಧೀಮ್’ ಎಂದಿತು.

‘ಅದೆಷ್ಟೇ ಖರ್ಚಾಗಲಿ ನೀನು ತಲೆ ಕೆಡಿಸಿಕೊಳ್ಳಬೇಡ. ಅದು ನನಗೆ ಬಿಟ್ಟಿದ್ದು. ನೀನು ನಿನ್ನ ಹಾಗೇ ಯೋಚಿಸಬೇಡ. ನನ್ನ ಯೋಗ್ಯತೆಯೇನೆಂಬುದು ನಿನಗೇನು ಗೊತ್ತು? ಹೀಗಾಗಿ ಹಣದ ಮಾತಾಡಬೇಡ. ನೀನು ಎಷ್ಟು ಬೇಕಾದರೂ ಕೇಳು, ಕೊಡುತ್ತೇನೆ. ನನ್ನ ಸುಂದರ ಚಿತ್ರ ಬಿಡಿಸಿಕೊಡುವುದಷ್ಟೇ ನಿನ್ನ ಕೆಲಸ’ ಎಂದ
ಶ್ರೀಮಂತ ಧಿಮಾಕಿನಿಂದ.

ಪಿಕಾಸೋಗೆ ಆತನ ಮಾತು ಕೇಳಿ ಕಿರಿಕಿರಿಯಾಯಿತು. ಆದರೆ ತೋರಿಸಿಕೊಳ್ಳಲಿಲ್ಲ. ‘ಆಯಿತು, ನಿಮ್ಮ ಚಿತ್ರ ಬಿಡಿಸಿಕೊಡುತ್ತೇನೆ. ಅದಕ್ಕೆ ಹತ್ತು ಲಕ್ಷ ಡಾಲರ‍್ ಆಗುತ್ತದೆ. ಆಗಬಹುದೇ?’ ಎಂದು ಕೇಳಿದ ಪಿಕಾಸೋ. ಕಾಸೋನ ಮಾತು ಕೇಳಿ ಶ್ರೀಮಂತ ಒಂದು ಕ್ಷಣ ಅವಾಕ್ಕಾದ. ಆತನ ಬಾಯಿಂದ ಮಾತೇ ಹೊರಡಲಿಲ್ಲ. ‘ನೀನು ಜೋಕ್ ಮಾಡುತ್ತಿಲ್ಲವಷ್ಟೇ. ಖಾಲಿ ಕ್ಯಾನ್ವಾಸ್ ಮೇಲೆ ಹತ್ತಾರು ಬಣ್ಣಗಳಿಂದ ನನ್ನ ಚಿತ್ರ ಬಿಡಿಸಲು ಹತ್ತು ಲಕ್ಷ ಡಾಲರ್ ಖರ್ಚಾಗುವುದೇ? ನಿನಗೇನು ಬುದ್ಧಿ ನೆಟ್ಟಗಿದೆಯಾ? ನನ್ನನ್ನು ಏನಂತ ಭಾವಿಸಿದ್ದೀಯಾ?ಹಣ ಮಾಡಲಿಕ್ಕೆ ಒಂದು ಮಿತಿ ಇಲ್ಲವಾ?’ ಎಂದು ಶ್ರೀಮಂತ ದಬಾಯಿಸಲಾರಂಭಿಸಿದ.

ಪಿಕಾಸೋ ಮಾತಾಡಲಿಲ್ಲ. ಆತ ಹೇಳುವುದನ್ನೇ ಕೇಳುತ್ತಿದ್ದ. ಸುಮಾರು ಇಪ್ಪತ್ತು ನಿಮಿಷ ಬಡಬಡಾಯಿಸಿದ ಬಳಿಕ ಶ್ರೀಮಂತನೂ ಸುಮ್ಮನಾದ. ಆಗ ಪಿಕಾಸೋ ಹೇಳಿದ- ‘ನನ್ನಚಿತ್ರ ನೋಡದೇ ನೀನು ಅದಕ್ಕೆ ಬೆಲೆ ಕಟ್ಟಬೇಡ. ಚಿತ್ರ ನೋಡಿದ ಬಳಿಕವೂ ನಿನ್ನ ಅಭಿಪಾಯ ಇದೇ ಆಗಿದ್ದರೆ ಅಭ್ಯಂತರವಿಲ್ಲ.
ಆದರೆ ನಾನು ಮಾತ್ರ ನಿನ್ನ ಬೆಲೆ ಎಷ್ಟು, ಯೋಗ್ಯತೆ ಎಷ್ಟು ಎಂಬುದನ್ನು ನಿರ್ಧರಿಸಿದೆ’.

ಶ್ರೀಮಂತನಿಗೆ ತನ್ನ ತಪ್ಪಿನ ಅರಿವಾಯಿತು. ಪಿಕಾಸೋನ ಕ್ಷಮೆ ಯಾಚಿಸಿದ. ‘ನೀನು ಕಲಾವಿದ ಮಾತ್ರ ಅಲ್ಲ, ಹೃದಯವಂತ ಕೂಡ ಹೌದು’ ಎಂದ ಶ್ರೀಮಂತ. ಅದಕ್ಕೆ ಪಿಕಾಸೋ ಹೇಳಿದ-‘ಹೃದಯವಂತನಾಗದಿದ್ದರೆ ಕಲಾವಿದನಾಗಲು ಸಾಧ್ಯವಿಲ್ಲ’. ಅದಾದ ಬಳಿಕ ಪಿಕಾಸೋ ಶ್ರೀಮಂತನ ಚಿತ್ರ ಬಿಡಿಸಿದ. ಆ ಚಿತ್ರ ನೋಡಿ ಆತನಿಗೆ ಅತೀವ ಆನಂದವಾಯಿತು. ಪಿಕಾಸೋ ಎಂಥ ಸೊಗಸಾದ ಕಲಾವಿದನೆಂಬುದು ಅವನಿಗೆ ಮನವರಿಕೆಯಾಯಿತು. ಖುಷಿಯಿಂದ ಹಣ ತೆಗೆದುಕೊಂಡು ಬರಲು ಒಳಮನೆಗೆ ಹೋದ. ಶ್ರೀಮಂತ ಹೊರ ಬರುವಷ್ಟರಲ್ಲಿ ಪಿಕಾಸೋ ಹೊರಟು ಹೋಗಿದ್ದ!

ಐ ಲವ್ ಯು ಹೇಳೋದು ಹೇಗೆ?
ಆತ ಆಕೆಯನ್ನು ಮೆಚ್ಚಿದ. ಅವಳೂ ಮೆಚ್ಚಿದಳು. ಇಬ್ಬರೂ ‘ಐ ಲವ್ ಯು’ ಹೇಳುವುದೊಂದು ಬಾಕಿ ಇತ್ತು. ಆತ ಆಕೆಯನ್ನು ಹೊರಗಡೆ ಕರೆದುಕೊಂಡು ಹೋಗುವ ಮುನ್ನ ತನ್ನ ತಂದೆಗೆ ಕೇಳಿದ- ‘ನನ್ನ ಪ್ರೀತಿಯನ್ನು ಆಕೆಗೆ ಹೇಳಬೇಕೆಂದರೆ ಆಗುತ್ತಿಲ್ಲ. ಧೈರ್ಯ ಸಾಕಾಗುತ್ತಿಲ್ಲ. ಏನು ಮಾಡಲಿ?’ ತಂದೆ ಮಗನಿಗೆ ಸಾಕಷ್ಟು ಧೈರ್ಯ ತುಂಬಿದ. ‘ನಿನ್ನ ಪ್ರೀತಿಯನ್ನು ವ್ಯಕ್ತಪಡಿಸುವ ಮೊದಲು ಹುಡುಗಿಯೊಂದಿಗೆ ಲೋಕಾಭಿರಾಮವಾಗಿ ಮಾತಾಡು. ಅದಕ್ಕೆ ಸೂಕ್ತವಾದ ವಿಷಯ-ಆಹಾರ, ಸಂಬಂಧಿಕರು ಹಾಗೂ ಫಿಲಾಸಫಿ’. ಸರಿ, ಆತ ಆಕೆಯೊಂದಿಗೆ ಹೊರಟ. ಕೆಲ ಕಾಲ ದಿವ್ಯಮೌನ. ಆನಂತರ ಧೈರ್ಯದಿಂದ ಮಾತಾಡಲಾರಂಭಿಸಿದ. ‘ನಿನಗೆ
ಬದನೆಕಾಯಿ ಅಂದ್ರೆ ಇಷ್ಟಾನಾ?’
ಹುಡುಗಿ ‘ಇಲ್ಲ’ ಎಂದಳು. ಕೆಲ ಕಾಲ ಮೌನ. ತಂದೆ ಹೇಳಿದ ಸಲಹೆ ನೆನಪಾಯಿತು. ಈಗ ಸಂಬಂಧಿಕರು ಅಥವಾ ಕುಟುಂಬದ ಕುರಿತು ಮಾತಾಡಬೇಕು.
ಸರಿ, ಹುಡುಗಿಯ ಹತ್ತಿರ ಹೋಗಿ ‘ನಿನಗೆ ಅಣ್ಣ ಇದ್ದಾನಾ?’ ಎಂದು ಕೇಳಿದ. ಆಕೆ ‘ಇಲ್ಲ’ ಅಂದಳು. ಹುಡುಗನಿಗೆ ತಲೆ ಕೆಟ್ಟು ಹೋಯಿತು. ಮತ್ತೆ ಕೆಲ ಕಾಲ
ಮೌನ. ಪುನಃ ತಂದೆಯ ಸಲಹೆ ನೆನಪಾಯಿತು. ಮೂರನೆಯ ಪ್ರಶ್ನೆ ಕೇಳಿದ-‘ನಿನಗೆ ಒಂದು ವೇಳೆ ಅಣ್ಣನೋ, ತಮ್ಮನೋ ಇದ್ದಿದ್ದರೆ ಆತನಿಗೆ ಬದನೆಕಾಯಿ ಇಷ್ಟವಾಗ್ತಿತ್ತಾ?’

ಮಿಸ್ತ್ರಿ ಮತ್ತು ಶೀರ್ಷಿಕೆ
ಮೊನ್ನೆ ಕ್ಲಬ್ ಹೌಸಿನಲ್ಲಿ ನಾನು ತಲೆ ಬರಹಗಳ ಬಗ್ಗೆ ಮಾತಾಡಿದೆ. ಆಗ ಹಲವು ಸ್ವಾರಸ್ಯಕರ ತಲೆಬರಹಗಳ ಬಗ್ಗೆ ಮೆಲುಕು ಹಾಕಿದೆ. ಹೆಡ್ ಲೈನ್ ಬಗ್ಗೆ ಮಾತಾಡಲಾರಂಭಿಸಿದರೆ ಪಟಾಕಿಮಾಲೆಗೆ ಬೆಂಕಿ ಹಚ್ಚಿದಂತೆ. ಸಿಡಿಯುತ್ತಲೇ ಹೋಗುತ್ತವೆ. ಆ ಕಾರ್ಯಕ್ರಮದಲ್ಲಿ ನಾನು ಅನೇಕ ಒಳ್ಳೆಯ ತಲೆಬರಹಗಳನ್ನು
ಮೆಲುಕು ಹಾಕಿದೆ. ಕೆಲವು ಶೀರ್ಷಿಕೆಗಳು ಆ ಸಂದರ್ಭದಲ್ಲಿ ನೆನಪಾಗಲೇ ಇಲ್ಲ.

ಕೆಲ ವರ್ಷಗಳ ಹಿಂದೆ ಉದ್ಯಮಿ ಸೈರಸ್ ಮಿಸಿ ಒಂದಿಂದು ಕಾರಣಕ್ಕೆ ಸುದ್ದಿಯಲ್ಲಿದ್ದರು. ಅವರು ಸುದ್ದಿಯಲ್ಲಿದ್ದಾಗಲೆಲ್ಲ ಪತ್ರಿಕೆಗಳ ಹೆಡ್ಲೈನ್ ಬರೆಯುವವರು ಆಗ ಪದಗಳ ಜತೆ ಆಟವಾಡಿದ್ದನ್ನು ನೀವು ಗಮನಿಸಿರಬಹುದು. 2011ರಲ್ಲಿ ಅವರು ಟಾಟಾ ಸನ್ಸ್ ಅಧ್ಯಕ್ಷರಾಗಿ ನೇಮಕವಾದಾಗ ‘ಮಿಸಿ ಈಗ ಟಾಟಾ ಸಮೂಹದ ಮೇಸ್ತ್ರಿ’ ಎಂಬ ಶೀರ್ಷಿಕೆ ಕೊಟ್ಟಿದ್ದೆವು. 2016 ರಲ್ಲಿ ಇದ್ದಕ್ಕಿದ್ದಂತೆ ಅವರನ್ನು ಆ ಹುದ್ದೆಯಿಂದ ಕಿತ್ತು ಹಾಕಿ, ಆ ಸ್ಥಾನಕ್ಕೆ ರತನ್ ಟಾಟಾ ಬಂದಾಗ, ‘ಎಕನಾಮಿಕ್ ಟೈಮ್ಸ್’ ಪತ್ರಿಕೆ ’Mistry Ends, Mystery Begins’ ಎಂಬ ಶೀರ್ಷಿಕೆ ನೀಡಿತ್ತು. ನ್ಯಾಷನಲ್ ಕಂಪನಿ ಲಾ ಅಪಲೆಟ್ ಟ್ರಿಬ್ಯೂನಲ, ಮಿಸಿ ಅವರನ್ನು ಕಿತ್ತು ಹಾಕಿದ್ದು ಸರಿ ಅಲ್ಲ, ಆ ಹುzಗೆ ಅವರನ್ನು ಪುನರ್ ನೇಮಕ ಮಾಡಬೇಕು ಎಂಬ ತೀರ್ಪು ನೀಡಿದಾಗ, ಅದೇ ಪತ್ರಿಕೆ (ಎಕನಾಮಿಕ್ ಟೈಮ್ಸ) ಒಂದು ಗಮನ ಸೆಳೆಯುವ ಶೀರ್ಷಿಕೆ ನೀಡಿತು -‘Mistry Back, So Is Mystery’.

ಸೆಕ್ರೆಟರಿಯ ಸಿಟ್ಟು
ಬಾಸ್ ಕ್ಯಾಬಿನ್‌ನಿಂದ ಆತನ ಸೆಕ್ಸಿ ಸೆಕ್ರೆಟರಿ ಸಿಟ್ಟಿನಿಂದ ಹೊರಬಂದಳು. ಆಕೆಯ ಸಹೋದ್ಯೋಗಿ ಗೆಳತಿ, ‘ಏನಾಯ್ತೆ? ಇಷ್ಟು ಸಿಟ್ಟಿನಲ್ಲಿ ಇದ್ದೀಯಾ?’ ಎಂದು ಕೇಳಿದಳು. ‘ಇಂದು ರಾತ್ರಿ ಫ್ರೀ ಇದ್ದೀಯಾ ಅಂತ ಕೇಳಿದರು ಬಾಸ್’ ಎಂದಳು. ‘ಅದ್ಸರಿ, ನೀನು ಏನಂತ ಹೇಳಿದೆ?’ ಎಂದು ಕೇಳಿದಳು ಅವಳ ಗೆಳತಿ. ‘ಫ್ರೀ
ಇದ್ದೀನಿ ಅಂತ ಹೇಳಿದೆ’ ಎಂದಳು. ‘ಹಾಗಾದರೆ ಬೇಸರಪಟ್ಟುಕೊಳ್ಳುವಂಥದ್ದು ಏನಿದೆ?’ ಎಂದಳು ಗೆಳತೀ. ಅದಕ್ಕೆ ಸೆಕ್ರೆಟರಿ ಹೇಳಿದಳು – ‘ರಾತ್ರಿ ಫ್ರೀ ಇದ್ದರೆ ನಲವತ್ತು ಪುಟ ಟೈಪ್ ಮಾಡು ಅಂದರು ಬಾಸ್.’