M J Akbar Column: ಕಮ್ಯುನಿಸಂನ ಸೋಲು ಮತ್ತು ಸಿದ್ದಾಂತಗಳ ಇತಿಮಿತಿ
ಒಂದು- ಅಮೆರಿಕದಲ್ಲೇ ವಿಯೆಟ್ನಾಮ್ ಪರ ಹೋರಾಟಗಳು ನಡೆಯುತ್ತಿದ್ದವು. ಎರಡು- ವಿಯೆ ಟ್ನಾಮಿಗಳು ಅಪ್ರತಿಮ ಆತ್ಮವಿಶ್ವಾಸ ಮತ್ತು ಕೆಚ್ಚೆದೆಯ ಧೈರ್ಯದಿಂದ ಹೋರಾಡಿ ಅಮೆರಿಕ ವನ್ನು ಕಂಗೆಡಿಸಿದ್ದರು. ಆ ಯುದ್ಧದ ಮೂಲಕ ೨೦ನೇ ಶತಮಾನದಲ್ಲಿ ತಾಕತ್ತು ಎಂಬ ಪದದ ಅರ್ಥವನ್ನೇ ವಿಯೆಟ್ನಾಮ್ ಮರುವ್ಯಾಖ್ಯಾನ ಮಾಡಿತ್ತು

ಲೇಖಕ, ಹಿರಿಯ ಪತ್ರಕರ್ತ ಎಂ.ಜೆ.ಅಕ್ಬರ್

ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ಕೆಲ ವಿಷಯಗಳಲ್ಲಿ ಕಾಲ ನಿಂತಲ್ಲೇ ನಿಂತುಬಿಡುತ್ತದೆ. ಇತ್ತೀಚೆಗೆ ಒಮಾನ್ ದೇಶದ ಮಸ್ಕತ್‌ನಲ್ಲಿ ಬಹುಮುಖ ಪ್ರತಿಭೆ ರಾಮ ಮಾಧವ್ ಹಾಗೂ ಒಮಾನ್ ಸರಕಾರ ಜಂಟಿ ಯಾಗಿ ಹಿಂದೂ ಮಹಾಸಾಗರದ ಬಗ್ಗೆ ಒಂದು ವಿಶಿಷ್ಟ ವಿಚಾರ ಸಂಕಿರಣವನ್ನು ಆಯೋ ಜಿಸಿದ್ದರು. ಅದರಲ್ಲಿ ವಿಯೆಟ್ನಾಮ್‌ನ ವಿದೇಶಾಂಗ ಸಚಿವರನ್ನು ಭೇಟಿಯಾಗಿದ್ದೆ. ಆಗ 1960ರ ದಶಕದ ಜಾಗತಿಕ ದುರಂತವೆಂದು ಪರಿಗಣಿಸಲ್ಪಡುವ ಹಾಗೂ 1970ರ ದಶಕದಲ್ಲಿ ಮಹಾಕಾವ್ಯವೇ ಆಗಿಹೋದ ವಿಯೆಟ್ನಾಮ್ ಯುದ್ಧದ ಕುರಿತ ಅನೇಕ ಸಂಘರ್ಷಗಳು ನೆನಪಿನ ಪಡಸಾಲೆಯಲ್ಲಿ ಹಾದುಹೋದವು. ಆ ಯುದ್ಧದಲ್ಲಿ ಅಮೆರಿಕದ ಸರಕಾರ ಎರಡು ರೀತಿಯಲ್ಲಿ ಇಕ್ಕಟ್ಟಿಗೆ ಸಿಲುಕಿತ್ತು.
ಒಂದು- ಅಮೆರಿಕದಲ್ಲೇ ವಿಯೆಟ್ನಾಮ್ ಪರ ಹೋರಾಟಗಳು ನಡೆಯುತ್ತಿದ್ದವು. ಎರಡು- ವಿಯೆಟ್ನಾಮಿಗಳು ಅಪ್ರತಿಮ ಆತ್ಮವಿಶ್ವಾಸ ಮತ್ತು ಕೆಚ್ಚೆದೆಯ ಧೈರ್ಯದಿಂದ ಹೋರಾಡಿ ಅಮೆರಿಕವನ್ನು ಕಂಗೆಡಿಸಿದ್ದರು. ಆ ಯುದ್ಧದ ಮೂಲಕ 20ನೇ ಶತಮಾನದಲ್ಲಿ ತಾಕತ್ತು ಎಂಬ ಪದದ ಅರ್ಥವನ್ನೇ ವಿಯೆಟ್ನಾಮ್ ಮರುವ್ಯಾಖ್ಯಾನ ಮಾಡಿತ್ತು.
ನಾನಾಗ ಕಾಲೇಜಿನಲ್ಲಿ ಓದುತ್ತಿದ್ದೆ. ವಿಯೆಟ್ನಾಮ್‌ನ ಧೈರ್ಯ ಮತ್ತು ಸಾಹಸಗಳು ನನ್ನ ಆಂತರ್ಯವನ್ನು ಇನ್ನಿಲ್ಲದಂತೆ ಕಲಕಿದ್ದವು. ಬಾಲ್ಯದಿಂದ ಯೌವನಕ್ಕೆ ಕಾಲಿಡುತ್ತಿದ್ದ ನಾನು, ಮನುಷ್ಯನ ಬದುಕಿನ ಆ ಮಹತ್ವದ ರೂಪಾಂತರದ ಸಮಯದಲ್ಲಿ ವಿಯೆಟ್ನಾಮ್ ಯುದ್ಧವನ್ನು ತುಂಬಾ ಭಾವುಕವಾಗಿ ತೆಗೆದುಕೊಂಡಿದ್ದೆ. 1967ರಿಂದ 1970ರ ನಡುವಿನ ಮೂರು ವರ್ಷಗಳ ಕಾಲ ಕೊಲ್ಕತ್ತಾದ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ವಿಯೆಟ್ನಾಮ್ ಯುದ್ಧದ ಕುರಿತಾದ ಹೋರಾಟಗಳಿಂದಾಗಿ ತರಗತಿಗಳೇ ನಡೆಯುತ್ತಿರಲಿಲ್ಲ.
ಕಾಲೇಜು ಹೆಚ್ಚುಕಮ್ಮಿ ಬಂದ್ ಆಗಿತ್ತು. ಅಲ್ಲಿನ ವಿದ್ಯಾರ್ಥಿಯಾಗಿದ್ದ ನಾನು ಕೂಡ ಯುದ್ಧದಲ್ಲಿ ಮನಸ್ಸು ಮುಳುಗಿಸಿಕೊಂಡಿದ್ದೆ. ಆ ಸಮಯದಲ್ಲಿ ಕಾಲೇಜಿನ ಒಂದೊಂದು ಗೋಡೆಯ ಮೇಲೂ ವಿಯೆಟ್ನಾಮ್ ಪರವಾದ ಬಂಗಾಳಿ ಘೋಷಣೆಗಳು ರಾರಾಜಿಸು ತ್ತಿದ್ದವು. ಅವುಗಳಲ್ಲೊಂದು ಘೋಷಣೆ ಇಂದಿಗೂ ನನಗೆ ಚೆನ್ನಾಗಿ ನೆನಪಿದೆ- ‘ಅಮರ್ ನಾಮ್, ತೋಮರ್ ನಾಮ್, ಶೋಬರ್ ನಾಮ್ ವಿಯೆಟ್ನಾಂ!’ ನನ್ನ ಹೆಸರು, ನಿನ್ನ ಹೆಸರು, ಎಲ್ಲಾ ಹೆಸರು ವಿಯೆಟ್ನಾಮ್ ಎಂಬುದು ಇದರರ್ಥ.
ಬಂಗಾಳಿಯಲ್ಲಿ ಸುಂದರವಾದ ಪ್ರಾಸದ ಕಾರಣಕ್ಕೆ ಇದು ದೊಡ್ಡ ಹಿಟ್ ಆಗಿತ್ತು. ವಿಯೆ ಟ್ನಾಮ್ ಕುರಿತಾದ ಇನ್ನೊಂದು ಅಳಿಸಲಾಗದ ನೆನಪು ನನ್ನೊಳಗಿದೆ. ಯುದ್ಧದ ಕೊನೆ ಯಲ್ಲಿ 1975ರ ಏಪ್ರಿಲ್ 30ರಂದು ದಿನಪತ್ರಿಕೆಗಳಲ್ಲಿ ಒಂದು ಕಪ್ಪು ಬಿಳುಪಿನ ಫೋಟೋ ಪ್ರಿಂಟ್ ಆಗಿತ್ತು. ವಿಯೆಟ್ನಾಮ್‌ನ ಸೈಗಾನ್ ನಗರದಲ್ಲಿರುವ ಅಮೆರಿಕನ್ ದೂತಾವಾಸದ ಟೆರೇಸ್‌ನಿಂದ ಅಮೆರಿಕದ ಸೇನೆಯ ಕೊನೆಯ ಹೆಲಿಕಾಪ್ಟರ್ ಆಗಸಕ್ಕೆ ನೆಗೆಯಲು ಸಜ್ಜಾಗಿ ನಿಂತಿದ್ದ ಚಿತ್ರವದು.
ಆ ಹೆಲಿಕಾಪ್ಟರ್ ಟೇಕಾಫ್ ಆದ ತಕ್ಷಣ ದಶಕಗಳ ಕಾಲ ನಡೆದಿದ್ದ ವಿಯೆಟ್ನಾಮ್ ಯುದ್ಧ ಅಂತ್ಯಗೊಂಡಿತ್ತು. ಆ ಕ್ಷಣದಲ್ಲೇ ಇತಿಹಾಸದ ಪುಸ್ತಕದಲ್ಲಿ ದೊಡ್ಡ ಅಧ್ಯಾಯವೊಂದು ಮುಗಿದು, ಲಕ್ಷಾಂತರ ಹೊಸ ಅಧ್ಯಾಯಗಳು ಆರಂಭಗೊಂಡವು. ವಿಯೆಟ್ನಾಮ್ ಬಗ್ಗೆ 1972ರಲ್ಲಿ ಅದ್ಭುತವಾದ ಪುಸ್ತಕವೊಂದು ಬಂದಿದೆ. ಯುದ್ಧ ಮುಗಿಯುವುದಕ್ಕೂ ಮೂರು ವರ್ಷ ಮೊದಲೇ ಆ ಪುಸ್ತಕ ಪ್ರಕಟವಾಯಿತು. ಆ ಸಮಯಕ್ಕಾಗಲೇ ಅಮೆರಿಕಕ್ಕೆ ತಾನು ಸೋತಿರುವುದು ಗೊತ್ತಾಗಿತ್ತು, ಆದರೆ ಅಲ್ಲಿನ ಸರಕಾರಕ್ಕೆ ಅದನ್ನು ಹೇಗೆ ಒಪ್ಪಿಕೊಳ್ಳು ವುದು ಎಂಬುದು ಗೊತ್ತಿರಲಿಲ್ಲ.
ಒಪ್ಪಿಕೊಂಡರೆ ಮರ್ಯಾದೆ ಹೋಗುತ್ತಿತ್ತು. ಡೇವಿಡ್ ಹಾಲ್ಬರ್‌ಸ್ಟಾಮ್ ಬರೆದ ‘ದಿ ಬೆಸ್ಟ್ ಆಂಡ್ ದಿ ಬ್ರೈಟೆಸ್ಟ್’ ಪುಸ್ತಕದಲ್ಲಿ ಹೇಗೆ ಅಮೆರಿಕದ ಬೌದ್ಧಿಕ ವರ್ಗದ ಪ್ರಮುಖ ಚಿಂತಕರು ಒಳ್ಳೆಯ ಉದ್ದೇಶವೆಂಬ ಅಪಾಯಕಾರಿ ನೆಪದ ಆಮಿಷಕ್ಕೆ ಒಳಗಾಗಿ ಅಗಾಧ ಶಕ್ತಿಯ ಮಿಲಿಟರಿಯನ್ನು ವಿಷದ ಸಮುದ್ರಕ್ಕೆ ಇಳಿಸಿ ಅಲ್ಲಿನ ನೀರನ್ನು ಜಗತ್ತಿಗೆಲ್ಲಾ ಉಕ್ಕಿ ಹರಿಯು ವಂತೆ ಮಾಡುವ ಮೂಲಕ ದೊಡ್ಡ ಅಧ್ವಾನ ಎಬ್ಬಿಸಿದರು ಎಂಬುದನ್ನು ಬಹಳ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾನೆ.
ಹೆಚ್ಚುಕಮ್ಮಿ ಅರ್ಧ ಶತಮಾನದ ಕಾಲ ನಡೆದ ಚಿಂತನ ಮಂಥನ ಮತ್ತು ನಂತರ ನಡೆದ ಸೇನೆಯ ಹಿಂತೆಗೆತದಿಂದ ಕೊನೆಗೆ ಉಂಟಾದ ಪರಿಣಾಮವಾದರೂ ಏನು? ಮಾನವತೆಯ ಅಣಕ. ಅಷ್ಟೆಲ್ಲಾ ಮಾಡಿ ಅಮೆರಿಕ ತನ್ನನ್ನೇ ತಾನು ಕೆಳಕ್ಕೆ ಬೀಳಿಸಿಕೊಂಡಿತ್ತು.
ಆದರೆ, ಆಗಲೂ ಸೂಪರ್ ಪವರ್ ಆಗಿದ್ದ ಅಮೆರಿಕ ಹೇಗೋ ಬಚಾವಾಯಿತು. ತಾನೇ ಮೈಮೇಲೆ ಎಳೆದುಕೊಂಡಿದ್ದ ಭಾನಗಡಿಯಿಂದ ಅಮೆರಿಕವನ್ನು ಅಲ್ಲಿನ ಪ್ರಜಾಸತ್ತಾತ್ಮಕ ಸಂಸ್ಥೆಗಳು ಪಾರುಮಾಡಿದವು ಎಂದು ಹೇಳುವುದೇ ಹೆಚ್ಚು ಸರಿ. ಆ ಸಂಸ್ಥೆಗಳಲ್ಲಿ ಎಂಥ ಗಾಯವನ್ನು ಬೇಕಾದರೂ ಗುಣಪಡಿಸುವಂಥ ಇಂಜೆಕ್ಷನ್ ನೀಡುವ ಡಾಕ್ಟರ್ ಗಳಿದ್ದರು. ಆದರೆ ಕೆಲವೊಮ್ಮೆ ಗೆಲುವು ಕೂಡ ಸೋಲಿನಷ್ಟೇ ಸಮಸ್ಯೆಗಳನ್ನು ತಂದೊಡ್ಡಬಹುದು.
ಅಮೆರಿಕದ ಸೈದ್ಧಾಂತಿಕ ಹಾಗೂ ಮಿಲಿಟರಿ ಶತ್ರುವಾದ ಸೋವಿಯತ್ ಯೂನಿಯನ್ ಎರಡನೇ ವಿಶ್ವ ಮಹಾಯುದ್ಧದ ಬಳಿಕ ಜಗತ್ತಿನ ಬಹು ಭಾಗಗಳನ್ನು ತನ್ನ ವಶಕ್ಕೆ ತೆಗೆದು ಕೊಂಡು ಮೆರೆಯುತ್ತಿತ್ತು. ಅಮೆರಿಕದ ವಿಯೆಟ್ನಾಮ್ ಸಾಹಸವನ್ನು ನೋಡಿದ ಸೋವಿ ಯತ್ ಯೂನಿಯನ್‌ಗೆ ತನಗೂ ಒಂದು ‘ವಿಯೆಟ್ನಾಮ್’ ಬೇಕು ಅನ್ನಿಸಿತು.
ದುರಹಂಕಾರ ಯಾವುದೇ ಜನಾಂಗದ ಸೊತ್ತಲ್ಲ. ಸೈಗಾನ್‌ನಿಂದ ಅಮೆರಿಕದ ಕೊನೆಯ ಹೆಲಿಕಾಪ್ಟರ್ ಪುರ್ರನೆ ಹಾರಿಹೋದ ಐದು ವರ್ಷಗಳ ನಂತರ ಮಾಸ್ಕೋದ ಸೇನೆಗಳು ಅಫ್ಘಾನಿಸ್ತಾನದ ಮೇಲೆ ದಾಳಿ ನಡೆಸಿದವು. ಅದರಿಂದ ಆಗಿದ್ದೇನು? ತನ್ನ ಆರ್ಥಿಕ ದಾರಿ ದ್ರ್ಯವೂ ರಾಷ್ಟ್ರೀಯ ಅಸ್ಥಿರತೆಯೂ ಒಂದೇ ಅಲ್ಲ ಎಂಬ ಪಾಠವನ್ನು ರಷ್ಯಾ ಕಲಿಯಿತು.
೧೯೮೦ರ ದಶಕವಿಡೀ ಅಫ್ಘಾನಿಸ್ತಾನದಲ್ಲಿನ ದುಸ್ಸಾಹಸಗಳಲ್ಲೇ ಕಳೆದುಹೋಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲವು ಗಾಯಗಳು ಕ್ರಮೇಣ ತನ್ನಿಂತಾನೇ ಗುಣವಾಗು ತ್ತವೆಯಲ್ಲಾ ಆ ರೀತಿಯ ಸ್ವಯಂ ಗುಣಪಡಿಸಿಕೊಳ್ಳುವ ಶಕ್ತಿ ಸೋವಿಯತ್ ಯೂನಿಯನ್ ಗೆ ಇರಲಿಲ್ಲ. ಯಾರಿಗಾದರೂ ಲಿಯೋನಿಡ್ ಬ್ರೆಜ್ನೇವ್ ಎಂಬ ಗಂಟಿಕ್ಕಿದ ಹುಬ್ಬುಗಳ, ದೊಡ್ಡ ಗಲ್ಲದ ವ್ಯಕ್ತಿಯ ನೆನಪುಂಟೆ? ಸೋವಿಯತ್ ಯೂನಿಯನ್ ಕಮ್ಯುನಿಸ್ಟ್ ಪಕ್ಷದ (ಸಿಪಿಎಸ್‌ಯು) ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು ಹೆಚ್ಚುಕಮ್ಮಿ ಸೋವಿಯತ್ ಯೂನಿಯನ್ ಸಂಸ್ಥಾಪಕನಾದ ಜೋಸೆಫ್ ಸ್ಟಾಲಿನ್‌ನಷ್ಟೇ ಕಾಲ ಅಧಿಕಾರ ನಡೆಸಿ, ಕಾರ್ಲ್ ಮಾರ್ಕ್ಸ್ ಹಾಗೂ ವ್ಲಾದಿಮಿರ್ ಲೆನಿನ್ ಅವರ ರಾಜಕೀಯ ಪರಂಪರೆಯನ್ನೇ ನಾಶಗೊಳಿಸಿದವರು.
1975ರಲ್ಲಿ ವಿಯೆಟ್ನಾಮ್ ಯುದ್ಧ ಮುಗಿದಾಗ ರಷ್ಯಾ ಮತ್ತು ಚೀನಾ ದೇಶಗಳು ಅದು ಕಮ್ಯುನಿಸ್ಟರ ವಿಜಯ ಎಂದು ಪ್ರಚಾರ ಮಾಡಿದ್ದವು. ವಾಸ್ತವವಾಗಿ ಅದು ನಿಜವಲ್ಲ. ಅಮೆರಿಕವನ್ನು ಸೋಲಿಸಿದ್ದು ವಿಯೆಟ್ನಾಮ್‌ನ ರಾಷ್ಟ್ರೀಯತೆಯೇ ಹೊರತು ಕಮ್ಯುನಿಸ್ಟ್ ಅಂತಾರಾಷ್ಟ್ರೀಯತೆ ಅಲ್ಲ. 1975ರಲ್ಲಿ ಕಮ್ಯುನಿಸ್ಟ್ ಶಕ್ತಿಗಳಿಗೆ ಗೊತ್ತಿಲ್ಲದೆ ಇದ್ದ ವಿಷಯ ಏನೆಂದರೆ ಅವರ ಸಿದ್ಧಾಂತವು ತ್ಯಾಜ್ಯವನ್ನು ಉತ್ಪಾದಿಸುತ್ತಿತ್ತೇ ಹೊರತು ರಕ್ತವನ್ನು ಉತ್ಪಾದಿಸುತ್ತಿರಲಿಲ್ಲ.
ಕಮ್ಯುನಿಸ್ಟ್ ಸಿದ್ಧಾಂತದ ತಾಕತ್ತಿನ ಬಗ್ಗೆ ಇದ್ದ ಭ್ರಮೆ ಕೊನೆಯ ಹೆಲಿಕಾಪ್ಟರ್ ವಿಯೆಟ್ನಾ ಮ್ ನಿಂದ ಹಾರಿದ ನಾಲ್ಕು ವರ್ಷಗಳ ಬಳಿಕ ಮತ್ತೊಮ್ಮೆ ಜಗಜ್ಜಾಹೀರಾಯಿತು. 1979ರ ಫೆಬ್ರವರಿ 17ರಂದು ವಿಯೆಟ್ನಾಮ್ ಮೇಲೆ ಚೀನಾ ದಾಳಿ ನಡೆಸಿತು. ಲಾವೋ ಸಾಯ್, ಸಾವೋ ಬಾಂಗ್ ಮತ್ತು ಲಾಕ್ ಬಿನ್ ಎಂಬ ಮೂರು ಪ್ರದೇಶಗಳ ಮೇಲೆ ದಾಳಿ ನಡೆಸಿ ಕಾಂಬೋಡಿಯಾದಲ್ಲಿದ್ದ ಕ್ರೂರಿ ಕ್ಮೇರ್ ರೋಗ್‌ನ ಆಡಳಿತವನ್ನು ಕಿತ್ತೆಸೆದಿದ್ದಕ್ಕೆ ವಿಯೆ ಟ್ನಾಮ್‌ಗೆ ಶಿಕ್ಷೆ ನೀಡಲು ಮುಂದಾಯಿತು.
ಆದರೆ, ವಿಯೆಟ್ನಾಮ್‌ನ ರಕ್ಷಣಾ ಸಚಿವ ಜನರಲ್ ವೋ ನುಂಗುಯೆನ್ ಜಿಯಾಪ್ ಅಮೆರಿಕ ಮತ್ತು ಫ್ರಾನ್ಸ್ ದೇಶಗಳು ಬಲಾಢ್ಯ ಜಾಗತಿಕ ಶಕ್ತಿಗಳಾಗಿ ಮೆರೆಯುತ್ತಿದ್ದಾಗಲೇ ಆ ದೇಶ ಗಳನ್ನು ಸೋಲಿಸಿದ್ದರು ಎಂಬುದನ್ನು ಚೀನಾ ಮರೆತಿತ್ತು. ಕೇವಲ 27 ದಿನಗಳಲ್ಲಿ ವಿಯೆ ಟ್ನಾಮ್ ಸೇನೆಯ ಅಬ್ಬರದೆದುರು ಚೀನಾ ಬಾಲ ಮುದುರಿಕೊಂಡು ವಾಪಸ್ ಹೋಗ ಬೇಕಾಯಿತು.
ವಿಯೆಟ್ನಾಮ್‌ನ ಕಿರೀಟಕ್ಕೆ ಗರಿಯಿಟ್ಟಂತೆ ಬೀಜಿಂಗ್ ದೂಸರಾ ಮಾತನಾಡದೆ ಸೋಲು ಕೂಡ ಒಪ್ಪಿಕೊಂಡಿತು. ಚೀನಿಯರಿಗೆ ವಿದಾಯ ಹೇಳುವಾಗ ವಿಯೆಟ್ನಾಮಿಗಳು ವಿನಮ್ರ ವಾಗಿಯೇ ಇದ್ದರು. ಯುದ್ಧ ಮುಗಿದ 45 ವರ್ಷಗಳ ಬಳಿಕ ಈಗ ನಾನಿದನ್ನು ಬರೆಯುವಾಗ ವಿಯೆಟ್ನಾಮ್ ಸಂಸತ್ತು ವಿಯೆಟ್ನಾಮ್ ಮತ್ತು ಚೀನಾ ನಡುವೆ ರೈಲ್ವೆ ಮಾರ್ಗದ ನಿರ್ಮಾ ಣಕ್ಕೆ ಒಪ್ಪಿಗೆ ನೀಡಿದೆ.
ಎರಡೂ ದೇಶಗಳು ಈಗ ಸೈದ್ಧಾಂತಿಕ ಹಟವಾದಿಗಳಂತೆ ವರ್ತಿಸುವುದನ್ನು ಬಿಟ್ಟು ಪಕ್ಕಾ ವ್ಯವಹಾರಸ್ಥರಂತೆ ನಡೆದುಕೊಳ್ಳುತ್ತಿವೆ. ತಪ್ಪು ಮಾಡದವರು ಯಾರೂ ಇಲ್ಲ. ಅಜೇಯರು ಯಾರೂ ಅಲ್ಲ. ಸಿದ್ಧಾಂತಕ್ಕೆ ಸಾಕ್ಷಿ ಕಡುಬಿನಲ್ಲಿ ಕುಳಿತಿದೆ! ರಷ್ಯಾದಲ್ಲಿ ಕಮ್ಯುನಿಸಂ ಸತ್ತುಹೋಗಿದೆ. ಚೀನಾದಲ್ಲಿ ಅದು ಗೃಹ ಬಂಧನದಲ್ಲಿದೆ. ಚೀನಾದಲ್ಲಿ ಕಮ್ಯುನಿಸಂನ ಪರಿಸ್ಥಿತಿ ಎಷ್ಟು ದಯನೀಯವಾಗಿದೆ ಅಂದರೆ, ವಯಸ್ಸಾದ ತಾತಪ್ಪ ಉಸಿರಾಡಲು ಕಷ್ಟ ಪಡುತ್ತಾ, ಅತ್ತ ಸಾಯದೆ, ಇತ್ತ ಬದುಕಲೂ ಆಗದೆ ನರಳುತ್ತಾನಲ್ಲ, ಹಾಗಾಗಿದೆ.
ಚೀನಿಯರಂತೆ ವಿಯೆಟ್ನಾಮಿಗಳು ಕೂಡ ಹೆಸರಿಗಷ್ಟೇ ಕಮ್ಯುನಿಸ್ಟರು. ಆದರೆ ಆಂತರ್ಯ ದಲ್ಲಿ ಎರಡೂ ದೇಶಗಳು ಸಮಾಜವಾದದ ಧೂಳು ಅಂಟಿಸಿಕೊಂಡ ಬಂಡವಾಳಶಾಹಿ ತತ್ವದ ಕಡೆಗೆ ಹೊರಳಿವೆ.
***
ಮಸ್ಕತ್ ಬಹಳ ಸುಂದರವಾಗಿದೆ, ಏಕೆಂದರೆ ಅಲ್ಲಿನ ಜನ ತುಂಬಾ ಶಾಂತ ಸ್ವಭಾವದವರು. ಜನರೇಕೆ ಪ್ರಶಾಂತ ಮನಸ್ಥಿತಿಯವರು ಅಂದರೆ ಅವರ ನಾಯಕರು ದೇಶವನ್ನು ರಾಜಕೀ ಯದಿಂದ ಸುರಕ್ಷಿತ ಅಂತರದಲ್ಲಿಟ್ಟಿರುತ್ತಾರೆ. ಭೂರಾಜಕೀಯ ವ್ಯವಸ್ಥೆಯಲ್ಲಿ ನೀವು ಭೂಗೋಳಕ್ಕೆ ಸಂಬಂಧಿಸಿದಂತೆ ಹೆಚ್ಚೇನೂ ಮಾಡಲು ಸಾಧ್ಯವಿಲ್ಲ, ಆದರೆ ರಾಜಕೀಯ ದಲ್ಲಿ ಸಾಕಷ್ಟು ಕೆಲಸ ಅಥವಾ ಬದಲಾವಣೆ ಮಾಡಬಹುದು. ಒಮಾನಿನ ಸುಲ್ತಾನ್ ಸಾಮ್ರಾಜ್ಯ ಯೆಮನ್‌ನ ನೆರೆರಾಷ್ಟ್ರವಾಗಿದೆ ಎಂಬುದು ನಿಮಗೆ ಗೊತ್ತಿರಲಿ.
ಎರಡು ಪ್ರದೇಶಗಳು ಒಂದೇ ರೀತಿಯಿದ್ದರೂ, ಅವೇ ಎರಡು ದೇಶವಾಗಿದ್ದಾಗ, ಆ ದೇಶಗಳು ಒಂದಕ್ಕಿಂತ ಇನ್ನೊಂದು ಬಹಳ ಭಿನ್ನವಾಗಿರಲು ಸಾಧ್ಯವೇ? ಖಂಡಿತ ಸಾಧ್ಯವಿದೆ. ಹಾಗೆ ಬದಲಾವಣೆ ತರುವ ಶಕ್ತಿಯಿರುವುದು ಅವುಗಳ ನಾಯಕರಿಗೆ. ಒಮಾನ್ ಜನರು ಲಾಗಾಯ್ತಿ ನಿಂದಲೂ ಸಮುದ್ರದ ವ್ಯವಹಾರಗಳಲ್ಲಿ ನಿಸ್ಸೀಮರು. ಅವರು ಕಟ್ಟಿದ ನೌಕಾ ಸಾಮ್ರಾಜ್ಯ ಕ್ಕೆ ಹಲವು ಶತಮಾನಗಳ ಇತಿಹಾಸವಿದೆ. ಗ್ವದಾರ್‌ನಿಂದ ಹಿಡಿದು ಹೊರ್ಮುಜ್ ಕೊಲ್ಲಿ ಹಾಗೂ ಜಂಜಿಬಾರ್ ಕೊಲ್ಲಿಯವರೆಗೆ ಅವರು ಹೊಂದಿದ್ದ ಅಧಿಪತ್ಯವು 18ನೇ ಶತಮಾ ನದವರೆಗೂ ಬ್ರಿಟಿಷರ ವಸಾಹತುಶಾಹಿ ಉತ್ಸಾಹವನ್ನು ನಿಯಂತ್ರಣದಲ್ಲಿಟ್ಟಿತ್ತು.
ವ್ಯಾಪಾರಿ ಹಡಗುಗಳನ್ನು ಹೊಂದಿದ್ದ ಮೊಘಲ್ ಚಕ್ರವರ್ತಿಗಳಾದ ನೂರ್ ಜಹಾನ್ ಹಾಗೂ ಷಹಜಹಾನ್ ತರಹದವರ ಆಳ್ವಿಕೆಯಲ್ಲಿ ಭಾರತವು ಒಮಾನ್ ಜತೆಗೆ ವಾಣಿಜ್ಯ ವ್ಯವಹಾರ ನಡೆಸುವ ಬಹಳ ಮುಖ್ಯ ದೇಶವಾಗಿತ್ತು. ವಸಾಹತುಶಾಹಿ ಕಾಲಕ್ಕೂ ಮುನ್ನ ಚೀನಾ ಮತ್ತು ಭಾರತ ದೇಶಗಳು ಜಗತ್ತಿನ ಉತ್ಪಾದನಾ ಹಬ್ ಗಳಾಗಿದ್ದವು. 1750ರವರೆಗೆ ಜಾಗತಿಕ ಉತ್ಪಾದನಾ
ವಲಯದಲ್ಲಿ ಚೀನಾದ ಪಾಲು ಹೆಚ್ಚುಕಮ್ಮಿ ಶೇ.30ರಷ್ಟಿತ್ತು. ಭಾರತ ಸುಮಾರು ಶೇ.23 ರಷ್ಟು ಸರಕುಗಳನ್ನು ಉತ್ಪಾದಿಸುತ್ತಿತ್ತು. ಆಫ್ರಿಕಾದ ದೇಶಗಳು ಬಹುದೊಡ್ಡ ಮಾರುಕಟ್ಟೆ ಯಾಗಿದ್ದವು. ಒಮಾನ್ ಮತ್ತು ಜಂಜಿಬಾರ್ ಕೊಲ್ಲಿಗಳು ಭಾರತದಿಂದ ಇಟಲಿ ಹಾಗೂ ಅದರಾಚೆಗೆ ಸರಕುಗಳನ್ನು ಸಾಗಿಸಲು ಇದ್ದ ಪ್ರಮುಖ ಗೇಟ್‌ವೇ ಆಗಿದ್ದವು.
ಮಸ್ಕತ್‌ನಲ್ಲಿ ನಾನೊಂದು ಪ್ರಶ್ನೆ ಎತ್ತಿದ್ದೆ. ಹಿಂದೂ ಮಹಾಸಾಗರಕ್ಕೆ ಯುರೋಪಿಯನ್ನರು ಬರುವುದಕ್ಕೂ ಮೊದಲು, ಪೋರ್ಚುಗಲ್‌ನಿಂದ ಹಿಡಿದು ಬ್ರಿಟನ್ ಮತ್ತು ಫ್ರಾನ್ಸ್‌ವರೆಗೆ ಏಕೆ ಒಂದೂ ದೊಡ್ಡ ನೌಕಾಯುದ್ಧ ನಡೆದಿಲ್ಲ? ಏಷ್ಯಾದ ದೇಶಗಳಿಗೆ ಶಾಂತಿಯುತ ವ್ಯಾಪಾರ ದಿಂದ ಪರಸ್ಪರ ಇಬ್ಬರಿಗೂ ಲಾಭವಿದೆ ಎಂಬುದು ಗೊತ್ತಿತ್ತು. ಆದರೆ ವಸಾಹತುಶಾಹಿಗಳು ಬಂದ ಮೇಲೆ ಲಾಭವನ್ನು ತಮ್ಮ ಕಡೆಗೆ ಮಾತ್ರ ತಿರುಗಿಸಿಕೊಳ್ಳಲು ಪ್ರಯತ್ನಿಸಿದರು.
ಅದೇನಾದರೂ ಇರಲಿ, ಯುರೋಪ್ ಉಚ್ಛ್ರಾಯಕ್ಕೆ ಹೋಗಲು ದಾರಿ ಮಾಡಿಕೊಟ್ಟ ಆರೋಪವನ್ನು ಒಬ್ಬ ಒಮಾನಿಯೇ ಹೊರಬೇಕು. ಪೋರ್ಚುಗಲ್‌ನ ವಾಸ್ಕೋ-ಡ-ಗಾಮಾ ಕೇರಳವನ್ನು ಕಂಡುಹಿಡಿದ ಎಂದು ಹೇಳುತ್ತೇವಲ್ಲವೇ? ಅದರಿಂದ ಹಣ ಹಾಗೂ ಖ್ಯಾತಿ ಯನ್ನೇನೋ ಅವನು ಗಳಿಸಿದ. ಆದರೆ, ಅವನ ಜತೆಗೆ ಒಮಾನಿ ನಾವಿಕ ಇಬ್ನ್ ಮಜಿದ್ ಇಲ್ಲದೆ ಇದ್ದಿದ್ದರೆ ಅವನಿಗೆ ಭಾರತವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಭಾರತಕ್ಕೆ ದಾರಿ ತೋರಿಸಿದವನೇ ಇಬ್ನ್ ಮಜಿದ್. ಮುಂದಿನದು ಬೇರೆಯದೇ ಕತೆ.
***
ಕಮ್ಯುನಿಸಂ ಬಗ್ಗೆ ಹಾಗೂ ನಾನಾ ಸಿದ್ಧಾಂತಗಳ ಬಗ್ಗೆ ಚರ್ಚಿಸುವಾಗ ಇಸ್ರೇಲಿ ಸ್ನೇಹಿತ ರೊಬ್ಬರು ಒಂದು ಸಂಗತಿ ಹೇಳಿದರು. ಅವರ ಪ್ರಕಾರ ಯಹೂದಿಗಳು ನಮಗೆ ಮಾರ್ಕ್ಸಿಸಂ ಅನ್ನೂ ನೀಡಿದ್ದಾರೆ, ಜತೆಗೆ ಬಂಡವಾಳಶಾಹಿ ಸಿದ್ಧಾಂತವನ್ನೂ ನೀಡಿದ್ದಾರೆ.
ಕಮ್ಯುನಿಸಂನ ಜನಕ ಕಾರ್ಲ್ ಮಾರ್ಕ್ಸ್ ಯಹೂದಿಯಾಗಿದ್ದ. ಮುಕ್ತ ಮಾರುಕಟ್ಟೆಯ ಬಂಡವಾಳಶಾಹಿ ಸಿದ್ಧಾಂತವನ್ನು ನೀಡಿದವನು ಸ್ಕಾಟ್‌ಲೆಂಡ್‌ನ ಆಡಂ ಸ್ಮಿತ್ ಆಗಿದ್ದರೂ, ಆ ಸಿದ್ಧಾಂತವನ್ನು ಪ್ರಾಯೋಗಿಕವಾಗಿ ವಿಶ್ವಾಸಾರ್ಹ ರೀತಿಯಲ್ಲಿ ಜಾರಿಗೆ ತಂದವರು ಯಹೂದಿ ಬ್ಯಾಂಕರ್‌ಗಳು. ಅವರು ಬಂಡವಾಳ ಹೂಡಿಕೆಯಲ್ಲಿ ಪ್ರವೀಣರಾಗಿದ್ದರು. ಹೀಗಾಗಿ ಆಧುನಿಕ ಕಾಲದಲ್ಲಿ ಬಂಡವಾಳ ಹೂಡಿಕೆಯ ನಾನಾ ಮಾರ್ಗಗಳನ್ನು ಪರಿಚ ಯಿಸಿದರು.
ಇಸ್ರೇಲಿ ಸ್ನೇಹಿತನ ವಾದಕ್ಕೆ ನಾನು ಇನ್ನೂ ಒಂದು ಅಂಶ ಸೇರಿಸಿದೆ. ಯಾವುದೇ ಸೈದ್ಧಾಂ ತಿಕ ವ್ಯವಸ್ಥೆಯಲ್ಲಿ ನಂಬಿಕೆಯೆಂಬುದು ಪ್ರಧಾನ ಅಂಶವಾಗುತ್ತದೆ. ಅದನ್ನು ಪ್ರಚುರ ಪಡಿಸಿದ ಖ್ಯಾತಿ ಇನ್ನೊಬ್ಬ ಅದ್ಭುತ ಯಹೂದಿ ವ್ಯಕ್ತಿಗೆ ಸೇರಬೇಕು. ಆತ ಪ್ರವಾದಿ ಅಬ್ರಹಾಂ. ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರಿಬ್ಬರೂ ಈತನನ್ನು ತಮ್ಮ ಪೂರ್ವಜನೆಂದು ಆದರಿಸುತ್ತಾರೆ.
ಇನ್ನು, ಯಹೂದಿಯೇತರ ಪ್ರಮುಖ ಧರ್ಮಗಳು ಅಥವಾ ಸಿದ್ಧಾಂತಗಳು ಬಂದಿದ್ದು ಕೇವಲ ಭಾರತದಿಂದ. ಅವು ಹಿಂದೂ ಮತ್ತು ಬೌದ್ಧ ಧರ್ಮಗಳು.
(ಲೇಖಕರು ಹಿರಿಯ ಪತ್ರಕರ್ತರು)