HIT: The Third Case Movie: ʼಕೆಜಿಎಫ್ʼ ಬಳಿಕ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶ್ರೀನಿಧಿ ಶೆಟ್ಟಿ; ನಾನಿ ಜತೆಗಿನ ʼಹಿಟ್ 3ʼ ರಿಲೀಸ್ಗೆ ಕೌಂಟ್ಡೌನ್
ಈ ವರ್ಷದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ 'ಹಿಟ್ 3' ತೆರೆಗೆ ಬರಲು ದಿನಗಣನೆ ಆರಂಭವಾಗಿದೆ. ನಾನಿ ಮತ್ತು ಕನ್ನಡದ ಶ್ರೀನಿಧಿ ಶೆಟ್ಟಿ ಮೊದಲ ಬಾರಿಗೆ ಜತೆಗೆಯಾಗಿ ನಟಿಸುತ್ತಿರುವ ಈ ಚಿತ್ರ ಈಗಾಗಲೇ ಕುತೂಹಲ ಕೆರಳಿಸಿದೆ. ಬಿರುಸಿನ ಪ್ರಚಾರ ನಡೆಸುತ್ತಿರುವ ಚಿತ್ರತಂಡ ಬೆಂಗಳೂರಿನಲ್ಲೂ ಸುದ್ದಿಗೋಷ್ಟಿ ಆಯೋಜಿಸಿ ಮಾಹಿತಿ ನೀಡಿದೆ.



ನಾನಿಗೆ ಶ್ರೀನಿಧಿ ಶೆಟ್ಟಿ ಜೋಡಿ
ಬೆಂಗಳೂರು: ಟಾಲಿವುಡ್ನ ಶೈಲೇಶ್ ಕೋಲನು ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ 'ಹಿಟ್-3' ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ನಾನಿ ಹಾಗೂ ಶ್ರೀನಿಧಿ ಶೆಟ್ಟಿ ಚಿತ್ರದಲ್ಲಿ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಶ್ರೀನಿಧಿ ಶೆಟ್ಟಿ ತೆಲುಗಿಗೆ ಕಾಲಿಟ್ಟಿದ್ದಾರೆ. ಚಿತ್ರ ಕನ್ನಡ, ತಮಿಳು, ಹಿಂದಿಗೂ ಡಬ್ ಆಗಿ ಪ್ರೇಕ್ಷಕರ ಮುಂದೆ ಬರಲಿದೆ. ಸದ್ಯ ಚಿತ್ರದ ಪ್ರಚಾರ ಭರದ ಸಾಗುತ್ತಿದ್ದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನಿ ಮತ್ತು ಶ್ರೀನಿಧಿ ಶೆಟ್ಟಿ ಭಾಗವಹಿಸಿದರು.

ಕನ್ನಡದಲ್ಲಿ ಡಬ್ ಮಾಡಿದ ಶ್ರೀನಿಧಿ ಶೆಟ್ಟಿ
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾನಿ, ʼʼಹಿಟ್-3ʼ ಸಿನಿಮಾ ಮೇ 1ರಂದು ತೆರೆಗೆ ಬರಲಿದೆ. ಈ ಚಿತ್ರದ ಬಗ್ಗೆ ಬಹಳಷ್ಟು ನಂಬಿಕೆ ಇದೆ. ನಾನು ಸಿನಿಮಾ ನೋಡಿದೆ. ಅದ್ಭುತವಾಗಿ ಮೂ ಡಿಬಂದಿದೆʼʼ ಎಂದರು. ಪಾತ್ರಗಳ ಆಯ್ಕೆ ಬಗ್ಗೆಯೂ ಮಾತನಾಡಿದ ಅವರು, ʼʼನಾನು ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಬಂದಿದ್ದೇನೆ. ಯಾವುದೇ ಜಾನರ್ಗೆ ಸ್ಟಿಕ್ ಆಗುವುದಿಲ್ಲ. ಹೊಸದನ್ನು ಕಲಿಯಲು ಪ್ರಯತ್ನ ಮಾಡುತ್ತೇನೆ. ಶ್ರೀನಿಧಿ ಈ ಚಿತ್ರದಲ್ಲಿ ಕನ್ನಡ ಡಬ್ ಮಾಡಿದ್ದಾರೆʼʼ ಎಂದು ತಿಳಿಸಿದರು.

ಕಥೆ ಚೆನ್ನಾಗಿದೆ ಎಂದ ಶ್ರೀನಿಧಿ ಶೆಟ್ಟಿ
ಶ್ರೀನಿಧಿ ಶೆಟ್ಟಿ ಮಾತನಾಡಿ, ʼʼಮೇ 1ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಹಲವು ತಿಂಗಳ ಗ್ಯಾಪ್ ಬಳಿಕ ನನ್ನ ಚಿತ್ರ ರಿಲೀಸ್ ಆಗುತ್ತಿದೆ. ಮೂರೂವರೆ ವರ್ಷದ ಬಳಿಕ ನನ್ನನ್ನು ನಾನು ತೆರೆಮೇಲೆ ನೋಡಿಕೊಳ್ಳುತ್ತಿದ್ದೇನೆ. ನಾನು ಕೂಡ ಎಕ್ಸೈಟ್ ಆಗಿದ್ದೇನೆ. ʼಕೆಜಿಎಫ್ʼ, ʼಕೆಜಿಎಫ್ 2ʼ ಸಿನಿಮಾಗಳಿಗೆ ನೀವು ಕೊಟ್ಟ ಸಪೋರ್ಟ್ ಇದಕ್ಕೂ ಸಿಗಲಿ. ನಾನಿ ಅವರ ಜತೆ ತೆಲುಗಿನಲ್ಲಿ ಸಿನಿಮಾ ಸಿಕ್ಕಿರುವುದು ದೊಡ್ಡ ಭಾಗ್ಯ. ನಮ್ಮವರೂ ಅನ್ನೋ ಫೀಲ್ ಇದೆ. ಕಥೆ ಚೆನ್ನಾಗಿದೆ. ಎಲ್ಲರೂ ಥಿಯೇಟರ್ ಹೋಗಿ ಸಿನಿಮಾ ನೋಡಿʼʼ ಎಂದರು.

ಗಮನ ಸೆಳೆದ ʼಹಿಟ್ʼ ಸರಣಿ
ʼಹಿಟ್ʼ ಸರಣಿ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಶೈಲೇಶ್ ಕೋಲನು ಇದನ್ನೂ ನಿರ್ದೇಶಿಸಿದ್ದಾರೆ. ಈ ಭಾಗದಲ್ಲಿ ನಾನಿ ಐಪಿಎಸ್ ಅರ್ಜುನ್ ಸರ್ಕಾರ್ ಆಗಿ ಅಬ್ಬರಿಸಿದ್ದಾರೆ. ಮೃದುಲಾ ಪಾತ್ರದಲ್ಲಿ 'ಕೆಜಿಎಫ್' ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸಿದ್ದಾರೆ. 'ಹಿಟ್' ಸರಣಿಯ ಹಿಂದಿನ 2 ಸಿನಿಮಾಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಪಾರ್ಟ್-3 ಕುತೂಹಲ ಮೂಡಿಸಿದೆ.

ರಾಜ್ಯಾದ್ಯಂತ ತೆರೆಗೆ
'ಹಿಟ್ 3' ಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ಚಿತ್ರ ಮೂಡಿ ಬಂದಿದ್ದು, ಮಿಕ್ಕಿ ಜೆ. ಮೇಯರ್ ಸಂಗೀತ, ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನವಿದೆ ಬೆಂಗಳೂರು ಕುಮಾರ್ ʼಹಿಟ್ 3ʼ ಸಿನಿಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡುತ್ತಿದ್ದಾರೆ.