Saturday, 21st September 2024

ನೂರುಕೋಟಿ ಡೋಸ್‌ ನೀಡಿಕೆಯ ಪರಿಕ್ರಮದ ಐದು ಪ್ರಮುಖ ಹೆಜ್ಜೆಗಳು

ವಿಶ್ಲೇಷಣೆ

ಬಿಲ್‌ ಗೇಟ್ಸ್‌, ಬಿಲ್‌ ಮತ್ತು ಮೆಲಿಂಡಾ ಗೇಟ್ ಫೌಂಡೇಷನ್‌ ಸಂಸ್ಥಾಪಕ

ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಅವರುಗಳಿಗೆ ಸೂಕ್ತ ತರಬೇತಿ ಕೊಡುವಲ್ಲಿ, ವೈದ್ಯರನ್ನು ಸಜ್ಜುಗೊಳಿಸುವಲ್ಲಿ, ದಾದಿಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗಳನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿ, ದೇಶಾದ್ಯಂತ ಸಮಾನವಾಗಿ ಕೋವಿಡ್-೧೯ ವ್ಯಾಕ್ಸೀನ್ ಒದಗಣೆಯಾಗು ವಂತೆ ಮಾಡಿದ ಆಡಳಿತ ವಿಧಾನ ಶ್ಲಾಘನೀಯವಾದುದು.

ಸರಿಸುಮಾರು 140 ಕೋಟಿ ಜನಸಂಖ್ಯೆಯುಳ್ಳ ಉಪಖಂಡ ಭಾರತ, ಆರೋಗ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಇರುವ ಈ ದೇಶದ ಕ್ಷಮತೆಯನ್ನು ಕಂಡು ನಾನು ಪ್ರಭಾವಿತನಾಗಿದ್ದೇನೆ. ಇದೀಗ ಭಾರತ ದೇಶ ನೂರುಕೋಟಿಗೂ ಹೆಚ್ಚಿನ ಕೋವಿಡ್-19 ವ್ಯಾಕ್ಸೀನ್ ಗಳನ್ನು ದೇಶ ವಾಸಿಗಳಿಗೆ ಕೊಡುವ ಮೂಲಕ ಒಂದು ಮೈಲಿಗಲ್ಲನ್ನು ಸಾಧಿಸಿದೆ.

ಈ ವ್ಯಾಕ್ಸೀನ್ ಅಭಿಯಾನ ಬೃಹತ್ತಾದದ್ದು ಮತ್ತು ಅಷ್ಠೇ ವೇಗಯುತವಾದದ್ದು. ಅಂಕಿ ಅಂಶಗಳ ಪ್ರಕಾರ ಭಾರತದ ಶೇ.75 ವಯಸ್ಕ ಜನರು ಮೊದಲ ಡೋಸನ್ನು ಪಡೆದುಕೊಂಡಿದ್ದಾರೆ ಮತ್ತು ಶೇ. 31 ಜನರು ಎರಡನೇ ಡೋಸನ್ನು ಕೂಡ ಪಡೆದುಕೊಂಡಿದ್ದಾರೆ. ಈ ಪೈಕಿ ಶೇ.48ಮಹಿಳೆಯರಿದ್ದಾರೆ. ಈ ಸಾಧನೆ ಕೇವಲ ಭಾರತಕ್ಕೆ ಮಾತ್ರವಲ್ಲ ವಿಶ್ವಸಮುದಾಯಕ್ಕೇ ಮಾದರಿಯಾಗುವಂಥದ್ದು. ಭಾರತದ ಜನಸಂಖ್ಯಾ ಬಾಹುಳ್ಯವನ್ನು ಗಮನದಲ್ಲಿಟ್ಟು ಹೇಳುವುದಾದರೆ, ಕನಿಷ್ಠ ಅವಧಿಯಲ್ಲಿ ಗರಿಷ್ಠ ಪ್ರಮಾಣದ ವ್ಯಾಕ್ಸೀನ್ ಗಳನ್ನು ಕೊಟ್ಟಿರುವುದು ಗಮನಾರ್ಹವಾಗಿದೆ, ಈ ಅವಧಿಯಲ್ಲಿ ವಿಶ್ವದ ಉಳಿದ ದೇಶಗಳು ತಮ್ಮ ದೇಶಗಳಲ್ಲಿ ಚುಚ್ಚು ಮದ್ದು ನೀಡಿಕೆ ಪ್ರಕ್ರಿಯೆಯನ್ನು ಇಷ್ಟರಲ್ಲೇ ಪೂರ್ಣಗೊಳಿಸಬಹುದಾಗಿತ್ತು.

ಆ ಮೂಲಕವಾಗಿ ಎಲ್ಲೆಗಡಿಗಳ ಹಂಗಿಲ್ಲದ ಈ ಸಾಂಕ್ರಾಮಿಕವನ್ನು ತಹಬಂದಿಯಲ್ಲಿಡುವುದು ಕೂಡ ಸಾಧ್ಯ. ಈ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೇ ಇರುವಾಗ, ಭಾರತದ ಈ ಮಹತ್ಸಾಧನೆಯ ಪ್ರಮುಖ ಅಂಶ ಏನು ಎಂಬುದನ್ನು ನಾವು ವಿಶ್ಲೇಷಣೆ ಮಾಡಬೇಕಿದೆ. ಆ ಮೂಲಕವಾಗಿ ಭಾರತ ತನ್ನ ಪ್ರಗತಿಪಥದಲ್ಲಿ ಮುಂದುವರೆ ಯುವ ಕ್ಷಮತೆಯನ್ನು ವಿಶ್ವಕ್ಕೆ ತೋರಿದೆ, ಮಾತ್ರವಲ್ಲ ಇದು ಅನ್ಯರಾಷ್ಟ್ರಗಳಿಗೆ ಒಂದು ಅನನ್ಯ ಮಾದರಿಯೂ ಆಗಿದೆ.

ಮೊದಲನೆಯದಾಗಿ ಹೇಳಬೇಕೆಂದರೆ ಇಲ್ಲಿ ಸಾದ್ಯಂತವಾಗಿ ಕೆಲಸ ಮಾಡಿರುವುದು ರಾಜಕೀಯ ಇಚ್ಚಾಶಕ್ತಿ. 31 ಡಿಸೆಂಬರ್ 2021ರ ಒಳಗಾಗಿ ದೇಶದ ಎಲ್ಲ ವಯಸ್ಕರಿಗೂ ವ್ಯಾಕ್ಸೀನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿ ಇಲ್ಲಿ ಗಮನಾರ್ಹ. ಅದಕ್ಕೆ ತಕ್ಕಂತೆ ರಾಜ್ಯ ಮತ್ತು ಜಿಲ್ಲೆಗಳ ಪ್ರಮುಖರು ಸಂದರ್ಭವನ್ನು ಗಮನಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಉನ್ನತಮಟ್ಟದ ಸಮಿತಿಗಳಡಿಯಲ್ಲಿ 2020ರಲ್ಲಿ ಸಿದ್ಧಗೊಂಡ ನೀಲನಕಾಶೆಗಳು, ಸಂಶೋಧನೆ ಮತ್ತು ಅಭಿವೃದ್ಧಿಯ ಕಾರ್ಯಗಳಿಂದಾಗಿ ವ್ಯಾಕ್ಸೀನ್ ತಯಾರಿಕೆ, ಹಂಚಿಕೆ, ಸಾಗಣೆ ಮತ್ತು ನೀಡಿಕೆ ಕ್ರಮಬದ್ಧವಾಗಿ ದೇಶಾ ದ್ಯಂತ ಆಗಿರುವುದು ಕಂಡುಬರುತ್ತದೆ.

ಎರಡನೆಯದಾಗಿ, ಭಾರತ ಯಶಸ್ವಿಯಾಗಿ ಅನೇಕ ಸಾಮೂಹಿಕ ಚುಚ್ಚುಮದ್ದು ಕಾರ್ಯಕ್ರಮಗಳನ್ನು ಈಗಾಗಲೇ ನಡೆಸಿದ್ದು, ಅವುಗಳ ಅನುಭವ ಕೂಡ ಇಲ್ಲಿ ಕೆಲಸ ಮಾಡಿದೆ. ಅದು ಕೋವಿಡ್-19 ವಿರುದ್ಧ ಹೋರಾಡುವುದಕ್ಕೆ ದೇಶಕ್ಕಿರುವ ಕ್ಷಮತೆಯನ್ನು ಮತ್ತೆ ಸಾಬೀತು ಮಾಡಿದೆ. ಭಾರತದ ಸಾಮೂಹಿಕ ಚುಚ್ಚುಮದ್ದು ಅಭಿಯಾನ ಆರೋಗ್ಯ ಸಂರಕ್ಷಣೆಯ ದೃಷ್ಟಿಯಲ್ಲಿ ಇಡೀ ವಿಶ್ವಕ್ಕೇ ಮಾದರಿಯಾದುದು. ಭಾರತದಲ್ಲಿ ಬೇರೆಬೇರೆ ಆರೋಗ್ಯ ಸಂಬಂಧಿತ ವಿಚಾರಗಳಿಗೆ 27 ಮಿಲಿ ಯನ್ ನವಜಾತ ಶಿಶುಗಳಿಗೆ ಪ್ರಾಥಮಿಕ ಚುಚ್ಚುಮದ್ದು ನೀಡಲಾಗಿದೆ. 1-5 ವಯೋಮಾನದ 10 ಕೋಟಿ ಮಕ್ಕಳು ಪ್ರತಿವರ್ಷ ಚುಚ್ಚುಮದ್ದು ಪಡೆಯುತ್ತಾರೆ.

ಭಾರತದಲ್ಲಿ ಸರಿಸುಮಾರು 27000 ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇದೆ. ಈ ಎಲ್ಲ ಅಂಕಿಅಂಶಗಳನ್ನು ಗಮನಿಸಿದಾಗ ಕಳೆದ ಕೆಲವಾರು ವರುಷಗಳಿಂದ ನಿರಂತರವಾಗಿ ಆರೋಗ್ಯಕ್ಷೇತ್ರದಲ್ಲಿ ಸದ್ದಿಲ್ಲದೇ ಭಾರತ ನಡೆಸಿಕೊಂಡು ಬಂದಿರುವ ಅಭಿಯಾನ, ದೇಶದ ಮೂಲೆಮೂಲೆಗಳನ್ನು ಕೋವಿಡ್ ವ್ಯಾಕ್ಸೀನ್ ತಲುಪಿಸುವಲ್ಲಿ ಸಹಕಾರಿ ಯಾಗಿದೆ ಎನ್ನಬಹುದು. ಪ್ರಸಕ್ತ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ದೇಶದಲ್ಲಿರುವ ಈ ಮೂಲಭೂತ ವ್ಯವಸ್ಥೆ ಕೆಲಸಕ್ಕೆ ಬಂದಿದೆ.
ದೇಶದಲ್ಲಿ ಈಗಾಗಲೇ 248000 ಸಾರ್ವಜನಿಕ ಕೇಂದ್ರಗಳು ಮತ್ತು 28000 ಖಾಸಗಿ ಕೇಂದ್ರಗಳು ಕೋವಿಡ್ 19 ವ್ಯಾಕ್ಸೀನ್ ಕೊಡುವುದರಲ್ಲಿ ನಿರಂತವಾಗಿವೆ. ಉತ್ತರ ಮತ್ತು ಈಶಾನ್ಯ ಭಾಗದ ದುರ್ಗಮ ಬೆಟ್ಟಗುಡ್ಡಗಳ ಪ್ರದೇಶಗಳೂ ಸೇರಿದಂತೆ, ಪ್ರವಾಹಪೀಡಿತ ಪ್ರದೇಶಗಳನ್ನು ಕೂಡ ಈ ವ್ಯಾಕ್ಸೀನ್ ಅಭಿಯಾನ ತಲುಪಿದೆ.

ಜತೆಗೆ ಭಾರತದ 2.30 ಕೋಟಿ ಸೇವಾ ಮನೋಭಾವದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಶ್ರಮ ಇಲ್ಲಿ ಎದ್ದು ಕಾಣುತ್ತದೆ. ಅವರು ಗಳಿಗೆ ಸೂಕ್ತ ತರಬೇತಿ ಕೊಡುವಲ್ಲಿ, ವೈದ್ಯರನ್ನು ಸಜ್ಜುಗೊಳಿಸುವಲ್ಲಿ, ದಾದಿಯರು ಮತ್ತು ಇತರೆ ವೈದ್ಯಕೀಯ ಸಿಬ್ಬಂದಿಗಳನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿ, ದೇಶಾದ್ಯಂತ ಸಮಾನವಾಗಿ ಕೋವಿಡ್-19 ವ್ಯಾಕ್ಸೀನ್ ಒದಗುವಂತೆ ಮಾಡಿದ ಆಡಳಿತ ವಿಧಾನ ಶ್ಲಾಘನೀಯವಾದುದು.

ಮೂರನೆಯದಾಗಿ, ಭಾರತ ವ್ಯಾಕ್ಸೀನ್ ಮತ್ತು ಔಷಧಗಳನ್ನು ಕಂಡು ಹಿಡಿದು ಉತ್ಪಾದಿಸುವಲ್ಲಿ ತನಗಿರುವ ಪರಿಣತಿಯನ್ನು ಮತ್ತೆ ಸಾಬೀತುಪಡಿಸಿದೆ. ಈ ಸಾಂಕ್ರಾಮಿಕ ರೋಗಕ್ಕೆ ಮೊದಲು ಭಾರತದಲ್ಲಿ ಕೋಟ್ಯಂತರ ಜನರಿಗೆ ವಿವಿಧ ಸೋಂಕು ರೋಗಗಳಾದ ಮೆನಿಂಜೈಟಿಸ್, ನ್ಯುಮೋನಿಯಾ, ವಾಂತಿಭೇದಿ ಯಂತಹ ರೋಗಲಕ್ಷಣಗಳಿಗೆ ಚುಚ್ಚುಮದ್ದು ನೀಡಿ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡಲಾಗಿದೆ. ನಮ್ಮ ಪ್ರತಿಷ್ಠಾನವು ಭಾರತ ಸರಕಾರದೊಂ
ದಿಗೆ ಕೈಜೋಡಿಸಿ ಕೆಲಸ ಮಾಡುವುದಕ್ಕೆ ಹೆಮ್ಮೆ ಪಡುತ್ತದೆ, ಏಕೆಂದರೆ ಭಾರತೀಯ ಉತ್ಪಾದನಾ ಘಟಕಗಳಾದ ಸಿರಮ್ ಇನ್‌ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಮತ್ತು ಬಯೋ-ಇ ಇವೆಲ್ಲವೂ ಸೂಕ್ತ, ಸುರಕ್ಷಿತ ಮತ್ತು ಕೈಗೆಟಕುವ ಬೆಲೆಯ ವ್ಯಾಕ್ಸೀನ್ ತಯಾರಿಸಿ ದೇಶಾದ್ಯಂತ ಇರುವ ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಲಭ್ಯವಾಗುವಂತೆ ಮಾಡಿದೆ. ದೇಶೀಯವಾಗಿ ತಯಾರಾದ ವ್ಯಾಕ್ಸೀನ್ ಗಳಾದ ಕೋಶಿವೀಲ್ಡ್ ಮತ್ತು ಕೋವಾಕ್ಸಿನ್ ಭಾರತೀಯರನ್ನು
ಕೋವಿಡ್- 19 ನಿಂದ ಪಾರುಮಾಡುವಲ್ಲಿ ದೊಡ್ಡಮಟ್ಟದಲ್ಲಿ ಸಹಾಯಕವಾಗಿವೆ. ಈ ದಿಸೆಯಲ್ಲಿ ಸೀರಮ್ ನವರ ಉತ್ಪಾದನೆಗಳಾದ ಕೋವಿಶೀಲ್ಡ್ ಮತ್ತು ಕೋವೋವಾಕ್ಸ್  (ಅನುಮೋದನೆಗೆ ಕಾದಿದೆ) ತಯಾರಿಕೆ ಮತ್ತು ಅದನ್ನು ವಿಶ್ವಾದ್ಯಂತ ಹಂಚಿಕೆಮಾಡುವ ಯೋಜನೆಗೆ ನಾವು ಕೂಡ ಅನುದಾನ ನೀಡಿದ್ದೇವೆ.

ನಾಲ್ಕನೆಯದಾಗಿ, ಭಾರತವು ತನ್ನ ತಾಂತ್ರಿಕ ಕ್ಷಮತೆಯನ್ನು ಸಕಾಲದಲ್ಲಿ ಬಳಸಿಕೊಂಡು ರಾಷ್ಟ್ರೀಯ ಮಟ್ಟದಲ್ಲಿ ವ್ಯಾಕ್ಸೀನ್ ಕುರಿತಾದ ಎಲ್ಲ ಮಾತಿಯ ಡಿಜಿಟಲೀಕರಣದೊಂದಿಗೆ ಹೊಸತೊಂದು ಕ್ರಾಂತಿಯನ್ನೇ ಮಾಡಿದೆ. ಉದಾಹರಣೆಗೆ ಹೇಳುವುದಾದರೆ ಕೋವಿನ್ ಎಂಬ ಭಾರತದಲ್ಲಿ ಚಾಲನೆಯಲ್ಲಿರುವ ಮುಕ್ತ ಜಾಲತಾಣ ವೇದಿಕೆ, ವ್ಯಾಕ್ಸೀನ್ ಸಂಬಂಧಿತ ಎಲ್ಲ ಸಂಗತಿಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತಿದೆ.

ವ್ಯಾಕ್ಸೀನ್ ಪಡೆದವರಿಗೆ ಪ್ರಮಾಣೀಕರಿಸಬಹುದಾದ ಡಿಜಿಟಲ್ ದೃಢೀಕರಣ ಪತ್ರ ನೀಡುವಲ್ಲಿ ಮಹತ್ವದ ಪಾತ್ರ ವನ್ನು ನಿರ್ವಹಿಸುತ್ತಿದೆ. ಭಾರತದ ಈ ಜಾಲತಾಣ ವೇದಿಕೆಯ ಕ್ಷಮತೆಯನ್ನು ಕಂಡು ನಾನು ವಿಶೇಷವಾದ ಪ್ರೇರಣೆಯನ್ನು ಪಡೆದಿದ್ದೇನೆ. ಭಾರತದ ಆರೋಗ್ಯ ಕ್ಷೇತ್ರದ ಸಾಧನೆಯ ಹಿಂದಿರುವ ಈ ವ್ಯವಸ್ಥೆಯನ್ನು ವಿಶ್ವದ ಇತರ ರಾಷ್ಟ್ರಗಳೂ ಕೂಡ ಅನುಕರಿಸಿ ಅನುಷ್ಠಾನಕ್ಕೆ ತರಬಹುದಾಗಿದೆ.

ಐದನೆಯದಾಗಿ ಬಹಳ ಮುಖ್ಯವಾದ ಅಂಶವೆಂದರೆ ಈ ಆರೋಗ್ಯ ಅಭಿಯಾನದಲ್ಲಿ ಜನರ ಪಾಲ್ಗೊಳ್ಳುಕೆ. ಇದರಿಂದಾಗಿ ಭಾರತದಲ್ಲಿ ಕೋವಿಡ್-19  ವ್ಯಾಕ್ಸಿ ನೇಶನ್ ಯಶಸ್ವಿಯಾಗುವುದು ಸಾಧ್ಯವಾಗಿದೆ. ಪೋಲಿಯೋ ನಿರ್ಮೂಲನೆ ಲಸಿಕೆಯ ಅನುಭವದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಬೃಹತ್ ಜನಸಂಖ್ಯೆ ಯುಳ್ಳ ದೇಶದಲ್ಲಿ ಇಂತಹದೊಂದು ವ್ಯಾಕ್ಸೀನ್ ಅಭಿಯಾನವನ್ನು ನಿರ್ವಹಣೆ ಮಾಡುವಲ್ಲಿ ಯಶಸ್ಸನ್ನು ಕಂಡಿದೆ. ಜನರಲ್ಲಿ ಇರಬಹುದಾದ ಹಿಂಜರಿಕೆಯನ್ನು ಹೋಗಲಾಡಿಸು ವಲ್ಲಿ ಸ್ಥಳೀಯವಾಗಿ ಸ್ವಸಹಾಯ ಗುಂಪುಗಳ ಮೂಲಕ ಸಂದೇಶ ರವಾನೆ ಮಾಡಿ ತಪ್ಪುಮಾತಿಗಳನ್ನು ದೂರೀಕರಿಸಿ ಸಾಮೂಹಿಕವಾಗಿ ಮಾಧ್ಯಮಗಳ ಮೂಲಕ ಜಾಗೃತಿಯನ್ನು ಮೂಡಿಸಿ, ಈ ವ್ಯಾಕ್ಸೀನ್ ಅಭಿಯಾನವನ್ನು ಮಹೋತ್ಸವದಂತೆ ನಿರ್ವಹಿಸಿದೆ.

ಭಾರತದ ಜನ ಅದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಕೂಡ. ಇಂತಹದೊಂದು ಪ್ರಗತಿಪರ ಕಾರ್ಯವಿಧಾನದ ಹೊರತಾಗಿ ನಾವು ವಿಶ್ವಾದ್ಯಂತ ಈ ಸಾಂಕ್ರಾಮಿಕ ಕಾಯಿಲೆಯನ್ನು ಕಟ್ಟಿ ಹಾಕುವುದು ಖಂಡಿತವಾಗಿಯೂ ಸಾಧ್ಯವಿಲ್ಲ. ಇಂತಹ ಪರಿಕ್ರಮದಿಂದ ರೋಗಲಕ್ಷಣಗಳನ್ನು ನಿವಾರಿಸುವಲ್ಲಿ, ಅದರ ರೂಪಾಂತರಿಗಳು ಹುಟ್ಟದಂತೆ ನೋಡಿಕೊಳ್ಳುವುದು ಸಾಧ್ಯವಾಗುತ್ತದೆ. ವ್ಯಾಕ್ಸೀನ್‌ಗಳನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡಿಲ್ಲ, ಆರ್ಥಿಕವಾಗಿ ಕೆಳಮ
ಟ್ಟದಲ್ಲಿರುವ ಜನರ ಪೈಕಿ ಶೇ.3 ಕ್ಕಿಂತ ಕಡಿಮೆ ಪ್ರಮಾಣದ ಜನರಿಗೆ ಒಂದು ಡೋಸ್ ವ್ಯಾಕ್ಸೀನ್ ಸಿಕ್ಕಿದೆ ಎಂಬ ಟೀಕೆ/ ಆಕ್ರೋಶಗಳೂ ಕೇಳಿ ಬಂದಿವೆ.

ಅದಕ್ಕೆ ಉತ್ತರವೆಂಬಂತೆ ವ್ಯಾಕ್ಸೀನ್ ಗಳ ಹೆಚ್ಚಿನ ಉತ್ಪಾದನೆಗೆ ವೇಗವರ್ಧನೆ ನೀಡುವುದು ಅವಶ್ಯಕ. ಇದಕ್ಕೆ ವಿಶ್ವಮಟ್ಟದಲ್ಲಿ ವ್ಯಾಕ್ಸೀನ್ ತಯಾರಿಕಾ ಘಟಕಗಳ ಕ್ಷಮತೆಯನ್ನು ಅನುಲಕ್ಷಿಸಿ ಕ್ರಮ ನಿರ್ವಸುವುದು ಸೂಕ್ತ. ಭಾರತ ಈ ನಿಟ್ಟಿನಲ್ಲಿ ಸಕ್ಷಮವಾಗಿದ್ದು ವ್ಯಾಕ್ಸೀನ್ ರಫ್ತಿನಲ್ಲಿ ದೊಡ್ಡ ಮಟ್ಟದಲ್ಲಿ ವಿಶ್ವದ ಗಮನ ಸೆಳೆದಿದೆ. ಆರ್ಥಿಕವಾಗಿ ಕೆಳಮಟ್ಟದಲ್ಲಿರುವ ರಾಷ್ಟ್ರಗಳಿಗೆ ಕೋವಿಡ್-19 ವ್ಯಾಕ್ಸೀನ್ ಪೂರೈಕೆ ಮಾಡುವ ನಿಟ್ಟಿನಲ್ಲಿ, ಮೈತ್ರಿ ಎಂಬ ಅಭಿಯಾನದ ಮೂಲಕವೂ ಭಾರತ ಸಾಕಷ್ಟು ಕೆಲಸ ಮಾಡುತ್ತಲಿದೆ.

ಭಾರತದ ಈ ನಡೆ ನನ್ನಲ್ಲಿ ಆಶಾಭಾವವನ್ನು ಮೂಡಿಸಿದೆ. ಒಂದು ರಾಷ್ಟ್ರದಲ್ಲಿ ನಾಯಕತ್ವ ಸಮರ್ಥವಾಗಿದ್ದರೆ ಆರೋಗ್ಯ ಕ್ಷೇತ್ರ, ಸಂಶೋಧನೆ ಮತ್ತು ಅಭಿವೃದ್ಧಿಗೆ ಸಾಕಷ್ಟು ಹೂಡಿಕೆ ಮಾಡುವ ಮೂಲಕ ಹೇಗೆ ದೇಶದ ಜನರ ಆರೋಗ್ಯ ಕಾಪಾಡುವಲ್ಲಿ ದೃಢ ಹೆಜ್ಜೆ ಇಡಬಹುದು ಎಂಬುದಕ್ಕೆ ಇದೊಂದು ಉದಾಹರಣೆ. ಕಳೆದ 18 ತಿಂಗಳಲ್ಲಿ ನಾವೆಲ್ಲರೂ ಅನುಭವಿಸಿದ ದುರಂತ ಸನ್ನಿವೇಶವನ್ನು ತೊಡೆದು ಮುಂದಿನ ೧೮ ತಿಂಗಳಲ್ಲಿ ನಾವು ಗಮನಾರ್ಹವಾದ ಬದಲಾವಣೆಯನ್ನು
ಕಾಣ ಲಿದ್ದೇವೆ ಎಂಬ ಭಾವನೆ ನನ್ನದು.