Mother Dairy milk price Hike: ಗ್ರಾಹಕರಿಗೆ ಶಾಕ್; ಇಂದಿನಿಂದ ಮದರ್ ಡೈರಿ ಹಾಲಿನ ಬೆಲೆ 2 ರೂ. ಹೆಚ್ಚಳ
Mother Dairy milk price Hike: ಏಪ್ರಿಲ್ 30 ರಿಂದ ಎಲ್ಲಾ ವಿಧದ ಹಾಲಿಗೆ ಬೆಲೆ ಏರಿಕೆ ಅನ್ವಯವಾಗಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಲೀಟರ್‌ಗೆ 4-5 ರೂ.ಗಳಷ್ಟು ಹೆಚ್ಚಿರುವ ಖರೀದಿ ವೆಚ್ಚದಲ್ಲಿನ ಗಮನಾರ್ಹ ಹೆಚ್ಚಳವನ್ನು ಸರಿದೂಗಿಸಲು ಈ ಬೆಲೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ಮದರ್ ಡೈರಿ ಅಧಿಕಾರಿ ತಿಳಿಸಿದ್ದಾರೆ.


ನವದೆಹಲಿ: ಮದರ್ ಡೈರಿ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಹೆಚ್ಚಿಸಿದೆ. ದೆಹಲಿ ಎನ್‌ಸಿಆರ್ ಸೇರಿ ಎಲ್ಲಾ ಕಾರ್ಯಾಚರಣಾ ಮಾರುಕಟ್ಟೆಗಳಲ್ಲಿ ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡುವುದಾಗಿ ಮದರ್ ಡೈರಿ ಮಂಗಳವಾರ ಘೋಷಿಸಿದೆ. ಏಪ್ರಿಲ್ 30 ರಿಂದ ಎಲ್ಲಾ ವಿಧದ ಹಾಲಿಗೆ ಬೆಲೆ ಏರಿಕೆ (Mother Dairy milk price Hike) ಅನ್ವಯವಾಗಲಿದೆ. ಕಳೆದ ಕೆಲವು ತಿಂಗಳುಗಳಲ್ಲಿ ಲೀಟರ್‌ಗೆ 4-5 ರೂ.ಗಳಷ್ಟು ಹೆಚ್ಚಿರುವ ಖರೀದಿ ವೆಚ್ಚದಲ್ಲಿನ ಗಮನಾರ್ಹ ಹೆಚ್ಚಳವನ್ನು ಸರಿದೂಗಿಸಲು ಈ ಬೆಲೆ ಪರಿಷ್ಕರಣೆ ಅಗತ್ಯವಾಗಿದೆ ಎಂದು ಮದರ್ ಡೈರಿ ಅಧಿಕಾರಿ ತಿಳಿಸಿದ್ದಾರೆ.
ಮದರ್ ಡೈರಿ ದೆಹಲಿ-ಎನ್ಸಿಆರ್ ಮಾರುಕಟ್ಟೆಯಲ್ಲಿ ಮದರ್ ಡೈರಿ ಮಳಿಗೆಗಳು, ಸಾಮಾನ್ಯ ವ್ಯಾಪಾರ ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೂಲಕ ದಿನಕ್ಕೆ ಸುಮಾರು 35 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತದೆ. ಬೆಲೆಗಳ ಹೆಚ್ಚಳವು ಹೆಚ್ಚಿದ ವೆಚ್ಚದ ಭಾಗಶಃ ವರ್ಗಾವಣೆಯನ್ನು ಮಾತ್ರ ಪ್ರತಿನಿಧಿಸುತ್ತದೆ, ಇದು ರೈತರು ಮತ್ತು ಗ್ರಾಹಕರ ಹಿತಾಸಕ್ತಿಗಳನ್ನು ಸಮಾನವಾಗಿ ಪೂರೈಸುವ ಗುರಿಯನ್ನು ಹೊಂದಿದೆ ಎಂದು ಮದರ್ ಡೈರಿ ಅಧಿಕಾರಿ ಹೇಳಿದ್ದಾರೆ.
ದೆಹಲಿ-ಎನ್‌ಸಿಆರ್, ಉತ್ತರ ಪ್ರದೇಶ, ಹರಿಯಾಣ, ಉತ್ತರಾಖಂಡ್ ಮಾರುಕಟ್ಟೆಯಲ್ಲಿ ಟೋನ್ಡ್ ಹಾಲಿನ (ಬಲ್ಕ್ ವೆಂಡೆಡ್) ಬೆಲೆಯನ್ನು ಲೀಟರ್‌ಗೆ 54 ರೂ.ಗಳಿಂದ 56 ರೂ.ಗಳಿಗೆ ಹೆಚ್ಚಿಸಲಾಗಿದೆ. ಪೂರ್ಣ ಕೆನೆ ಹಾಲು (ಪೌಚ್) ಪ್ರತಿ ಲೀಟರ್‌ಗೆ 68 ರೂ.ಗಳಿಂದ 69 ರೂ.ಗಳಿಗೆ ಏರಿಕೆಯಾಗಿದೆ.
ಟೋನ್ಸ್ ಹಾಲಿನ (ಪೌಚ್) ದರವನ್ನು ಲೀಟರ್‌ಗೆ 56 ರೂ.ಗಳಿಂದ 57 ರೂ.ಗಳಿಗೆ ಹೆಚ್ಚಿಸಲಾಗಿದ್ದು, ಡಬಲ್ ಟೋನ್ಡ್ ಹಾಲು ಪ್ರತಿ ಲೀಟರ್‌ಗೆ 49 ರೂ.ಗಳಿಂದ 51 ರೂ.ಗಳಿಗೆ ಏರಿಕೆಯಾಗಿದೆ. ಹಸುವಿನ ಹಾಲಿನ ಬೆಲೆಯನ್ನು ಲೀಟರ್‌ಗೆ 57 ರೂ.ನಿಂದ 59 ರೂ.ಗೆ ಹೆಚ್ಚಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Beer prices hike: ಮತ್ತೆ ಬಿಯರ್ ದರ ಹೆಚ್ಚಳಕ್ಕೆ ಮುಂದಾದ ರಾಜ್ಯ ಸರ್ಕಾರ; ಎಷ್ಟು ಏರಿಕೆಯಾಗಲಿದೆ?