Basavaraja Shivappa Giraganvi Column: ತಾಂತ್ರಿಕ ಜ್ಞಾನದ ಕೊರತೆ

ಕೃಷಿಯ ಗಂಧ-ಗಾಳಿ ಗೊತ್ತಿಲ್ಲದವರೂ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದಾಗಿ ಅವೈಜ್ಞಾನಿಕ ಪದ್ಧತಿಗಳು ಬಳಕೆಯಾಗುತ್ತಿವೆ. ಇದರಿಂದಾಗಿ ಮಣ್ಣಿನ ಫಲವತ್ತತೆಯು ದಿನದಿಂದ

Profile Ashok Nayak December 7, 2024
ಕೃಷಿರಂಗ ಬಸವರಾಜ ಶಿವಪ್ಪ ಗಿರಗಾಂವಿ ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಗೂ ಕೃಷಿಯೇ ಮೂಲಾಧಾರ. ಜನ ಸಂಖ್ಯಾಸ್ಪೋಟದಿಂದ ಬಳಲುತ್ತಿರುವ ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ನೌಕರಿ ದೊರೆಯುವುದು ಅಸಾಧ್ಯ. ಹಾಗಾಗಿ ಕೃಷಿ ಕ್ಷೇತ್ರವು ನಿರುದ್ಯೋಗಿಗಳ ಪಾಲಿಗೆ ಶಾಶ್ವತ ಉದ್ಯೋಗ ಸ್ಥಾನವಾಗಿ ಪರಿಣಮಿಸಿದೆ. ಕೃಷಿಯ ಗಂಧ-ಗಾಳಿ ಗೊತ್ತಿಲ್ಲದವರೂ ಇದರಲ್ಲಿ ತೊಡಗಿಸಿಕೊಳ್ಳುತ್ತಿರುವುದರಿಂದಾಗಿ ಅವೈಜ್ಞಾನಿಕ ಪದ್ಧತಿಗಳುಬಳಕೆಯಾಗುತ್ತಿವೆ. ಇದರಿಂದಾಗಿ ಮಣ್ಣಿನ ಫಲವತ್ತತೆಯು ದಿನದಿಂದ ದಿನಕ್ಕೆ ಹಾಳಾಗುತ್ತಿರುವುದಲ್ಲದೆ ಇಳುವರಿ ಯೂ ಗಣನೀಯವಾಗಿ ಕುಸಿಯುತ್ತಿದೆ. 5000 ವರ್ಷಗಳ ಇತಿಹಾಸವಿರುವ ಭಾರತದ ಕೃಷಿ ಕ್ಷೇತ್ರವು ತಾಂತ್ರಿಕ ಜ್ಞಾನದ ಕೊರತೆಯಿಂದಾಗಿ ಅಭಿವೃದ್ಧಿಯ ಬದಲಿಗೆ ಅವನತಿಯತ್ತ ಸಾಗುತ್ತಿದೆ. ಸರಕಾರದಿಂದ ಯಾವುದೇ ನಿಯಂತ್ರಣವಿಲ್ಲದಿರುವುದರಿಂದ ಮನಸೋ ಇಚ್ಛೆ ರೀತಿಯಲ್ಲಿ ಕೃಷಿಕಾರ್ಯ ನಡೆಯುತ್ತಿದೆ. ಕೃಷಿವಲಯಕ್ಕೆ ಸಂಬಂಧಿಸಿ ವಿಶ್ವಾದ್ಯಂತ ಹಲವು ಸಂಶೋಧನೆ ಗಳಾಗುತ್ತಿದ್ದರೂ ಭಾರತದಲ್ಲಿ ಮಾತ್ರ ತಾಂತ್ರಿಕ ಅಳವಡಿಕೆಗಳು ಮತ್ತು ವೈಜ್ಞಾನಿಕ ತಳಹದಿ ಇಲ್ಲವಾಗುತ್ತಿದೆ. ಭೂಮಿ ತಯಾರಿ, ನಾಟಿ, ನಿರ್ವಹಣೆ, ಕೊಯ್ಲು ಮತ್ತು ಕೊಯ್ಲೋತ್ತರ ಚಟುವಟಿಕೆಗಳನ್ನು ಯಾವುದೇ ಮಾನ ದಂಡಗಳಿಲ್ಲದೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ಇಂದಿನ ಬಹುತೇಕರು, ನೆರೆಹೊರೆಯ ರೈತರು ಕೈಗೊಳ್ಳುವ ಕೃಷಿ ವಿಧಾನಗಳನ್ನು ಅನುಸರಿಸುತ್ತಿದ್ದಾರೆಯೇ ವಿನಾ, ಅವು ವೈಜ್ಞಾನಿಕವಾಗಿವೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿಲ್ಲ. ಪ್ರತಿಯೊಂದು ಜಮೀನು, ಬೆಳೆ, ಹವಾಮಾನ ಮತ್ತು ನಿರ್ವಹಣಾ ವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ ಎಂಬ ಅರಿವು ಬಹಳಷ್ಟು ರೈತರಲ್ಲಿ ಇಲ್ಲದಿರುವುದು ದುರಂತ. ಇದರಿಂದ ದೇಶದ ಬಹಳಷ್ಟು ಕಡೆ ಕೃಷಿಕಾರ್ಯಕ್ಕೆ ಹಿನ್ನಡೆ ಒದಗಿರುವುದು ಸ್ಪಷ್ಟವಾಗಿದೆ. ಇದನ್ನು ಸರಿದಾರಿಗೆ ತರಲು ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆ ಸಾರ್ವಜನಿಕವಾಗಿ ತಿಳಿವಳಿಕೆ ನೀಡುತ್ತಿವೆಯಾದರೂ ಫಲಿತಾಂಶವು ತೃಪ್ತಿದಾಯಕವಾಗಿಲ್ಲ. ವಿಶ್ವಾದ್ಯಂತ ಸದ್ದು ಮಾಡುತ್ತಿರುವ ಕೃತಕ ಬುದ್ಧಿಮತ್ತೆ ಹಾಗೂ ಉಪಗ್ರಹಗಳ ಬಳಕೆಯನ್ನು ಇಂದಿನ ಕೃಷಿಯಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಅವಶ್ಯವಿದೆ. ಹಾಗಾದಾಗಲೇ ಭಾರತದ ಕೃಷಿಯು ಉಳಿಯುತ್ತದೆ, ಬೆಳೆದು ಸಮೃದ್ಧಿಯಾಗುತ್ತದೆ ಮತ್ತು ವಿಶ್ವಕ್ಕೆ ಮಾದರಿಯಾಗುತ್ತದೆ. ಸಮಶೀತೋಷ್ಣ ವಲಯದಲ್ಲಿರುವ ಭಾರತದಲ್ಲಿ, ಇತರ ದೇಶಗಳಿಗೆ ಹೋಲಿಸಿದಲ್ಲಿ ಕೃಷಿಗೆ ಪೂರಕವಾದ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿದ್ದರೂ ಅವುಗಳ ವೈಜ್ಞಾನಿಕ ಬಳಕೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಕೃಷಿಯಲ್ಲಿ ಮಾಡುವ ಪ್ರತಿಯೊಂದು ಕಾರ್ಯಗಳಲ್ಲಿ ಹಂಗಾಮು, ಸಮಯ, ಅವಧಿ, ಶಿಫಾರಸು, ಅವಶ್ಯಕತೆ, ಮಾಪನ ಮತ್ತು ಪ್ರಮಾಣ ಎಂಬ ಅಂಶಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಸದ್ಯ ಭಾರತದಲ್ಲಿ ಅನನುಭವಿ ನಿರುದ್ಯೋಗಿಗಳೇ ಕೃಷಿಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಈ ಮಾನದಂಡಗಳು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಾಗಿವೆ. ನಮ್ಮ ಪೂರ್ವಜರು ಜನ-ಜಾನುವಾರುಗಳಿಲ್ಲದೆ ಕೃಷಿಕಾರ್ಯಕ್ಕೆ ಕೈಹಚ್ಚುತ್ತಿರಲಿಲ್ಲ. ಕೃಷಿಗೆ ಪೂರಕವಾಗಿದ್ದ ಹೈನುಗಾರಿಕೆಗೆ ಮತ್ತು ಅದಕ್ಕೆ ಆಧಾರವಾಗಿರುವ ಪಶುಸಂಪತ್ತಿಗೆ ಅವರು ಅಪಾರ ಗೌರವವನ್ನು ನೀಡುತ್ತಿದ್ದರು. ಭೂಮಿಯಲ್ಲಿ ಬೀಜ ಬಿತ್ತುವುದು ಎಂದರೆ ‘ಭೂತಾಯಿಯ ಉಡಿತುಂಬುವುದು’ ಎಂದೇ ಅರ್ಥೈಸಲಾಗುತ್ತಿತ್ತು. ನಮ್ಮ ಪೂರ್ವಜರು ಅನಕ್ಷರಸ್ಥರಾಗಿದ್ದರೂ, ಕೃಷಿಯ ಸಮೃದ್ಧಿಗೆ ಅವಶ್ಯವಿರುವ ಮೂಲತತ್ತ್ವಗಳನ್ನು ಎಂದಿಗೂ ಬಿಟ್ಟುಕೊಡುತ್ತಿರಲಿಲ್ಲ. ರಸಗೊಬ್ಬರಗಳ ಪರಿಚಯವಿರದ ಆ ದಿನಮಾನಗಳಲ್ಲಿ, ಯಾವ ಹಂಗಾಮಿನಲ್ಲಿ ಯಾವ ಬೆಳೆಯನ್ನು ಪರಿಗಣಿಸ ಬೇಕು, ಭೂಮಿಯ ತಯಾರಿ ಮಾಡುವುದು ಹಾಗೂ ಅದರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ, ನಾಟಿ ಬೀಜಗಳ ಆಯ್ಕೆ, ಬೀಜೋಪಚಾರ, ಬೆಳೆ ನಿರ್ವಹಣೆ ಹೇಗೆ ಎಂಬ ಅಂಶಗಳು ಸೇರಿದಂತೆ -ಸಲಿನ ಸಮೃದ್ಧಿಗೆ ಅಗತ್ಯವಾದ ಅಂಶಗಳಿಗೆ ಅವರು ನಿರಂತರವಾಗಿ ಒತ್ತುಕೊಡುತ್ತಿದ್ದರು. ಇದರಿಂದಾಗಿ ಸಮೃದ್ಧ ಫಸಲು ಬರುತ್ತಿದ್ದುದರ ಜತೆಗೆ ಮನುಕುಲದ ಆರೋಗ್ಯವೂ ಉತ್ತಮವಾಗಿತ್ತು. ಹಿಂದೆಲ್ಲಾ ಪ್ರತಿವರ್ಷದ ಬೇಸಗೆಯ ಅವಧಿಯಲ್ಲಿ ‘ಮಾಗಿ ಉಳುಮೆ’ಯನ್ನು ಕಡ್ಡಾಯವಾಗಿ ಕೈಗೊಳ್ಳುತ್ತಿದ್ದುದರಿಂದ, ಬೀಜ ಮೊಳಕೆಯೊಡೆಯುವ ಸಂದರ್ಭದಲ್ಲಿ ಬರಬಹುದಾದ ಅನೇಕ ರೋಗಗಳು ನಾಶವಾಗುತ್ತಿದ್ದವು. ಸಮೃದ್ಧವಾಗಿ ಬೆಳೆದ ಗುಣಮಟ್ಟದ -ಸಲಿನ ಆಯ್ದಭಾಗವನ್ನು ಮುಂದಿನ ವರ್ಷದ ಬಿತ್ತನೆಗಾಗಿ ವ್ಯವಸ್ಥಿತವಾಗಿ ಶೇಖರಿಸಿಡ ಲಾಗುತ್ತಿತ್ತು. ಬಾವಿ, ನದಿ ಮತ್ತು ಮಳೆ ನೀರು ಮಾತ್ರವೇ ಕೃಷಿಕಾರ್ಯಕ್ಕೆ ಬಳಕೆಯಾಗುತ್ತಿತ್ತು (ಈ ನೀರಿನಲ್ಲಿ ಖನಿಜಾಂಶಗಳು ಹೇರಳವಾಗಿರುತ್ತಿತ್ತು, ಕೃಷಿಯ ವೈರಿ ಎನಿಸಿದ ‘ಫ್ಲೋರೈಡ್’ ಅಂಶವು ಇರುತ್ತಿರಲಿಲ್ಲ). ಹಿಂದಿನವರ ಈ ಪರಿಪಾಠಗಳು ಸೇರಿದಂತೆ ಅನೇಕ ವೈಜ್ಞಾನಿಕ ಕ್ರಮಗಳು ಇಂದಿನ ಕೃಷಿ ಚಟುವಟಿಕೆಗಳಲ್ಲಿ ಮುಂದುವರಿಯ ಬೇಕಾಗಿವೆ. ಇಲ್ಲಿ ಮತ್ತೊಂದು ಅಂಶವನ್ನೂ ಉಲ್ಲೇಖಿಸಬೇಕು. ಆಧುನಿಕ ಕೃಷಿಯ ಹೆಸರಿನಲ್ಲಿ ಮುಗ್ಧ ರೈತರನ್ನು ಗೊಂದಲಕ್ಕೆ ಈಡುಮಾಡಲಾಗುತ್ತಿದೆ. ತಿಳಿವಳಿಕೆಯ ಕೊರತೆಯಿಂದಾಗಿ ಇಂಥ ಕೆಲವರುಭೂಮಿಯ ಫಲವತ್ತತೆಯನ್ನು ಸ್ವತಃ ಹಾಳುಗೆಡವುತ್ತಿದ್ದಾರೆ. ಆದ್ದರಿಂದ ಸರಕಾರವು ಮಣ್ಣು ಪರೀಕ್ಷೆಯನ್ನುಕಡ್ಡಾಯಗೊಳಿಸಬೇಕು ಹಾಗೂ ಅದರ ಶಿಫಾರಸಿನಂತೆ ಮಾತ್ರವೇ ರಸಗೊಬ್ಬರದ ವಿತರಣೆಯಾಗುವಂತೆ ನೋಡಿಕೊಳ್ಳಬೇಕು. ನೀರಿನ ಮಿತಬಳಕೆಯ ಕುರಿತೂ ಜಾಗೃತಿಯಾಗಬೇಕು. ರಸಗೊಬ್ಬರಗಳ ಅನಿಯಮಿತ ಬಳಕೆಗಿಂತ ನೀರಿನ ಅನಿಯಮಿತ ಬಳಕೆಯಿಂದಲೇ ಮಣ್ಣಿನ ಫಲವತ್ತತೆಯು ಹಾಳಾಗುತ್ತಿದೆ ಎಂಬುದನ್ನು ಕೃಷಿಕರು ಅರ್ಥಮಾಡಿಕೊಳ್ಳಬೇಕು. (ಲೇಖಕರು ಕೃಷಿ ತಜ್ಞರು ಹಾಗೂ ಸಹಾಯಕ ಮಹಾ ಪ್ರಬಂಧಕರು) ಇದನ್ನೂ ಓದಿ: Dr KaraVeeraprabhu Kyalakonda Column: ಸಾರ್ವಕಾಲಿನ ಸತ್ಯ ಸಾರಿದ ಕನಕದಾಸರು
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ